ತರ್ಕ | ಕಲೆ ಪ್ರಭುತ್ವದ ದನಿಯಾದಾಗ ವಾಸ್ತವ ಅಥವಾ ಮನರಂಜನೆ ಎಂಬುದು ಕೇವಲ ಕಣ್ಕಟ್ಟು

Kashmir Files still

ರಾಷ್ಟ್ರೀಯತೆ, ದೇಶಭಕ್ತಿಯ ಸಂಘರ್ಷ, ಹೊರಗಿನಿಂದ ಇರುವ ಬೆದರಿಕೆಯ ಕಥಾವಸ್ತುವಿರುವ ಹತ್ತಾರು ವೆಬ್ ಸರಣಿಗಳು ಪ್ರತಿ ತಿಂಗಳೂ ಹಲವು ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿವೆ. ಹೀಗೆ, 2024ರ ಮಹಾ ಚುನಾವಣೆಗಾಗಿ ಬಿಜೆಪಿಯ ಚುನಾವಣಾ ಪ್ರಚಾರವನ್ನು ಅತಿ ದೊಡ್ಡ ಮಾಧ್ಯಮವಾದ ಸಿನಿಮಾಗಳ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ

ಪ್ರಾಚೀನ ಭಾರತೀಯ ಗ್ರಂಥವಾಗಿರುವ 'ನಾಟ್ಯಶಾಸ್ತ್ರ'ದಲ್ಲಿ, ನೃತ್ಯದ ಹುಟ್ಟಿನ ಕುರಿತು ಒಂದು ಅದ್ಭುತ ಕತೆ ಇದೆ. ಇಷ್ಟು ವರ್ಷಗಳಲ್ಲಿ ಈ ಕತೆಯ ವಿವಿಧ ಆವೃತ್ತಿಗಳು ಪ್ರಾಚೀನ ಪಠ್ಯಗಳಂತೆಯೇ ಸಣ್ಣ-ಸಣ್ಣ ಬದಲಾವಣೆಗಳೊಂದಿಗೆ ಜೊತೆ ಬಂದಿವೆ.

ದೇವತೆಗಳು ಮತ್ತು ದುಷ್ಟಶಕ್ತಿಗಳ ನಡುವೆ ನೂರು ವರ್ಷಗಳ ಕಾಲ ಯುದ್ಧ ನಡೆದಿತ್ತು ಎಂದು ಕತೆ ಹೇಳುತ್ತದೆ. ಕಡೆಗೂ ದೇವತೆಗಳು ದುಷ್ಟರನ್ನು ಸೋಲಿಸಿದರು. ಅದು ಹೇಗಾಯಿತು ಎಂದು ಹೇಳಲು ಅವರು ಇಂದ್ರನ ಬಳಿಗೆ ಧಾವಿಸಿದರು (ಕೆಲವು ಆವೃತ್ತಿಗಳಲ್ಲಿ ವಿಷ್ಣು). ಅವರು ಗೆದ್ದ ಯುದ್ಧದ ಬಗ್ಗೆ ತಿಳಿಸುವಾಗ ಭಾವತೀವ್ರತೆಯ ಕಾರಣದಿಂದ ಅಭಿನಯಿಸಿ ಹೇಳಲು ತೊಡಗುತ್ತಾರೆ.

ಇದನ್ನು ನೋಡಿದ ದುಷ್ಟರು, ದೇವತೆಗಳು ಮತ್ತೆ ನಮ್ಮ ಮೇಲೆ ಆಕ್ರಮಣ ಮಾಡಲಿದ್ದಾರೆ ಎಂದು ಭಾವಿಸಿ ಭಯಪಟ್ಟರು. ಅವರೆಲ್ಲರೂ ಒಟ್ಟಾಗಿ ಪ್ರತಿದಾಳಿಗೆ ಸಿದ್ಧರಾದರು. ಆಗ ಅವರನ್ನು ದೇವರುಗಳು ತಡೆದು ನಿಲ್ಲಿಸಿದರು. ಕದನ ವಿರಾಮವನ್ನು ಏಕೆ ಪಾಲಿಸುತ್ತಿಲ್ಲ ಎಂದು ಕೇಳಿದರು. ಜೊತೆಗೆ ಘಟನೆಗಳ ಮರುಸೃಷ್ಟಿಯು ದುಷ್ಟರಿಗೆ ಬಹಳ ಗೊಂದಲ ಉಂಟುಮಾಡಿದೆ ಎಂದು ಎಲ್ಲರೂ ಅರ್ಥ ಮಾಡಿಕೊಂಡರು. ಈ ಸಮಸ್ಯೆಯನ್ನು ಬಗೆಹರಿಸಲು ಒಂದು ಮಾರ್ಗವನ್ನು ಕಂಡುಹಿಡಿಯುವುದು ಅಗತ್ಯವಾಗಿತ್ತು.

ಈ ಸಮಸ್ಯೆಯನ್ನು ಅವರು ದೇವತೆಗಳ ಸೃಷ್ಟಿಕರ್ತನಾದ ಬ್ರಹ್ಮನ ಬಳಿಗೆ ತೆಗೆದುಕೊಂಡು ಹೋದರು. ತಮ್ಮ ನಡುವೆ ಸುದೀರ್ಘವಾಗಿ ನಡೆದಿರುವ ಯುದ್ಧವನ್ನು ಮನಮುಟ್ಟುವಂತೆ ವಿವರಿಸಲು ಸರಿಯಾದ ಒಂದು ಮಾಧ್ಯಮದ ಅಗತ್ಯವನ್ನು ಮನವರಿಕೆ ಮಾಡಲಾಯಿತು. ಬೇರೆ-ಬೇರೆ ವೇದಗಳಲ್ಲಿ ಹೇಳಿರುವಂತೆ ಮಾತು, ಸಂಗೀತ ಮತ್ತು ಚಲನೆ ಈ ಮೂರೂ ಸೇರಿದ ಮಾಧ್ಯಮವಾಗಿ 'ನಾಟ್ಯʼವನ್ನು ಸೃಷ್ಟಿಸುವ ಬಗ್ಗೆ ಬ್ರಹ್ಮ ಸಲಹೆ ನೀಡುತ್ತಾನೆ.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಒಂದೇ ಧರ್ಮ, ಜಾತಿ, ಜನಾಂಗದ ಕುರುಹು ಯಾವತ್ತಿಗೂ ಅಪಾಯಕಾರಿ

ಈಗೇನಾದರೂ ಬ್ರಹ್ಮನ ಬಳಿಗೆ ಈ ಸಮಸ್ಯೆಯನ್ನು ಒಯ್ದಿದ್ದರೆ, ಆತ ಕ್ಯಾಮೆರಾವನ್ನೂ ಬಳಸಿ ಸಿನಿಮಾದ ಮೂಲಕ ಜನರನ್ನು ತಲುಪಿಸುವ ಸಲಹೆ ಕೊಡುತ್ತಿದ್ದನೇನೋ!

