ಕಾಮನ್‌ವೆಲ್ತ್‌ ಗೇಮ್ಸ್‌ | ಕಂಚಿನ ಪದಕ ಗೆದ್ದ ತೇಜಸ್ವಿನ್ ಶಂಕರ್

  • ಪುರುಷರ ಹೈಜಂಪ್‌ನಲ್ಲಿ ಕಂಚಿನ ಪದಕ
  • ಮೊದಲ ಹಂತದಲ್ಲಿ 2.10 ಮೀಟರ್ ಜಿಗಿತ

ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಅಥ್ಲೀಟ್ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ವಿಭಾಗದಲ್ಲಿ ಕಂಚಿನ ಪದಕ ಸಾಧಿಸಿದ್ದಾರೆ.

ತೇಜಸ್ವಿನ್ ಶಂಕರ್ ಹೈಜಂಪ್ ವಿಭಾಗದಲ್ಲಿ 2.22 ಮೀ ಜಿಗಿದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 109 ಕೆಜಿ ವಿಭಾಗದ ಪುರುಷರ ಭಾರ ಎತ್ತುವ ಸ್ಪರ್ಧೆಯಲ್ಲಿ ಗುರುದೀಪ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.

ಮೊದಲ ಹಂತದಲ್ಲಿ 2.10 ಮೀಟರ್ ಜಿಗಿತದೊಂದಿಗೆ ಉತ್ತಮ ಆರಂಭ ಕಂಡ ಅವರಿಗೆ ಎದುರಾಳಿ ಬಹಾಮಾಸ್‌ನ ಡೊನಾಲ್ಡ್ ಥಾಮಸ್ ಮತ್ತು ಇಂಗ್ಲೆಂಡ್‌ನ ಜೋಯಲ್ ಕ್ಲಾರ್ಕ್ ಖಾನ್ ಕೂಡ 2.22 ಮೀಟರ್‌ ಜಿಗಿದು ಸ್ಪರ್ಧೆಯೊಡ್ಡಿದರು. ಆದರೆ ಭಾರತದ ತೇಜಸ್ವಿನ್ ಶಂಕರ್ ಕೆಲವು ತಪ್ಪುಗಳ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿದೆ.

ಈ ಸುದ್ದಿ ಓದದ್ದೀರಾ? ಕಾಮನ್​ವೆಲ್ತ್​ ಗೇಮ್ಸ್​​ | ಚಿನ್ನ ಗೆದ್ದ ಭಾರತೀಯ ಟೇಬಲ್ ಟೆನ್ನಿಸ್ ತಂಡ

ಹೈಜಂಪ್ ವಿಭಾಗದಲ್ಲಿ ಪದಕ ಗೆಲ್ಲುವುದು ಬಹಳ ಅಪರೂಪ. ಆದರೆ ತೇಜಸ್ವಿನ್ ಶಂಕರ್ ಬರ್ಮಿಂಗ್‌ಹ್ಯಾಮ್‌ 2022ನಲ್ಲಿ 2.22 ಮೀಟರ್‌ಗಳಷ್ಟು ಜಿಗಿತದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೈಜಂಪ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಟೀಮ್ ಇಂಡಿಯಾಗೆ ಹೈ ಜಂಪ್‌ನಲ್ಲಿ ಬಂದ ಮೊದಲ ಪದಕ ಇಡೀ ರಾಷ್ಟ್ರವೇ ಹೆಮ್ಮೆಪಡುವಂತೆ ಮಾಡಿದೆ. ಭಾರತದ ಒಟ್ಟಾರೆ ಪದಕದ ಸಂಖ್ಯೆ 18ಕ್ಕೇರಿದ್ದು 5 ಚಿನ್ನ, 6 ಬೆಳ್ಳಿ ಮತ್ತು 8 ಕಂಚು ಸೇರಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್