ಏಷ್ಯಾ ಕಪ್ | ಗೆಲುವಿನ ಓಟ ಮುಂದುವರಿಸಿದ ಅಫ್ಘಾನಿಸ್ತಾನ: ಬಾಂಗ್ಲಾ ವಿರುದ್ಧ ಭರ್ಜರಿ ಜಯ

afghan
  • ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕರ ಘಟಕ್ಕೇರಿದ ಅಫ್ಘಾನಿಸ್ತಾನ
  • ನಜಿಬುಲ್ಲಾ ಝದ್ರಾನ್ ಅವರ ಬಿರುಸಿನ ಬ್ಯಾಟಿಂಗ್‌; ಏಳು ವಿಕೆಟ್‌ಗಳ ಜಯ

ಮಂಗಳವಾರ ನಡೆದ ಏಷ್ಯಾ ಕಪ್‌ನ ಗ್ರೂಪ್ 'ಬಿ'ಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ತಂಡವು ಸೂಪರ್ 4ರ ಹಂತಕ್ಕೆ ಅರ್ಹತೆ ಪಡೆದಿದೆ. ಎಡಗೈ ಆಟಗಾರ ನಜೀಬುಲ್ಲಾ ಝದ್ರಾನ್ ಅವರ ತಡವಾದ ಬಿರುಸಿನ ಬ್ಯಾಟಿಂಗ್‌ನ ನೆರವಿನಿಂದ ಅಫ್ಘಾನಿಸ್ತಾನವು ಬಾಂಗ್ಲಾವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.

ಅಫ್ಘಾನಿಸ್ತಾನವು ಎಲ್ಲ ವಿಭಾಗಗಳಲ್ಲಿ ಬಾಂಗ್ಲಾದೇಶವನ್ನು ಮೀರಿಸಿ ಎರಡನೇ ಪಂದ್ಯವನ್ನೂ ಗೆಲ್ಲುವ ಮೂಲಕ ಅಂತಿಮ ನಾಲ್ಕಕ್ಕೆ ಅರ್ಹತೆ ಪಡೆದ ಮೊದಲ ತಂಡವಾಯಿತು.

ಬಾಂಗ್ಲಾದೇಶ 15ನೇ ಓವರ್‌ನವರೆಗೂ ಬಿಗಿಯಾಗಿ ಬೌಲಿಂಗ್ ಮಾಡಿದರೂ, ನಜೀಬುಲ್ಲಾ ಝದ್ರಾನ್ 17 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಆರು ಸಿಕ್ಸರ್‌ಗಳೊಂದಿಗೆ 43 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

128 ರನ್‌ಗಳನ್ನು ಬೆನ್ನಟ್ಟಿದ ಅಫ್ಘಾನಿಸ್ತಾನವು 18.3 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು, ಇನ್ನು ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಅಫ್ಘಾನಿಸ್ತಾನ ಏಳು ವಿಕೆಟ್‌ಗಳ ಜಯ ಸಾಧಿಸಿತು. ನಜೀಬುಲ್ಲಾ ಸಿಕ್ಸರ್‌ನೊಂದಿಗೆ ಪಂದ್ಯವನ್ನು ಮುಗಿಸಿದರು.

ಇಬ್ರಾಹಿಂ 41 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 42 ರನ್ ಗಳಿಸಿದರೆ, ನಜೀಬುಲ್ಲಾ 17 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 43 ರನ್ ಗಳಿಸಿದರು. ಬಾಂಗ್ಲಾದೇಶದ ಪರ ಬೌಲಿಂಗ್‌ನಲ್ಲಿ ಶಕೀಬ್ ಅಲ್ ಹಸನ್, ಮೊಸದ್ದಿಕ್ ಹುಸೈನ್, ಸೈಫುದ್ದೀನ್ ತಲಾ ಒಂದು ವಿಕೆಟ್ ಪಡೆದುಕೊಂಡರು.

ನಿಮಗೆ ಏನು ಅನ್ನಿಸ್ತು?
0 ವೋಟ್