ಬಹು ಕರ್ನಾಟಕ - ಅರವು | 'ಅರವು' ಅಂಡ್ರು ದ್ರಾವಿಡ ಭಾಷೆ ಯಂಗ್ಳೂಕು ಮಾತೃಭಾಷೆ

Aravau june 12 1

'ಅರವು' ಎಂಬ ಹೆಸರಿನ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಭಾಗದ ಜಿಲ್ಲೆಗಳ ದಲಿತ ಸಮುದಾಯ ಮಾತನಾಡುವ ಅತ್ಯಂತ ವಿಶಿಷ್ಟ ಭಾಷೆಯ ಅಂಕಣವಿದು. ಈ ಭಾಷೆ ಬಳಕೆಯಲ್ಲಿರುವ ಭೌಗೋಳಿಕ ಪ್ರದೇಶ, ಭಾಷೆಯ ಉಳಿವಿಗೆ ನಡೆಯುತ್ತಿರುವ ಪ್ರಯತ್ನ, ಭಾಷೆಯನ್ನಾಡುವ ಜನರ ಬದುಕು ಇತ್ಯಾದಿ ಸಂಗತಿಗಳು ಈ ಬರಹದಲ್ಲಿವೆ

'ಅರವು’ ಎನ್ನುವ ಭಾಷೆ ಕರ್ನಾಟಕದಲ್ಲಿ ಮಾತನಾಡುವ ದ್ರಾವಿಡ ಭಾಷೆಗಳಲ್ಲೊಂದು. ಲಿಪಿಗಾಗಿ ಬಳಸುವುದು ಕನ್ನಡವನ್ನೇ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಹೊಸೂರು ಜಿಲ್ಲೆಗಳ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರವೇ ಮಾತನಾಡಲ್ಪಡುವ ಭಾಷೆ ಇದು. ದಲಿತರ ಮಾತೃಭಾಷೆ ಎಂದೂ ಗುರುತಿಸಲಾಗುವ ಈ ಭಾಷೆಗೆ ‘ಬಾಂಗ್ಡ ಪೋಂಗ್ಡ’ ಎಂಬ ಹೆಸರೂ ಉಂಟು.

ಒಂದು ಸಮುದಾಯಕ್ಕೆ ಸೀಮಿತವಾಗಿದ್ದರೂ ಭಾಷೆ ಜೀವಂತವಾಗಿ ಉಳಿದುಕೊಂಡಿದೆ. ಈ ಭಾಷೆಯನ್ನು ಉಳಿಸುವ ಮತ್ತು ಹೆಚ್ಚು ಬಳಸುವ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದ ರವಿಚಂದ್ರ ಮತ್ತು ಬನಹಳ್ಳಿ ಗ್ರಾಮದ ಮಂಜುಳ ಎಂಬುವವರು ಅರವು ಭಾಷೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

* * * * *

ಇತ್ತಿಚ್ಕು ಶಾನ ಜನು ಹಿಂದಿ ಭಾಷೆವಿ, ಇಂಗ್ಲೀಷ್ ಭಾಷೆವಿ ಬಳಸ್ರಾಗ ರಾಷ್ಟ್ರೀಯ ಭಾಷೆ ಅಂಡು ಸೊಲ್ರಾಗ ಆನಾಕ ಸಂವಿಧಾನೂ ಪ್ರಕಾರು ಇರ್ವತ್ತುರೊಂಡು ಭಾಷೆಗ್ಳೇವಿ ಗುರ್ತಿಸಿಕ್ರಗಾ, ಬರೀರ್ದು, ಪೇಸ್ರುದು ಭಾಷೆಕೂ ಯಾವ್ದು ಸಂಬಂಧ್ದು ಇಲ್ಲೆ. ಬರೀರ್ದೇ ಬೇರೆ, ಪೇಸ್ರುದೇ ಬೇರೆ. ಅಕ್ಷರುಂಗ ಇಕ್ರು ಪೇಶ್ಕಿ ಬರೀರು ಪೇಶ್ಕಿ ಶಾನ ವ್ಯಾತ್ಯಾಸು ಇಕ್ದು,.ಜನುಂಗ ಪೇಸ್ರು ಭಾಷೆವಿ ಸರ್ಕಾರು ಎತ್ನಿಮಾತೃ ಪಾಕ್ರಗಾ ಅಂಡು ಎಲ್ರೂಕೂ ತೆಳಿಮೂ.