ನಾಟ್ಯ ಪ್ರಕಾರವನ್ನು ಸೃಷ್ಟಿಸಿದ ನಂತರ ಬ್ರಹ್ಮನು ಭರತಮುನಿಯ ಬಳಿಗೆ ತೆರಳಿ, ತಮ್ಮ ಮಕ್ಕಳ ಮೂಲಕ ಇದನ್ನು ಪ್ರದರ್ಶನ ಮಾಡಿಸುವ ಸಲಹೆ ಕೊಡುತ್ತಾನೆ. ಖಾಸಗಿಯಾಗಿ ಭರತನ ಮಕ್ಕಳಿಗೆ ನಾಟ್ಯದ ಬಗ್ಗೆ ತಿಳಿಸಲಾಗುತ್ತದೆ. ಪೂರ್ವಾಭ್ಯಾಸಗಳು ಮುಂದುವರಿದವು. ನೃತ್ಯರೂಪಕವನ್ನು ಕಲಿತು ಪ್ರದರ್ಶನ ನೀಡುವ ದಿನ ಹತ್ತಿರ ಬಂದಿತು. ಬ್ರಹ್ಮ, ಇಂದ್ರ ಸೇರಿದಂತೆ ಎಲ್ಲ ದೇವರುಗಳು ತಮ್ಮ ಆಸನಗಳಲ್ಲಿ ಕೂತು ಪ್ರದರ್ಶನ ಪ್ರಾರಂಭವಾಗುವುದನ್ನು ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಅವರು - ಪ್ರದರ್ಶಿಸಬೇಕಾದ ನೃತ್ಯರೂಪಕದ ಪಾತ್ರಗಳು ಮಾತ್ರವಲ್ಲ, ನಾಟಕದ ನಿರ್ಮಾಪಕರು ಕೂಡ. ಅಷ್ಟೇ ಅಲ್ಲ, ನೃತ್ಯ ಪ್ರಕಾರದ ಸೃಷ್ಟಿಕರ್ತರು!

ನಾಟಕ ಪ್ರಾರಂಭವಾಯಿತು. ಕುತೂಹಲದಲ್ಲಿದ್ದ ದೇವತೆಗಳಿಗೆ ಅನುಮಾನ ಶುರುವಾಯ್ತು. ಗೊಂದಲದಲ್ಲಿ ಒಬ್ಬರನ್ನೊಬ್ಬರು ನೋಡಿಕೊಂಡರು. ಪಾತ್ರಧಾರಿಗಳಲ್ಲಿ ಅಪನಂಬಿಕೆ ಶುರುವಾಗಿತ್ತು. ಅವರ ಕಾಲುಗಳ ನಡುಕವನ್ನು ದೇವತೆಗಳು ಗಮನಿಸಿದರು. ಅದು ನೃತ್ಯವಷ್ಟೇ ಆಗಿರಲಿಲ್ಲ, ಇಡೀ ಯುದ್ಧದ ಭೀಕರತೆಯನ್ನು ತೋರಿಸಲಾಗುತ್ತಿತ್ತು. ಯುದ್ಧದಿಂದಾಗುವ ಹಾನಿ, ಅಂತಿಮವಾಗಿ ಯುದ್ಧದಿಂದಾಗಿ ಪಡೆಯುವುದಾದರೂ ಏನು ಎಂಬುದನ್ನು ತೋರಿಸಲಾಗಿತ್ತು. ಗ್ರಂಥದ ಪ್ರಕಾರ ಈ ಘಟನೆಯು ದೇವರುಗಳ ಆತ್ಮಸಾಕ್ಷಿಯನ್ನು ಗುರಿಯಾಗಿರಿಸಿಕೊಂಡಿದೆ.

ದೇವರುಗಳು ಕೋಪಗೊಂಡು ನಾಟಕಕ್ಕೆ ಅಡ್ಡಿಪಡಿಸಿದರೂ, ಬ್ರಹ್ಮನು ಅವರನ್ನು ಶಾಂತಗೊಳಿಸಿದನು. ಭರತಪುತ್ರರು ಭೂಲೋಕದಿಂದ ಬಂದವರು. ಅವರು ವಾಸ್ತವವಾಗಿ ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಅವರು ನಮ್ಮ ಕತೆಗಳನ್ನು ಕೇಳಿದರು. ನಮ್ಮ ಅನುಭವಗಳನ್ನೇ ತಿಳಿಸಿದರು. ಭೂಮಿಯ ಜನರು ಮಾಡಬೇಕಾದಂತೆ ದೇವರುಗಳನ್ನು ಪ್ರಶ್ನಿಸಿದರು. ಇದು ಈ ಕಲಾಮಾಧ್ಯಮದ ಉದ್ದೇಶವಾಗಿತ್ತು

ಈ ಮಾಧ್ಯಮವನ್ನು ಭೂಲೋಕದಲ್ಲಿ ಪ್ರಚುರಪಡಿಸಲು ಭರತನು ತನ್ನ ನೂರು ಪುತ್ರರನ್ನು ಭೂಮಿಗೆ ಗಡಿಪಾರು ಮಾಡುತ್ತಾನೆ. ಈ ಕಲಾ ಪ್ರಕಾರವು ದೇವರಿಗೆ ಸೂಕ್ತವಲ್ಲ, ಆದರೆ ಮಾನವರ ಅಸ್ತಿತ್ವಕ್ಕೆ ಪ್ರಮುಖವಾದುದು ಎಂದು ನಿರ್ಧರಿಸಲಾಯಿತು. ಕಲೆಗಳ ಸಂಯೋಜನೆಯ ಮೂಲಕ ದೇವತೆಗಳಿಗೆ ಸವಾಲು ಹಾಕಬಹುದು ಮತ್ತು ಪ್ರಶ್ನಿಸಬಹುದು, ಸೌಂದರ್ಯವನ್ನು ಸೃಷ್ಟಿಸುವ ಸಂವಹನ ವಾಹಕ ಕೂಡ ಹೌದು. ಇದು ಮನುಕುಲಕ್ಕೆ ಮಾಡುವ ಶ್ರೇಷ್ಠ ಸೇವೆಯಾಗಲಿದೆ. ಭಾರತೀಯ ಸಂಸ್ಕೃತಿಯು ಸಾಂಪ್ರದಾಯಿಕವಾಗಿ ಕತೆಗಾರರ ಮತ್ತು ಪ್ರದರ್ಶಕರರ ಮೇಲೆ ನಿಂತಿದೆ.

