ಇಂಗ್ಲೆಂಡ್‌ | ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

  • ಅಲೆಕ್ಸಾಂಡರ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ
  • ಬರ್ಮಿಂಗ್‌ಹ್ಯಾಮ್‌ ಇತಿಹಾಸವನ್ನು ಸಾರುವ ʻಗೂಳಿʼ ಆಕರ್ಷಣೆ

22ನೇ ಆವೃತ್ತಿಯ ಪ್ರತಿಷ್ಠಿತ ಕಾಮನ್‌ವೆಲ್ತ್‌ಗೆ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್‌ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಇಂಗ್ಲೆಂಡ್​ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಿಂಧು –ಮನ್‌ಪ್ರೀತ್‌ ಧ್ವಜಧಾರಿ

ಎರಡು ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು. ಸಿಂಧು ಜತೆಗೆ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಅವರಿಗೂ ಧ್ವಜಧಾರಿಯಾಗಲು ಅವಕಾಶ ಲಭಿಸಿತು. ಕಾಮನ್‌ವೆಲ್ತ್‌ ಆಯೋಜನಾ ಸಮಿತಿಯು, ಪಥಸಂಚಲನದಲ್ಲಿ ಭಾಗವಹಿಸುವ ಪ್ರತಿಯೊಂದು ದೇಶವೂ ಓರ್ವ ಪುರುಷ ಮತ್ತು ಓರ್ವ ಮಹಿಳಾ ಕ್ರೀಡಾಪಟುವನ್ನು ಧ್ವಜಧಾರಿಯಾಗಿ ಹೆಸರಿಸಬೇಕು ಎಂದು ಅಂತಿಮ ಕ್ಷಣದಲ್ಲಿ ಸೂಚನೆ ನೀಡಿದ ಪರಿಣಾಮ ಮನ್‌ಪ್ರೀತ್‌ ಸಿಂಗ್‌ ಅವರಿಗೂ ಅವಕಾಶ ಲಭಿಸಿತು.

ನಿಮಗೆ ಏನು ಅನ್ನಿಸ್ತು?
0 ವೋಟ್