ಭಾರತ ಸಂವಿಧಾನ ರಚನೆಯಲ್ಲಿ 15 ಮಹಿಳೆಯರ ಪಾತ್ರ

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರ ನೇತೃತ್ವದಲ್ಲಿ ಸಿದ್ಧವಾದ ನಮ್ಮ ಸಂವಿಧಾನ ರಚನೆಯಲ್ಲಿ ಪ್ರಮುಖ ಹದಿನೈದು ಮಹಿಳೆಯರು ದೇಶದ ಸಂವಿಧಾನ ರಚಿಸಲು ಕೊಡುಗೆ ನೀಡಿದ್ದಾರೆ. ಅದರಲ್ಲಿ ಎಂಟು ಮಂದಿ ಸಂವಿಧಾನಕ್ಕೆ ಸಹಿ ಹಾಕಿದ್ದಾರೆ.

ಭಾರತೀಯ ಸಂವಿಧಾನವು ವಿಶ್ವದ ದೊಡ್ಡ ಮತ್ತು ಲಿಖಿತ ಸಂವಿಧಾನಗಳಲ್ಲಿ ಒಂದಾಗಿದೆ. ಭಾರತವನ್ನು ಜಾತ್ಯತೀತ ದೇಶವೆಂದು ಸಂವಿಧಾನದಲ್ಲಿ ಕರೆಯಲಾಗಿದೆ. ಯಾವುದೇ ಧರ್ಮ, ಮತ, ವರ್ಗ ಹಾಗೂ ಜಾತಿಯ ಜನರಿಗೆ ಬದುಕಲು ಮುಕ್ತವಾದ ಸ್ವಾತಂತ್ರ್ಯ ನೀಡಿದೆ. ನಮ್ಮ ಸಂವಿಧಾನವನ್ನು ಬರೆಯಲು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಳ್ಳಲಾಗಿದೆ.

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಆದರೂ ನಮ್ಮ ಸಂವಿಧಾನ ರಚನೆಯಲ್ಲಿ ಪ್ರಮುಖ ಹದಿನೈದು ಮಹಿಳೆಯರು ದೇಶದ ಸಂವಿಧಾನ ರಚಿಸಲು ಕೊಡುಗೆ ನೀಡಿದ್ದಾರೆ. ಅದರಲ್ಲಿ ಎಂಟು ಮಂದಿ ಸಂವಿಧಾನಕ್ಕೆ ಸಹಿ ಹಾಕಿದ್ದಾರೆ.

ಸುಚೇತಾ ಕೃಪ್ಲಾನಿ, ಅಮ್ಮು ಸ್ವಾಮಿನಾಥನ್, ಸರೋಜಿನಿ ನಾಯ್ಡು, ವಿಜಯ ಲಕ್ಷ್ಮಿ ಪಂಡಿತ್, ದುರ್ಗಾಬಾಯಿ ದೇಶ್ಮುಖ್, ರಾಜ್‌ಕುಮಾರಿ ಅಮೃತ್ ಕೌರ್, ಹನ್ಸಾ ಮೆಹ್ತಾ, ಬೇಗಂ ಐಜಾಜ್ ರಸೂಲ್, ಮಾಲತಿ ಚೌಧೂರಿ, ಕಮಲಾ ಚೌಧರಿ, ಲೀಲಾ ರೆಯಾ, ದಕ್ಷಾಯಾನಿ ವೇಲಾಯುಧನ್, ರೇಣುಕಾ ರೇ, ಅನ್ನಿ ಮಸ್ಕರೆನ್ ಹಾಗೂ ಪೂರ್ಣಿಮಾ ಬ್ಯಾನರ್ಜಿ ಅವರು ಭಾರತೀಯ ಸಂವಿಧಾನದ ಕರಡು ರಚನೆಯಲ್ಲಿ ಪಾತ್ರವಹಿಸಿದ್ದ 15 ಮಹಿಳೆರಾಗಿದ್ದಾರೆ.