ಹುಸಿ ರಾಷ್ಟ್ರೀಯತೆಯ ವೈಭವೀಕರಣ

Image
'ಆರ್‌ಆರ್‌ಆರ್' ಚಿತ್ರದ ಪೋಸ್ಟರ್

ಇದನ್ನೇ ಇಂದಿಗೆ ಅನ್ವಯಿಸಿ ನೋಡಿದರೆ, ಚಿತ್ರಮಂದಿರಗಳು ರಾಷ್ಟ್ರೀಯವಾದಿ ಚಿತ್ರಗಳಿಂದ ತುಂಬಿವೆ. 'ಆರ್‌ಆರ್‌ಆರ್‌,' 'ಮೇಜರ್,'  'ಸಾಮ್ರಾಟ್ ಪೃಥ್ವಿರಾಜ್,'  'ರಾಷ್ಟ್ರ ಕವಾಜ್: ಓಂ,' 'ಕಾಶ್ಮೀರ ಫೈಲ್ಸ್' - ಈ ವರ್ಷ ಬಿಡುಗಡೆಯಾದ ಅಂತಹ ಕೆಲವು ಚಿತ್ರಗಳು. "ಜಗತ್ತು ದುಷ್ಟ ಪಾಕಿಸ್ಥಾನಿಗಳು, ಚೀನಿಯರು, ಅಮೆರಿಕನ್ನರಿಂದ ಹಾಗೂ ಭಾರತವು ಮುಸ್ಲಿಮರಿಂದ ಅಪಾಯದಲ್ಲಿದೆ; ಉತ್ತರ ಭಾರತದ ಮೇಲ್ಜಾತಿ ಹಿಂದೂ ನಾಯಕ (ಅಥವಾ ಕೆಲವೊಮ್ಮೆ ತಮಿಳು ಬ್ರಾಹ್ಮಣ) ಎಲ್ಲರನ್ನೂ ರಕ್ಷಿಸುತ್ತಾನೆ," ಎಂಬ ಸಾಮಾನ್ಯ ವಿಷಯವನ್ನು ಹೊಂದಿರುವ ಚಲನಚಿತ್ರಗಳು ಮತ್ತು ಧಾರಾವಾಹಿಗಳು ಒಟಿಟಿನಲ್ಲಿ ಹೇರಳವಾಗಿವೆ.

ಇನ್ನೂ ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಈಗ ರಾಷ್ಟ್ರೀಯತೆ ಎಂದರೆ  ಒಬ್ಬರು ದೇಶವನ್ನು ಪ್ರೀತಿಸುವುದಷ್ಟೇ ಆಗಿ ಉಳಿದಿಲ್ಲ. ಬಿಜೆಪಿಯ ಪರ ಅಭಿಯಾನಗಳನ್ನು ಹೆಚ್ಚು ಪ್ರಚುರಪಡಿಸುವುದು ಮತ್ತು ಒಡೆಯುವ ನೀತಿಯನ್ನು ವಾಸ್ತವ ಮತ್ತು ಸಾರ್ವತ್ರಿಕ ಕಾಳಜಿ ಎಂಬಂತೆ ಬಿಂಬಿಸುವುದು ಆಗಿದೆ.

ಕಾಶ್ಮೀರಿ ಪಂಡಿತರ ದುರಂತವನ್ನು ತಪ್ಪಾಗಿ ಮತ್ತು ಉತ್ಪ್ರೇಕ್ಷಿತ ಶೈಲಿಯಲ್ಲಿ ಚಿತ್ರಿಸುವ ಮೂಲಕ ʼಕಾಶ್ಮೀರ ಫೈಲ್ಸ್ʼ ಚಿತ್ರ ಭಾರಿ ಕೋಲಾಹಲ ಸೃಷ್ಟಿಸಿತು. ಇದು ಕಾಶ್ಮೀರದಿಂದ ವಲಸೆ ಹೋದ ಪಂಡಿತರ ನೈಜ ಕಥನವನ್ನು ಹೇಳುವ ಬದಲು, ಬಿಜೆಪಿಯವರ ಮುಸ್ಲಿಂ ವಿರೋಧಿ ಮನಸ್ಥಿತಿಯನ್ನು ತೋರಿಸುವ ಮೂಲಕ ಕಾಶ್ಮೀರದಲ್ಲಿ ನಡೆದ ನಿಜವಾದ ಘಟನೆಗಳನ್ನು ಸಂಪೂರ್ಣವಾಗಿ ಮರೆಮಾಚಿತು.

