ಕಾಮನ್​ವೆಲ್ತ್​ ಗೇಮ್ಸ್ | ಪಾಕಿಸ್ತಾನದ ಎದುರಾಳಿಗೆ ಶಿವ ಥಾಪಾ ಬಲಿಷ್ಠ ಪಂಚ್‌

  • ಪುರುಷರ ಬಾಕ್ಸಿಂಗ್ 63 ಕೆಜಿ ವಿಭಾಗದ ಸ್ಪರ್ಧೆ
  • ಪಾಕಿಸ್ತಾನದ ಸುಲೈಮಾನ್‌ ವಿರುದ್ಧ ಗೆಲುವು

ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್​ವೆಲ್ತ್​ ಗೆಮ್ಸ್​​ನಲ್ಲಿ ಭಾರತದ ಸ್ಪರ್ಧಿಗಳು ಗೆಲುವಿನ ಆರಂಭ ಪಡೆದಿದ್ದಾರೆ. ಪುರುಷರ ಬಾಕ್ಸಿಂಗ್ 63 ಕೆಜಿ ವಿಭಾಗದಲ್ಲಿ ಭಾರತದ ಶಿವ ಥಾಪಾ, ಪಾಕಿಸ್ತಾನದ ಸುಲೈಮಾನ್‌ ಬಲೂಚ್‌ ವಿರುದ್ಧ 5-0 ಅಂತರದಿಂದ ಭರ್ಜರಿ ಗೆಲುವು ದಾಖಲು ದಾಖಲಿಸಿದ್ದಾರೆ. ಮೊದಲ ಗೆಲುವಿನೊಂದಿಗೆ ಶಿವ, ಪ್ರೀ ಕ್ವಾರ್ಟರ್​ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

28 ವರ್ಷದ ಐದು ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಪದಕ ವಿಜೇತರಾದ ಥಾಪಾ ಪಂದ್ಯದುದ್ದಕ್ಕೂ ಪಾಕ್‌ ಎದುರಾಳಿಯ ಮೇಲೆ ಮೇಲುಗೈ ಸಾಧಿಸಿದ್ದರು. ನಿರಂತರವಾಗಿ ತೀಕ್ಷ್ಣವಾದ ಹೊಡೆತಗಳ ಮೂಲಕ ಎದುರಾಳಿಯ ಮೇಲೆ ಸವಾರಿ ಮಾಡಿದ ಮಾಜಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಭಾರತೀಯ ಬಾಕ್ಸರ್‌ ನಿರಾಯಾಸ ಗೆಲುವು ದಾಖಲಿಸಿದರು.

ಈಜು, ಸೈಕ್ಲಿಂಗ್‌ನಲ್ಲಿ ನಿರಾಸೆ

ಪುರುಷರ 400 ಮೀಟರ್ ಫ್ರೀಸ್ಟೈಲ್ ಈಜು​ ಫೈನಲ್​​ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಭಾರತದ ಕುಶಾಗ್ರಾ ರಾವತ್ ವಿಫಲರಾಗಿದ್ದಾರೆ. ಸೈಕ್ಲಿಂಗ್​ ವಿಭಾಗದಲ್ಲೂ ಭಾರತ ಫೈನಲ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಬ್ಯಾಕ್‌ಸ್ಟೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ ಸೆಮಿಫೈನಲ್​​ಗೆ ಅರ್ಹತೆ ಗಿಟ್ಟಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್