ಒರು ಭಾಷೇವಿ ಉಳುಸ್ರುದು ಬೆಳಸ್ರುದು ಜನಂಗ ಎಪ್ಡಿ ಬಳ್ಸರಾಗ ಅಂಡ್ರುದು ಮೇಲೆ ಅದು ಭಾಷೇ ಜೀವಂತುನಾ ಅಥವು ಅದು ಸತ್ತೋಗಿಕ್ರು ಭಾಷೆ ಅಂಡ್ರುದು ಗೊತ್ತಾಗ್ದು. ಇಕ್ತು ನಾನಿಂಗಿ ಮುಖ್ಯಮಾಗಿ ಹೇ ಇಂದು ಲೇಖ್ನು ಬರೀತಾ ಇಕ್ರು ಅಂಡ್ರುದು ಸೊಲ್ಲೋಡ್ರು, ಎಲ್ಲಾ ಭಾಷೆ ಉಳಿಸುರ್ದು ಜನುಂಗ ಮೇಲೆ ನಿಂಡುಕ್ದು ಅಲ್ವ? "ಹಿಂದಿ ರಾಷ್ಟ್ರ ಭಾಷೆ," ಅಂಡು ಇತ್ತೀಚ್ಕಿ ಮೀಡಿಯದಾರಿ, ಕೇಂದ್ರ ಸರ್ಕಾರು ಸೊಲ್ತಾ ಇಕ್ರಾಗಾ, ಅದಕ್ಕು ಪರು ವಿರೋದ್ದು ನಡ್ಕುತಾ ಇಕ್ದು. ಇಂಗಿ ಒತ್ತಾಯ ಶೇಕ್ತಾ ಇಕ್ರುದು ಒರು ತಟ್ಟು ಆನಾಕ ಜನಂಗ್ಳು ಕೂಡ ಪೇಸ್ರುದು ಶಾನ ಕಡಿಮೆ ಶೇಶಿಕ್ರಗಾ.

ನಮ್ರಿ ಪೇಶೀವಿ 'ಬಾಂಗ್ಡ ಪೋಂಗ್ಡ' ಪೇಶಿ ಅಂಡು ಕೂಡ ಸೊಲ್ರಾಗಾ. ಇಪ್ಪು ಪೇಸ್ರುದು ಕಡಿಮೆ ಆಗಿಕ್ದು. ಇಂದು ತರ ಸೊಲ್ತಾ ಇಕ್ರಾಗಾ, ವಕೀಲು ಆಗಿಕ್ರು ಚೂಡುಸಂದ್ರು ವೇಣು ಅಂಡ್ರೋಗು ಇದ್ರೇವಿ ಇಂದು ಆತಂಕ್ತೇವಿ ವ್ಯಕ್ತುಪಡಿಸಿಕ್ರಾಗ, "ಬಾಂಗ್ಡ ಪೋಂಗ್ಡ ಪೇಶಿ ನಮ್ರಿ ತಲೆಮಾರು ಅತ್ನೆ ಪೇಸ್ರುದು. ಒರು ಇರ್ವಿದಿ ವರ್ಷು ಅಂತ್ನೆ ಆಮೇಲೆ ನಮ್ರಿ ಪೇಶೇವಿ ಪೇಸ್ರೋಗೋ ಯಾರು ಇಕ್ರುದಿಲ್ಲ, ನಮ್ರಿ ಪುಳ್ಳಿಗ್ಳುಕು 'ಬಾಂಗ್ಡ ಪೋಂಗ್ಡ' ಪೇಶಿವಿ ಸೊಲ್ಲಿ ಕುಡುಕ್ತಾ ಇಲ್ಲೆ," ಅಂಡು ಸೊಲ್ರಾಗ. ಆನಾಕ ಹೆನ್ನಾಗ್ರು ಹೊಸಹಳ್ಳಿ ಅನಿಲ್ ಅಂಡ್ರೋಗ, "ಬ್ರದರ್ ನಮ್ರಿ ಪೇಶೇವಿ ಯಾರು ಪಾಗಶೇಕ ಆಗ್ರುದಿಲ್ಲೆ. ಇಪ್ಪು ನಮ್ರಿ ಜನುಂಗ್ಳುಕು ಬುದ್ದಿ ಬಂದಿಕ್ದು, ನಮ್ರಿ ರಕ್ತುತ್ಲಿ ಶೇರೊಟಿಕ್ದು," ಅಂಡು ಸೊಲ್ರಾಗ.

