ದೇಸಿ ನುಡಿಗಟ್ಟು - ಗದಗ ಪ್ರಾಂತ್ಯ | ಸೂರ್ಯ ಮುಳಗೊ ಹೊತ್ಗೆ ಇರೋ ಬರೋ ದೇವ್ರೆಲ್ಲಾ ಕಾಣ್ಲಿಕ್ಕೆ ಶುರು ಆಗಿದ್ವು!

Agriculture

ಮುಂಜಾನೆ ಎಂಟೊಂಬತ್ತ ಆಗಿತ್ತೇನೋ; ಹೊಲಾ ಮುಟ್ಟಿದ್ವಿ. ಕೂರಗಿ, ಬುಕ್ಕಾ, ಎತ್ತು, ಭೂಮಿಗೆ ಪೂಜೆ ಮಾಡಿ, ಕಾಯಿ ಒಡದು, ಅದನ್ನ ಪ್ರಸಾದ್ ಅಂತಾ ಹಂಚಿ, ಬಿತ್ತು ಕೆಲಸಾ ಚಾಲೂ ಆಗಿತ್ತು. "ಮೊದ್ಲು ಬೀಜಾನೇ ಹಾಕು, ಗೊಬ್ಬರ ಭಾರ," ಅಂದು, ಒಂದು ಉಡಿ ಮಾಡಿ, ಬಿತ್ನಿ ಬೀಜಾ ಒಂದ ಕಾಲ್ಪೊ ಹಾಕಿ ಕೊಟ್ರು. ಭಾರಿ ಹುರುಪಿಂದಾ ಚಾಲೂ ಮಾಡಿದೆ. ಆದ್ರ...

ನಾನು ಸಣ್ಣಕಿದ್ದಾಗ ಹಿಂಗಾ ಅನಕೋತಿದ್ದೆ - ಅರಾಮ ಹೊಲದಾಗ ಕೆಲಸಾ ಮಾಡಕೊಂಡ ಇರತಾರ ಇವರೆಲ್ಲಾ, ಅದಕ ಊರಬಿಟ್ಟು ಬರಂಗಿಲ್ಲಾ ಅಂತ. ನಮ್ಮ ಅಜ್ಜಿನ, ನಮ್ಮ ಮಾಮಾರನ ಬೈಕೋತಿದ್ದೆ. ಒಮ್ಮೆ ಶಾಲಿಗೆ ರಜೆ ಇದ್ದಾಗ ನಮ್ಮ ಮಾಮರ ಹೊಲದಾಗ ಬಿತ್ತು ಕೆಲಸಾ ಭಾರಿ ಜೋರ ನಡೆದಿದ್ದವು. ಮುಂಜಾನಿಂದ ಎಲ್ಲರೂ ಬೀಜ, ಗೊಬ್ಬರ ಬಿತ್ತಾಕ ಕೂರಗಿ, ಎತ್ತು, ಚಕ್ಕಡಿ ತಯಾರ ಮಾಡಕೋತಿದ್ರು. ಈ ಗಡಿಬಿಡಿಯೋಳಗ ಎಷ್ಟ ಮಂದಿ ಆಳ ಮಾಡಿನಿ ಅಂತ ನಮ್ಮ ಮಾಮಾ ಮರತಿದ್ದಾ, ಒಂದಾಳು ಕಡಿಮಿ ಇತ್ತು. ಅಷ್ಟೊತ್ತಿಗೆ ಭಾಳ ವೇಳ್ಯಾ ಆಗಿದ್ದಕ್ಕ ಬೇರೆ ಆಳು ಹುಡಕಿದ್ರೂ ಸಿಗೂ ಗ್ಯಾರಂಟಿ ಇರಲಿಲ್ಲ. ನಮ್ಮ ಮಾಮಾಗ ಆಗ ಕಾಣಸಿದ್ದು ನಾನು! "ಹೇ ಅವ್ವಿ ಅದಾಳಲ್ಲ... ಇವತ್ತೊಂದಿನ ಬಾರವಾ ನಮ್ಮ ಜತಿ. ನೀ ಏನು ಮಾಡುದ ಬ್ಯಾಡ; ಬರೀ ಎತ್ತಿನ ಹಿಂದ ಓಡಾಡಿ ಗೊಬ್ಬರ ಹಾಕುದಷ್ಟ ಕೆಲಸಾ ಮಾಡು, ಏನೂ ಇರೋದಿಲ್ಲ," ಅಂದಾ.

