ಭಾರತ ಬೌಲಿಂಗ್‌ ದಾಳಿಗೆ ಇಂಗ್ಲೆಂಡ್‌ ತತ್ತರ; 110 ರನ್‌ ಗುರಿ

  • ಭಾರತಕ್ಕೆ 110 ರನ್‌ಗಳ ಗುರಿ ನೀಡಿದ ಇಂಗ್ಲೆಂಡ್‌ ತಂಡ
  • ಇಂಗ್ಲೆಂಡ್ ತಂಡದ ನಾಲ್ವರು ಆಟಗಾರರ ಶೂನ್ಯ ಸಾಧನೆ

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಬ್ಯಾಟರ್‌ಗಳು ತತ್ತರಿಸಿದ್ದಾರೆ. ಬುಮ್ರಾ ಮತ್ತು ಶಮಿ ಬೌಲಿಂಗ್ ದಾಳಿಗೆ ನೆಲಕಚ್ಚಿರುವ ಇಂಗ್ಲೆಂಡ್ ಟಾಪ್ ಆರ್ಡರ್‌ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.

ಕೇವಲ ಏಳು ಎಸೆತಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಯಾರೂ ಊಹಿಸಿದ ರೀತಿಯಲ್ಲಿ ಮೊದಲ ಮೂರು ವಿಕೆಟ್ ಕಳೆದುಕೊಂಡಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ನಿರ್ಧಾರಕ್ಕೆ ಬೌಲರ್‌ಗಳು ಭರ್ಜರಿಯಾಗಿ ಸ್ಪಂದಿಸಿದ್ದಾರೆ.

ಇಂಗ್ಲೆಂಡ್‌ನ ಟಾಪ್‌ ಆರ್ಡರ್‌ ನಾಲ್ವರು ಬ್ಯಾಟ್ಸ್‌ಮನ್‌ಗಳ ಪೈಕಿ ಮೂವರು ಶೂನ್ಯಕ್ಕೆ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ ಟೆಸ್ಟ್‌ನ ಸೂಪರ್‌ ಹೀರೋ ಜಾನಿ ಬೈಸ್ಟ್ರೋವ್ ಕೇವಲ 7 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು.

ಪಂದ್ಯದ ಎರಡನೇ ಓವರ್‌ನಲ್ಲಿ ಜೇಸನ್ ರಾಯ್ ಮತ್ತು ಜೋ ರೂಟ್‌ ವಿಕೆಟ್ ಎಗರಿಸಿದ ಬುಮ್ರಾ ಮೇಡನ್ ಓವರ್ ಸಹಿತ ಉತ್ತಮ, ಆರಂಭ ನೀಡಿದರು. ನಂತರದ ಓವರ್‌ನಲ್ಲಿ ಮೊಹಮ್ಮದ್ ಶಮಿ ಬೆನ್‌ ಸ್ಟೋಕ್ಸ್‌ ಅನ್ನು ಶೂನ್ಯಕ್ಕೆ ತನ್ನ ಬಲೆಯಲ್ಲಿ ಕೆಡವಿದರು. ಈ ಮೂಲಕ ಇಂಗ್ಲೆಂಡ್‌ನ ಅಗ್ರ ನಾಲ್ಕರಲ್ಲಿ ಮೂವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಜೋಸ್‌ ಬಟ್ಲರ್‌ ಡೇವಿಡ್‌ ವಿಲ್ಲಿ ಹೊರೆತುಪಡಿಸಿದರೆ ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಇಂಗ್ಲೆಂಡ್‌ 110 ರನ್‌ಗಳಿಗೆ ಸರ್ವಪತನ ಕಂಡಿದೆ.

4 ಡಕ್ ಔಟ್
ಇಂಗ್ಲೆಂಡ್ ತಂಡ ಕಳೆದುಕೊಂಡ ವಿಕೆಟ್‍ಗಳ ಪೈಕಿ ನಾಲ್ವರು ಯಾವುದೇ ರನ್ ಗಳಿಸದೇ ಪೆವಿಲಿಯನ್ ಸೇರಿಕೊಂಡರು. ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಲಿಯಾಮ್ ಲಿವಿಂಗ್ ಸ್ಟನ್ ಶೂನ್ಯ ಸುತ್ತಿದರು. ಅದರಲ್ಲಿಯೂ ನಾಯಕ ಬೆನ್ ಸ್ಟೋಕ್ಸ್ ಗೋಲ್ಡನ್ ಡಕ್ ಔಟ್ ಆದರು.

ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಕಡಿಮೆ ಸ್ಕೋರ್

ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಮೊದಲ ಐದು ವಿಕೆಟ್‌ ಕಳೆದುಕೊಂಡ ಎದುರಾಳಿ ತಂಡವು ದಾಖಲಿಸಿದ ಕಡಿಮೆ ಮೊತ್ತದ ವಿವರ ಇಲ್ಲಿದೆ,

26/5 ಇಂಗ್ಲೆಂಡ್‌, ದಿ ಓವಲ್ 2022

30/5 ಜಿಂಬಾಬ್ವೆ, ಹರಾರೆ 2005

32/5 ವೆಸ್ಟ್‌ ಇಂಡೀಸ್‌, ಪೋರ್ಟ್ ಆಫ್ ಸ್ಪೇನ್ 199

29/5 ಪಾಕಿಸ್ತಾನ, ಕೊಲಂಬೊ 1997

ನಿಮಗೆ ಏನು ಅನ್ನಿಸ್ತು?
0 ವೋಟ್