ಈ ಲೇಖನ ಓದಿದ್ದೀರಾ?: ಬಹು ಕರ್ನಾಟಕ - ತುಳು | ಬೆಂದ್ ತಿನ್ಪಿನಾಯೆ ಬೆನ್ಪಿನಾಯೆ ಆದೇ ಒರಿಯೆ

ಇಕ್ತು ಹಿಂದಿ ಭಾಷೆವಿ ‘ರಾಷ್ಟ್ರ ಭಾಷೆ ಅಲ್ಲ’ ಅಂಡು ಕನ್ನಡ್ದ ಸಿನಿಮಾದ ಸುದೀಪ್ ಸೊಲ್ಲಿಕ್ರುದು ಒರು ಪೇಶ್ಕಿ ಇಡೀ ದೇಶಿತ್ಲಿ ಚರ್ಚೆ ಶೇಕ್ತಾ ಇಕ್ರಗಾ. ಹಿಂದಿ ಭಾಷ್ಲಿ ಟ್ವೀಟ್ ಶೇಷಿಕ್ರು ಅಜಯ್ ದೇವಗನ್ ಅದರೇವಿ ಕನ್ನಡತ್ಲಿ ಪಾಕ್ಲ: "ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡ್ತೀರಾ? ಹಿಂದಿ ನಮ್ಮ ಮಾತೃಭಾಷೆ, ನಮ್ಮ ರಾಷ್ಟ್ರ ಭಾಷೆ ಆಗಿರುತ್ತದೆ,” ಅಂಡು ಸೋಶಿಯಲ್ ಮೀಡಿಯಾತ್ಲಿ ಬರೆಜೋಟು ಪೋಸ್ಟ್ ಶೇಷಿಕ್ರಗಾ. ಇಂಗಿ ಮುಖ್ಯಮಾಗಿ ಸೊಲ್ಲೋಣಾಗಿಕ್ರುದು ಭಾರತು ದೇಶಿತ್ಲಿ ಬರೀ ಹಿಂದಿ ಭಾಷೆನಾ ಇಕ್ರುದು? ಬೇರೆ ಭಾಷೆನೇ ಇಲ್ವಾ? ಅತವೂ ಅಪ್ಶಿಂದ ಹಿಂದಿನೆವಿ ಪೇಸ್ತಾ ಇಂದಾಗ್ಳ? ಇಲ್ಲೆ ನಮ್ರಿ ಮುತ್ತಾತ್ನಿಕಿ ‘ಕನ್ನಡ,’ ‘ಅರವು’ ಬುಟ್ಟಾಕ ಬೇರೆ ಪೇಶೇ ಬರ್ರ್ದಿಲ್ಲೆ.

