ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಮೀನು ಪೇಟಿಗೆ ಪೈಸ ಹಾಕ್ಲೆಲ ಅಂದ್ರೆ ಕಡಲ ದಡದಲ್ಲಿ ಹುಟ್ಟಿದ್ದೇ ಸುಳ್ಳು

Desi Nudigattu JUNE 01 1

ತದಡಿಲಿ ಸಿಕ್ಲೆಲಾಂದ್ರೆ ಗೋಕರ್ಣ, ಇಲ್ಲಾಂದ್ರೆ ಮಾದನಗೇರಿ. ಎಲ್ಲೂ ಸಿಗ್ಲೆಲಾ ಅಂದ್ರೆ ನೂರುಪಾಯಿ ಮೀನಿಗೆ ಇನ್ನೂರುಪಾಯಿ ಕರ್ಚ ಮಾಡಿ, ಕುಮಟಿ ತನ ಗಾಡಿ ಹೊಡಿವವರು ಅವರೆ. ಇಂತವ್ರಿಗೆ ಹೊಟ್ಟಿಲಿ ತಳಮಳ ಆಗುಕೆ ಮಳಗಾಲ ಬರ್ಬೇಕ. ಬೋಟು ಫಿಶಿಂಗಿಗೆ ಹೋಗುದೆಲಾ, ಪಾತಿ ನೀರಿಗಿಳಿಯುದೆಲಾ, ಇಳದ್ರೂ ಬರು ಮೀನಿನ ರೇಟ್ ಮಾತಾಡ್ಸೊಂಗೆಲ್ಲ

ನಮ್ಮೂರ ಬದಿಗೆ ತರ್ಕಾರಿ ಊಟ ಅಂದ್ರೆ ಸಾರಿಗೇನೂ ಇಲ್ಲ ಅಂದೇ ಅರ್ಥ. ಯಾಕಂದ್ರೆ, ಮೀನಿಲ್ಲಂದ್ರೆ ಕರಾವಳಿ ಮಂದಿಗದು ಊಟನೇ ಅಲ್ಲ.

Eedina App

ಆಸಿಗೆಂತದೆ ಕೇಳದ್ರೆ, ದುಡ್ಡ ಕೊಡೊಂತವ್ರ ಆದ್ರೆ, ಕೆಂಸ, ಕುರುಡಿ, ಇಸ್ವಾಣ ಹೇಳದ್ರೆ; ನಮ್ಮಂತವ್ರು ಬಣಗು, ಬಂಗಡಿ, ತೋರಿ, ಶೆಟ್ಲಿ , ವೈಂಚ್ಲಿ, ಕಲಗ, ಬಳಚು, ಜಾಲಿ, ಸಮದಾಳಿ ಅಂದ್ರೆ ಸಮಾ ಆಯ್ತ. ಇಲ್ಲಂದ್ರೆ, "ಎಂತದ್ದೂ ಇಲ್ವೇ ಮಾರಾಯ್ತಿ ಚೊಕ್ಕ ತಂಬ್ಳಿ ಅನ್ನುದೇಯಾ..."

ನಮ್ಮ ದೀಪುನಂತ ಹುಡುಗ್ರಿಗೆ, ಪಲಾವು, ಹಪ್ಪಳ, ಪರೋಟಾ, ಪಾಲಕ್ಕು, ಪನೀರು, ಪಿಜ್ಜಾ-ಬರ್ಗರು ಅಂತೆಲ್ಲ ಹೇಳುಕೋದ್ರೆ, "ಸಾಯ್ಲೆ... ಅದೆಲ್ಲ ಮನಸರು ತಿನ್ನುದೇಯಾ," ಕೇಳ್ವರೇಯ.

AV Eye Hospital ad

ಎಂತ ಪಕ್ವಾನ್ನ ಇದ್ರೂ ಮೀನೂಟ ಇದ್ದಂಗಲ್ಲ. ನಮ್ಮೂರ ಬದಿ ಗಂಡ್ಮಕ್ಳು ಮದಿಮನಿಗೆ ಹೋದ್ರೆ ಹತ್ರದ ಹೊಟೆಲಲ್ಲಿ ಮೀನೂಟ ಉಂಡ್ಕಂಡೇ ಬರುದು. ಇಲ್ಲಂದ್ರೆ, ಎಷ್ಟೇ ಲೇಟಾಲಿ ಮನೇಗೇ ಬಂದ ಉಣ್ಣುರೇ ಹೊರ್ತೂ ಬಟಾಟಿ ಉಳಾಗಡ್ಡಿ? ಊಹೂಂ...