ಬೇಗಂ ಕುಡ್ಸಿಯಾ ಐಜಾಜ್ ರಸೂಲ್

Image

ಭಾರತೀಯ ಸಂವಿಧಾನ ರಚನೆಗೆ ಸಹಕರಿಸಿದ ಮುಸ್ಲಿಂ ಮಹಿಳೆ. 1952ರಲ್ಲಿ ರಾಜ್ಯಸಭೆಗೂ ಸಹ ಚುನಾಯಿತರಾಗಿದ್ದರು. 1969 ರಿಂದ 1990 ರವರೆಗೆ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. 2000ರಲ್ಲಿ ಸಾಮಾಜಿಕ ಕಾರ್ಯಗಳಿಗೆ ನೀಡಿದ ಕೊಡುಗೆಗಾಗಿ ಇವರಿಗೆ ಭಾರತ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು.

ಸುಚೇತಾ ಕೃಪಲಾನಿ

Image

ಹರಿಯಾಣದಲ್ಲಿ ಜನಿಸಿದ ಇವರು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿದ್ದವರು. 1967ರ ತನಕ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂವಿಧಾನ ರಚನೆಯಲ್ಲಿ  ತಂಡದ ಸದಸ್ಯರಾಗಿದ್ದರು.

ಅಮ್ಮು ಸ್ವಾಮಿನಾಥನ್​

Image

ಕೇರಳದ ಪಾಲ್ಘಾಟ್ ಜಿಲ್ಲೆಯಲ್ಲಿ ಜನಿಸಿದ ಇವರು, 1952 ರಲ್ಲಿ ಲೋಕಸಭೆಗೆ ಮತ್ತು 1954 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1946 ರಲ್ಲಿ ಅವರು ಮದ್ರಾಸ್‌ನಿಂದ ಸಂವಿಧಾನ ಸಭೆಯ ಭಾಗವಾಗಿದ್ದರು.

ಸರೋಜಿನಿ ನಾಯ್ಡು

Image

ಹೈದರಾಬಾದ್‌ನಲ್ಲಿ ಜನಿಸಿದ ಸರೋಜಿನಿ ನಾಯ್ಡು. ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಭಾರತೀಯ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ಭಾರತೀಯ ಮಹಿಳೆ.  ಹಾಡುಗಾರಿಕೆಗಾಗಿ ಸರೋಜಿನಿ ನಾಯ್ಡು ಅವರನ್ನ "ದಿ ನೈಟಿಂಗೇಲ್ ಆಫ್ ಇಂಡಿಯಾ" ಎಂದು ಕರೆಯಲಾಗಿದೆ.

ವಿಜಯ ಲಕ್ಷ್ಮಿ ಪಂಡಿತ್

Image

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಸಹೋದರಿಯಾದ ಇವರು, 1900ರ ಆಗಸ್ಟ್ 18 ರಂದು ಅಲಹಾಬಾದ್‌ನಲ್ಲಿ ಜನಿಸಿದರು.  1936ರಲ್ಲಿ, ಅವರು ಯುನೈಟೆಡ್ ಪ್ರಾಂತ್ಯಗಳ ಅಸೆಂಬ್ಲಿಗೆ ಆಯ್ಕೆಯಾದರು ಮತ್ತು 1937 ರಲ್ಲಿ ಸ್ಥಳೀಯ ಸ್ವ- ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಸಚಿವರಾದರು. ಇವರು ಸಂಪುಟ ದರ್ಜೆಯ ಸಚಿವರಾದ ಭಾರತದ ಮೊದಲ ಮಹಿಳೆ. ಸಂವಿಧಾನ ರಚನ ಸಭೆಯ ಭಾಗವಾಗಿದ್ದರು.

