ಬಹು ಕರ್ನಾಟಕ - ಅರವು | ಆನೇಕಲ್ತಿಲಿ ಇಕ್ರು 'ಅರವು' ಜನುಂಗ ಕನ್ನಡ್ತಾರ ತಮಿಳಾರ?

ಆನೇಕಲ್‌ ಸೀಮೆಯಲ್ಲಿ ಅರವು ಭಾಷೆ ಮಾತನಾಡುವ ಜನ ಕನ್ನಡದವರಾ ಅಥವಾ ತಮಿಳಿನವರಾ ಎಂಬ ಪ್ರಶ್ನೆ ತುಂಬಾ ಹಳೆಯದು. ಈ ಮಂದಿ ಮೂಲತಃ ಕನ್ನಡದವರೇ ಎಂಬ ಅಭಿಪ್ರಾಯಕ್ಕೆ ಪೂರಕವಾದ ಮಾಹಿತಿ ಈ ಲೇಖನದಲ್ಲಿದೆ. ಜೊತೆಗೆ, ಅರವು ಮಾತನಾಡುವ ತಿಗಳರಿಗೂ ಆನೇಕಲ್‌ನ ದಲಿತರಿಗೂ ಇರಬಹುದಾದ ಸಂಬಂಧ ವಿಶ್ಲೇಷಣೆ ಇಲ್ಲುಂಟು

ಆಮೂ ಒರು ಭಾಷೇವಿ ಉಳ್ಸುರ್ದು, ಬೆಳ್ಸುರ್ದು ಯಾವ್ದೋ ಸ್ಕೂಲು ಅಥ್ವು ಪೆರಿ ಪೆರಿ ಸ್ಟೇಜ್ಗಳ್ಳಿ ಶೇಕ್ರು ಭಾಷ್ಣುಗ್ಳಿಂದ ಅಲ್ಲ ಅಂಡ್ರುದು ಎಲ್ಲಾರ್ಕು ತೆಳ್ಜಿಕ್ದು. ಕನ್ನಡ್ತೇವಿ, ತಮಿಳೇವಿ, ಹಿಂದಿನೇವಿ, ಇಂಗ್ಲೀಶೇವಿ ಸರ್ಕಾರ್ತಾರಿ ಶೇಕ್ರು ರೂಲ್ಸಿಂದ ಉಳ್ಸಾ ಆಗ್ರುದಿಲ್ಲೆ. ಟೀವಿಗ್ಳಿ, ಪೇಪರ್ಲಿ, ಕಾನೂನುಂಗ್ಳಿ, ಪೆರಿ ಪೆರಿ ಭಾಷೆ ರ್ಯಾಲಿಗ್ಳಿ ಪೇಷೇಟು ಒರು ಭಾಷೇವಿ ಉಳ್ಸ ಆಗ್ರುದಿಲ್ಲೆ, ಕಂಡಿತ್ಮಾಗಿ ಒಣ್ಣು ನೆನಪು ಒಚ್ಕೋಣೆ, ಕನ್ನಡ್ತೇವಿ ಆಗ್ತು ಅರವು ಭಾಷೇವಿ ಆಗ್ತು ಜನುಂಗ್ಳು ಉಳಿಯೋಣೆ ಅಂಡಾಕ ಜನುಂಗ ಹೃದಯತ್ಲಿ ಇಕ್ಕೋಣೆ, ಪ್ರತಿ ಒರು ದಿನುಕೂಡ ಶೇಕ್ರು ಬ್ಯಾಲ್ಲಿ ಪೇಸೋಣೆ ಅಂತ್ನೆ.

