ಕಾಮನ್‌ವೆಲ್ತ್‌ ಗೇಮ್ಸ್‌ | ಜೂಡೋದಲ್ಲಿ ಬೆಳ್ಳಿ ಗೆದ್ದ ತುಲಿಕಾ ಮಾನ್‌

  • ಬೆಳ್ಳಿ ಪದಕಕ್ಕೆ ಮುತ್ತಿಟ್ಟ ತುಲಿಕಾ ಮಾನ್
  • ಜೂಡೋದಲ್ಲಿ ಭಾರತಕ್ಕೆ ಮೂರನೇ ಪದಕ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಮಹಿಳೆಯರ 78 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್ ಅವರು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

ತುಲಿಕಾ ಮಾನ್ ಅವರು  ಮಹಿಳೆಯರ +78 ಕೆಜಿ ವಿಭಾಗದ ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜೂಡೋದಲ್ಲಿ ಭಾರತಕ್ಕೆ ಇದು ಮೂರನೇ ಪದಕ.

ಈ ಸುದ್ದಿ ಓದಿದ್ದೀರಾ? ಎದುರಾಳಿಯನ್ನು 39 ನಡೆಗಳಲ್ಲಿ ಸೋಲಿಸಿದ ಪ್ಯಾಲೇಸ್ತೀನಿನ 8 ವರ್ಷದ ಬಾಲೆ!

ತುಲಿಕಾ ಮಾನ್ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಐದು ಚಿನ್ನ, ಆರು ಬೆಳ್ಳಿ ಹಾಗೂ ಐದು ಕಂಚು ಸಹಿತ 16 ಪದಕಗಳನ್ನು ಪಡೆದುಕೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್