ಒಟಿಟಿಯಲ್ಲಿ ಬರುತ್ತಿರುವ ಹೊಸ ಸರಣಿ ʼಅವ್ರೋಧ್ 2ʼ ಭಯೋತ್ಪಾದನೆಯನ್ನು ಮಟ್ಟ ಹಾಕಲು ನೋಟು ಅಮಾನ್ಯೀಕರಣವನ್ನು ಮಾಡಲಾಯಿತು ಎಂದು ನೇರವಾಗಿ ರಾಜಕೀಯದೊಂದಿಗೆ ಲಿಂಕ್ ಮಾಡುವ ಕತೆಯನ್ನು ಹೊಂದಿದೆ. ಇದು ಮೋದಿ ಅವರ ಒಪ್ಪಿಸುತ್ತಾ ಬಂದ ರಾಜಕೀಯ ಕಥನವೇ. ರಾಷ್ಟ್ರೀಯತೆ, ದೇಶಭಕ್ತಿಯ ಸಂಘರ್ಷ, ಹೊರಗಿನಿಂದ ಇರುವ ಬೆದರಿಕೆಯ ಕಥಾವಸ್ತುವಿರುವ ಹತ್ತಾರು ವೆಬ್ ಸರಣಿಗಳು ಪ್ರತಿ ತಿಂಗಳೂ ಹಲವು ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿವೆ. ಹೀಗೆ, 2024ರ ಮಹಾ ಚುನಾವಣೆಗಾಗಿ ಬಿಜೆಪಿಯ ಚುನಾವಣಾ ಪ್ರಚಾರವನ್ನು ಅತಿ ದೊಡ್ಡ ಮಾಧ್ಯಮವಾದ ಸಿನಿಮಾಗಳ ಮೂಲಕ ಮಾಡಲಾಗುತ್ತಿದೆ.

ಈ ಲೇಖನ ಓದಿದ್ದೀರಾ?: ವರ್ತಮಾನ | ಕೋಮುದ್ವೇಷ ತಗ್ಗಿಸುವ ಕುರಿತು ಈಗ ನಿಜಕ್ಕೂ ಮಾತನಾಡಬೇಕಿರುವುದು ಯಾರು?

ನನ್ನ ಹಲವಾರು ಸ್ನೇಹಿತರು, ಒಳ್ಳೆಯ ವ್ಯಕ್ತಿಗಳು ಮತ್ತು ನಾನು ತುಂಬಾ ಗೌರವದಿಂದ ಕಾಣುವ ಹಲವರು ಅಂತಹ ಚಲನಚಿತ್ರಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ಅವರ ಬದುಕಿನ ಪ್ರಶ್ನೆ. ಆದರೆ ಒಬ್ಬ ಸಹವರ್ತಿಯಾಗಿ ಅವರ ಪ್ರತಿಭೆ ಪ್ರೊಪಗ್ಯಾಂಡಕ್ಕೆ ಬಳಕೆಯಾಗುವುದನ್ನು ತೀವ್ರವಾಗಿ ಪ್ರಶ್ನಿಸುತ್ತೇನೆ.

ಸಿನಿಮಾಗಳ ಮೂಲಕ ಅಥವಾ ಬೆಳೆಯುತ್ತಿರುವ ಒಟಿಟಿ  ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ನೋಡುವುದಾದರೆ, ಯಾವುದೋ ಒಂದು ಪಕ್ಷ ಅಥವಾ ಹಿಂದೂ ಜಾತಿ ಶ್ರೇಷ್ಠತೆಯನ್ನು ಕಲಾವಿದರ ಶ್ರಮ ಬಳಸಿ ವೈಭವೀಕರಿಸಿ ಪ್ರಚಾರ ಮಾಡುವುದು,  ಕಲಾವಿದರಾದ ನಮ್ಮ ಬೇಜವಾಬ್ದಾರಿ ಎನಿಸುವುದಿಲ್ಲವೆ? ಕಲೆ ಎಂದಾದರೂ ತಟಸ್ಥವಾಗಿದೆಯೇ? ಪರಿಣಾಮಗಳೇ ಬಗ್ಗೆ ಚಿಂತಿಸದ ಸಾಂಸ್ಕೃತಿಕ ಶ್ರಮವೊಂದು ಇರಲು ಸಾಧ್ಯವೆ?

ದೇಶವು ಒಂದು ಸ್ಥಳವಾದರೆ, ರಾಷ್ಟ್ರ ಎಂಬುದು ಒಂದು ಕಥನ. ಅದು ಭೂತ ಮತ್ತು ವರ್ತಮಾನದ ವ್ಯಾಖ್ಯಾನಗಳ ಮೂಲಕ ನಮ್ಮ ಕಟ್ಟಿಕೊಂಡು ನಮ್ಮ ಮನದ ಪರಿಕಲ್ಪನೆ. ಸಂಪೂರ್ಣ ನಿರಂಕುಶ ದೇಶದಲ್ಲಿರುವವರಿಗೆ ಜನಿಸಿದವರು ನಾವು. ನಾವು ಇಲ್ಲಿಯವರೇ ಎಂಬ ಭಾವನೆ ವಿವಿಧ ಸಂವಹನ ವಿಧಾನಗಳ ಮೂಲಕ; ಹಾಡುಗಳಿಂದ, ಚಲನಚಿತ್ರಗಳಿಂದ, ಪುಸ್ತಕಗಳಿಂದ ಕೇಳುವ ಅನೇಕ ಕತೆಗಳ ಮೂಲಕ ಸಾಧ್ಯವಾಗಿದೆ. ಆದಾಗ್ಯೂ ಕ್ರಮೇಣ ನಾವು ಬೆಳೆದಂತೆ ನಮ್ಮ ಸ್ವಂತ ಜೀವನದ ಕತೆಗಳೊಂದಿಗೆ ಆ ಕತೆಗಳನ್ನು ಹಾದು ಬಂದಿದ್ದೇವೆ. ಜಗತ್ತಿನ ಪ್ರತಿಯೊಬ್ಬರಿಗೂ ನಿಸ್ಸಂದೇಹವಾಗಿ ತಮ್ಮತನವನ್ನು- ಒಬ್ಬ ವ್ಯಕ್ತಿಯಾಗಿ, ಕುಟುಂಬವಾಗಿ, ಒಂದು ಸಮುದಾಯವಾಗಿ- ಸಂಭ್ರಮಿಸುವ ಹಕ್ಕಿದೆ.

