ಒಂದು ನಿಮಿಷದ ಓದು | ಅಕ್ಟೋಬರ್‌ 22ಕ್ಕೆ ಭಾರತ vs ವಿಶ್ವ ಇಲೆವನ್‌ ಕ್ರಿಕೆಟ್ ನಡೆಸುವಂತೆ ಕೇಂದ್ರದ ಪ್ರಸ್ತಾಪ

  • ಆಕ್ಟೋಬರ್‌ 22 ಭಾರತ ಮತ್ತು ವಿಶ್ವ ಇಲೆವೆನ್ ನಡುವೆ ಕ್ರಿಕೆಟ್ ಪಂದ್ಯ
  • ಆಸ್ಟ್ರೇಲಿಯ, ಇಂಗ್ಲೆಂಡ್, ಸೇರಿ ವಿದೇಶಿ ಕ್ರಿಕೆಟ್‌ ಬೋರ್ಡ್‌ಗಳ ಜೊತೆ ಚರ್ಚೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಕ್ಟೋಬರ್‌ 22ರಂದು ಭಾರತ ಮತ್ತು ವಿಶ್ವ ಇಲೆವೆನ್ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸುವಂತೆ ಬಿಸಿಸಿಐಗೆ ಕೇಂದ್ರ ಸಾಂಸ್ಕೃತಿಕ ಇಲಾಖೆ ಪ್ರಸ್ತಾಪ ಸಲ್ಲಿಸಿದೆ.

ಕೇಂದ್ರದ ಪ್ರಸ್ತಾಪಕ್ಕೆ ಬಿಸಿಸಿಐ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು ತನ್ನ ಅಗ್ರ ಆಟಗಾರರನ್ನು ಪಂದ್ಯಕ್ಕೆ ಲಭ್ಯರಿರುವಂತೆ ತಿಳಿಸಿದೆ ಎನ್ನಲಾಗಿದೆ. ಜೊತೆಗೆ ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕ ಸೇರಿ ಹಲವು ವಿದೇಶಿ ಕ್ರಿಕೆಟ್‌ ಬೋರ್ಡ್‌ಗಳ ಜೊತೆ ಚರ್ಚೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಟಿ20 ಪಂದ್ಯ ನಡೆಸಲು ಚಿಂತನೆ ನಡೆದಿದ್ದು, ಪಂದ್ಯವನ್ನು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಐಸಿಸಿಯಿಂದ ಅಧಿಕೃತ ಮಾನ್ಯತೆಗೂ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ನಿಮಗೆ ಏನು ಅನ್ನಿಸ್ತು?
0 ವೋಟ್