ಸರಣಿ ವಶಪಡಿಸಿಕೊಂಡ ಭಾರತ; ಕ್ಲೀನ್‌ಸ್ವೀಪ್ ಭೀತಿಯಲ್ಲಿ ಇಂಗ್ಲೆಂಡ್

  • ಎರಡನೇ ಟಿ 20ಯಲ್ಲಿ ಭಾರತಕ್ಕೆ 49 ರನ್‌ ಜಯ
  • ಒಂದು ಪಂದ್ಯ ಉಳಿದಿರುವಾಗಲೇ ಸರಣಿ ಕೈವಶ

ಇಂಗ್ಲೆಂಡ್‌ ವಿರುದ್ಧ ಉತ್ತಮ ಪ್ರದರ್ಶನ ತೊರಿದ ಭಾರತ 49 ರನ್‌ಗಳ ಗೆಲುವು ಸಾಧಿಸುವ ಮೂಲಕ ಒಂದು ಪಂದ್ಯ ಉಳಿದಿರುವಾಗಲೇ ಸರಣಿ ವಶಪಡಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಮೊದಲ ಪಂದ್ಯದಂತೆ ಅಬ್ಬರಿಸದೆ ಇದ್ದರೂ, ಬೌಲಿಂಗ್‌ ಬಿಗಿ ಹಿಡಿತ ಸಾಧಿಸಿತು. ಒಂದು ಹಂತದಲ್ಲಿ ಭಾರತ ಕುಸಿತ ಕಂಡರೂ ಜಡೇಜಾ ಅವರ ಆಕರ್ಷಕ ಆಟದಿಂದಾಗಿ 8 ವಿಕೆಟ್‌ ನಷ್ಟಕ್ಕೆ 170 ರನ್‌ಗಳಿಗೆ ಅಲೌಟ್‌ ಆಯಿತು.

ಈ ಸುದ್ದಿ ಓದಿದ್ದೀರಾ ? : ಮಹಿಳಾ ಹಾಕಿ ವಿಶ್ವಕಪ್ | ಭಾರತಕ್ಕೆ ಸ್ಪೇನ್ ಸವಾಲು

ಈ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ಗೆ ಮೊದಲ ಎಸೆತದಲ್ಲಿಯೇ ಜೇಸನ್‌ ರಾಯ್‌ ವಿಕೆಟ್‌ ಕಬಳಿಸುವ ಮೂಲಕ ಭುವನೇಶ್ವರ ಕುಮಾರ್‌ ಅಘಾತ ನೀಡಿದರು. ಬಟ್ಲರ್‌ ಮತ್ತು ಲಿವಿಂಗ್‌ಸ್ಟೋನ್‌ ಸಹ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಿಲ್ಲ. ಪವರ್‌ ಪ್ಲೇನಲ್ಲಿ ಇಂಗ್ಲೆಂಡ್‌ 36 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡಿತು. 11 ಓವರ್‌ನಲ್ಲಿ 61 ರನ್‌ಗೆ ಪ್ರಮುಖ ಆರು ವಿಕೆಟ್‌ ಕಳೆದುಕೊಂಡಿತು. ನಂತರ ಅಲ್ಲಿಂದಾಚೆಗೆ ಇಂಗ್ಲೆಂಡ್‌ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾರತ 49 ರನ್‌ಗಳ ಜಯ ಸಾಧಿಸಿತು. 

ಸ್ಕೋರ್‌ ಭಾರತ: 20 ಓವರ್‌ಗಳಲ್ಲಿ- 170/8
ಜಡೇಜಾ 46, ರೋಹಿತ್‌ 31 
ಇಂಗ್ಲೆಂಡ್‌ 20 ಓವರ್‌ಗಳಲ್ಲಿ- 121
ಮೊಹಿನ್‌ ಅಲಿ 35 ಡೇವಿಡ್‌ ವಿಲ್ಲಿ 33

ಇಂದೂ 3ನೇ ಟಿ 20 ಪಂದ್ಯ

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಅಂತಿಮ ಟಿ 20 ಪಂದ್ಯ ಭಾನುವಾರ ನಡೆಯಲಿದೆ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ಕ್ಲೀನ್‌ಸ್ವೀಪ್‌ ಮೇಲೆ ಕಣ್ಣಿಟ್ಟಿದೆ. ಇನ್ನೊಂದು ಕಡೆ ಇಂಗ್ಲೆಂಡ್ ತವರಿನಲ್ಲಿ ಭಾರಿ ಅವಮಾನ ತಪ್ಪಿಸಿಕೊಳ್ಳುವ ತವಕದಲ್ಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್