ಕನ್ನಡ ಲೇಖಕ ಯು ಆರ್ ಅನಂತಮೂರ್ತಿ  ನಾವು ಯಾರು ಎಂಬುದನ್ನು ಬಹಳ ಚೆನ್ನಾಗಿ ಹೇಳಿದ್ದಾರೆ: "ವಿದೇಶದಲ್ಲಿರುವಾಗ ನಾವು ಭಾರತೀಯರು. ಬೆಂಗಳೂರಿನಲ್ಲಿ ನೀವು ಎಲ್ಲಿಂದ ಬಂದವರು ಎಂದು ಕೇಳಿದಾಗ ನಮ್ಮ ಜಿಲ್ಲೆಯ ಹೆಸರು ಹೇಳುತ್ತೇವೆ. ಜಿಲ್ಲಾ ಮಟ್ಟದಲ್ಲಿ ಕೇಳಿದಾಗ ನಮ್ಮ ತಾಲೂಕನ್ನು ಹೆಸರಿಸುತ್ತೇವೆ. ನಂತರ ಗ್ರಾಮದ ಹೆಸರು ಹೇಳುತ್ತೇವೆ." ಅಂದರೆ ನಮ್ಮ ಅಸ್ಮಿತೆಗೆ ನಿರಂತರತೆ ಇದೆಯೇ ಹೊರತು, ಒಂದು ಇನ್ನೊಂದರೊಂದಿಗೆ ಸ್ಪರ್ಧಿಸುವುದಿಲ್ಲ.

ಯಾರೇ ಆಗಲಿ ಭಾರತದ ಇತಿಹಾಸವನ್ನು ಬಿಟ್ಟರೆ ಜಗತ್ತಿನ ಇತಿಹಾಸದುದ್ದಕ್ಕೂ ನಿರಂತರ ಅಸ್ಮಿತೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಇಂದು ರಾಷ್ಟ್ರೀಯತಾವಾದಿ ಕಲೆ ಏನು ಮಾಡುತ್ತಿರುವುದೇನೆಂದರೆ, ಪ್ರೊಪಗ್ಯಾಂಡದ ಮೂಲಕ ನಮ್ಮ ಅಸ್ಮಿತೆಗಳ ಸಂಘರ್ಷಕ್ಕೆ ಎಳಸುತ್ತಿದೆ.  ಹಾಗಾಗಿ, ಈಗ ಕೇವಲ ಮುಸ್ಲಿಂ ಆಗಿರಲು ಸಾಧ್ಯವಿಲ್ಲ. ಒಬ್ಬ ಮುಸ್ಲಿಂ ತನ್ನ ಭಾರತೀಯತೆಯನ್ನು ನಿರಂತರವಾಗಿ ಸಾಬೀತು ಪಡಿಸಬೇಕು.

ಹಿಂದೂ ರಾಷ್ಟ್ರೀಯತೆ

Image
Demonetization
ನೋಟು ಅಮಾನ್ಯೀಕರಣ ಸೃಷ್ಟಿಸಿದ ಸನ್ನಿವೇಶ

ಒಬ್ಬ ಒಂದೇ ಸಮಯದಲ್ಲಿ ದೇಶವನ್ನು ಪ್ರೀತಿಸುವ ಮತ್ತು ನೋಟು ಅಮಾನ್ಯೀಕರಣವನ್ನು ಒಪ್ಪದ ವ್ಯಕ್ತಿಯಾಗಲು ಸಾಧ್ಯವಿಲ್ಲ. ಏಕೆಂದರೆ, ನೋಟು ಅಮಾನ್ಯೀಕರಣದಿಂದ ಏನಾಗುತ್ತದೆ ಎಂದು ಮೋದಿ ಹೇಳಿದರೋ, ಹಾಗೆ ಆಯಿತು ಎಂದು ಮನವರಿಕೆ ಮಾಡುವುದಕ್ಕೆ ರಾಶಿ ಹಣ ಸುರಿದ ವ್ಯವಸ್ಥೆಯೊಂದು ಕೆಲಸ ಮಾಡುತ್ತಿರುತ್ತದೆ. ವಿಜ್ಞಾನಕ್ಕಾಗಿ, ರಾಕೆಟ್‌ವಿಜ್ಞಾನಿ ಇರಬೇಕೆಂದಿಲ್ಲ. ಬದಲಿಗೆ ಒಬ್ಬ ವಿಜ್ಞಾನಿ ಗುರುತನ್ನು ದೇಶಭಕ್ತಿ ಮತ್ತು ಹಿಂದೂ ಎಂದು ನೋಡುವಂತೆ ಮಾಡಲಾಗುತ್ತದೆ. ಹಾಗಾಗಿಯೇ ಚಲನಚಿತ್ರಗಳ ಮೂಲಕ ನಿರಂತರವಾಗಿ ತಮ್ಮ ಹಿಂದೂ ರಾಷ್ಟ್ರೀಯತೆಯನ್ನು ಮತ್ತೆ-ಮತ್ತೆ ಹೇಳುವಂತಾಗುತ್ತದೆ.

ಕೇವಲ ಲಾಭದ ಕಾರಣಕ್ಕಾಗಿಯೇ ಅನೇಕ ಕಂಪನಿಗಳು ಹಿಂದೂ ರಾಷ್ಟ್ರೀಯತೆಗೆ ಸಂಬಂಧಿಸಿದ ವಿಷಯವನ್ನೇ ತಮ್ಮ ಸರಕಾಗಿಸಿಕೊಂಡಿವೆ. ಯಾಕೆಂದರೆ ಅದೇ ಈಗ "ಲಾಭದಾಯಕ". ಹಿಂದೂ ರಾಷ್ಟ್ರೀಯವಾದಿ ವಸ್ತು-ವಿಷಯದ ವ್ಯವಹಾರಕ್ಕೆ ಸರ್ಕಾರವು ಬೆಂಬಲಿಸುತ್ತದೆ. ವಾಟ್ಸಾಪ್ ಫಾರ್ವರ್ಡ್‌ಗಳನ್ನು ಹರಡುವ ಮೂಲಕ ಸುದ್ದಿವಾಹಿನಿಗಳೂ ಅಂಥದ್ದನ್ನು ಬೆಂಬಲಿಸುತ್ತವೆ.

ಯಾವುದೇ ಕಂಪನಿಗಳು ಲಾಭವಿಲ್ಲದೆ ಇಂತಹ ಕಂಟೆಂಟ್‌ಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಸಿನಿಮಾ ಮತ್ತು ಒಟಿಟಿಯಲ್ಲಿ ನಾವು ರಾಷ್ಟ್ರೀಯವಾದಿ ಕಲೆಯಾಗಿ ನೋಡುತ್ತಿರುವುದು ಹಿಂದೂ ರಾಷ್ಟ್ರೀಯತೆಯ ಶಾಖೆಗಳ ಹೆಸರಿನಲ್ಲಿ ಲಾಭ ಗಳಿಸುವ ಉದ್ದೇಶವಾಗಿದೆಯಷ್ಟೇ.