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ನೆರಳ್, ಹಣ್, ಬೀಜ, ಸೌದಿ ಒಟ್ಟಿಗೆ ಬದ್ಕ್ ಕೊಡ್ತೆ ಇತ್ ಗೊಯ್ ಮರ

ಎಂತ ಬಡತನ ಇದ್ರೂ ಮೀನು ಪೇಟಿಗೆ ಐವತ್ರೂಪಾಯಾದ್ರೂ ಹಾಕ್ಲೆಲ ಅಂದ್ರೆ, ಅಂವ ಕಡಲ ದಡದಲ್ಲಿ ಹುಟ್ಟಿದ್ದೇ ಸುಳ್ಳು. ಮನಿಲಿ ವಾರ-ಗೀರ ಮಾಡ್ವರಾದ್ರೆ, ಅರ್ಧ ತಾಟು ಅನ್ನಕ್ಕೇ "ಸಾಕ ಬಿಡು..." ಅನ್ನುದೇಯ.

ತದಡಿಲಿ ಸಿಕ್ಲೆಲಾ ಅಂದ್ರೆ ಗೋಕರ್ಣ. ಅಲ್ಲೂ ಇಲ್ಲ ಅಂದ್ರೆ ಮಾದನಗೇರಿ. ಎಲ್ಲೂ ಸಿಗ್ಲೆಲಾ ಅಂದ್ರೆ ನೂರುಪಾಯಿ ಮೀನಿಗೆ ಇನ್ನೂರುಪಾಯಿ ಕರ್ಚ ಮಾಡಿ, ಕುಮಟಿ ತನ ಗಾಡಿ ಹೊಡಿವವರು ಅವರೆ. ಇಂತವ್ರಿಗೆ ಹೊಟ್ಟಿಲಿ ತಳಮಳ ಆಗುಕೆ ಜೋರು ಮಳಗಾಲ ಬರ್ಬೇಕ. ಬೋಟು ಫಿಶಿಂಗಿಗೆ ಹೋಗುದೆಲಾ, ಪಾತಿ ನೀರಿಗಿಳಿಯುದೆಲಾ, ಇಳದ್ರೂ ಬರು ಮೀನಿನ ರೇಟ್ ಮಾತಾಡ್ಸೊಂಗೆಲ್ಲ. ಗಾಳದವ್ರ ಕೇಳದ್ರೆ, ಒಂದೇ ಒಂದ ಕುರ್ಡಿ ಮೀನಿಗೆ ಅರನೂರು ಏಳನೂರೆಯಾ! ಅದೂ ಮನ್ಸರ ತಿಂಬ್ವದಲ್ಲಾ ಅಂದಿ ಬಿಟ್ಟಾಕುದೇಯಾ.

ಇಂತ ಟೈಮಿಗೆ ನಮ್ಮ ದೇವ್ರ ಅಂದ್ರೆ ಒಣಮೀನ. ಗಂಜಿ ಉಂಡ್ರೂ ಅಡ್ಡಿಲ್ಲ; ಒಂದ ಒಣಮೀನ ಒಲಿಗಾಕಿ ಸಮಾ ಕತ್ತಸಿ ಸುಟ್ರೆ ಕೇರಿ ಪೂರ ಗಮಗಮ. ಇಡೀ ಬಟ್ಟಲ ತುಂಬ ಕುಚ್ಚಕ್ಕಿ ಗಂಜಿ  ಹೊಟ್ಟಿಗಿಳ್ದದ್ದೇ ಗುತ್ತಾಗುದಿಲ್ಲ.