Eedina App

ನಾನ ಮದ್ಲ ಒಲ್ಲೇ ಅಂದೇ. ಮತ್ತ ಎತ್ತಿನ ಹಿಂದ ಓಡಾಡುದಲ್ಲ ಏನ್ ಮಹಾ ಇರತದ ನಡಿರೀ ಹೋಗುಣು ಅಂತ ಸಜ್ಜಾದೇ. ನನ್ನ ಜೋಡಿ ಇನ್ನೊಂದು ಸಣ್ಣ ಹುಡಗಿ ಇತ್ತು. ಅಕಿ ನನಗಿಂತ ಸಣ್ಣಕಿ. ಅಕೀನ ನೋಡಿಂದ ನನ್ನ ಆತ್ಮವಿಶ್ವಾಸ ಇನ್ನು ಜಾಸ್ತಿ ಆತು. "ಹೇ... ಈ ಸಣ್ಣ ಹುಡಗಿ ಬರಾತ್ತದ, ನನಗ ಆಗಲ್ಲೇನು? ನಡೀರಿ ಹೋಗುಣ ನಾನು ಬರತೀನಿ," ಅಂದು ಚಕ್ಕಡಿ ಹತ್ತಿದ್ದೆ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಮೀನು ಪೇಟಿಗೆ ಪೈಸ ಹಾಕ್ಲೆಲ ಅಂದ್ರೆ ಕಡಲ ದಡದಲ್ಲಿ ಹುಟ್ಟಿದ್ದೇ ಸುಳ್ಳು

AV Eye Hospital ad

ಮುಂಜಾನೆ ಒಂದು ಎಂಟೊಂಬತ್ತ ಆಗಿತ್ತೇನೋ; ಹೊಲಾ ಮುಟ್ಟಿದ್ವಿ. ಅಲ್ಲಿ ಹೋಗಿ ಕೂರಗಿ, ಬುಕ್ಕಾ, ಎತ್ತು, ಭೂಮಿಗೆ ಪೂಜೆ ಮಾಡಿ, ಕಾಯಿ ಒಡದು, ಅದನ್ನ ಪ್ರಸಾದ್ ಅಂತಾ ಹಂಚಿ, ಬಿತ್ತು ಕೆಲಸಾ ಚಾಲೂ ಆಗಿತ್ತು. "ಮೊದ್ಲು ಬೀಜಾನೇ ಹಾಕು, ಗೊಬ್ಬರ ಭಾರ ಆಗತದ," ಅಂದು ಒಂದು ಉಡಿ ಮಾಡಿ ಬಿತ್ತಬೇಕಿದ್ದ ಬೀಜಾ ಒಂದ ಕಾಲ್ಪೊ ಹಾಕಿ ಕೊಟ್ರು. ನಾನು ಭಾರಿ ಹುರುಪಿಂದಾ ಚಾಲೂ ಮಾಡಿದೆ. ಕೂರಗಿ ಎಲ್ಲಿ-ಎಲ್ಲಿ ಹೋಗತದೋ ಅದರ ಹಿಂದ ಬೀಜಾ ಹಾಕೋತ ಹೋಗುದು. ಕೆಲಸಾ ಚಾಲೂ ಮಾಡಿ ಸ್ವಲ್ಪ ಹೊತ್ತಾಗಿತ್ತು, ನಮ್ಮ ಮಾಮಾ ಬಂದ. "ಯವ್ವಾ ನೀ ಬಿತ್ತು ಸ್ಪೀಡಿಗೆ ನೆಲದ ಹಸಿ ಒಣತದ. ಬ್ಯಾಡ, ನೀ ಗೊಬ್ಬರಾನೇ ಹಾಕು," ಅಂದು ಉಡಿ ಬೇರೆ ಮಾಡಿದ್ರು.

