ಕಾಮನ್‌ವೆಲ್ತ್‌ ಗೇಮ್ಸ್‌ | ಚಿನ್ನದ ಲಕ್ಷ್ಯ ಸಾಧಿಸಿದ ಸೇನ್‌

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಲಕ್ಷ್ಯ ಸೇನ್‌ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆದ್ದ ಬೆನ್ನಲ್ಲೇ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲೂ ಚಿನ್ನದ ಪದಕ ಭಾರತದ ಪಾಲಾಗಿರುವುದು ವಿಶೇಷ.

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದ ಫೈನಲ್‌ ಪ್ರವೇಶಿಸಿದ್ದ 20 ವರ್ಷದ ಲಕ್ಷ್ಯ ಸೇನ್, ಪದಕ ಸುತ್ತಿನಲ್ಲಿ ಮಲೇಷ್ಯಾದ ಎನ್‌ಜಿ ಟ್ಜೆ ಯೋಂಗ್ ಅವರನ್ನು 19-21, 21-9, ಹಾಗೂ 21-16 ಸೆಟ್‌ಗಳ ಅಂತರದಲ್ಲಿ ಸೋಲಿಸಿ ಚೊಚ್ಚಲ ಚಿನ್ನ ಗೆದ್ದರು. ಇದು ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತಕ್ಕೆ ಲಭಿಸಿದ 20ನೇ ಚಿನ್ನದ ಪದಕವಾಗಿದೆ.

ಈ ಸುದ್ದಿ ಓದಿದ್ದೀರಾ ? : ಇದೀಗ | ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದ ಪಿವಿ ಸಿಂಧು

ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಫೈನಲ್‌ಗೂ ಮೊದಲು ನಡೆದ ಮಹಿಳೆಯರ ವಿಭಾಗದಲ್ಲಿ ಭಾರತದವರೇ ಆದ ಪಿವಿ ಸಿಂಧು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದರು. ಮಹಿಳಾ ಸಿಂಗಲ್ಸ್‌ನ ಫೈನಲ್‌ನಲ್ಲಿ ಸಿಂಧು, ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಅಂತರದಿಂದ ನೇರ ಸೆಟ್‌ಗಳಿಂದ ಸೋಲಿಸಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಚಿನ್ನದ ಪದಕ ಗೆದ್ದಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್