ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಜೊಮ್ಯಾಟೋ

  • 100 ಉದ್ಯೋಗಿಗಳ ಮೇಲೆ ಉದ್ಯೋಗ ಕಡಿತದ ಪರಿಣಾಮ ಬೀಳಲಿದೆ
  • ಶುಕ್ರವಾರ ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ರಾಜೀನಾಮೆ

ಇತ್ತೀಚಿನ ದಿನಗಳಲ್ಲಿ ನೌಕರರನ್ನು ಉದ್ಯೋಗದಿಂದ ತೆಗೆದು ಹಾಕುವ ಘಟನೆಗಳು ಹೆಚ್ಚಾಗುತ್ತಿದೆ. ಈಗ ಆಹಾರ ವಿತರಣೆ ಅಪ್ಲಿಕೇಶನ್ ಆಗಿರುವ ಜೊಮ್ಯಾಟೊ ಸಂಸ್ಥೆಯು ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಕಂಪನಿ ತಿಳಿಸಿದೆ.

ದಿನನಿತ್ಯದ ಕಾರ್ಯದ ಆಧಾರದ ಮೇಲೆ ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಉದ್ಯೋಗ ಕಡಿತದ ಕುರಿತಂತೆ ಕಳೆದ ಎರಡು ವಾರಗಳಿಂದಲೂ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಉದ್ಯೋಗ ಕಡಿತದ ಪರಿಣಾಮ ಸರಿಸುಮಾರು 100 ಉದ್ಯೋಗಿಗಳ ಮೇಲೆ ಬೀಳಲಿದೆ ಎಂದು ಜೊಮ್ಯಾಟೊ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೋಹಿತ್ ಗುಪ್ತಾ ರಾಜೀನಾಮೆ

ಶುಕ್ರವಾರ ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ನಾಲ್ಕೂವರೆ ವರ್ಷಗಳ ಹಿಂದೆ ಕಂಪನಿ ಆರಂಭಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ನಂತರ 2020ರಲ್ಲಿ ಬಡ್ತಿ ಪಡೆದ ಅವರು, ಕಂಪನಿಯ ಆಹಾರ ವಿತರಣಾ ವ್ಯವಹಾರದ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ; ಸುಧಾರಣೆಯಾಗಬೇಕು: ಮೋಹನ್ ದಾಸ್‌ ಫೈ

ಜೊಮ್ಯಾಟೋ ಕಂಪನಿಯ ಜೊತೆಗೆ ಅವರು ದೀರ್ಘಕಾಲದವರೆಗೂ ಹೂಡಿಕೆದಾರರಾಗಿ ಉಳಿದುಕೊಳ್ಳುತ್ತಾರೆ ಎಂದು ಕಂಪನಿ ಹೇಳಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app