ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ | ಫೈನಲ್‌ಗೆ ಸಿಂಧು ಲಗ್ಗೆ

  • ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಬೀಗಿದ ಸಿಂಧು
  • ಕವಕಾಮಿ 2019ರ ಓರ್ಲಿಯನ್ಸ್‌ ಮಾಸ್ಟರ್ ಪ್ರಶಸ್ತಿ ಜಯಸಿದ್ದರು

ಸಿಂಗಾಪುರದ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ್ತಿಯಾದ ಪಿ.ವಿ. ಸಿಂಧು “ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ವರ್ಷದ 3ನೇ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸುವ ತವಕದಲ್ಲಿದ್ದಾರೆ. ಶನಿವಾರ ನಡೆದ ಸೆಮಿಫೈನಲ್‌ ಸೆಣಸಾಟದಲ್ಲಿ ಸಿಂಧು ಜಪಾನಿನ ಸಯೇನಾ ಕವಕಾಮಿ ಅವರನ್ನು 21-15, 21-7 ಅಂತರದಿಂದ ಸುಲಭದಲ್ಲಿ ಮಣಿಸಿದರು.

ಭಾನವಾರ ನಡೆಯಲಿರುವ ಫೈನಲ್‌ನಲ್ಲಿ ಪಿ.ವಿ. ಸಿಂಧು ಮತ್ತು ಚೀನದ ವಾಂಗ್‌ ಜಿ.ಹಿ.ಮುಖಾಮುಖಿ ಆಗಲಿದ್ದಾರೆ. 22 ವರ್ಷದ ವಾಂಗ್‌ ಜಿ.ಹಿ.ಏಷ್ಯನ್‌ ಚಾಂಪಿಯನ್‌ಶಿಪ್‌ ಚಿನ್ನದ ಪದಕ ವಿಜೇತೆಯಾಗಿದ್ದು, ಇನ್ನೊಂದು ಸೆಮಿಫೈನಲ್‌ನಲ್ಲಿ ಜಪಾನಿನ ಒಹೊರಿ ಅಯಾ ವಿರುದ್ಧ 21-14, 21-14 ಅಂತರದ ಗೆಲುವು ಸಾಧಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಖೋಖೋ ಲೀಗ್‌ ಪಂದ್ಯಾವಳಿ | ಒಡಿಶಾ ತಂಡ ಸೇರಿದ ಕರ್ನಾಟಕದ ಗೌತಮ್‌

ಅವಳಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ. ಸಿಂಧು ಈ ವರ್ಷ ಎರಡು ಸೂಪರ್‌-300 ಪ್ರಶಸ್ತಿ ಜಯಿಸಿದ್ದಾರೆ. ಒಂದು, ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌, ಮತ್ತೊಂದು, ಸ್ವಿಸ್‌ ಓಪನ್‌. ಜತೆಗೆ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ.

3-0 ಗೆಲುವಿನ ದಾಖಲೆ

ಸಯೇನಾ ಕವಕಾಮಿ ವಿರುದ್ಧ ಸಿಂಧು 2-0 ಗೆಲುವಿನ ದಾಖಲೆ ಹೊಂದಿದ್ದರು. ಇದೀಗ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕವಕಾಮಿ ಅವರನ್ನು ಕೊನೆಯ ಸಲ ಎದುರಿಸಿದ್ದು 2018ರ ಚೀನಾ ಓಪನ್‌ ಟೂರ್ನಿಯಲ್ಲಿ. ಕವಕಾಮಿ 2019ರ ಓರ್ಲಿಯನ್ಸ್‌ ಮಾಸ್ಟರ್ ಪ್ರಶಸ್ತಿ ಜಯಸಿದ್ದರು. ಅದೇ ವರ್ಷ ಸ್ವಿಸ್‌ ಓಪನ್‌ ಫೈನಲ್‌ ತಲುಪಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್