ಕರ್ನಾಟುಕುತ್ನಿ ಕೊಂಕಣಿ, ತುಳು, ಬ್ಯಾರಿ ಅಥವೂ ಇನ್ನೂ ಸುಮಾರು ಭಾಷೆಗಳಿಕೂ ಅಕ್ಷರುಂಗ ಇಲ್ಲೆ; ಭಾಷೆ ಜೀವಂತ್ಮಾಗಿ ಇಕ್ದು ಅಲ್ಲ? ಮರಾಠಿನೇವಿ ಹಿಂದಿಲಿ ಬರೀರಾಗ, ಅಪ್ಡೆ ಬೇರೆ-ಬೇರೆ ಭಾಷೆವಿ ಬೇರೆ-ಬೇರೆ ಭಾಷೆಲಿ ಬರಿಜಾಕ್ಲು ಭಾಷೆ ಮಾತ್ರು ಉಳಿಜಿಕ್ದು. ಇಂಗಿ ಮಾತೃಭಾಷೆ, ಪಿತೃಭಾಷೆ ಅಂಡ್ರುದು ಇಲ್ಲೆ ಅಂಡ್ರುದು ಎಲ್ಲಾರು ತಿಳಿಜಿಗೋಣೆ. ಅರುವು ಭಾಷೆಕೂ ಬರವಣಿಗೆ ಇಲ್ಲೆ, ಸರ್ಕಾರ್ದು ಗೌರವು ಇಲ್ಲೆ. ಆನಾಕ್ಳು ಜೀವಂತ್ಮಾಗಿ ಇಕ್ದು ಅಲ್ವಾ? ಅದಕ್ಕು ಕಾರ್ಣು ಸಮುದಾಯು, ಜನಾಂಕು, ಸಂಪ್ರದಾಯು ಅಂಡು ಸೊಲ್ಲುಲಾ. ಹೊಲಿರೂ, ಮಾದಿಗ್ರು ಅರವು ಭಾಷೆವಿ ಪೇಸ್ರಾಗ.   ಭಾಷೆ ಅಂಡ್ರುದು ಒರು ‘ಕುಟುಂಬು.’ ಒರು ಅಂದಾಜು ಪ್ರಕಾರೂ, ದ್ರಾವಿಡು ಭಾಷೆಗಳೇ 45 ರೂಪುತ್ಲಿ ಪೇಸ್ರಾಗ. ಒರು ಕುಲು ಕಸುಬು, ಒರು ಜನಾಂಗು ಅಗ್ಳೇ ಇಕ್ರು ಭಾಷೆಲಿ ಪೇಸ್ರಾಗ. ಅಗ್ಳಿ ಇಕ್ರು ಭಾವನೆಗಳೆವಿ ವ್ಯಕ್ತುಪಡಿಸ್ರಾಗ.

Image
Aravau june 12 2

ಅರವು ಭಾಷೆ ಪೇಸ್ರೋಗ ಒರು ಭಾಗೋಳಿಕಮಾಗಿ ಸೊಲ್ಲೋಣು ಅಂಡಕಾ, ತಮಿಳುನಾಡು ಕೃಷ್ಣಗಿರಿಯಿಂದ ಪುಡಿಶಿಕ್ನಿ ಹೊಸೂರು, ತಳಿ, ಕೆಜಿಎಫ್, ಕೋಲಾರು, ಬಂಗಾರುಪೇಟಿ, ಮುಳಬಾಗಿಲು, ಮಾಲೂರು, ಹೊಸಕೋಟಿ, ದೊಡ್ಡಬಳ್ಳಾಪುರು, ನೆಲಮಂಗ್ಲು, ಕನಕಪುರ, ಬೆಂಗಳೂರು; ಅದ್ಲಿ ಬೆಂಗಳೂರು ಸಿದ್ದಾಪುರತ್ಲಿ ಇನ್ನೂ ಶಾನ ಜಾಗುತ್ಲಿ ಅರವು ಭಾಷೆವಿ ಪೇಸ್ರಾಗ. ಬೆಂಗಳೂರು ಯೂನಿವರ್‍ಸಿಟಿಲಿ ಸಿಡಿಹೊಸಕೋಟೆ ರವಿ ಅಮೆಲೆ, ಬನಹಳ್ಳಿ ಮಂಜುಳ ಅಂಡ್ರುಗ ಅರವು ಭಾಷೆವಿ ಉಳಿಸೋನೆ ಅಂಡ್ರು ಉದ್ದೇಶ್ಲಿ ಸಂಶೋಧನೆ ಶೇಕ್ತಾ ಇಕ್ರಾಗ. ಅರವು ಭಾಷೇವಿ ಪೇಸ್ರೋಗ ಬಾಡಿ ಲಾಂಗ್ವೇಜ್ ಬೇರೆ ತರ ಇಕ್ದು. ಒರಟು ಭಾಷೆ ಕೂಡ ಯಾರಾನ ಜಗಳು ಶೇಷಾಕ ಕನ್ನಡತ್ಲಿ ಪೇಸ್ರುದಿಲ್ಲೆ ಅರವುತ್ಲಿ ಜಗಳು ಶೇಕ್ರುದು. ಅರವು ಭಾಷೆವಿ ತಮಿಳು ಕ್ರಾಸ್ ಭಾಷೆ ಅಂಡು ಸೊಲ್ರಾಗ. ಕರ್ನಾಟಕತ್ಲಿ ಅರವು ಭಾಷೆವಿ ಪೇಸ್ರೋಗೋ ಸುಮಾರು 5 ಲಕ್ಷತ್ಕು ಶಾನ ಇಕ್ರಾಗ.

