ಕಾಮನ್‌ವೆಲ್ತ್‌ ಗೇಮ್ಸ್ | ಸಾಧನೆಗೆ ಅಡ್ಡಿಯಾಗದ ವಯಸ್ಸು; 16 ವರ್ಷಗಳ ಬಳಿಕ ಚಿನ್ನ ಗೆದ್ದ ಶರತ್

Sharath Kamal

ಸೋಮವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ 40 ವರ್ಷ ವಯಸ್ಸಿನ ಅಚಂತ ಶರತ್ ಕಮಲ್ ಸಾಧನೆ ಮಾಡಲು ವಯಸ್ಸು ಅಡ್ಡಿಯೇ ಅಲ್ಲ ಎಂದು ಸಾಧಿಸಿ ತೋರಿಸಿದರು.

ಮೊದಲ ಗೇಮ್‌ನಲ್ಲಿ ಸೋತ ನಂತರ, ಶರತ್ 11-13, 11-7, 11-2, 11-6, 11-8 ಅಂತರದಲ್ಲಿ ಹೆಚ್ಚು ಕಿರಿಯ ಮತ್ತು ಅನುಭವಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿದರು.

2006ರಲ್ಲಿ ಮೊದಲ ಬಾರಿಗೆ ಸಿಂಗಲ್ಸ್ ಚಿನ್ನ ಗೆದ್ದಿದ್ದ ಶರತ್, ಶ್ರೀಜಾ ಅಕುಲಾ ಅವರೊಂದಿಗೆ ತಂಡ ಮತ್ತು ಮಿಶ್ರ ಡಬಲ್ಸ್ ಈವೆಂಟ್‌ನಲ್ಲಿ ಈಗಾಗಲೇ ಎರಡು ಚಿನ್ನ ಗೆದ್ದಿದ್ದರು.

ಅಚಂತ ಶರತ್ ಕಮಲ್ 16 ವರ್ಷಗಳ ನಂತರ ಕಾಮನ್‌ವೆಲ್ತ್ ಗೇಮ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಈ ಹಳದಿ ಲೋಹದೊಂದಿಗೆ, ಅವರು ಐದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಪದಕಗಳ ಸಂಖ್ಯೆಯನ್ನು 13ಕ್ಕೆ ಹೆಚ್ಚಿಸಿಕೊಂಡರು.

ನಿಮಗೆ ಏನು ಅನ್ನಿಸ್ತು?
2 ವೋಟ್