ಆನೇಕಲ್ಲಿಲಿ ಪೇಸ್ರು ಭಾಷೇಗ ಒಣ್ಣೂ ಕೂಡ ಅಪ್ಪಟ್ಟು ಕನ್ನಡು ಅಂಡೊಟು ಸೊಲ್ಲಾ ಆಗ್ರುದಿಲ್ಲೆ ತಮಿಳು, ತೆಲುಗು ಅರವು ಎಲ್ಲಾ ಮಿಕ್ಸಾಗಿಕ್ರುದು. ಕನ್ನಡ ಇಕ್ರುದು, ಆಟ್ಸ್ ಕಾಲೇಜು ಅಂಡಾಗ ಅವರು ಪೇಸ್ರೋಗಳೇ ಇನ್ನುಂದು ಶಾನ, ಎಸ್ ಜೆ ಆರ್ ಸಿ ಕಾಲೇಜು, ವಿ ವಿ ಪುರಂ ಕಾಲೇಜುತ್ಲಿ ಇಂದಾಗ ಆನಕಾ ಶಾನ ಜನು ಇಕ್ಕಿಲ್ಲೆ. ಕಾಲೇಜು ಪೀಜು ಕಡ್ಮೆ ಅಂಡೋಟು ಶೇರ್ಗಿನಿಂದು, ಬೆಂಗ್ಳೂರು ಯೂನಿವರ್ಸಿಟಿಲಿ ಅದ್ರಿಲ್ಲಿ ಹಾಸ್ಟಲ್ ಮಾತೃ ಒರು ತೊಬ್ದಿ ಪರ್ಸೆಂಟ್ ಅರವು ಪೇಸ್ರೋಗ್ಳೇ ಇನ್ನುಂದು ಇಪ್ಪು ಕಡಿಮೆ ಆಗಿಕ್ದು. ನಂಗ ಪೇಸ್ರು ಕನ್ನಡ ಒರು 70% ಅತ್ನೆ ಉಳ್ಜಿಂದು 30% ಬೇರ್ಬೇರೆ ಅಂಡಾಕ ತಮಿಳು, ತೆಲುಗು ಎಲ್ಲಾ ಸೇರ್ಗೆನೋಟೀಕ್ದು, ಅರವು ಭಾಷೇವಿ ಪೇಸ್ರೋಗೋ ಕನ್ನಡತ್ನೇವಿ ಪೇಸ್ನಾಕ ಗೊತ್ತಾಗೋಡ್ದು ಇಗ ಕನ್ನಡ್ತಾರಿ ಅಲ್ಲ ತಮಿಳಾರಿ ನೀಂಗ್ಲಾ ಅಂಡು ಕೇಕ್ರಾಗ.

