ಕಾಮನ್‌ವೆಲ್ತ್‌ ಗೇಮ್ಸ್‌ |  ಭಾರತದ ಪದಕ ವೀರರ ಪಟ್ಟಿ ಇಲ್ಲಿದೆ ನೋಡಿ

ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತೀಯ ಕ್ರೀಡಾಪಟುಗಳು 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿದಂತೆ ಒಟ್ಟು 61 ಪದಗಳೊಂದಿಗೆ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ

22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ವರ್ಣರಂಜಿತ ತೆರೆಬಿದ್ದಿದೆ. ಈ ಬಾರಿ 215 ಕ್ರೀಡಾಪಟುಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಭಾರತೀಯ ಕ್ರೀಡಾಪಟುಗಳ ತಂಡ 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿದಂತೆ ಒಟ್ಟು 61 ಪದಗಳೊಂದಿಗೆ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ. ವೇಟ್‌ಲಿಫ್ಟರ್‌ ಸಂಕೇತ್‌ ಸರ್ಗರ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಆರಂಭವಾಗಿದ್ದ ಭಾರತದ ಪದಕ ಬೇಟೆಯ ಅಭಿಯಾನ, ಪುರುಷರ ಹಾಕಿ ತಂಡದ ಬೆಳ್ಳಿ ಪದಕದೊಂದಿಗೆ ತೆರೆಬಿದ್ದಿದೆ.

ಈ ಬಾರಿ ಭಾರತಕ್ಕೆ ಪದಕ ಗೆದ್ದುಕೊಟ್ಟ 61 ಮಂದಿ ಕ್ರೀಡಾಪಟುಗಳ ವಿವರ ಹೀಗಿದೆ-

ಕುಸ್ತಿ

Image

ಬಜರಂಗ್ ಪುನಿಯಾ, ಪುರುಷರ 65 ಕೆಜಿ,  ಚಿನ್ನದ ಪದಕ

ಸಾಕ್ಷಿ ಮಲಿಕ್,  ಮಹಿಳೆಯರ 62ಕೆಜಿ ವಿಭಾಗ, ಚಿನ್ನದ ಪದಕ

ದೀಪಕ್ ಪುನಿಯಾ, ಪುರುಷರ 86 ಕೆಜಿ ವಿಭಾಗ, ಚಿನ್ನದ ಪದಕ

ರವಿಕುಮಾರ್ ದಹಿಯಾ. ಪುರುಷರ 57 ಕೆಜಿ, ಚಿನ್ನದ ಪದಕ

ವಿನೇಶ್ ಪೋಗಟ್, ಮಹಿಳೆಯರ 53 ಕೆಜಿ ವಿಭಾಗ, ಚಿನ್ನದ ಪದಕ

ನವೀನ್, ಪುರುಷರ 74 ಕೆಜಿ ವಿಭಾಗ, ಚಿನ್ನದ ಪದಕ

ಅಂಶು ಮಲಿಕ್,  ಮಹಿಳೆಯರ 57 ಕೆಜಿ ವಿಭಾಗ, ಬೆಳ್ಳಿಯ ಪದಕ

ದಿವ್ಯಾ ಕಕ್ರಾನ್, ಮಹಿಳೆಯರ 68 ಕೆಜಿ ವಿಭಾಗ, ಕಂಚು

ಮೋಹಿತ್ ಗ್ರೆವಾಲ್, ಪುರುಷರ 125 ಕೆಜಿ ವಿಭಾಗ, ಕಂಚು

ಪೂಜಾ ಗೆಹ್ಲೋಟ್, ಮಹಿಳೆಯರ 50 ಕೆಜಿ ವಿಭಾಗ, ಕಂಚು

ಪೂಜಾ ಸಿಹಾಗ್, ಮಹಿಳೆಯರ 76 ಕೆಜಿ ವಿಣಾಗ, ಕಂಚು

ದೀಪಕ್ ನೆಹ್ರಾ, ಪುರುಷರ 97 ಕೆಜಿ ವಿಭಾಗ, ಕಂಚು.

