ಒಂದು ನಿಮಿಷದ ಓದು | ಏಷ್ಯಾಕಪ್ ಟೂರ್ನಿ ಶ್ರೀಲಂಕಾದಿಂದ ಬಾಂಗ್ಲಾಗೆ ಸ್ಥಳಾಂತರ ಸಾಧ್ಯತೆ

ಅಕ್ಟೋಬರ್‌ 27ರಿಂದ ಆರಂಭಗೊಳ್ಳಬೇಕಿರುವ ಏಷ್ಯಾಕಪ್ ಟಿ20 ಟೂರ್ನಿಯನ್ನು ಶ್ರೀಲಂಕಾದಿಂದ ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಶ್ರೀಲಂಕಾದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದ್ದು, ಸಾಲು-ಸಾಲು ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಗೆ ಆತಿಥ್ಯ ವಹಿಸಲು ಸಿದ್ಧವಿರುವಂತೆ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ಏಷ್ಯಾ ಕ್ರಿಕೆಟ್‌ ಸಮಿತಿ ಸೂಚಿಸಿದೆ.

ಕೆಲ ದಿನಗಳ ಹಿಂದಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ-ಶ್ರೀಲಂಕಾ 2ನೇ ಟೆಸ್ಟ್ ವೇಳೆ ಗಾಲೆ ಕ್ರೀಡಾಂಗಣದ ಹೊರಗೂ ಸಾವಿರಾರು ಪ್ರತಿಭಟನಾಕಾರರು ನೆರೆದಿದ್ದರು. ಆ ದೃಶ್ಯಗಳು ಏಷ್ಯಾ ಕ್ರಿಕೆಟ್ ಸಮಿತಿಯ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಭದ್ರತೆ ಸಮಸ್ಯೆ ಎದುರಾಗಬಹುದು ಎನ್ನುವ ಕಾರಣಕ್ಕೆ ಟೂರ್ನಿ ಸ್ಥಳಾಂತರಿಸಲು ಸಮಿತಿ ಚಿಂತಿಸುತ್ತಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

 ಈ ಸುದ್ದಿ ಓದಿದ್ದೀರಾ: ಒಂದು ನಿಮಿಷದ ಓದು | ಅಕ್ಟೋಬರ್‌ 22ಕ್ಕೆ ಭಾರತ vs ವಿಶ್ವ ಇಲೆವನ್‌ ಕ್ರಿಕೆಟ್ ನಡೆಸುವಂತೆ ಕೇಂದ್ರದ ಪ್ರಸ್ತಾಪ

ನಿಮಗೆ ಏನು ಅನ್ನಿಸ್ತು?
0 ವೋಟ್