ಈ ಲೇಖನ ಓದಿದ್ದೀರಾ?: ಬಹು ಕರ್ನಾಟಕ - ಬ್ಯಾರಿ | ಪುದೆಪೆಂಡೊ ಚಮೈಚ್ಚೊ ಬಂಗಾರ್

ಇನ್ನೂ ಕೆಲ್ವು ಜನೂಂಗ ನೀಂಗ ಆನೇಕಲ್ಲಾರಾ ಅಂಡು ಕೂಡ ಕೇಟೀಕ್ರಾಗ, ಅರವು ಪೇಸ್ರು ಜನುಂಗ ಒಡಮು ಶಾನ ಗಟ್ಟಿಮುಟ್ಟಾಗಿ ಇಕ್ದು, ಪೇಸ್ರು ದಾಟಿ ಕೂಡ ಒರಟು ಇಕ್ದು, ಜೋರು ಇಕ್ದು, ಯಂಗ ತಾತು ಮುತ್ತಾತು ಕೂಡ ಶಾನ ಕಟ್ಟಿ ಇಂದಾಗ. ಇದ್ರೇವಿ ಯಾರಾನಾ ಸಂಶೋಧ್ನೆ ಶೇಕೋಣೆ, ಹೇ ಇಪ್ಡಿ ಅವರು ಪೇಸ್ರೋಗಳ್ಕು ಒಡ್ಮು ಕಟ್ಟಿ ಇಕ್ದು, ಪೇಸ್ರು ಪೇಷಿ ಕೂಡ ಶಾನಾ ಒರಟು ಇಕ್ದು ಅಂಡೊಟು ಸಂಶೋಧ್ನೆ ಶೇಷಾಕ ಗೊತ್ತಾಗ್ದು. ಕೊಲ್ಲಿಲಿ ಅಥ್ವು ಜೀತು ಇಂದು ಪ್ಯಾಲಿ ಶೇಷಿ ಶೇಷಿ ಒಡ್ಮು ಇಪ್ಡಿ ಕಟ್ಟಿ ಬಂದುಕ್ಕೋಚ್ಚ? ಆನೇಕಲ್ ಒರಪ್ಪು ಕಾಡು ಅಂಡೋಟು ಸೊಲ್ರಾಗ ಕಾಡು ಮೇಡುಂಗ್ಳು ತಿಂಡುಕ್ರುದಾ? ಆನೇಕಲ್ಲೇವಿ ರಾಗಿಯ ಕಣಜ ಅಂಡು ಪೇರೇವಿ ಒಚ್ಚಿಕ್ರಾಗ ರಾಗಿಲಿ ಶೇಕ್ರು ಕಳೇವಿ ತಿಂಡು ತಿಂಡು ಇಪ್ಡಿ ಒಡ್ಮು ಶಾನ ಕಟ್ಟಿ ಬಂದುಕ್ಕೋಚ್ಚ? ಗೊತ್ತಿಲ್ಲೆ, ನೀಂಗ ಆನೇಕಲ್ ಬಂದಾಕ ಉಂಗ್ಳೇವಿ ಸ್ವಾಗತು ಶೇಕ್ರುದೇ ‘ರಾಗಿಯ ಕಣಜಕ್ಕೆ ಸ್ವಾಗತ’ ಅಂಡು.

ಇಂಗಿ ಮುಖ್ಯಮಾಗಿ ಪ್ರಶ್ನೆ ಇಕ್ರುದು ಎನ್ನಪ್ಪ ಅಂಡಾಗ ‘ಅರವು’ ಪೇಸ್ರೋಗ, ಆನೇಕಲ್ ಜನುಂಗ ಕನ್ನಡ್ತಾರ ತಮಿಳಾರ? ಅಂಡೋಟು, ಇಂಗಿ ಇನ್ನೋಣ್ಣು ಸೊಲ್ಲೊಣೆ ಅಂಡಾಕ ಹೊನ್ನಿ ಕುಲ್ತಾರಿ ಪೇಸ್ರುದು ಕೂಡ ಅರವು ತರನೇ ಇಕ್ದು, ಆಗ ಪೇಸ್ರೂದು ದಾಟಿ, ಸುಮಾರು ಪೇಸ್ರೂ ಪದುಂಗ, ನಾನಿ ಓದಿಂದು ಎಂಗೋ ಹೊನ್ನಿ ಕುಲ್ತಾರಿ ಆನೇಕಲ್ ದಲಿತ್ರೂ ಅಣ್ಣು ತಂಬಿ ಅಂಡೋಟು ಅದು ಎತ್ನಿ ನಿಜು ಎತ್ನಿ ಸುಳ್ಳೂ ಅಂಡೋಟು ತಿಳ್ಜುಗೋಣೆ.