 

ವೇಟ್‌ಲಿಫ್ಟಿಂಗ್‌ (ಭಾರ ಎತ್ತುವಿಕೆ)

Image

ಮೀರಾಬಾಯಿ ಚಾನು, ಮಹಿಳೆಯರ 49 ಕೆಜಿ ವಿಭಾಗ,  ಚಿನ್ನದ ಪದಕ

ಜೆರೆಮಿ ಲಾಲ್ರಿನ್ನುಂಗಾ, ಪುರುಷರ 67 ಕೆಜಿ ವಿಭಾಗ, ಚಿನ್ನದ ಪದಕ

ಅಚಿಂತಾ ಶೆಯುಲಿ, ಪುರುಷರ 73 ಕೆಜಿ ವಿಭಾಗ, ಚಿನ್ನದ ಪದಕ

ಸಂಕೇತ್ ಸರ್ಗರ್, ಪುರುಷರ 55 ಕೆಜಿ ವಿಭಾಗ, ಬೆಳ್ಳಿ

ಬಿಂದ್ಯಾರಾಣಿ ದೇವಿ, ಮಹಿಳೆಯರ 55 ಕೆಜಿ ವಿಭಾಗ, ಬೆಳ್ಳಿ

ವಿಕಾಸ್ ಠಾಕೂರ್, ಪುರುಷರ 96 ಕೆಜಿ ವಿಭಾಗ, ಬೆಳ್ಳಿ

ಗುರುರಾಜ ಪೂಜಾರಿ, ಪುರುಷರ 61 ಕೆಜಿ ವಿಭಾಗ, ಕಂಚು

ಹರ್ಜಿಂದರ್ ಕೌರ್, ಮಹಿಳೆಯರ 71 ಕೆಜಿ ವಿಭಾಗ, ಕಂಚು

ಲವ್‌ಪ್ರೀತ್ ಸಿಂಗ್, ಪುರುಷರ 100 ಕೆಜಿ ವಿಭಾಗ, ಕಂಚು

ಗುರ್ದೀಪ್ ಸಿಂಗ್, ಪುರುಷರ 109+ ಕೆಜಿ ವಿಭಾಗ, ಕಂಚು.

 

ಅಥ್ಲೆಟಿಕ್ಸ್

Image

ಎಲ್ದೋಸ್ ಪಾಲ್,  ಪುರುಷರ ಟ್ರಿಪಲ್ ಜಂಪ್, ಚಿನ್ನದ ಪದಕ

ಅಬ್ದುಲ್ಲಾ ಅಬೂಬಕರ್, ಪುರುಷರ ಟ್ರಿಪಲ್ ಜಂಪ್, ಬೆಳ್ಳಿ ಪದಕ

ಅವಿನಾಶ್ ಸಬ್ಳೆ, ಪುರುಷರ 3000 ಮೀಟರ್ ಸ್ಟೀಪಲ್ ಚೇಸ್, ಬೆಳ್ಳಿ ಪದಕ

ಪ್ರಿಯಾಂಕಾ ಗೋಸ್ವಾಮಿ, ಮಹಿಳೆಯರ 10 ಕಿ.ಮೀ ಓಟದ ನಡಿಗೆ, ಬೆಳ್ಳಿ ಪದಕ

ಮುರಳಿ ಶ್ರೀಶಂಕರ್, ಪುರುಷರ ಲಾಂಗ್ ಜಂಪ್, ಬೆಳ್ಳಿ ಪದಕ

ತೇಜಸ್ವಿನ್ ಶಂಕರ್, ಪುರುಷರ ಹೈಜಂಪ್, ಕಂಚು

ಅಣ್ಣು ರಾಣಿ, ಮಹಿಳೆಯರ ಜಾವೆಲಿನ್, ಕಂಚು

ಸಂದೀಪ್ ಕುಮಾರ್, ಪುರುಷರ 10 ಕಿ.ಮೀ ಓಟದ ನಡಿಗೆ, ಕಂಚಿನ ಪದಕ.