ರಾಷ್ಟ್ರೀಯವಾದಿ ಕತೆಗಳನ್ನು ಹೇಳುವ ಮತ್ತು ಹಿಂದೂ ದೇವರುಗಳನ್ನು ಪುನರುತ್ಥಾನಗೊಳಿಸುವ ಪ್ರಕಟಣೆಗಳು, ಸುದ್ದಿ ಮತ್ತು ಸರ್ಕಾರಿ ಪ್ರಾಯೋಜಿತ ನಾಟಕಗಳು ರಾಷ್ಟ್ರೀಯತೆಯ ಕತೆಗಳನ್ನು ಹೇಳುವುದು ಮತ್ತು ಹಿಂದೂ ದೇವರುಗಳನ್ನು ವೈಭವೀಕರಿಸುವುದರ ಹಿಂದೆ 'ಹಿಂದೂ ರಾಷ್ಟ್ರೀಯತೆಯೇ ಶ್ರೇಷ್ಠ' ಎಂದು ಬಿಂಬಿಸುವ ಹುನ್ನಾರ ಅಡಗಿದೆ.

ಪೃಥ್ವಿರಾಜ್ ಕಪೂರ್ ಅವರ 'ಗರಂ ಹವಾ' ಮತ್ತು ಸ್ವಾತಂತ್ರ್ಯಾ ನಂತರ ದೇಶಾದ್ಯಂತ ಪ್ರದರ್ಶನ ಕಂಡ ನಾಟಕಗಳು ಇದಕ್ಕಿಂತ ವ್ಯತಿರಿಕ್ತವಾಗಿದ್ದವು. ಬಡತನ ಮತ್ತು ದೇಶ ವಿಭಜನೆಯ ದುರಂತದ ಮಧ್ಯೆ ಪ್ರೀತಿ, ಕೋಮು ಸಾಮರಸ್ಯದ ಸಂದೇಶ ಸಾರುವುದು ಅವುಗಳ ಉದ್ದೇಶವಾಗಿತ್ತು. ರಕ್ತಪಾತದಿಂದಾಗಿ ಬಡ ಭಾರತದ ನಾಶವಾಗುತ್ತಿದೆ ಎಂಬ ಭಾವನೆಯನ್ನು ತೊಡೆದುಹಾಕುವುದು ಉದ್ದೇಶವಾಗಿತ್ತು. ಈ ಕೆಲಸ ಗಾಂಧಿ-ನೆಹರೂ ಅವರಂಥ ನಾಯಕರ ಅಗತ್ಯವಿಲ್ಲದೆ ನಡೆಯಿತು. ಪೃಥ್ವಿರಾಜ್‌ ಕಪೂರ್‌ ಅವರು ತಾವೊಬ್ಬ ಸೂಪರ್‌ ಸ್ಟಾರ್‌ ಎಂಬುದನ್ನು ಮರೆತು, ತಮ್ಮ ಕುಟುಂಬ ಮತ್ತು ನಾಟಕ ತಂಡದ ಜೊತೆ ದೇಶದ ಉದ್ದಗಲಕ್ಕೂ ಸಂಚರಿಸಿದ್ದರು. ನಾಟಕ ನಡೆಯುತ್ತಿದ್ದ ಸ್ಥಳದ ಹೊರಗೆ ಜನರಿಗಾಗಿ ನೀಡಲು ಕೈಯಲ್ಲಿ ಉಡುಪುಗಳನ್ನು ಹಿಡಿದು ನಿಲ್ಲುತ್ತಿದ್ದರು. ನಾಟಕ ಪ್ರದರ್ಶನದಿಂದ ಹಣ ಗಳಿಸದಿದ್ದರೂ ಅದನ್ನು ನಂಬಿರುವ ತಂಡ ಮತ್ತು ಕುಟುಂಬಗಳ ನಾಟಕದ ಮೂಲಭೂತ ಕರ್ತವ್ಯವನ್ನು ಜನರ ಪರವಾಗಿ ನಿಭಾಯಿಸಿದ್ದರು.

ಪ್ರಚಾರಕ್ಕಾಗಿ ಸಿನಿಮಾ ಬಳಕೆ

Image
Nazi
ಸಾವಿನ ಗೃಹಗಳಿಗೆ ಯಹೂದಿಗಳನ್ನು ಕರೆದೊಯ್ಯುತ್ತಿರುವ ನಾಝಿ ಅಧಿಕಾರಿಗಳು

ಪ್ರಚಾರಕ್ಕಾಗಿ ಕಲೆಯನ್ನು ಬಳಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲೇನಲ್ಲ. 'ಝುಡ್‌ ಸುಸ್‌' ಎಂಬ ಸಿನಿಮಾ ನಾಝಿ ಪಕ್ಷದಿಂದ 1940ರಲ್ಲಿ ನಿರ್ಮಾಣವಾಗಿತ್ತು. ಇದು ಯಹೂದಿಗಳ ವಿರುದ್ಧ ದ್ವೇಷದ ವಸ್ತುವಿರುವ ಪ್ರಮುಖ ಸಿನಿಮಾಗಳಲ್ಲೊಂದು. ಅನೇಕ ಕಲಾವಿದರು ಅದರ ಪರಿಣಾಮಗಳನ್ನು ತಿಳಿಯದೆ ಚಿತ್ರದ ಭಾಗವಾಗಿದ್ದೇವೆ ಎಂದು ಹೇಳಿಕೊಂಡಿದ್ದರು. ಈ ಚಿತ್ರ ಭರ್ಜರಿ ಲಾಭ ಗಳಿಸಿತ್ತು. 20 ದಶಲಕ್ಷ ಜನ ಜನರು ಈ ಚಿತ್ರವನ್ನು ಮತ್ತೆ-ಮತ್ತೆ ನೋಡಿದ್ದರು. ಈಗಿನಂತೆ ರಿಯಾಲಿಟಿಯ ಬಗ್ಗೆ ಜನ ಯೋಚಿಸುತ್ತಿರಲಿಲ್ಲ. ಸಿನಿಮಾದಲ್ಲಿ ಏನಿದೆಯೋ ಅದೇ ನೈಜ ಎಂಬ ಮನಸ್ಥಿತಿ ಇತ್ತು. ನಾಝಿ ಪರವಾದ ಸಿನಿಮಾಗಳ ಕತೆಗಳಿಗೆ ಪೂರಕವಾಗಿ ಜರ್ಮನಿಯ ನಕ್ಷೆಗಳನ್ನು ಬರೆಯುವಂತೆ ಕಾರ್ಟೋಗ್ರಾಫರ್‌ಗಳಿಗೆ ಸರ್ಕಾರದಿಂದಲೇ ನಿರ್ದೇಶನ ನೀಡಲಾಗುತ್ತಿತ್ತು.

