ನಮ್ಮ ಮೆಟ್ರೊ| ನಾಳೆ ಬೆಳಿಗ್ಗೆ 6ಗಂಟೆಗೆ ಮೆಟ್ರೊ ಸೇವೆ ಆರಂಭ

  • ನಾಳೆ ನಾಗರೀಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಹಿನ್ನೆಲೆ
  • ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ಸಂಚರಿಸುತ್ತಿದ್ದ ಮೆಟ್ರೊ 

ಭಾನುವಾರ(ನಾಳೆ) ನಾಗರೀಕ ಸೇವೆಗಳ ಪೂರ್ವಭಾವಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಮೆಟ್ರೊ ಸಂಚಾರ ಬೆಳಿಗ್ಗೆ 7ಕ್ಕೆ ಬದಲಾಗಿ 6 ಗಂಟೆಗೇ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ನೇರಳೆ ಮತ್ತು ಹಸಿರು ಮಾರ್ಗದಲ್ಲಿ ವಾಡಿಕೆಯಂತೆ ಪ್ರತಿ ಭಾನುವಾರ ಮೆಟ್ರೊ ಸೇವೆ ಬೆಳಿಗ್ಗೆ 7 ಗಂಟೆಗೆ ಆರಂಭಿಸಲಾಗುತ್ತಿತ್ತು. ಆದರೆ, ಜೂನ್ 5ರಂದು ನಾಗರೀಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಇರುವ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸುಗಮವಾಗಿ ತಲುಪಲು ಅನುಕೂಲವಾಗುವಂತೆ ಮೆಟ್ರೊ ಸಂಚಾರ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app