ಒಣಮೀನಲ್ಲಿ ಬಣಗು ಮೀನು, ಉಳ್ಳಾಗಡ್ಡಿ ಸಾರು, ಬಂಗಡೆ ಮೀನು ಮೆಣಸಿನ ಹಸಿಮಸಾಲೆ ಚಟ್ನಿ, ಸ್ವಾರ ಮೀನು ಕೊಬ್ರಿ ಎಣ್ಣಿಲಿ ಹುರಿಯುದು, ದಿಣಸಿ ಜಬ್ಬು ಹಂಗೆ ತವೆಲಿ ಹುರಿದು ಕರುಮ್ ಕುರುಮ್ ತಿನ್ನುದು, ಒಣಮೀನು ಮಾವಿನಕಾಯಿ ತೆಳು ತಂಬಳಿ... ಆಹಾ... ಒಂದಕ್ಕಿಂತ ಒಂದು ರುಚಿ.

Desi Nudigattu JUNE 01 4
ಕುಮಟಾ ಮೀನು ಮಾರುಕಟ್ಟೆಯ ದೃಶ್ಯ

ಎಪ್ರಿಲ್-ಮೇ ತಿಂಗ್ಳಲ್ಲಿ ನಮ್ಮ ತದಡಿ ಕವಣದ ಹತ್ರ ಹೋದ್ರೆ ಸಾಕ. ಬೇಕಾದಷ್ಟು ತರತರದ ಮೀನುಗಳು ಸಿಕ್ತವೆ. ರೇಟೂ ಏನಂತ ತುಟ್ಟಿ ಅಲ್ಲ. ಎಂತಾದ ಬೇಕ ಅಂತಾ ಮೀನು ಚಂದ ಮಾಡಿ‌ ಒಣಗ್ಸಿ ಚೀಲ ತುಂಬಿ ಇಡತ್ರು. ಹೋದ ಕೂಡ್ಲೇ ಬೇಕಾದ ಜಾತಿ ಮೀನಿದ್ರೆ ತೂಕ ಮಾಡಿ ಕೊಡತ್ರು. ಹೋಗಿ ತಕಬಂದಿ, ನಾವೂ ಮತ್ ಬಿಸ್ಲಿಗೆ ಹಾಕಿ ಡಬ್ಬಿ ತುಂಬಿಟ್ಕಂಡ್ರೆ, ಹದಾ ಜಿರಿಜಿರಿ ಹುಯ್ಯೋ ಮಳಿಗೆ ಆಹಾ... ಚಿಂತಿ ಇಲ್ದಿದ್ದ ಹಿತವಾದ ಊಟ.

ಮೀನು ಮಾರ್ಕೆಟಿಗೆ ಹೋಗಿ ಬರಿಗೈಲೇ ಬರ್ವಾಗ ಅಂಗ್ಳ ಗೊಡಿ ದಾಟುತಂಕನೇ, "ಅಮಾ... ಎಂತದ್ದೂ ಸಿಕ್ಲೆಲ್ವೆ. ಒಣಮೀ‌ನ ಅದ್ಯಲೇ, ಒಂದೆರಡ ಕುದಿಸಾಕ," ಅನ್ನುದು ನಮ್ಮೂರ ಮಳೆಗಾಲದ ಕಾಮನ್ ಡೈಲಾಗು.

ಮೀನುಗಾರರೆಲ್ಲ ವರ್ಷ ಇಡೀ ಬುಟ್ಟಿಗಟ್ಲಿ ಮೀನು ಕತ್ತರ್ಸಿ, ತೊಳ್ದು, ಒಣಗ್ಸುಕೆ ಸಾಲುಸಾಲಾಗಿ ಇಡುದೇ ನೋಡುಕ ಚಂದ. ಅದ್ರ ಒಣಾ ಜಾಗದಲ್ಲಿ ಒಣಾ ಚೀಲದಲ್ಲಿ ತುಂಬಿಟ್ರೆ ಮಳೆಗಾಲ ಬಂದಂಗೇ ಮಾರುದು ಅಷ್ಟೇ.

ಅರೆ...! ಹೇಳ್ತಿದ್ದಂಗೆ ಮಳೆ ಬಂದೆ ಬಿಡ್ತು ನೋಡಿ. ಒಂದೆರಡ ಒಣಮೀನು ಒಲೆಗಾಕಬತ್ತೆ ಇರಿ...

ನಿಮಗೆ ಏನು ಅನ್ನಿಸ್ತು?
20 ವೋಟ್
eedina app