ಅರವು ಭಾಷೆ ಯಾ ಪ್ರಕಾರು ಜೀವಂತು ಭಾಷೆ. ಅರವು ಭಾಷೇವಿ ಯಾರು ಉಳಿಸೋಣೆ ಅಂಡ್ರು ಹೋರಾಟು ಶೇಕೋಣೆ ಅಂಡ್ರುದು ಅವಶ್ಯಕತೆ ಇಲ್ಲೆ; ಒಣ್ಣು ಒಪ್ಪಿಕೊಳ್ಳೋಣೆ ಸಾರ್ವಜನಿಕು ಮಾಗಿ ಪೇಸೋಣೆ ಅಂಡಾಗ ರತ್ನಿ ಹಿಂಜರಿಕೆ ಇಕ್ದು. ಎನ್ನು ಅಂಡುಗ್ರಳೋ ಅಂಡು, ಏ ಇಪ್ಡಿ ಆಷಿ ಅಂಡ್ರುದು ಎಲ್ರುಕೂ ತೆಳೀಮು. ಯಂಗ ತಾತನಿಕಿ ಕನ್ನಡ, ಅರವು ಬುಟ್ಟಾಗ ಬೇರೆ ಭಾಷೇನೇ ಗೊತ್ತಿಕಿಲ್ಲೆ. ಯಪ್ಪು ಇಂದು ಟಿವಿ, ಸಿನಿಮಾ ಬಂಚ್ಚೋ ಅಪ್ಪಿಂದ ಕೆಟ್ಟೋಷ.

ಕೊನೆದಾಗಿ ಸೊಲ್ಲೋಣೆ ಅಂಡಾಕ, ‘ಅರವು’ ಅಂಡ್ರು ದ್ರಾವಿಡ ಭಾಷೆ ಯಂಗ್ಳೂಕು ಮಾತೃಭಾಷೆ. ಇಂದು ಭಾಷೆಕೂ ಒರು ಗತ್ತು ಗಮ್ಮದ್ದು ಇಕ್ದು. ಸಿದ್ದರಾಮಯ್ಯ ಸಿಎಂ ಆಗಿಂದಪ್ಪು ರೇಡಿಯಾಲಿ ಅರವು ಭಾಷೆವಿ ಬಳಶ್ಕೀನಿ, "ಜಮೀನು ಖಾತೆ ಶೇಷಿಕೊಂಗೋ," ಅಂಡು ಬಂದಿಂಚ್ಚಿ. ಜನುಂಗ ಅರವು ಭಾಷೆವಿ ಪೇಸ್ರುದಿಂದ ತಾನೆ ಸರ್ಕಾರು ಅರವು ಭಾಷೆವಿ ಬಳಶಿಕಿನಿಂದು? ಅಪ್ಡಿ ಆಗಿ ಸಿದ್ದರಾಮಯಿನ್ಕಿ ಒರು ಪೆರಿ ನಮಸ್ಕಾರು.

ನಿಮಗೆ ಏನು ಅನ್ನಿಸ್ತು?
5 ವೋಟ್
Image
av 930X180