ಕಾಮನ್‌ವೆಲ್ತ್ ಗೇಮ್ಸ್ | ಚಿನ್ನ ಗೆದ್ದ ಭಾರತದ ಲಾನ್‌ ಬೌಲ್‌ ಮಹಿಳೆಯರ ತಂಡ

  • ಐತಿಹಾಸಿಕ ಸಾಧನೆ ಮಾಡಿದ ಭಾರತ ಮಹಿಳೆಯರ ತಂಡ
  • ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 10ನೇ ಪದಕ ಗೆದ್ದ ಭಾರತ

ಮಂಗಳವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಲಾನ್‌ ಬೌಲ್‌ ಪಂದ್ಯದಲ್ಲಿ ಭಾರತೀಯ ಮಹಿಳೆಯರ- ನಯನಮೋನಿ ಸೈಕಿಯಾ, ಪಿಂಕಿ, ಲವ್ಲಿ ಚೌಬೆ ಹಾಗೂ ರೂಪಾ ರಾಣಿ ಟಿರ್ಕಿ ಅವರ ಲಾನ್‌ ಬೌಲ್‌ ತಂಡ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಹೊಸ ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಜಯಗಳಿಸಿದ್ದಾರೆ.

ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು 17-10 ರಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದು ಇತಿಹಾಸ ಬರೆದಿದ್ದಾರೆ. ಈ ಪದಕ ಪಡೆಯುವ ಮೂಲಕ ಭಾರತೀಯ ಪಡೆ 10ನೇ ಪದಕವನ್ನು ತನ್ನ ಕೊರಳಿಗೆ ಏರಿಸಿಕೊಂಡಿದೆ. ಇನ್ನು ಈ ಸಾಧನೆ ಐತಿಹಾಸಿಕವಾಗಿದ್ದು, ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

ಸದ್ಯ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್‌ನಲ್ಲಿ ಸಹ ಭಾರತ ಚಿನ್ನದ ಪದಕ ಪಡೆಯಲು ಹೋರಾಡಲಿದೆ. ಭಾರತ ಈಗಾಗಲೇ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದ್ದು, ಇಂದು ಮತ್ತಷ್ಟು ಪದಕ ಬೇಟೆ ಮಾಡಲು ಸಿದ್ಧರಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್