ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ | 410 ರನ್‌ ಗಳಿಸಿ ಅಜೇಯರಾಗಿ ಉಳಿದ ಸ್ಯಾಮ್‌

  • 410 ರನ್‌ ಗಳಿಸಿದ ಸ್ಯಾಮ್‌, ಕೈತಪ್ಪಿದ ದಾಖಲೆ ಅವಕಾಶ
  • 1994ರಲ್ಲಿ ವಾರ್ವಿಕ್‌ಷೈರ್‌ ಪರ 501 ರನ್‌ ಹೊಡೆದಿದ್ದ ಲಾರಾ

ಚಾಂಪಿಯನ್‌ಷಿಪ್‌ನಲ್ಲಿ ಗ್ಲಮಾರ್ಗನ್ ತಂಡದ ಸ್ಯಾಮ್‌ ನಾರ್ತ್‌ಈಸ್ಟ್‌ ಅವರು ಅಜೇಯ 410 ರನ್‌ ಗಳಿಸಿ ದಾಖಲೆ ಮಾಡಿದ್ದಾರೆ. ಲೀಸ್ಟರ್‌ಷೈರ್‌ ಎದುರಿನ ಪಂದ್ಯದಲ್ಲಿ ಶನಿವಾರದ ಆಟದಲ್ಲಿ ಅವರು 400 ರನ್‌ಗಳ ಗಡಿ ದಾಟಿದರು. ಗ್ಲಮಾರ್ಗನ್‌ ತಂಡ 5 ವಿಕೆಟ್‌ಗೆ 795 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಬ್ರಯನ್‌ ಲಾರಾ ಹೆಸರಿನಲ್ಲಿರುವ ವಿಶ್ವದಾಖಲೆ ಮುರಿಯುವ ಅವಕಾಶ 32 ವರ್ಷದ ಈ ಬಲಗೈ ಬ್ಯಾಟರ್‌ಗೆ ತಪ್ಪಿ ಹೋಗಿದೆ. ಲಾರಾ ಅವರು 1994ರಲ್ಲಿ ವಾರ್ವಿಕ್‌ಷೈರ್‌ ಪರ 501 ರನ್‌ ಕಲೆ ಹಾಕಿದ್ದರು.

ಈ ಸುದ್ದಿಓದಿದ್ದೀರಾ? ವಿಶ್ವ ಅಥ್ಲೆಟಿಕ್ | ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾ

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಒಂದು ಇನಿಂಗ್ಸ್‌ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚು ರನ್‌ ಗಳಿಸಿದ ವಿಶ್ವದ 9ನೇ ಬ್ಯಾಟರ್‌ ಎಂಬ ಗೌರವ ಅವರಿಗೆ ಒಲಿಯಿತು. 450 ಎಸೆತಗಳನ್ನು ಎದುರಿಸಿದ ಸ್ಯಾಮ್ 45 ಬೌಂಡರಿ ಮತ್ತು ಮೂರು ಸಿಕ್ಸರ್ ಹೊಡೆದರು.

ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ಇತಿಹಾಸದಲ್ಲಿ ಆಟಗಾರನೊಬ್ಬ 400ಕ್ಕಿಂತ ಅಧಿಕ ರನ್‌ ಗಳಿಸಿದ್ದು ಇದು ನಾಲ್ಕನೇ ಸಲ. ಲಾರಾ ಅಲ್ಲದೆ 1895ರಲ್ಲಿ ಆರ್ಚಿ ಮೆಕ್‌ಲಾರೆನ್ (424), 1988 ರಲ್ಲಿ ಗ್ರೇಮ್‌ ಹಿಕ್ (405) ಈ ಸಾಧನೆ ಮಾಡಿದ್ದರು.

ನಿಮಗೆ ಏನು ಅನ್ನಿಸ್ತು?
3 ವೋಟ್