ಕಾಮನ್‌ವೆಲ್ತ್‌ ಗೇಮ್ಸ್‌ | ಸ್ಕ್ವಾಷ್​ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

  • ಸ್ಕ್ವಾಷ್‌ನಲ್ಲಿ ಸೌರವ್ ಘೋಷಾಲ್‌ರಿಗೆ ಪದಕ
  • ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ ಭಾರತ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸ್ಕ್ವಾಷ್​ನಲ್ಲಿ ಭಾರತದ ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಸ್ಕ್ವಾಷ್ ಆಟಗಾರ ಎಂಬ ಗೌರವಕ್ಕೂ ಅವರು ಪಾತ್ರರಾದರು.

ಸ್ಕ್ವಾಷ್​ ಪಂದ್ಯದಲ್ಲಿ 35 ವರ್ಷದ ಸೌರವ್ ಘೋಷಾಲ್ ಅವರು ಆತಿಥೇಯ ಇಂಗ್ಲೆಂಡ್ ಆಟಗಾರ ಜೇಮ್ಸ್ ವಿಲ್‌ಸ್ಟ್ರೋಪ್ ಅವರನ್ನು 3-0 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆದ್ದರು. ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿದೆ.

ಈ ಸುದ್ದಿ ಓದಿದ್ದೀರಾ? ಚೆಸ್‌ ಒಲಿಂಪಿಯಾಡ್‌ | ಗೆಲುವಿನ ಹಾದಿಗೆ ಭಾರತ

1998ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ಸೇರಿಸಲಾಯಿತು. ಆದರೆ ಭಾರತ ಅದರಲ್ಲಿ ಕೇವಲ 4 ಪದಕ ಮಾತ್ರ ಪಡೆದಿದೆ. ಇದರಲ್ಲಿ ಹಿಂದಿನ ಮೂರು ಪದಕಗಳು ಡಬಲ್ಸ್‌ನಲ್ಲಿ ಬಂದಿದ್ದವು. ಇದೀಗ ಮೊದಲ ಬಾರಿಗೆ ಸಿಂಗಲ್ಸ್‌ನಲ್ಲಿ ಪದಕ ಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್