ಸರಣಿ ಸೋಲುವ ಭೀತಿಯಲ್ಲಿ ಇಂಗ್ಲೆಂಡ್‌ | ಮತ್ತೊಂದು ಪಂದ್ಯ ಗೆಲ್ಲುವ ತವಕದಲ್ಲಿ ಭಾರತ

  • ಈ ಪಂದ್ಯಕ್ಕೂ ವಿರಾಟ್‌ ಕೊಹ್ಲಿ ಗೈರು ಸಾಧ್ಯತೆ 
  • ಮುಜುಗರ ತಪ್ಪಿಸಿಕೊಳ್ಳಲು ಹವಣಿಸುತ್ತಿರುವ ಇಂಗ್ಲೆಂಡ್‌

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಎರಡನೇ ಪಂದ್ಯಕ್ಕೆ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಸಜ್ಜಾಗಿದೆ. ಗುರುವಾರ ನಡಯಲಿರುವ ಪಂದ್ಯದಲ್ಲಿ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ರೋಹಿತ್‌ ಶರ್ಮಾ ಪಡೆ ಎದುರು ನೋಡುತ್ತಿದೆ.

ಟಿ-20 ಸರಣಿಯಲ್ಲಿ ಗೆದ್ದು ಬೀಗಿದ್ದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ನರಿಗೆ ಮಣ್ಣು ಮುಕ್ಕಿಸಿದೆ. ಆತ್ಮವಿಶ್ವಾದ ಅಲೆಯಲ್ಲಿ ತೇಲುತ್ತಿರುವ ಭಾರತಕ್ಕೆ ಇಂಗ್ಲೆಂಡ್‌ ತೀರುಗೇಟು ನೀಡಲು ಸಜ್ಜಾಗಿದೆ.

ವಿಶ್ವದ ನಂ 1 ಬೌಲರ್‌ ಬುಮ್ರಾ ಈ ಪಂದ್ಯದಲ್ಲಿ ಕೂಡ  ಭಾರತದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಮೊದಮದ್‌ ಶಮಿ, ಪ್ರಸಿದ್ದ್‌ ಕೃಷ್ಟ ಸಾಥ್‌ ನೀಡಲಿದ್ದಾರೆ.

ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ ಅಬ್ಬರಿಸಿದರೆ ರನ್‌ ಮಳೆಯೇ ಹರಿಯಲಿದೆ. ಶಿಖರ್‌ ಧವನ್‌ ಭರವಸೆ ಮೂಡಿಸಿದ್ದಾರೆ. ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲೂ ಸಹ ಕಣಕ್ಕಿಳಿಯುವುದು ಅನುಮಾನ ಎನಿಸಿದ್ದು, ಸೂರ್ಯ ಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌ ರಿಷಬ್‌ಪಂತ್‌, ಮಧ್ಯಮ ಕ್ರಮಾಂಕದಲ್ಲಿ ಜವಾಬ್ಬಾರಿ ಹೊರಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಏಕದಿನ ರ್‍ಯಾಂಕಿಂಗ್‌| ಮೊದಲ ಸ್ಥಾನಕ್ಕೆ ಬುಮ್ರಾ ಲಗ್ಗೆ

ಭಾರತೀಯ ಬೌಲರ್‌ಗಳು ಇಂಗ್ಲೆಂಡ್ ಬ್ಯಾಟರ್‌ಗಳನ್ನು ನಿರಂತರವಾಗಿ ಒತ್ತಡಕ್ಕೆ ಸಿಲುಕಿಸುತ್ತಿದ್ದು, ಇದರ ಲಾಭ ಪಡೆಯಲು ಭಾರತ ಇನ್ನಷ್ಟು ರಣತಂತ್ರಗಳನ್ನು ಹೂಡಲಿದೆ. ಒತ್ತಡ ಬದಿಗೊತ್ತಿ ಪುಟಿದೇಳುವುದು ಅಷ್ಟು ಸುಲಭವಲ್ಲವಾದರೂ ಇಂಗ್ಲೆಂಡ್ ಇಂತಹ ಸವಾಲುಗಳನ್ನು ಮೆಟ್ಟಿನಿಂತೇ ವಿಶ್ವ ಚಾಂಪಿಯನ್ ಆಗಿರುವುದು ಎನ್ನುವುದನ್ನು ಮರೆಯುವ ಹಾಗಿಲ್ಲ. ಹೀಗಾಗಿ ಜೋಸ್ ಬಟ್ಲರ್ ಪಡೆಯನ್ನು ಭಾರತ ಲಘುವಾಗಿ ಪರಿಗಣಿಸದೆ ತನ್ನ ಬಲಾಬಲವನ್ನು ನಂಬಿ ಆಡಬೇಕಿದೆ.

ವಿರಾಟ್‌ ಕೊಹ್ಲಿ ಈ ಪಂದ್ಯಕ್ಕೂ ಗೈರು ಸಾಧ್ಯತೆ 

ವಿರಾಟ್‌ ಕೊಹ್ಲಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ ಅವರು ಎರಡನೇ ಪಂದ್ಯಕ್ಕೆ ಲಭ್ಯರಿಲ್ಲ ಎಂದು ತಿಳಿದು ಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್