 

ಬ್ಯಾಡ್ಮಿಂಟನ್

Image

ಪಿ ವಿ ಸಿಂಧು, ಮಹಿಳಾ ಸಿಂಗಲ್ಸ್,  ಚಿನ್ನದ ಪದಕ

ಲಕ್ಷ್ಯ ಸೇನ್, ಪುರುಷರ ಸಿಂಗಲ್ಸ್, ಚಿನ್ನದ ಪದಕ

 ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ/ಚಿರಾಗ್ ಶೆಟ್ಟಿ, ಪುರುಷರ ಡಬಲ್ಸ್, ಚಿನ್ನದ ಪದಕ

ಗಾಯತ್ರಿ ಗೋಪಿಚಂದ್/ಟ್ರೀಸಾ ಜಾಲಿ, ಮಹಿಳೆಯರ ಡಬಲ್ಸ್, ಕಂಚು

ಕಿಡಂಬಿ ಶ್ರೀಕಾಂತ್, ಪುರುಷರ ಸಿಂಗಲ್ಸ್, ಕಂಚಿನ ಪದಕ

ಭಾರತ ಮಿಶ್ರ ತಂಡ, ಬೆಳ್ಳಿಯ ಪದಕ

ತಂಡ: ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್, ಪಿವಿ ಸಿಂಧು, ಆಕರ್ಷಿ ಕಶ್ಯಪ್, ಚಿರಾಗ್ ಶೆಟ್ಟಿ, ಗಾಯತ್ರಿ ಗೋಪಿಚಂದ್, ಜಾಲಿ ಟ್ರೀಸಾ, ಅಶ್ವಿನಿ ಪೊನ್ನಪ್ಪ

ಬಾಕ್ಸಿಂಗ್

Image

ನಿತು ಘಂಗಾಸ್, ಮಹಿಳೆಯರ 48 ಕೆಜಿ, ಚಿನ್ನದ ಪದಕ

ನಿಖಾತ್ ಝರೀನ್, ಮಹಿಳೆಯರ 50 ಕೆಜಿ, ಚಿನ್ನದ ಪದಕ

ಅಮಿತ್ ಪಂಗಲ್, ಪುರುಷರ 51 ಕೆಜಿ, ಚಿನ್ನದ ಪದಕ

ಸಾಗರ್ ಅಹ್ಲಾವತ್, ಪುರುಷರ +92 ಕೆಜಿ, ಬೆಳ್ಳಿಯ ಪದಕ

ರೋಹಿತ್ ಟೋಕಾಸ್, ಪುರುಷರ 67 ಕೆಜಿ, ಕಂಚು

ಜೈಸ್ಮಿನ್ ಲಂಬೋರಿಯಾ, ಮಹಿಳೆಯರ 60 ಕೆಜಿ, ಕಂಚು.

ಕ್ರಿಕೆಟ್ : ಭಾರತ ಮಹಿಳಾ ತಂಡ ಬೆಳ್ಳಿಯ ಪದಕ

Image

ಭಾರತ ಮಹಿಳಾ ಕ್ರಿಕೆಟ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಎಸ್ ಮೇಘನಾ, ತನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಠಾಕೂರ್ , ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ.

ಹಾಕಿ : ಭಾರತ ಪುರುಷರ ತಂಡ ಬೆಳ್ಳಿಯ ಪದಕ

Image

ಪಿಆರ್ ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್ (ಗೋಲ್‌ಕೀಪರ್‌), ವರುಣ್ ಕುಮಾರ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್‌ ಸಿಂಗ್ (ಉಪನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಜ‌ರ್ಮನ್‌ಪ್ರೀತ್‌ ಸಿಂಗ್, ಮನ್‌ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ನೀಲಕಂಠ ಶರ್ಮಾ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್.

ಭಾರತ, ಮಹಿಳಾ ಹಾಕಿ ತಂಡ, ಕಂಚಿನ ಪದಕ

ಸವಿತಾ ಪುನಿಯಾ (ನಾಯಕಿ), ಬಿಚು ದೇವಿ ಖರಿಬಮ್ (ಗೋಲ್‌ಕೀಪರ್‌), ದೀಪ್ ಗ್ರೇಸ್ ಎಕ್ಕಾ (ಉಪ ನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ನಿಶಾ, ಸುಶೀಲಾ ಚಾನು ಪುಖ್ರಂಬಮ್, ಮೋನಿಕಾ, ನೇಹಾ, ಜ್ಯೋತಿ, ನವಜೋತ್ ಕೌರ್, ಸೋನಿಕಾ, ಸಲಿಮಾ ಟೆಟೆ, ವಂದನಾ ಕಟಾರಿಯಾ, ಲಾಲ್ರೆಮ್ಸಿಯಾಮಿ, ನವನೀತ್ ಕೌರ್, ಶರ್ಮಿಳಾ ದೇವಿ.