ದುರ್ಗಾಬಾಯಿ ದೇಶಮುಖ್ 

Image

1909ರ ಜುಲೈ 15 ರಂದು ರಾಜಮಂಡ್ರಿಯಲ್ಲಿ ಜನಿಸಿದರು. ಸಂಸತ್ತು ಮತ್ತು ಯೋಜನಾ ಆಯೋಗದ ಸದಸ್ಯರಾಗಿದ್ದರು. ಭಾರತದಲ್ಲಿ ಸಾಕ್ಷರತೆಯನ್ನು ಉತ್ತೇಜಿಸುವಲ್ಲಿ ಇವರು ನೀಡಿದ ಅತ್ಯುತ್ತಮ ಕೊಡುಗೆಗಾಗಿ 1971ರಲ್ಲಿ ನಾಲ್ಕನೇ ನೆಹರು ಸಾಕ್ಷರತಾ ಪ್ರಶಸ್ತಿಯನ್ನು ಪಡೆದರು. 1975ರಲ್ಲಿ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

ಅಮೃತ್​ ಕೌರ್​ 

Image

ಉತ್ತರ ಪ್ರದೇಶದ ಲಖನೌದಲ್ಲಿ 1889 ರಲ್ಲಿ ಜನಿಸಿದ ಅಮೃತ ಕೌರ್ ಭಾರತದ ಮೊದಲ ಆರೋಗ್ಯ ಸಚಿವರಾಗಿದ್ದರು. ಅವರು ಹತ್ತು ವರ್ಷಗಳ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​​​​​ (ಏಮ್ಸ್) ನ ಸ್ಥಾಪಕರಾಗಿದ್ದಾರೆ.

ಹನ್ಸಾ ಮೆಹ್ತಾ

Image

ಸಾಮಾಜಿಕ ಕಾರ್ಯಕರ್ತರಾಗಿರುವುದರ ಜೊತೆಗೆ, ಹನ್ಸಾ ಮೆಹ್ತಾ ಅವರು ಪ್ರಸಿದ್ಧ ಬರಹಗಾರರಾಗಿದ್ದರು. ಗುಜರಾತಿನಲ್ಲಿ ಮಕ್ಕಳಿಗಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಗಲಿವರ್ ಟ್ರಾವೆಲ್ಸ್ ಸೇರಿದಂತೆ ಅನೇಕ ಇಂಗ್ಲಿಷ್ ಕಥೆಗಳನ್ನು ಅನುವಾದಿಸಿದ್ದಾರೆ.

ಮಾಲತಿ ಚೌಧರಿ

Image

1904ರಲ್ಲಿ ಪೂರ್ವ ಬಂಗಾಳದಲ್ಲಿ (ಈಗ ಬಾಂಗ್ಲಾದೇಶ) ಜನಿಸಿದ ಮಾಲತಿ ಚೌಧರಿ ಮತ್ತು ಪತಿ ನಬಕೃಷ್ಣ ಚೌಧರಿ ಅವರು ಉತ್ಕಲ್ ಕಾಂಗ್ರೆಸ್ ಸಮಾಜವಾದಿ ಕರ್ಮ ಸಂಘವನ್ನು ರಚಿಸಿದರು. ನಂತರ ಇದನ್ನು ಅಖಿಲ ಭಾರತ ಕಾಂಗ್ರೆಸ್ ಸಮಾಜವಾದಿ ಪಕ್ಷದ ಒಡಿಶಾ ಪ್ರಾಂತೀಯ ಶಾಖೆ ಎಂದು ಕರೆಯಲಾಯಿತು.

ಕಮಲಾ ಚೌಧರಿ

Image

ಲಖನೌದಲ್ಲಿ ಜನಿಸಿದ ಕಮಲಾ ಚೌಧರಿ 1930ರಲ್ಲಿ  ಮಹಾತ್ಮ ಗಾಂಧಿ ಪ್ರಾರಂಭಿಸಿದ ಅಸಹಕಾರ ಚಳವಳಿಯ ಭಾಗವಾಗಿದ್ದರು. ಪ್ರಸಿದ್ಧ ಬರಹಗಾರ್ತಿಯಾಗಿದ್ದ ಕಮಲಾ ಅವರು ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.

