ಟ್ರಿಪಲ್ ಜಂಪ್​ನಲ್ಲಿ ಇತಿಹಾಸ ನಿರ್ಮಿಸಿದ ಎಲ್ಡೋಸ್ ಪೌಲ್, ಅಬ್ದುಲ್ಲಾ ಅಬೂಬಕರ್‌

ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಸ್ಪರ್ಧಿಗಳು ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

17. 3 ಮೀಟರ್‌ ದೂರ ಹಾರಿದ ಕೇರಳದ ಎಲ್ದೋಸ್‌ ಪೌಲ್‌ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರೆ, ಕೇವಲ ಒಂದು ಸೆಂಟಿ ಮೀಟರ್‌ ದೂರದ ಅಂತರದಲ್ಲಿ ಸ್ಪರ್ಧೆ ಮುಗಿಸಿದ ಭಾರತದ ಅಬ್ದುಲ್ಲಾ ಅಬೂಬಕರ್‌ (17.2 ಮೀ.) ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ಈ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಪ್ರವೀಣ್‌ ಚಿತ್ರವೇಲ್‌, 16.89 ಮೀಟರ್‌ ದೂರ ದಾಖಲಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನಿಮಗೆ ಏನು ಅನ್ನಿಸ್ತು?
0 ವೋಟ್