Image

ವನ್ನಿ ಕುಲ್ತಾರಿ ಅಂಡಾಗ ತಿಗಳು ಜನಾಂಗು ಪೇಸ್ರುದು ಅರವು, ಇಂದು ಅರವು ಕೂಡ ದಲಿತ್ರು ಪೇಸ್ರುದು ಅರವು ಕೂಡ ರತ್ನೇ ರತ್ನಿ ವ್ಯತ್ಯಾಸು ಇಕ್ರೂದು, ಕನ್ನಡ್ತಲಿ ‘ಬನ್ನಿ’ ಅಂಡು ಸೊಲ್ರುತ್ತೇವಿ ಹೊನ್ನಿ ಕುಲ್ತಾರಿ ‘ವಾಂಗ್ಡ’ ಅಂತ ಕರೀತಾರೆ. ದಲಿತ್ರು ‘ಬಾಂಗ್ಡ’ ಅಂಡು ಕೂಪೂಡ್ರಾಗ, ಹೊನ್ನಿ ಕುಲ್ತಾರೆವಿ ಕನ್ನಡ್ತಾರಿ ಅಂಡು ಸೊಲ್ಲೊಚ್ಚು ಆನಾಕ, ಆನೇಕಲ್ ದಲಿತ್ರೇವಿ ಕನ್ನಡ್ತಾರಿ ಅಂಡು ಸೊಲ್ಲು ಮಾಟಾಗ, ತಿಗಳು ಜನಾಂಗು ಪೇಸ್ರುದು ಅರವು ಅಂಡು ಸೊಲ್ನಾಕ ಕೂಡ ಅಗ್ಳೇವಿ ತಮಿಳು ನಾಡಾರಿ ಅಂಡು ಸೊಲ್ರುದಿಲ್ಲೆ. ಆನೇಕಲ್ ದಲಿತ್ರೂ ಕೂಡ ಕನ್ನಡ್ತಾರೆ, ಅಂಡ್ರೂದ್ಕು ಒರು ಉದಾಹರ್ಣೆ ಕುಡ್ಕುರು ಪಾಕ್ಲ ಅದ್ರೇವಿ.

ಆನೇಕಲ್ತ್ಲಿ ಇಕ್ರು ದಲಿತ್ರು ಮೂಲ ಕನ್ನಡ್ತಾರೆ ಅಲ್ವ ಅಂಡ್ರು ಪ್ರಶ್ನೇಕಿ ಉತೃ ಉಡುಕೋಣೆ ಅಂಡಾಕ ಯಂಗ ತಾತು, ಮುತ್ತಾತು, ಮುತ್ತಾತ್ನೋಗೋ ಅಪ್ಪು ಯಂಗಿ ಇಂದಾಗ? ತಾತು, ಮುತ್ತಾತು, ಮುತ್ತಾತ್ನೋಗೋ ಅಪ್ಪು ಕೋಲ್ತಾತು ಯಂಗಿ ಬರ್ದಿಂದಾಗ? ಅಂಡು ಪೇಪರ್ಗತ್ನಿ ಪಾಕೋಣೆ ಇಕ್ತು ಯಾ ಕೈಲಿ ಆಗ್ರದಿಲ್ಲೆ, ಅದ್ರೇವಿ ಯಾರಾನಾ ಸಂಶೋಧ್ನೆ ಶೇಕ್ರೋಗೋ ತಡ್ಕ್ತು ಅಲ್ವ? ಯಂಗ್ ಅಪ್ಪು ಪೇರಿ ಆಂಜನೇಯ್ಯೂ, ತಾತು ಪೇರಿ ಪೆರಿಗುಳ್ಳಪ್ಪು, ಮುತ್ತಾರು ಪೇರಿ ರೊಡ್ಡೆಯಲ್ಲಪ್ಪು, ಕೋಲು ತಾತು ಪೇರಿ ಅಂಡಾಕ ರೊಡ್ಡೆಯಲ್ಲಪ್ಪು ಅಪ್ಪ ಪೇರಿ ಪೆರುಮಯ್ಯು ಅಂಡೋಟು, ಪೆರುಮಯ್ಯು ಅಪ್ಪು ಪೇರಿ ಯಲ್ಲಪ್ಪು ಅಂಡೊಟು ಸೊಲ್ರಾಗ ಆನಾಕ ಯಾವ್ದು ಪೇಪರ್ಗ ಇಲ್ಲೆ. ಆನಾಕ ಪೆರುಮಯ್ಯು ಅಂಡೋಟು ಕೋಲು ತಾತು ಪೇರಿ ಕನ್ನಡ್ತಲಿ ‘ಪ್ರಿಲಿಮನೆರಿ’ ಪೇಪರ್ಗಳ್ಳಿ ಇಕ್ದು.

