ಕಾಮನ್‌ವೆಲ್ತ್‌ ಗೇಮ್ಸ್ | ಟೇಬಲ್‌ ಟೆನಿಸ್‌ನಲ್ಲಿ ಗೆಲುವಿನ ನಗೆ ಬೀರಿದ ಭಾರತ

  • ಬಾರ್ಬಡೋಸ್, ದಕ್ಷಿಣ ಆಫ್ರಿಕ ವಿರುದ್ಧ ಗೆಲುವು
  • ಮನಿಕಾ ಬಾತ್ರಾ ನೇತೃತ್ವದ ಮಹಿಳಾ ತಂಡ

ಪ್ರತಿಷ್ಠಿತ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೊದಲ ದಿನ ಭಾರತ ಶುಭಾರಂಭ ಮಾಡಿದೆ. ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತೀಯ ಪುರುಷರ ಮತ್ತು ಮಹಿಳೆಯರ ತಂಡವು ತಮ್ಮ ಗುಂಪು ಹಂತದ ಮೊದಲ ಪಂದ್ಯಗಳಲ್ಲಿ ಸುಲಭ ಗೆಲುವು ದಾಖಲಿಸಿವೆ. ಪುರುಷರ ತಂಡ ಬಾರ್ಬಡೋಸ್ ತಂಡವನ್ನು 3-0 ಅಂತರದಿಂದ ಸೋಲಿಸಿದರೆ, ಇದೇ ಅಂತರದಲ್ಲಿ ಮನಿಕಾ ಬಾತ್ರಾ ನೇತೃತ್ವದ ಮಹಿಳಾ ತಂಡವು ದಕ್ಷಿಣ ಆಫ್ರಿಕ ವಿರುದ್ಧ ಗೆದ್ದು ಮುನ್ನಡೆದಿದೆ.

ಮಹಿಳಾ ವಿಭಾಗದ ಮೊದಲ ಪಂದ್ಯದಲ್ಲಿ ಶ್ರೀಜಾ ಅಕುಲಾ ಮತ್ತು ರೀತ್ ಟೆನ್ನಿಸನ್ ಜೋಡಿ, ದಕ್ಷಿಣ ಆಫ್ರಿಕದ ಲೈಲಾ ಎಡ್ವರ್ಡ್ಸ್ ಮತ್ತು ದನಿಶಾ ಪಟೇಲ್ ಜೋಡಿಯನ್ನು 11-7 11-7 11-5 ರಿಂದ ಮಣಿಸಿ ಭಾರತಕ್ಕೆ ಗೆಲುವಿನ ಆರಂಭ ನೀಡಿದರು.

ಈ ಸುದ್ದಿ ಓದಿದ್ದೀರಾ ? : ಏಕದಿನ ಸರಣಿ ʻಕ್ಲೀನ್‌ಸ್ವೀಪ್‌ʼ ಸಾಧನೆಯ ಬಳಿಕ ಟಿ20 ಸಮರ

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲೂ ಗೆಲುವು

2018ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕೂಟದಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಯ ಮನಿಕಾ ಬಾತ್ರಾ, ಸಿಂಗಲ್ಸ್ ಪಂದ್ಯದಲ್ಲಿ ಮುಸ್ಫಿಕ್ ಕಲಾಮ್ ಅವರನ್ನು 11-5 11-3 11-2ರಿಂದ ಸೋಲಿಸಿದರು. ನಂತರ ಶ್ರೀಜಾ ಅಕುಲಾ ಅವರು ಎರಡನೇ ಸಿಂಗಲ್ಸ್‌ನಲ್ಲಿ ದನಿಶಾ ಪಟೇಲ್ ವಿರುದ್ಧ 11-5 11-3 11-6 ಮೇಲುಗೈ ಸಾಧಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್