ಇಂಗ್ಲಿಷ್‌ ಫುಟ್‌ಬಾಲ್‌ ಪ್ರಿಮಿಯರ್‌ ಲೀಗ್‌ಗಿಂತ ಐಪಿಎಲ್‌ನಲ್ಲಿ ಹೆಚ್ಚು ಆದಾಯ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  • ಸಹೋದ್ಯೋಗಿಗಳನ್ನು ಗೌರವಿಸುವ ಆಟಗಾರ ಯಶಸ್ವಿ ನಾಯಕನಾಗುತ್ತಾನೆ
  • ಐಪಿಎಲ್‌ನಲ್ಲಿ ಕೋಟಿ ಹಣ ಸಂಪಾದಿಸುತ್ತಿರುವ ವಿದೇಶಿ ಆಟಗಾರರು 

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜಗತ್ತಿನಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಪಂದ್ಯಾವಳಿ. ಅಂಕಿ- ಅಂಶಗಳ ಪ್ರಕಾರ ಫುಟ್‌ಬಾಲ್‌ನ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ಗಿಂತ (ಇಪಿಎಲ್‌) ಹೆಚ್ಚು ಆದಾಯವನ್ನು ಐಪಿಎಲ್‌ ತಂದುಕೊಡುತ್ತಿದೆ” ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

“ಇಂಡಿಯನ್ ಪ್ರೀಮಿಯರ್ ಲೀಗ್ ಅಪಾರ ಅಭಿಮಾನಿ ಬಳಗ ಹೊಂದಿದೆ. ಜಗತ್ತಿನ ಪ್ರತಿಯೊಬ್ಬ ಕ್ರಿಕೆಟ್‌ ಆಟಗಾರ ಕೂಡ ಈ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲು ಬಯಸುತ್ತಾನೆ. ಐಪಿಎಲ್ ಪಂದ್ಯಗಳನ್ನು ವಿಕ್ಷೀಸಲು ಮತ್ತು ನೆಚ್ಚಿನ ತಂಡವನ್ನು ಪ್ರೋತ್ಸಾಹಿಸಲು ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸುತ್ತಾರೆ" ಎಂದು ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“500 ರೂಪಾಯಿ ಸಂಪಾದಿಸುತ್ತಿದ್ದ ನನ್ನಂತಹ ಆಟಗಾರರು, ಐಪಿಎಲ್‌ನಿಂದಾಗಿ ಕೋಟಿ ಹಣ ಸಂಪಾದಿಸುತ್ತಿದ್ದಾರೆ. ಈ ಕ್ರೀಡೆಯು ಅಭಿಮಾನಿಗಳಿಂದ ನಡೆಯುತ್ತಿದೆ. ಕ್ರಿಕೆಟ್ ಶಕ್ತಿಯುತ ಕ್ರೀಡೆ. ಐಪಿಎಲ್‌ನಿಂದ ಅದು ಮತ್ತಷ್ಟು ಅಭಿವೃದ್ಧಿಯಾಗಲಿದೆ. ಇಂಗ್ಲಿಷ್‌ ಪ್ರಿಮಿಯರ್‌ ಲೀಗ್‌ಗಿಂತ ಇಂಡಿಯನ್ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕ ಆದಾಯ ಗಳಿಸುತ್ತಿರುವುದು ಸಂತೋಷ ತಂದಿದೆ” ಎಂದು ಟೈಮ್ಸ್ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್ ಲಿಮಿಟೆಡ್‌ನ ವಿ‍ಶ್ವ ಮಾಧ್ಯಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಕ್ ಲಂಬಾ ಅವರೊಂದಿಗೆ ಗಂಗೂಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಬಾರಿ ಐಪಿಎಲ್‌ ದೊಡ್ಡ ಮಟ್ಟದಲ್ಲಿ ನೆಡೆದಿದ್ದು, ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಹೊಸ ಎರಡು ತಂಡಗಳು ಸೇರ್ಪಡೆಗೊಂಡಿವು. ಚೊಚ್ಚಲ ಸೀಸನ್‌ಲ್ಲಿಯೇ ಗುಜರಾತ್‌ ಟೈಟಾನ್ಸ್  ರಾಜಸ್ಥಾನ ರಾಯಲ್ಸ್‌ ತಂಡವನ್ನು ಮಣಿಸಿ ಕಪ್‌ ಗೆದ್ದು ಬೀಗಿತ್ತು. ಈ ಕ್ಷಣವನ್ನು ಸೌರವ್‌ ಗಂಗೂಲಿ ಮೆಲುಕು ಹಾಕಿದ್ದಾರೆ. “ಒಂದು ತಂಡವನ್ನು ಮುನ್ನಡೆಸುವುದು ಎಂದರೆ ಮೈದಾನದಲ್ಲಿ ತಂಡವನ್ನು ಗಮನಿಸಿಕೊಳ್ಳುವುದು ಮತ್ತು ನಾಯಕತ್ವ ಎಂದರೆ ತಂಡವನ್ನು ಕಟ್ಟುವುದು. ಹಾಗಾಗಿ ಸಚಿನ್‌ ತೆಂಡೂಲ್ಕರ್‌, ಅಜರ್‌ ಹಾಗೂ ರಾಹುಲ್‌ ದ್ರಾವಿಡ್‌ ಜೊತೆ ಸಹೋದ್ಯೋಗಿಗಳಾಗಿ ಇದ್ದೆನೇ ಹೊರತು, ಅವರೊಂದಿಗೆ ಸ್ಪರ್ಧಿಸಲಿಲ್ಲ. ಸಮಾನ ಮನಸ್ಕರಂತೆ ನಾವು ಜವಾಬ್ದಾರಿಗಳನ್ನು ಹಂಚಿಕೊಂಡೆವು” ಎಂದು ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು.

"ಯುವ ಆಟಗಾರರಿಂದ ಹಿಡಿದು ಕಾರ್ಪೊರೇಟ್ ಉದ್ಯೋಗಿಯವರೆಗೂ ಈ ದೇಶವು ಅದ್ಭುತ ಪ್ರತಿಭೆಗಳನ್ನು ಹೊಂದಿದೆ. ಯಶಸ್ವಿ ತಂಡದ ನಾಯಕರಾಗಬೇಕಾದರೆ ಸಹೋದ್ಯೋಗಿಗಳನ್ನು ಗೌರವಿಸಬೇಕು ಎಂದು ನಾನು ನಂಬಿದ್ದೆ. ಅಗಲೇ ಅವರು ಉತ್ತಮವಾಗಿ ಆಡಲು ಸಾಧ್ಯ. ಎಲ್ಲವನ್ನೂ ನಮ್ಮಲ್ಲೇ ಇಟ್ಟುಕೊಂಡು ಉತ್ತಮ ಕ್ಷಣಗಳು ಬರಲಿವೆ ಎಂದು ನಿರೀಕ್ಷಿಸಲಾಗದು. ಸಹೋದ್ಯೋಗಿಗಳು ನಮ್ಮನ್ನು ಗೌರವಿಸಿದಲ್ಲಿ ಯಶಸ್ವೀ ತಂಡದ ನಾಯಕರಾಗಬಹುದು ಎನ್ನುವುದು ಸುಳ್ಳು” ಎಂದು ಗಂಗೂಲಿ ಹೇಳಿದ್ದಾರೆ

ನಿಮಗೆ ಏನು ಅನ್ನಿಸ್ತು?
0 ವೋಟ್