
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಇಂದು(ಭಾನುವಾರ) ನಡೆದ T20 ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿಯ ಗ್ರಾಫಿಕ್ಸ್ ಹಂಚಿಕೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ), 'ದಿ ಕಿಂಗ್ ಈಸ್ ಬ್ಯಾಕ್' ಎಂದು ಟ್ವೀಟ್ ಮಾಡಿದೆ.
The KING is back 👑
— ICC (@ICC) October 23, 2022
Take a bow, Virat Kohli 🙌#T20WorldCup | #INDvPAK pic.twitter.com/OdAnbmso0h
ವಿರಾಟ್ ಕೊಹ್ಲಿ ಅವರು ಔಟಾಗದೆ ಗಳಿಸಿದ 82* ರನ್ಗಳ ನೆರವಿನಿಂದ ಭಾರತವು ತಮ್ಮ ಮೊದಲ T20 ವಿಶ್ವಕಪ್ 2022 ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಫಾರ್ಮ್ಗೆ ಮರಳಿದ ಕೊಹ್ಲಿಯನ್ನು ಐಸಿಸಿ ಹೊಗಳಿದೆ. ಐಸಿಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಕೊಹ್ಲಿ ಸಿಂಹಾಸನದ ಮೇಲೆ ಕುಳಿತಿರುವ ಗ್ರಾಫಿಕ್ಸ್ ಅನ್ನು ಹಂಚಿಕೊಂಡು, "ದಿ ಕಿಂಗ್ ಬ್ಯಾಕ್... ಟೇಕ್ ಎ ಬೋ ವಿರಾಟ್ ಕೊಹ್ಲಿ" ಎಂದು ಐಸಿಸಿ ಬರೆದುಕೊಂಡಿದೆ.
53 ಎಸೆತಗಳನ್ನು ಎದುರಿಸಿದ ವಿರಾಟ್, 4 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 82 ರನ್ ಗಳಿಸಿ ಅಜೇಯರಾಗುಳಿದರು. ಹಾರ್ದಿಕ್ ಪಾಂಡ್ಯ ಗಳಿಸಿದ 40 ರನ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಪಾಕಿಸ್ತಾನ ನೀಡಿದ್ದ 160 ರನ್ಗಳ ಸವಾಲನ್ನು 20ನೇ ಓವರ್ನ ಅಂತಿಮ ಎಸೆತದಲ್ಲಿ ಟೀಮ್ ಇಂಡಿಯಾ ಚೇಸ್ ಮಾಡಿತು. ಕೊನೆಯ 3 ಓವರ್ಗಳಲ್ಲಿ ಭಾರತದ ಗೆಲುವಿಗೆ 48 ರನ್ಗಳ ಅಗತ್ಯವಿತ್ತು. ಈ ವೇಳೆ ಬ್ಲೂಬಾಯ್ಸ್ಗೆ ಸೋಲು ಖಚಿತವೆಂದೇ ಭಾವಿಸಲಾಗಿತ್ತು. ಆದರೆ 18 ಓವರ್ಗಳಲ್ಲಿ 3 ಬೌಂಡರಿ ಮತ್ತು 19ನೇ ಓವರ್ನಲ್ಲಿ 2 ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯವನ್ನು ಮತ್ತೆ ರೋಚಕ ಘಟ್ಟಕ್ಕೆ ಕೊಂಡೊಯ್ದರು.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ | ಮೆಲ್ಬೋರ್ನ್ನಲ್ಲಿ ವಿರಾಟ ಪರ್ವ; ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು
ಫಾರ್ಮ್ಗೆ ಮರಳುವ ಮೂಲಕ ತನ್ನ ಬ್ಯಾಟಿಂಗ್ ಬಗ್ಗೆ ಕೇಳಿ ಬರುತ್ತಿದ್ದ ಎಲ್ಲ ಟೀಕೆಗಳಿಗೆ ಬ್ಯಾಟ್ನಿಂದಲೇ ಉತ್ತರಿಸಿದ ಕೊಹ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಈಗ ಟ್ರೆಂಡ್ ಆಗಿದ್ದಾರೆ.