ಕಾಮನ್‌ವೆಲ್ತ್‌ ಗೇಮ್ಸ್ | ಭಾರತಕ್ಕೆ 4ನೇ ಪದಕ; ಬೆಳ್ಳಿ ಗೆದ್ದ ಬಿಂದಿಯಾರಾಣಿ

  • ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶಕ್ಕೆ ನಾಲ್ಕನೇ ಪದಕ
  • ಕಳೆದ ವರ್ಷ ಚೀನಾದ ಪದಕ ಬಿಂದಿಯಾರಾಣಿ

ವೇಟ್‌ಲಿಫ್ಟರ್‌ ಬಿಂದಿಯಾರಾಣಿ ದೇವಿ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ದೇಶಕ್ಕೆ ನಾಲ್ಕನೇ ಪದಕ ತಂದು ಕೊಟ್ಟಿದ್ದಾರೆ. 55 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ  ಪದಕ ಸಾಧನೆ ಮಾಡಿದ್ದಾರೆ. ಈಗ ಭಾರತ ವೇಟ್ ಲಿಫ್ಟಿಂಗ್‌ ವಿಭಾಗದಲ್ಲಿ ನಾಲ್ಕು ಪದಕಗಳನ್ನು ಗೆದ್ದಿದೆ.

ಬೆಳ್ಳಿ ಪದಕ ಗೆದ್ದ ಬಿಂದಿಯಾರಾಣಿ. ಸ್ನ್ಯಾಚ್‌ನಲ್ಲಿ 86 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ 55 ಕೆಜಿ ವಿಭಾಗದಲ್ಲಿ 116 ಕೆಜಿ ಭಾರ ಎತ್ತಿದರು. ಒಟ್ಟು 202 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ನೈಜೀರಿಯದ ಆದಿಜತ್ ಒಲರಿನೊಯ್ ಚಿನ್ನದ ಪದಕ ಗೆದ್ದರು. ಒಲಾರಿನೊಯ್ ಒಟ್ಟು 203 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದು ಗೇಮ್ಸ್ ದಾಖಲೆ ನಿರ್ಮಿಸಿದರು. ಇಂಗ್ಲೆಂಡ್‌ಗೆ ಕಂಚಿನ ಪದಕ ಲಭಿಸಿದೆ.

1 ಕೆಜಿಯಿಂದ ಕೈ ತಪ್ಪಿದ ಚಿನ್ನ

ಸ್ನ್ಯಾಚ್‌ನಲ್ಲಿ 86 ಕೆಜಿ ಎತ್ತುವ ಮೂಲಕ ಅವರು ಮೂರನೇ ಸ್ಥಾನದಲ್ಲಿದ್ದರು, ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ, ಅವರು ತಮ್ಮ ಆಟ ಸುಧಾರಿಸಿ ಬೆಳ್ಳಿ ಪದಕ ಗೆದ್ದರು. ಒಂದು ಕೆಜಿ ಹೆಚ್ಚು ಎತ್ತಿದ್ದರೆ ಬಿಂದಿಯಾರಾಣಿ ಚಿನ್ನ ಗೆಲ್ಲುತ್ತಿದ್ದರು. ಬಿಂದಿಯಾರಾಣಿ ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದಿದ್ದರು.

ಈ ಸುದ್ದಿ ಓದಿದ್ದೀರಾ? ಕಾಮನ್‌ವೆಲ್ತ್‌ ಗೇಮ್ಸ್ | ʻಚಿನ್ನದ ಭಾರʼ ಎತ್ತಿದ ಮೀರಾಬಾಯಿ ಚಾನು

ಭಾರತಕ್ಕೆ ಒಟ್ಟು ನಾಲ್ಕು ಪದಕ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಈವರೆಗೆ ನಾಲ್ಕು ಪದಕಗಳನ್ನು ಗೆದ್ದಿದೆ. ಮೀರಾಬಾಯಿ ಚಾನು ಚಿನ್ನದ ಪದಕ, ಗುರುರಾಜ ಪೂಜಾರಿ ಕಂಚಿನ ಪದಕ, ಸಂಕೇತ್ ಮಹದೇವ್ ಬೆಳ್ಳಿ ಪದಕ ಹಾಗೂ ಬಿಂದಿಯಾರಾಣಿ ಬೆಳ್ಳಿ ಪದಕ ಗೆದ್ದಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್