ಕಾಮನ್‌ವೆಲ್ತ್‌ ಗೇಮ್ಸ್‌ | ಗೆಲುವಿನತ್ತ ಧಾವಿಸಿ ಮುಗ್ಗರಿಸಿದ ಭಾರತ

Cricket
  • ಆಸ್ಟ್ರೇಲಿಯ ವನಿತೆಯರಿಗೆ 3 ವಿಕೆಟ್​​ಗಳ ಭರ್ಜರಿ ಗೆಲುವು
  • ಆಶ್ಲೇ ಗಾರ್ಡನರ್‌, ಗ್ರೆಸ್ ಹ್ಯಾರಿಸ್‌ ಹೋರಾಟಕ್ಕೆ ಮಣಿದ ಭಾರತ

24 ವರ್ಷಗಳ ಬಳಿಕ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಮರಳಿ ಸೇರ್ಪಡೆಯಾಗಿದ್ದ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ಮಹಿಳಾ ತಂಡವು ಮುಗ್ಗರಿಸಿದೆ. ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ಟಿ- 20 ಪಂದ್ಯದಲ್ಲಿ ಹರ್ಮನ್​ ಪ್ರೀತ್ ಕೌರ್ ಬಳಗದ ವಿರುದ್ಧ, ಆಸ್ಟ್ರೇಲಿಯ ವನಿತೆಯರು 3 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದ್ದಾರೆ.

ಟಾಸ್‌ ಗೆದ್ದ ಮೊದಲು ಬ್ಯಾಟ್‌ ಮಾಡಿದ್ದ ಭಾರತ 8 ವಿಕೆಟ್‌ ನಷ್ಟದಲ್ಲಿ 154 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ ಆಸೀಸ್‌, 7 ವಿಕೆಟ್‌ ನಷ್ಟದಲ್ಲಿ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 157 ರನ್‌ ಗಳಿಸಿ ಗೆಲುವಿನ ಸಂಭ್ರಮವನ್ನಾಚರಿಸಿದೆ.

ಗೆಲುವಿನತ್ತ ಧಾವಿಸಿ ಮುಗ್ಗರಿಸಿದ ಭಾರತ

ಭಾರತ ನೀಡಿದ್ದ ಸವಾಲಿನ ಗುರಿ ಬೆನ್ನಟ್ಟುವ ವೇಳೆ ಆಸ್ಟ್ರೇಲಿಯ, ಕೇವಲ 49 ರನ್‌ ಗಳಿಸುವಷ್ಟರಲ್ಲಿಯೇ ಐವರು ಅಗ್ರಕ್ರಮಾಂಕದ ಆಟಗಾರರ ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಆ ಬಳಿಕ ಒಂದಾದ ಆಶ್ಲೇ ಗಾರ್ಡನರ್‌ (52*)​​ ಮತ್ತು ಗ್ರೆಸ್ ಹ್ಯಾರಿಸ್‌ ​​(37) ಅತ್ಯುತ್ತಮ ಜತೆಯಾಟದ ಮೂಲಕ ತಂಡವನ್ನು ಅಮೋಘವಾಗಿ ಗೆಲುವಿನತ್ತ ಮುನ್ನಡೆಸಿದರು. ಹ್ಯಾರಿಸ್‌ ವಿಕೆಟ್‌ ಪತನವಾದರೂ ಕೊನೆಯಲ್ಲಿ ಅಲೆನಾ ಕಿಂಗ್‌ 18 ರನ್‌ ಗಳಿಸಿ ಅಜೇಯರಾಗುಳಿಯುವ ಮೂಲಕ ಭಾರತಕ್ಕೆ ಗೆಲುವನ್ನು ನಿರಾಕರಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್​ 18 ರನ್‌ ನೀಡಿ 4 ವಿಕೆಟ್ ಪಡೆದರೆ,  ದೀಪ್ತಿ ಶರ್ಮಾ 2 ಹಾಗೂ ಮೇಘನಾ ಸಿಂಗ್ 1 ವಿಕೆಟ್ ಕಿತ್ತರು.

ಈ ಸುದ್ದಿ ಓದಿದ್ದೀರಾ  ? : ಕಾಮನ್​ವೆಲ್ತ್​ ಗೆಮ್ಸ್ | ಪಾಕಿಸ್ತಾನದ ಎದುರಾಳಿಗೆ ಶಿವ ಥಾಪಾ ಬಲಿಷ್ಠ ಪಂಚ್‌

 ಇದಕ್ಕೂ ಮೊದಲು ಬ್ಯಾಟ್‌ ಮಾಡಿದ್ಧ ಭಾರತ ತಂಡಕ್ಕೆ ಸ್ಮೃತಿ ಮಂಧಾನ (24 ರನ್) ಮತ್ತು ಶೆಫಾಲಿ ವರ್ಮಾ (48 ರನ್) ಉತ್ತಮ ಆರಂಭ ಒದಗಿಸಿದ್ದರು. ನಾಯಕಿ ಹರ್ಮನ್​ಪ್ರೀತ್ ಕೌರ್​‌ ಆಕರ್ಷಕ ಅರ್ಧ ಶತಕ ದಾಖಲಿಸಿ ಮಿಂಚಿದರು. ಆದರೆ, ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ದೊರಯಲಿಲ್ಲ. ಕೀಪರ್‌ ಯಸ್ತಿಕ್ ಭಾಟಿಯಾ‌ 8 ರನ್‌,  ರಾಡ್ರಿಗಸ್​​ 11 ರನ್​ ಗಳಿಸಿ ಔಟಾದರು. ಆಸಿಸ್​ ತಂಡದ ಪರ ಜೊನಾಸನ್​ ನಾಲ್ಕು ವಿಕೆಟ್ ಪಡೆದರೆ, ಮೇಘನ್​ ಸ್ಕಟ್​ 2 ಹಾಗೂ ಡಾರ್ಸಿ ಬ್ರೌನ್ 1 ವಿಕೆಟ್ ಪಡೆದರು.

ನಿಮಗೆ ಏನು ಅನ್ನಿಸ್ತು?
0 ವೋಟ್