ನಾಝಿ ಪ್ರೊಪಗ್ಯಾಂಡ ಚಲನಚಿತ್ರಗಳಲ್ಲಿ ಇತಿಹಾಸದ ಘಟನೆಗಳು, ಬಲಾಢ್ಯ ವ್ಯಕ್ತಿಗಳ ಬಗ್ಗೆ ವೈಭವೀಕರಿಸಲಾಗುತ್ತಿತ್ತು. ಅವುಗಳನ್ನು ಸಾಮಾನ್ಯ ಜನರು ನೋಡುವಂತೆ ಮಾಡಲಾಗುತ್ತಿತ್ತು. ಇತಿಹಾಸದ ಕತೆ ಹೇಳುವ ಮೂಲಕ ಹಿಂದೆ-ಹಿಂದೆ ಹೋಗುತ್ತಿದ್ದರೇ ವಿನಾ ವರ್ತಮಾನದ ಜನರ ಜೀವನಕ್ಕೆ ಹೊಂದುವ ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿರಲಿಲ್ಲ.

ವಾಸ್ತವವಾಗಿ ನಾಝಿ ಪಕ್ಷದ ರಾಷ್ಟ್ರೀಯ ಕಲೆಯು ವಿರೋಧಾಭಾಸದಿಂದ ಕೂಡಿತ್ತು ಮತ್ತು ಜನವಿರೋಧಿಯಾಗಿತ್ತು.  ರಾಷ್ಟ್ರೀಯತೆಯ ಹೆಸರಿನಲ್ಲಿ ಕೋಟ್ಯಂತರ ಜೀವಗಳನ್ನು ನಾಶ ಮಾಡಿ ದೇಶವನ್ನು ಸ್ಮಶಾನ ಮಾಡಿತ್ತು. ಯಾವುದನ್ನೂ ಪ್ರಶ್ನಿಸದೆ ಸ್ವಂತ ಗುರುತನ್ನು ಪ್ರೀತಿಸುವುದೇ ದೇಶದ ಮೇಲಿನ ಪ್ರೀತಿ ಎಂಬಂತೆ ಬಿಂಬಿಸಲಾಗಿತ್ತು.

ಕಮ್ಯುನಿಸ್ಟ್‌ ಆಡಳಿತದಲ್ಲಿ ರೊಮೇನಿಯಾದಲ್ಲಿ ಸಿಯೋಸೆಸ್ಕು ಅಥವಾ ರಷ್ಯದ ಕ್ರುಶ್ಚೇವ್‌ ಅಡಿಯಲ್ಲಿ ಬಂದ ಸಿನಿಮಾಗಳಲ್ಲಿ ಸಾಮೂಹಿಕ ನರಮೇಧವನ್ನು ಸಮರ್ಥಿಸಲಾಗಿತ್ತು. ಇದನ್ನು ಪ್ರಶ್ನಿಸುವ ರೀತಿಯಲ್ಲಿ ಜನರು ಕೋಪಕೊಂಡು ಥಿಯೇಟರ್‌ನಿಂದ ಹೊರಬರುತ್ತಿದ್ದುದನ್ನು ನೋಡಿದ ರಷ್ಯಾದ ಪ್ರಖ್ಯಾತ ನಿರ್ದೇಶಕ ಮಾಯಾಕೋವ್ಸ್ಕಿ, ತನಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ಬಂದ ಸ್ಟಾಲಿನ್‌ನ ಆಡಳಿತದಲ್ಲಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ವ್ಯಂಗ್ಯಚಿತ್ರಕಾರರ ತಂಡವನ್ನು ಇಟ್ಟುಕೊಂಡು, ಜನರು ನಿರಂಕುಶ ಪ್ರಭುತ್ವದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಕುರುಡಾಗಿ ನಂಬುವಂತೆ ಮಾಡಲಾಗಿತ್ತು. ಹಲವಾರು ಕಲಾವಿದರು ಮುಕ್ತ ಮನಸ್ಸಿನಿಂದ ಭಾಗವಹಿಸಿದ್ದರು. ಸೈದ್ಧಾಂತಿಕ ಒಪ್ಪಂದದ ಮೂಲಕ ವ್ಯಂಗ್ಯಚಿತ್ರಕಾರರನ್ನು ಸರ್ಕಾರ ಬಳಸಿಕೊಂಡಿತ್ತು. ಹಲವರು ಇದನ್ನು ದೇಶಭಕ್ತಿ ಎಂದುಕೊಂಡಿದ್ದರು.

ವಾಸ್ತವದಲ್ಲಿ ಇಂತಹ ಕಲೆ ತೀವ್ರವಾಗಿ ದೇಶವಿರೋಧಿಯಾದದ್ದು. ಇದು ಚಿತ್ರ, ಬರಹ, ಹಾಡು, ಪ್ರದರ್ಶನ ಕಲೆಗಳನ್ನು ದ್ವೇಷ ಬಿತ್ತಲು ಬಳಸಿಕೊಂಡು, ದೇಶವನ್ನು ದ್ವೇಷದ ಸಾಗರಕ್ಕೆ ಎಸೆಯುತ್ತದೆ. ಇದು ದೇಶದ ಬಗ್ಗೆ ನಿಜವಾದ ಭಕ್ತಿ ಇರುವ ಸಾಮಾನ್ಯ ಜನರಲ್ಲೂ ಪ್ರಶ್ನಾತೀತ ಮನೋಭಾವನ್ನು ಹುಟ್ಟುಹಾಕುತ್ತದೆ.