ಈ ಲೇಖನ ಓದಿದ್ದೀರಾ?: ಬಹು ಕರ್ನಾಟಕ - ಬುಡಕಟ್ಟು ಮರಾಟಿ | ಗೊಂದೊಳು ಪುಜ, ಭೈರವಸ್ ಕೆರ್ತನ ಡುಕ್ರ- ಕೊವುಂಡೆ ಕೆರ್ತೊ...

ಮೈಸೂರು ಸಂಸ್ಥಾನುಕು ಸುಂಕು ಕಟ್ಟಿಕ್ರುದು ಪೇಪರು ಇಕ್ದು, ತಾಲ್ಲೂಕು ಆಫೀಸ್ತಿಲಿ ಇಕ್ರು ದಾಖಲಾತ್ಲಿ ಕೂಡ ಕನ್ನಡ್ತಲಿ ಬರಿಜಿಕ್ರಾಗ, ಯಂಗ ತಾತು ಪೇರಿ ಕೋಲು ತಾತು ಪೇರಿ, ಜಮೀನ್ ಪೇಪರ್ಗಳಿ ಇಕ್ದು, ಎಪ್ಡಿ ಅಂದು ಜಮೀನು ಬಂಜಿ ಅಂಡೋಟು ಬರಿಜಿಕ್ರುದು ಪಾತಾಕ ಎಲ್ರೂಕೂ ಗೊತ್ತಾಗ್ದು, ಪಗೇ ಪೇಪರ್ತಿಲಿ 'ವಂಶಪರಂಪರೆಯಾಗಿ ಬಂದ ಸ್ವತ್ತು’ ಅಂಡೋಟು ಬರಿಜಿಕ್ದು, ತಮಿಳಾರಿ ಆಗಿಂದಾಕ ಯಂಗ ಕೋಲ್ ತಾತು ಪೇರಿ ಕನ್ನಡ್ತಲಿ ಬರೀತಾ ಇಕ್ಕಿಲ್ಲೆ, ಅದಕ್ಕೂ ಆಗೋಣಾಗಿ ಇಕ್ರು ಪೇಪರ್ಗ ಶಿಕ್ದು, ಗಂಟಾಘೋಷ್ಮಾಗಿ ಸೊಲ್ಲುಲಾ ಅಂಡಾಗ ಆಗೃದಿಲ್ಲ ‘ಅರವು’ ಪೇಸ್ರೋಗ, ಆನೇಕಲ್ತಿಲಿ ಇಕ್ರು ಜನುಂಗ ಕನ್ನಡ್ತಾರ ತಮಿಳಾರ? ಪ್ರಶ್ನೇಕಿ ಉತ್ತುರು ತಡ್ಕೀನಿ ಪೋನಾಕ ಯಂಗೋ ಒರುತಟ್ಟು ಕೋಲ್ ತಾತುಕಿಂತ ಮೊದ್ಲು ತಮಿಳಾರ? ಅಂಡು ಒರು ಅನುಮಾನು ಬರ್ದೆ ಬರ್ದು ಆನಾಕ ಕನ್ನಡ್ತಾರೆ ಅಂಡು ಸೊಲ್ರುಕು ಶಾನ ಪೇಪರ್ಗ ಸಿಕ್ದು ಆಮೇಲೆ ಮೂಲ ‘ಅರವು’ ಪೇಸ್ರೋಗ, ಆನೇಕಲ್ತಿಲಿ ಇಕ್ರು ಜನುಂಗ ಕನ್ನಡ್ತಾರೆ ಒರ್ತು ತಮಿಳಾರಿ ಅಲ್ಲ ಅಂಡ್ರುದು ಯಾ ಅಭಿಪ್ರಾಯೂ.

ನಿಮಗೆ ಏನು ಅನ್ನಿಸ್ತು?
6 ವೋಟ್
Image
AV Eye Hospital ad