ಕಾಮನ್‌ವೆಲ್ತ್‌ ಗೇಮ್ಸ್‌| ಭಾರತದ ಎರಡನೇ ದಿನದ ಸ್ಪರ್ಧೆಗಳ ವಿವರ

  • ಮೊದಲ ದಿನ ಭಾರತಕ್ಕೆ ಮಿಶ್ರಫಲ
  • ಎರಡನೇ ದಿನ ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಸ್ಕ್ವಾಷ್‌ ಸ್ಪರ್ಧೆ

22ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ದಿನ ಶುಕ್ರವಾರ (ಜುಲೈ 29) ಭಾರತಕ್ಕೆ ಮಿಶ್ರಫಲ ದೊರೆತಿದೆ. ಹಾಕಿ ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಸ್ವಿಮ್ಮಿಂಗ್‌ನಲ್ಲಿ ಗೆಲುವಿನ ಆರಂಭ ಪಡೆದರೆ, ಕ್ರಿಕೆಟ್‌, ಸೈಕಲಿಸ್ಟ್‌  ಹಾಗೂ ಜಿಮ್ನಾಸ್ಟಿಕ್‌ನಲ್ಲಿ ನಿರಾಸೆ ಅನುಭವಿಸಿದೆ.

ಶನಿವಾರ (ಜುಲೈ 30) ಪದಕ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಪದಕ ದೊರೆಯುವ ನಿರೀಕ್ಷೆ ಇದೆ.  ಬರ್ಮಿಂಗ್‌ಹ್ಯಾಮ್‌ನಲ್ಲಿ ಎರಡನೇ ದಿನ ಕಣಕ್ಕಳಿಯಲಿರುವ ಭಾರತದ ಸ್ಪರ್ಧಿಗಳ ವಿವಿರ ಈ ಕೆಳಗಿನಂತಿದೆ.

ಈಜು |

Image

ಕುಶಾಗ್ರ ರಾವತ್ – ಪುರುಷರ 200 ಮೀಟರ್ ಫ್ರೀಸ್ಟೈಲ್.  ಸಮಯ- ಮಧ್ಯಾಹ್ನ: 3ಕ್ಕೆ.

ಆರ್ಟಿಸ್ಟಿಕ್ ಜಿಮ್ಯಾಸ್ಟಿಕ್ಸ್ |

Image

ಮಹಿಳೆಯರ ತಂಡ ಫೈನಲ್ ಮತ್ತು ವೈಯಕ್ತಿಕ ಅರ್ಹತಾ ಸುತ್ತು: ರುತುಜಾ ನಟರಾಜ್, ಪಿ ಸಮಂತಾ ಮತ್ತು ಪ್ರಣೀತಿ ನಾಯಕ್‌. ಸಮಯ- ರಾತ್ರಿ: 9ಕ್ಕೆ.

ಬ್ಯಾಡ್ಮಿಂಟನ್‌ |

Image

ಮಿಶ್ರ ತಂಡ ಗುಂಪು ಹಂತ. – ಎ ಗುಂಪು : ಭಾರತ vs ಶ್ರೀಲಂಕಾ (ಮಧ್ಯಾಹ್ನ 1.30); ಭಾರತ vs ಆಸ್ಟ್ರೇಲಿಯಾ (ರಾತ್ರಿ 11.30).

ಬಾಕ್ಸಿಂಗ್‌ |

Image

54-57 ಕೆಜಿ, ಫೆರರ್‌ವೇಟ್‌ ವಿಭಾಗ, 32ನೇ ಸುತ್ತು:  ಹುಸ್ಸಾಮುದ್ದೀನ್‌ ಮುಹಮ್ಮದ್

ಸಮಯ- ಸಂಜೆ: 5ಕ್ಕೆ.

66-70 ಕೆಜಿ ಲೈಟ್‌ ಮಿಡಲ್‌ ವೇಟ್‌ ವಿಭಾಗ 16ನೇ ಸುತ್ತು: ಲವಿನಾ ಬೊರ್ಗೊಹೈನ್‌.

86-92 ಕೆ.ಜಿ (ಹೆವಿವೇಟ್ ವಿಭಾಗ) 16ನೇ ಸುತ್ತು: ಸಂಜೀತ್

ಸ್ಕ್ವಾಷ್‌ |

Image

ಪುರುಷರ ಸಿಂಗಲ್ಸ್‌ 32ನೇ ಸುತ್ತು: ರಮಿತ್ ಟಂಡನ್. ಸಮಯ- ಸಂಜೆ: 5ಕ್ಕೆ. ಸೌರವ್ ಘೋಷಾಲ್ ಸಂಜೆ: 6.15ಕ್ಕೆ.

ಮಹಿಳೆಯರ ಸಿಂಗಲ್ಸ್ 32ನೇ ಸುತ್ತು: ಸುನಯಾ ಸಾರಾ ಕುರುವಿಲ್ಲಾ. ಸಮಯ- ಸಂಜೆ: 5.45ಕ್ಕೆ. ಜೋತ್ಸಾ ಚಿನ್ನಪ್ಪ. ಸಮಯ- ಸಂಜೆ: 5.45ಕ್ಕೆ.

ಟೇಬಲ್‌ ಟೆನಿಸ್ |‌

ಮಹಿಳೆಯರ 2ನೇ ಗುಂಪು: ಭಾರತ vs ಗಯಾನಾ. ಸಮಯ- ಮಧ್ಯಾಹ್ನ: 2ಕ್ಕೆ

ಪುರುಷರ 3ನೇ ಗುಂಪು: ಭಾರತ – ಐರ್ಲೆಂಡ್. ಸಮಯ- ಸಂಜೆ: 4.30ಕ್ಕೆ

ನಿಮಗೆ ಏನು ಅನ್ನಿಸ್ತು?
0 ವೋಟ್