ದೇಶೀಯ ಕ್ರಿಕೆಟ್ ಆಡಿ, ಫಾರ್ಮ್‌ಗೆ ಮರಳಿ | ಕೊಹ್ಲಿಗೆ ಕಿರ್ಮಾನಿ ಸಲಹೆ

  • ಸರಣಿಯಿಂದ ಹೊರಬೀಳುವ ಆತಂಕ ಸೃಷ್ಟಿಸಿದೆ
  • ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ಅವಕಾಶ

ತನ್ನ ವೃತ್ತಿಜೀವನದಲ್ಲಿ ಅತ್ಯಂತ ದೊಡ್ಡ ಫಾರ್ಮ್ ವೈಫಲ್ಯ ಅನುಭವಿಸುತ್ತಿರುವ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಈಗಾಗಲೇ ಹಲವು ಟೀಕೆಗಳನ್ನ ಎದುರಿಸುತ್ತಿದ್ದಾರೆ. ಟಿ20 ಪಂದ್ಯಗಳಿಂದ ಕೊಹ್ಲಿಯನ್ನ ಕೈಬಿಡಬೇಕು. ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಗೆ ಸ್ಥಾನ ನೀಡಬಾರದೆಂಬ ಮಾತುಗಳೂ ಕೇಳಿಬರುತ್ತಿವೆ. 

ವಿರಾಟ್ ಫಾರ್ಮ್‌ಗೆ ಮರಳಬಹುದು ಎಂದು ಕಾದು ಕುಳಿತ್ತಿದ್ದ ಅಭಿಮಾನಿಗಳು ಸತತ ಬೇಸರ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಮುಗ್ಗರಿಸಿದ ಕೊಹ್ಲಿ, ಏಕದಿನ ಸರಣಿಗೂ ಮುನ್ನ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಸರಣಿಯಿಂದ ಹೊರಬೀಳುವ ಆತಂಕ ಸೃಷ್ಟಿಸಿದೆ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಮರಳುವ ಅವಕಾಶ

ವಿರಾಟ್ ಕೊಹ್ಲಿ ತನ್ನ ಹಳೆಯ ಫಾರ್ಮ್‌ಗೆ ಮರಳಲು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯು ಪ್ರಮುಖ ವೇದಿಕೆಯಾಗಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದು, ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳನ್ನಾಡುತ್ತಾರಾ ಎಂದು ಕಾದು ನೋಡಬೇಕಿದೆ. 
 
ದೇಶೀಯ ಕ್ರಿಕೆಟ್ ಆಡಿ, ಫಾರ್ಮ್ ಮರಳಿ: ಸೈಯದ್ ಕಿರ್ಮಾನಿ
ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ಸೈಯದ್ ಕಿರ್ಮಾನಿ ಅವರು ವಿರಾಟ್‌ ಕೊಹ್ಲಿಗೆ ಉತ್ತಮ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಹೀಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪದೇ ಪದೇ ವಿಫಲರಾಗುವುದಕ್ಕಿಂತ ದೇಶೀಯ ಕ್ರಿಕೆಟ್‌ನಲ್ಲಿ ಆಡಿ, ಆತ್ಮವಿಶ್ವಾಸ ಪಡೆದುಕೊಂಡು ಫಾರ್ಮ್‌ಗೆ ಮರಳಬೇಕಿದೆ. ತದನಂತರ ಅವರು ಫಿಟ್‌ ಆಗಿದ್ದಾರೆಯೇ ಎಂಬುದನ್ನ ಪರಿಗಣಿಸಬಹುದು ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್