ಇಂಗ್ಲೆಂಡ್‌ ವಿರುದ್ಧದ ಟಿ20, ಏಕದಿನ ಸರಣಿಗೆ ಟೀಮ್‌ ಇಂಡಿಯಾ ಪ್ರಕಟ

Cricket
  • ಜುಲೈ 7ರಿಂದ ಆರಂಭವಾಗಲಿರುವ ಟಿ20 ಸರಣಿ
  • ಟಿ20, ಏಕದಿನ ಸರಣಿಗಳಿಗೆ ಪ್ರತ್ಯೇಕ ತಂಡ ಪ್ರಕಟ

ಎಡ್ಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯದ ಬಳಿಕ ನಡೆಯಲಿರುವ ಟಿ-20 ಮತ್ತು ಏಕದಿನ ಸರಣಿಗೆ ಟೀಮ್‌ ಇಂಡಿಯಾವನ್ನು ಪ್ರಕಟಿಸಲಾಗಿದೆ. ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿರುವ ರೋಹಿತ್‌ ಶರ್ಮಾ, ಟಿ20 ಮತ್ತು ಏಕದಿನ ಸರಣಿಯಲ್ಲಿ ತಂಡ ಮುನ್ನಡೆಸಲಿದ್ದಾರೆ. ಶುಕ್ರವಾರ ಆರಂಭವಾಗುವ ಟೆಸ್ಟ್ ಪಂದ್ಯವು ಜುಲೈ 5ರಂದು ಕೊನೆಗೊಳ್ಳಲಿದೆ. ಮೊದಲ ಟಿ20 ಪಂದ್ಯ ಜುಲೈ 7ರಂದು ನಡೆಯಲಿದೆ. ಹೀಗಾಗಿ ಟೆಸ್ಟ್ ಪಂದ್ಯದಲ್ಲಿ ಆಡುವ ಪ್ರಮುಖ ಆಟಗಾರರಿಗೆ 3 ದಿನಗಳ ವಿಶ್ರಾಂತಿ ನೀಡಲಾಗಿದೆ.

ಟಿ20 ಮತ್ತು ಏಕದಿನ ಸರಣಿಗಳಿಗೆ ಪ್ರತ್ಯೇಕ ತಂಡ ಪ್ರಕಟಿಸಲಾಗಿದೆ. ಶಿಖರ್‌ ಧವನ್‌, ಮುಹಮ್ಮದ್‌ ಶಮಿ, ಪ್ರಸಿದ್ಧ್‌ ಕೃಷ್ಣ ಹಾಗೂ ಮುಹಮ್ಮದ್‌ ಸಿರಾಜ್‌ ಏಕದಿನ ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 7ರಂದು ಆರಂಭವಾಗಲಿದ್ದು, ನಂತರದ ಎರಡು ಪಂದ್ಯಗಳು ಕ್ರಮವಾಗಿ ಜುಲೈ 9, 10ರಂದು ನಡೆಯಲಿದೆ. ಜುಲೈ 12ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ್ದ ಆಟಗಾರರು ವಿರುದ್ಧದ ಟಿ20 ಸರಣಿಯ ಮುಕ್ತಾಯದವರೆಗೂ ಇಂಗ್ಲೆಂಡ್‌ನಲ್ಲೇ ಉಳಿಯಲಿದ್ದಾರೆ.

Image
Cricket

ಮೊದಲ ಟಿ20 ಪಂದ್ಯಕ್ಕೆ ಪ್ರಕಟಿಸಲಾದ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್.

ಎರಡನೇ ಮತ್ತು ಮೂರನೇ ಟಿ20 ಪಂದ್ಯಕ್ಕೆ  ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ರಿಷಭ್ ಪಂತ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್.

ಈ ಸುದ್ದಿ ಓದಿದ್ದೀರಾ ? : ಎಡ್ಜ್‌ಬಾಸ್ಟನ್‌ನಲ್ಲಿ ಬುಮ್ರಾಗೆ ʻಬಿಗ್‌ ಟೆಸ್ಟ್‌ʼ

ಏಕದಿನ ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್‌ಪ್ರೀತ್‌ ಬುಮ್ರಾ, ಪ್ರಸಿಧ್ ಶಾಮಿ ಕೃಷ್ಣ, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ನಿಮಗೆ ಏನು ಅನ್ನಿಸ್ತು?
0 ವೋಟ್