ಟಿ20 ವಿಶ್ವಕಪ್‌ ಸೆಮಿಫೈನಲ್‌ | ಹಾರ್ದಿಕ್‌ ಅಬ್ಬರ; ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದ ಟೀಮ್‌ ಇಂಡಿಯಾ

  • ಹಾರ್ದಿಕ್‌ ಪಾಂಡ್ಯಾ ಬಿರುಸಿನ ಅರ್ಧಶತಕ
  • ಮಹತ್ವದ ಪಂದ್ಯದಲ್ಲೂ ಕೈಕೊಟ್ಟ ಕೆ.ಎಲ್ ರಾಹುಲ್

ಟಿ20 ವಿಶ್ವಕಪ್‌ನ ದ್ವಿತೀಯ ಸೆಮಿಫೈನಲ್‌ನಲ್ಲಿ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯ ಗಳಿಸಿದ ಅರ್ಧಶತಕಗಳ ಬಲದಲ್ಲಿ ಟೀಮ್‌ ಇಂಡಿಯಾ, 169 ರನ್‌ಗಳ ಸವಾಲಿನ ಗುರಿಯನ್ನು ಇಂಗ್ಲೆಂಡ್‌ ತಂಡದ ಮುಂದಿಟ್ಟಿದೆ.

15 ಓವರ್‌ಗಳ ಅಂತ್ಯದವರೆಗೂ ಭಾರತದ ಬ್ಯಾಟಿಂಗ್‌ ನಿಧಾನಗತಿಯಲ್ಲಿ ಸಾಗಿತ್ತು. 3 ವಿಕೆಟ್‌ ನಷ್ಟದಲ್ಲಿ 100 ರನ್‌ಗಳಿಸಿದ್ದ ತಂಡಕ್ಕೆ ಆ ಬಳಿಕ ಪಾಂಡ್ಯಾ, ಬಿರುಸಿನ ಹೊಡೆತಗಳ ಮೂಲಕ ಬಲ ತುಂಬಿದರು. 33 ಎಸೆತಗಳನ್ನು ಎದುರಿಸಿದ ಹಾರ್ದಿಕ್‌, 5 ಸಿಕ್ಸರ್‌ ಮತ್ತು 4 ಬೌಂಡರಿಗಳ ಮೂಲಕ 63 ರನ್‌ಗಳಿಸಿ ಇನಿಂಗ್ಸ್‌ನ ಅಂತಿಮ ಎಸೆತದಲ್ಲಿ ಹಿಟ್‌ ವಿಕೆಟ್‌ ಆದರು. ಮೂರನೇ ಕ್ರಮಾಂಕದಲ್ಲಿ ಬಂದ ವಿರಾಟ್‌ ಕೊಹ್ಲಿ 50 ರನ್‌ (40 ಎಸೆತ, 4x4, 6x1), ರೋಹಿತ್‌ ಶರ್ಮಾ 27 ರನ್‌ಗಳಿಸಿ ನಿರ್ಗಮಿಸಿದರು. ‌

Eedina App

ಈ ಸುದ್ದಿಯನ್ನು ಓದಿದ್ದೀರಾ?: ಕೆಎಸ್‌ಸಿಎ | ನೂತನ ಅಧ್ಯಕ್ಷರಾಗಿ ರಘುರಾಮ್ ಭಟ್ ಆಯ್ಕೆ

AV Eye Hospital ad

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌, ಭಾರತಕ್ಕೆ ಬ್ಯಾಟಿಂಗ್‌ ಬಿಟ್ಟುಕೊಟ್ಟಿತ್ತು. ಮಹತ್ವದ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಟೀಮ್‌ ಇಂಡಿಯಾದ ಆರಂಭಿಕರು ವಿಫಲರಾದರು. ರಾಹುಲ್‌ 5 ರನ್‌ಗಳಿಸಿ ವೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. 28 ಎಸೆತಗಳಲ್ಲಿ 27 ರನ್‌ಗಳಿಸಿದ ಶರ್ಮಾ. ಜೋರ್ಡನ್‌ ಬೌಲಿಂಗ್‌ನಲ್ಲಿ ಕರ್ರನ್‌ಗೆ ಕ್ಯಾಚಿತ್ತರು. ದಿನೇಶ್‌ ಕಾರ್ತಿಕ್‌ ಬದಲು ಸ್ಥಾನ ಪಡೆದ ರಿಷಭ್‌ ಪಂತ್‌ ಕೊಡುಗೆ 6 ರನ್‌. 

ಇಂಗ್ಲೆಂಡ್‌ ಪರ ಬೌಲಿಂಗ್‌ನಲ್ಲಿ ಕ್ರಿಸ್‌ ಜೋರ್ಡಾನ್‌ 3, ಆದಿಲ್‌ ರಶೀದ್‌ ರಶೀದ್‌ ಮತ್ತು ಕ್ರಿಸ್‌ ವೋಕ್ಸ್‌ ತಲಾ 1 ವಿಕೆಟ್‌ ಪಡೆದರು. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app