Image
Avrodh -2
'ಅವ್ರೋಧ್' ಸಿನಿಮಾ ಪೋಸ್ಟರ್

ದೇಶವನ್ನು ಕಾಪಾಡುವ ಯೋಧರು ಮತ್ತು ಸೇನಾಧಿಕಾರಿಗಳ ಕಥಾವಸ್ತು ಇರುವ ಸಿನಿಮಾಗಳಲ್ಲಿ ಅವರ ತ್ಯಾಗಕ್ಕೆ ಅಪಚಾರ ಮಾಡುತ್ತವೆ. ಗಡಿ ಕಾಯುವ ಯೋಧ ತನ್ನ ಮೇಲಾಧಿಕಾರಿಯ ಆದೇಶವನ್ನು ಪ್ರಶ್ನಿಸುವಂತಿಲ್ಲ; ಆದರೆ ದೇಶದ ಜನರು ಸರ್ಕಾರವನ್ನು, ಅದರ ಅಪಪ್ರಚಾರವನ್ನು ಪ್ರಶ್ನಿಸಬೇಕು ಎಂದು ಅವರು ಬಯಸುತ್ತಾರೆ. ಪ್ರಜಾಪ್ರಭುತ್ವದಡಿಯಲ್ಲಿ ನಮಗೆಲ್ಲರಿಗೂ ನಮ್ಮದೇ ಆದ ಜವಾಬ್ದಾರಿಗಳಿವೆ. ಆದರೆ, ನಾವೆಲ್ಲರೂ ಸೇರಿ ಮಾಡುವ ಸಮಾನ ಕೆಲಸವೆಂದರೆ ಅದು ಮತದಾನ. ಉಳಿದಂತೆ ಪ್ರಜಾಪ್ರಭುತ್ವ ರಕ್ಷಣೆಗೆ ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.

ಲಾಭ ಗಳಿಸುವ ಉದ್ದೇಶದಿಂದ ರಾಷ್ಟ್ರೀಯತೆಯ ಪ್ರಚಾರಕ್ಕಾಗಿ ಬಳಸುವ ಕಲೆಗಳಿಂದ ವಾಸ್ತವವಾಗಿ ಯಾರ ಕತೆಯನ್ನು ನಾವು ಹೇಳುತ್ತೇವೆಯೋ ಅವರಿಗೆ ಅನ್ಯಾಯವಾಗುತ್ತದೆ. ಯಾರ ಹೆಸರಿನಲ್ಲಿ ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆಯೋ ಆ ಹೀರೋಗಳು ಒಬ್ಬ ವೈದ್ಯ ಬಡವನಿಗೆ ಚಿಕಿತ್ಸೆ ನೀಡಲಿಲ್ಲ ಎಂದಾಗಲೀ, ಎಂಜಿಯರ್‌ ಕಳಪೆ ಕಟ್ಟಡ ಕಟ್ಟಿದ ಎಂದಾಗಲೀ, ಲೆಕ್ಕಾಧಿಕಾರಿ ಹಣದಾಸೆಗೆ ತಪ್ಪು ಲೆಕ್ಕ ಕೊಟ್ಟ ಎಂದಾಗಲೀ ಒಪ್ಪಲು ಸಾಧ್ಯವೇ? ಒಪ್ಪುವುದಿಲ್ಲ ಎಂದಾದರೆ, ದೇಶಸೇವೆಯ ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ನಿಭಾಯಿಸುತ್ತಿದ್ದೇವೆಯೇ?

ಕಲಾವಿದನೊಬ್ಬ ಮೇಲಾಧಿಕಾರಿಯ ಆಜ್ಞೆಯನ್ನು ಪ್ರಶ್ನಿಸಲಾರದ ಸೈನಿಕನಂತಾಗುವುದು ಎಂದರೆ, ಯುದ್ಧ ಕಾಲದ ಕಂದಕಗಳಲ್ಲಿ ಕೂತ ಸೈನಿಕನೊಬ್ಬ ತತ್ವಜ್ಞಾನಿಯಾದಷ್ಟೇ ಅಪಾಯಕಾರಿ. ಕಲಾವಿದರು ಮತ್ತು ಕತೆಗಾರರು ಯಾರ ಸೇವೆ ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೋ, ಅವರನ್ನೇ ದ್ವೇಷಿಸುವ ಪಾತ್ರವನ್ನು ನಿಭಾಯಿಸಬಾರದು ಎಂಬ ಎಚ್ಚರ ಕಾಯ್ದುಕೊಳ್ಳಬೇಕು. ನಮ್ಮ ಸಮುದಾಯಗಳು ಹಿಂದೆಂದಿಗಿಂತ ಇಂದು ಹೆಚ್ಚಿನ ಜವಾಬ್ದಾರಿಯನ್ನು ನಿರೀಕ್ಷಿಸುತ್ತಿವೆ. ನಾಝಿಯೊಬ್ಬ ಹಾಲಿನಲ್ಲಿ ಕೂತಿರುವ ಚಿತ್ರವೊಂದಿದೆ. ಅದರಲ್ಲಿ ಗ್ಯಾಸ್‌ ಚೇಂಬರ್‌ ನಲ್ಲಿ ನಡೆಯುತ್ತಿರುವ ಘೋರಕ್ಕೆ ನೊಂದು ತಲೆ ತಗ್ಗಿಸಿ ಕೂತಿರುವ ಚಿತ್ರವದು. ಅಲ್ಲಿರುವವರಿಗೆ ಆಘಾತವಾಗಿದೆ. ಇನ್ನು ಕೆಲವರು ತಮ್ಮ ಕೈಗಳಿಂದ ಕಣ್ಣು ಮುಚ್ಚಿಕೊಂಡಿದ್ದಾರೆ. ಅವರೆಲ್ಲರೂ ಪ್ರಶ್ನೆಯನ್ನೇ ಮಾಡದೆ, ತಾವು ದೇಶ ಸೇವೆ ಮಾಡುತ್ತಿದ್ದೇವೆ ಎಂದೇ ಭಾವಿಸಿದ್ದಾರೆ. ವಾಸ್ತವದಲ್ಲಿ ಅವರ ಸೇವೆ ಸಂದಿದ್ದು, ಲಾಭಬಡುವ ಫ್ಯಾಸಿಸ್ಟ್‌ ಉದ್ಯಮಕ್ಕೆ.

ನಿಮಗೆ ಏನು ಅನ್ನಿಸ್ತು?
1 ವೋಟ್