ಕ್ರಿಕೆಟ್‌ | ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯ ಸವಾಲು

  • ಕಾಮನ್‌ವೆಲ್ತ್‌ ಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್‌ ಕದನ
  • ಎಂಟು ತಂಡಗಳ ನಡುವೆ ಪದಕಕ್ಕಾಗಿ ಪೈಪೋಟಿ

24 ವರ್ಷಗಳ ಬಳಿಕ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಕ್ರಿಕೆಟ್ ಮರಳಿ ಸೇರ್ಪಡೆಯಾಗಿದ್ದು, ಈ ಬಾರಿ ಟಿ20 ಮಾದರಿ ಅಳವಡಿಸಿಕೊಳ್ಳಲಾಗಿದೆ. ಕೂಟದ ಮೊದಲ ದಿನ ನಡೆಯುವ ಪಂದ್ಯದಲ್ಲಿ, ಭಾರತ ಮಹಿಳಾ ತಂಡವು ಬಲಿಷ್ಠ ಆಸ್ಟ್ರೇಲಿಯದ ಸವಾಲು ಎದುರಿಸಲಿದೆ.

ಭಾರತ, ಶ್ರೀಲಂಕಾ, ಆಸ್ಟ್ರೇಲಿಯ, ಬಾರ್ಬಡೋಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕ ಸೇರಿದಂತೆ ಒಟ್ಟು 8 ಮಹಿಳಾ ತಂಡಗಳು ಭಾಗವಹಿಸುತ್ತಿವೆ.  ಇದಕ್ಕೂ ಮೊದಲು 1998ರ ಕೌಲಾಲಂಪುರದಲ್ಲಿ ನಡೆದ ಗೇಮ್ಸ್‌ನಲ್ಲಿ ಪುರುಷರ 50 ಓವರ್‌ಗಳ ಪಂದ್ಯಗಳನ್ನು ಆಡಿಸಲಾಗಿತ್ತು. ಪದಕ ಸುತ್ತಿನಲ್ಲಿ ಶಾನ್ ಪೊಲಾಕ್ ನೇತೃತ್ವದ ದಕ್ಷಿಣ ಆಫ್ರಿಕ ತಂಡ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಚಿನ್ನ ಗೆದ್ದಿತ್ತು.

ಕಾಮನ್‌ವೆಲ್ತ್‌ ಕೂಟದಲ್ಲಿ ಕಣಕ್ಕಿಳಿಯಲಿರುವ ಮಹಿಳಾ ಕ್ರಿಕೆಟ್‌ ತಂಡ ಸೇರಿದಂತೆ ಎಲ್ಲಾ ಕ್ರೀಡಾಪಟುಗಳಿಗೆ ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ. 

ಎಜ್‌ಬಾಸ್ಟನ್‌ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್‌ ಬಳಗ ಗೆಲುವಿನ ಮೂಲಕ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಇತ್ತೀಚೆಗೆ ಶ್ರೀಲಂಕಾ ತಂಡವನ್ನು ಅವರದ್ದೇ ನೆಲದಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತ, 2-1 ಅಂತರದಿಂದ ಮಣಿಸಿ ಸರಣಿ ಗೆದ್ದಿತ್ತು. ಅದೇ ಲಯದೊಂದಿಗೆ ಆಸ್ಟ್ರೇಲಿಯ ತಂಡವನ್ನು ಮಣಿಸುವ ಭರವಸೆಯಲ್ಲಿ ಭಾರತ ತಂಡವಿದೆ. ಜೆಮಿಮಾ ರಾಡ್ರಿಗಸ್, ಶೆಫಾಲಿ ವರ್ಮಾ ಬ್ಯಾಟಿಂಗ್ ವಿಭಾಗದಲ್ಲಿ ಮತ್ತು ಪೂನಂ ಯಾದವ್, ರಾಧಾ ಯಾದವ್‌ ಬೌಲಿಂಗ್‌ನಲ್ಲಿ ತಂಡದ ಬಲವಾಗಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯ ಕೂಡ ಬಲಿಷ್ಠ ಆಟಗಾತಿಯರನ್ನು ಹೊಂದಿದ್ದು, ಭಾರತಕ್ಕೆ ಕಠಿಣ ಸವಾಲೊಡ್ಡುವ ನಿರೀಕ್ಷೆಯಿದೆ.

Image
Image

ಬಲಾಬಲ | ಒಟ್ಟು ಮುಖಾಮುಖಿ 22 ಪಂದ್ಯಗಳು

ಗೆಲುವು: ಆಸ್ಟೇಲಿಯ 16, ಭಾರತ 6 |

ಪಂದ್ಯ ಆರಂಭ ಮಧ್ಯಾಹ್ನ 3.30

ಈ ಸುದ್ದಿಯನು ಓದಿದ್ದೀರಾ ?ಕಾಮನ್‌ವೆಲ್ತ್‌ ಗೇಮ್ಸ್‌ | ಭಾರತದ ಮೊದಲ ದಿನದ ಸ್ಪರ್ಧೆಗಳ ವಿವರ

ಸಂಭಾವ್ಯ ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ತಾನಿಯ ಭಾಟಿಯಾ, ಯಷ್ಟಿಕಾ ಭಾಟಿಯಾ, ಹರ್ಲೀನ್ ಡಿಯೊಲ್, ರಾಜೇಶ್ವರಿ ಗಾಯಕವಾಡ, ಎಸ್‌. ಮೇಘನಾ, ಮೇಘನಾ ಸಿಂಗ್, ಸ್ನೇಹ್ ರಾಣಾ, ರೇಣುಕಾ ಸಿಂಗ್, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್, ರಾಧಾ ಯಾದವ್.

ಆಸ್ಟ್ರೇಲಿಯಾ: ಮೆಗ್ ಲ್ಯಾನಿಂಗ್ (ನಾಯಕಿ), ರಚೇಲ್ ಹೇನ್, ಡಾರ್ಸಿ ಬ್ರೌನ್, ವಿಕೋಲಾ ಕ್ಯಾರಿ, ಅಲ್ಲೆ ಗಾರ್ಡನರ್, ಗ್ರೇಸ್ ಹ್ಯಾರಿಸ್, ಅಲಿಸ್ನಾ ಹೀಲಿ, ಜೆಸ್ ಜೊನಾಸನ್, ಅಲಾನ ಕಿಂಗ್, ತಹಿಯಾ ಮೆಕ್‌ಗ್ರಾ, ಬೆತ್ ಮೂವಿ, ಎಲಿಸ್ ಪೇರಿ, ಮೇಘನಾ ಶುಟ್, ಅನಾಬೆಲ್ ಸದರ್ಲೆಂಡ್. ಅಮಂಡಾ ಜೇಡ್ ವೆಲ್ಲಿಂಗ್ಟನ್,

ನಿಮಗೆ ಏನು ಅನ್ನಿಸ್ತು?
0 ವೋಟ್