ಜುಡೋ

ಶುಶೀಲಾ ದೇವಿ ಲಿಕ್ಮಾಂಬಮ್, ಮಹಿಳೆಯರ 49 ಕೆಜಿ, ಬೆಳ್ಳಿಯ ಪದಕ

ತುಲಿಕಾ ಮಾನ್, ಮಹಿಳೆಯರ +78 ಕೆಜಿ, ಬೆಳ್ಳಿಯ ಪದಕ

ವಿಜಯ್ ಕುಮಾರ್ ಯಾದವ್, ಪುರುಷರ 60 ಕೆಜಿ, ಕಂಚು

ಲಾನ್‌ ಬಾಲ್ಸ್‌

ಭಾರತ ವನಿತೆಯರ ತಂಡ,  ಚಿನ್ನದ ಪದಕ

ಭಾರತ ಪುರುಷರ ತಂಡ, ಬೆಳ್ಳಿಯ ಪದಕ

ಮಹಿಳಾ ತಂಡ: ಲವ್ಲಿ ಚೌಬೆ, ರೂಪಾ ರಾಣಿ ಟಿರ್ಕಿ, ನಯನ್ಮೋನಿ, ಪಿಂಕಿ

ಪುರುಷರ ತಂಡ: ಚಂದನ್ ಕುಮಾರ್, ದಿನೇಶ್ ಕುಮಾರ್, ನವನೀತ್ ಸಿಂಗ್, ಸುನಿಲ್ ಬಹದ್ದೂರ್

ಪವರ್‌ಲಿಫ್ಟಿಂಗ್‌

ಸುಧೀರ್, ಪುರುಷರ ಹೆವಿವೇಟ್ ವಿಭಾಗ, ಚಿನ್ನದ ಪದಕ

ಸ್ಕ್ವ್ಯಾಷ್

ಸೌರವ್ ಘೋಷಾಲ್, ಪುರುಷರ ಸಿಂಗಲ್ಸ್, ಕಂಚು

ದೀಪಿಕಾ ಪಳ್ಳಿಕಲ್/ ಸೌರವ್ ಘೋಷಾಲ್, ಮಿಶ್ರ ಡಬಲ್ಸ್, ಕಂಚಿನ ಪದಕ

ಟೇಬಲ್ ಟೆನ್ನಿಸ್

ಅಚಂತ ಶರತ್ ಕಮಲ್, ಪುರುಷರ ಸಿಂಗಲ್ಸ್, ಚಿನ್ನದ ಪದಕ

ಭಾರತ ಪುರುಷರ ತಂಡ, ಚಿನ್ನದ ಪದಕ

ಅಚಂತ ಶರತ್ ಕಮಲ್/ ಶ್ರೀಜಾ ಅಕುಲಾ, ಮಿಶ್ರ ತಂಡ, ಚಿನ್ನದ ಪದಕ

ಅಚಂತಾ ಶರತ್ ಕಮಲ್/ ಜಿ ಸತ್ಯನ್, ಪುರುಷರ ಡಬಲ್ಸ್, ಬೆಳ್ಳಿ ಪದಕ

ಜಿ ಸತ್ಯನ್ ಪುರುಷರ ಸಿಂಗಲ್ಸ್, ಕಂಚು.

ಪ್ಯಾರಾ ಟೇಬಲ್ ಟೆನಿಸ್

ಭಾವಿನಾಬೆನ್ ಪಟೇಲ್, ಮಹಿಳೆಯರ ಸಿಂಗಲ್ಸ್,  ಚಿನ್ನ

ಸೋನಾಲ್ ಪಟೇಲ್, ಮಹಿಳೆಯರ ಸಿಂಗಲ್ಸ್, ಕಂಚು

ನಿಮಗೆ ಏನು ಅನ್ನಿಸ್ತು?
8 ವೋಟ್