ಲೀಲಾ ರಾಯ್​ 

Image

ಅಸ್ಸಾಂನಲ್ಲಿ ಜನಿಸಿದ ಲೀಲಾ ರಾಯ್ 1921 ರಲ್ಲಿ ಬೆಥೂನ್ ಕಾಲೇಜಿನಿಂದ ಪದವಿ ಪಡೆದರು. ಆಲ್ ಬಂಗಾಳ ಮಹಿಳಾ ಮತದಾರರ ಸಮಿತಿಯ ಸಹಾಯಕ ಕಾರ್ಯದರ್ಶಿಯಾಗಿದ್ದರು.

ದಕ್ಷಯಾನಿ ವೇಲಾಯುಧನ್​

Image

1946 ರಲ್ಲಿ ಸಂವಿಧಾನ ಸಭೆಗೆ ಆಯ್ಕೆಯಾದ ಮೊದಲ ಮತ್ತು ಏಕೈಕ ದಲಿತ ಮಹಿಳೆ ಇವರು. 1912 ರಲ್ಲಿ ಕೊಚ್ಚಿನ್‌ನ ಬೊಲ್ಗಾಟ್ಟಿ ದ್ವೀಪದಲ್ಲಿ ಜನಿಸಿದ ವೇಲಾಯುಧನ್ ಅವರನ್ನು 1945 ರಲ್ಲಿ ರಾಜ್ಯ ಸರ್ಕಾರವು ಕೊಚ್ಚಿನ್ ಶಾಸಕಾಂಗ ಮಂಡಳಿಗೆ ನಾಮನಿರ್ದೇಶನ ಮಾಡಿತ್ತು. 

ರೇಣುಕಾ ರೇ

Image

ಸಮಾಜ ಸೇವಕಿ ರೇಣುಕಾ ರೇ ಅವರು 1943 ರಿಂದ 1946 ರವರೆಗೆ ಕೇಂದ್ರ ವಿಧಾನಸಭೆ, ಸಂವಿಧಾನ ಸಭೆ ಮತ್ತು ತಾತ್ಕಾಲಿಕ ಸಂಸತ್ತಿನ ಸದಸ್ಯರಾಗಿದ್ದರು. 1952 ರಿಂದ 1957 ರವರೆಗೆ ಪರಿಹಾರ ಮತ್ತು ಪುನರ್ವಸತಿ ಸಚಿವರಾಗಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ

ಅನ್ನಿ ಮಸ್ಕರೆನ್​ 

Image

ಕೇರಳದ ತಿರುವನಂತಪುರಂನಲ್ಲಿ ಜನಿಸಿದ ಅನ್ನಿ ಮಸ್ಕರೆನ್, ತಿರುವಾಂಕೂರು ರಾಜ್ಯ ಕಾಂಗ್ರೆಸ್​​ಗೆ ಸಕ್ರಿಯ ಸದಸ್ಯರಾಗಿ ಸೇರಿದ ಮಹಿಳೆಯರಲ್ಲಿ ಒಬ್ಬರು. ತಿರುವಾಂಕೂರು ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಭಾಗವಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇರಳದ ಮೊದಲ ಮಹಿಳಾ ಸಂಸದ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದರು.

ಪೂರ್ಣಿಮಾ ಬ್ಯಾನರ್ಜಿ

Image

ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1930 ಮತ್ತು 1940ರ ಉತ್ತರಾರ್ಧದಲ್ಲಿ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿ ನಿಂತ ಉತ್ತರ ಪ್ರದೇಶದ ಪ್ರಮುಖ ಮಹಿಳೆಯರಲ್ಲಿ ಒಬ್ಬರು.

ನಿಮಗೆ ಏನು ಅನ್ನಿಸ್ತು?
1 ವೋಟ್