ಜೂನ್ 18ಕ್ಕೆ ತಮಿಳಿನ ಅನುವಾದಿತ ಮೂರು ಪುಸ್ತಕ ಬಿಡುಗಡೆ

  • ಬೆಂಗಳೂರು ಶೇಷಾದ್ರಿಪುರಂನ ಗಾಂಧಿಭವನದಲ್ಲಿ ಕಾರ್ಯಕ್ರಮ
  • ತಮಿಳು ಭಾಷೆ, ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಯೋಜನೆ

ಕೆ ನಲ್ಲತಂಬಿ ಅವರ ಮೂರು ತಮಿಳು ಕೃತಿಗಳ ಕನ್ನಡದ ಅನುವಾದ ಪುಸ್ತಕಗಳಾದ ‘ಬಾಪು ಹೆಜ್ಜೆಗಳಲ್ಲಿ’, ‘ಮತ್ತೊಂದು ರಾತ್ರಿ’, ‘ಗುಡಿ–ಗಂಟೆ ಮತ್ತು ಇತರೆ ಕಥೆಗಳು’ ಜೂನ್ 18ರಂದು ಶನಿವಾರ ಬೆಂಗಳೂರಿನ ಕುಮಾರ್‌ ಪಾರ್ಕ್‌ನ ಗಾಂಧಿಭವನದಲ್ಲಿ ಬಿಡುಗಡೆಯಾಗಲಿವೆ.

ತಮಿಳುನಾಡು ಸರ್ಕಾರ ಹಾಗೂ ತಮಿಳ್ ವಳರ್ಚಿ ಕಳಗಂ (ತಮಿಳನಾಡು ಪಠ್ಯಪುಸ್ತಕ ಸೇವಾ ನಿಗಮ) ತಮಿಳು ಭಾಷೆ ಮತ್ತು ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಅನುವಾದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಪ್ರತಿ ಭಾಷೆಗೆ ಅನುವಾದ ಮಾಡಿಸಲು ಒಬ್ಬ ಸಂಯೋಜಕರನ್ನು ನೇಮಿಸಲಾಗಿದೆ. ವಿ ಎಸ್ ಶ್ರೀಧರ ಅವರು ತಮಿಳು–ಕನ್ನಡ ಅನುವಾದ ಮಾಲಿಕೆಯ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ.

ಯೋಜನೆ ಅಂಗವಾಗಿ ಮೊದಲ ಹಂತದಲ್ಲಿ ತಮಿಳಿನ ಮೂರು ಕೃತಿಗಳು ಪ್ರಕಟವಾಗುತ್ತಿವೆ. ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ ತಮಿಳುನಾಡಿನ ಗ್ರಾಮಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸಮಾಜ ಸುಧಾರಣೆಯಲ್ಲಿ ನಿಸ್ವಾರ್ಥದಿಂದ ತೊಡಗಿಸಿಕೊಂಡು, ತಮ್ಮ ಬಾಳನ್ನೆ ಬದಲಿಸಿಕೊಂಡ 15 ಮಹನೀಯರ ಕುರಿತ ಪ್ರಬಂಧಗಳ ಸಂಕಲನ ‘ಬಾಪು ಹೆಜ್ಜೆಗಳಲ್ಲಿ’; ಇದರ ಲೇಖಕ ಪಾವಣ್ಣನ್, ಹೊಸಪೇಟೆಯ ಪಲ್ಲವ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ.

ಕೃತಿಯಲ್ಲಿ ಪ್ರಸಿದ್ಧರಾದ ರಾಜಾಜಿ, ಕೆ ಸ್ವಾಮಿನಾಥನ್, ಜೆ ಸಿ ಕುಮಾರಪ್ಪ, ಲಕ್ಷ್ಮಣ ಅಯ್ಯರ್, ಅಜ್ಞಾತರಾಗಿ ಸೇವೆ ಸಲ್ಲಿಸಿದ ಅಂಬುಜಮ್ಮಾಳ್, ಗೋದೈ ಅಮ್ಮಾಳ್, ಶ್ರೀಲಂಕಾದ ರಾಜಗೋಪಾಲ ಮುಂತಾದವರ ಕುರಿತ ಪರಿಚಯವಿದೆ ಎಂದು ಸಂಯೋಜಕ ವಿ ಎಸ್ ಶ್ರೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಳವೆ ಬಾವಿ ಹಾಕಿಸಿಕೊಡಿ ,ಇಲ್ಲವೇ ಸರ್ಕಾರಿ ನೌಕರಿ ಕೊಡಿ: ಮತದೊಂದಿಗೆ ಹಕ್ಕು ಮಂಡಿಸಿದ ಮತದಾರ!

‘ಮತ್ತೊಂದು ರಾತ್ರಿ’ ಕೃತಿಯು ಗಾಂಧೀಜಿ ಬದುಕಿನ ಕುರಿತ ವಿವಿಧ ತಮಿಳು ಕತೆಗಳ ಸಂಗ್ರಹವಾಗಿದೆ. ಇದನ್ನು ಮೈಸೂರಿನ ಅಭಿರುಚಿ ಪ್ರಕಾಶನ ಹೊರತಂದಿದೆ. ಕೃತಿಯಲ್ಲಿ ದೇವಿ ಭಾರತಿ, ಜಯಮೋಹನ್, ಶರವಣನ್ ಕಾರ್ತಿಕೇಯನ್, ಕಲೈಸೆಲವಿ, ಎಸ್ ರಾಮಕೃಷ್ಣ, ನಾಗರಾಜನ್ ಮುಂತಾದವರ 11 ಕತೆಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಲೇಖಕ ಜಾನಕೀರಾಮನ್ ಅವರ ‘ಗುಡಿ-ಗಂಟೆ ಮತ್ತು ಇತರ ಕತೆಗಳು’ ಕೃತಿಯನ್ನು ಗದಗಿನ ಲಡಾಯಿ ಪ್ರಕಾಶನ ಹೊರತಂದಿದೆ. ಇದು ತಮಿಳಿನ ಪ್ರಸಿದ್ಧ ಕತೆಗಾರ ಜಾನಕೀರಾಮನ್ ಅವರು 1950ರಿಂದ 70ರ ವರೆಗೆ ಬರೆದ 17 ಕತೆಗಳ ಸಂಕಲನ ಎಂದು ವಿ ಎಸ್ ಶ್ರೀಧರ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್