ನನ್ನ ಜೊತೆಗಿದ್ದ ಹುಡಗಿ ಒಂದ ಪಡಿ ಗೊಬ್ಬರಾ ಹಕ್ಕೊಂಡು ಆರಾಮಾಗಿ ಓಡಾತಿದ್ಲು. ಶಾಲಿಗ ಪಾಠಿಚೀಲಾ ಹಕ್ಕೊಂಡ ಹೋಗಿ ಬಂದು ಎದುಸಿರು ಬಿಡು ನಮಗ, ಉಡಿ ಕಟ್ಟಿ ಹೊಲದಾಗ ಬಿಟ್ಟರ ಹೆಂಗ ಇರಬ್ಯಾಡ? ನನಗ ಅಷ್ಟು ಭಾರಾ ಹೊರೋದ ಆಗಲ್ಲ ಅಂದು, ಎರಡ ಕಾಲ್ಪೋ ಅಷ್ಟ ಗೊಬ್ಬರ ಹಾಕಿ ಕೊಟ್ಟ ನಮ್ಮ ಮಾಮಾ. ಹೊತ್ತು ಹೊದಂಗೆಲ್ಲಾ, "ಎಪ್ಪಾ ಇವರೆಲ್ಲಾ ಹೆಂಗ ಇನ್ನು ಕೆಲಸಾ ಮಾಡಾತ್ತಾರ! ನನಗ ಈಗ ಸಾಕಾತು. ಮ್ಯಾಲ ಸುಡೋ ಬಿಸಲು, ಕೆಳಗ ಬಿಸಿಯಾಗಿದ್ದ ನೆಲಾ, ತಡಾ ಮಾಡಿದ್ರ ನೆಲದ ತಂಪ ಆರತದ ಅನ್ನೊ ಚಿಂತಿ ಬ್ಯಾರೆ…" ಇದರಾಗ ಸಂಜಿ ಆತು. ಅಲ್ಲೊಂದಿಷ್ಟ ಇಲ್ಲೊಂದಿಷ್ಟ ನಾ ಗೊಬ್ಬರಾ ಹಾಕುದ್ರಾಗ, ಅವರು ಅವತ್ತೊಂದ ದಿನಕ್ಕ ನಾಕ ಎಕರೆ ಹೊಲಕ್ಕ ಬೀಜಾ ಬಿತ್ತಿದ್ರು.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ನೆರಳ್, ಹಣ್, ಬೀಜ, ಸೌದಿ ಒಟ್ಟಿಗೆ ಬದ್ಕ್ ಕೊಡ್ತೆ ಇತ್ ಗೊಯ್ ಮರ

ಸೂರ್ಯ ಮುಳಗೊ ಹೊತ್ತಿಗಾಗಲೇ ನನ್ನ ಸಂತಿ ಮುಗದಿತ್ತು. ಕಣ್ಣ ಎದರಿಗೇ ಇರೋ ಬರೋ ದೇವರೆಲ್ಲಾ ಕಾಣಲಿಕ್ಕೆ ಶುರು ಆಗಿದ್ವು. ಸಾಕಾಗಿ, ಚಕ್ಕಡಿ ಹತ್ರ ಕೂತ ನನ್ನ ನೋಡಿದ ನಮ್ಮ ದೊಡ್ಡಪ್ಪ ನಮ್ಮ ಮಾಮಾನ ಮ್ಯಾಲ ಬಾಳ ಸಿಟ್ಟಾಗಿ, ನಮ್ಮ ಮಾಮನ ಬೈದಾ: "ಹೇ ಮತ್ಯಾರು ಸಿಗಲಿಲ್ಲೇನ ನಿನಗ? ನೋಡು ಆ ಹುಡಗಿ ಪಾರಂ ಕೋಳಿಗತೆ, ಒಂದಾ ದಿನಕ್ಕ ಎಷ್ಟ ಸಾಕಾಗ್ಯದ, ಉಳದಿದ ನೀವ್ ಮಾಡಕೊಂಡ ಬರ್‍ರಿ..." ಆಮೇಲೆ ನನ್ನ ಅವರ ಚಕ್ಕಡಿಯೊಳಗ ಕರಕೊಂಡ ಮನಿಗ ಬಂದ್ರು. ಅದಾ ಕೊನೆದು - ಮತ್ ನಾ ಹೊಲಕ ಹೋದದ್ದಿಲ್ಲ. ನಮ್ಮ ಮನ್ಯಾಗ ಮತ್ ಯಾರೂ ನನ್ನ, "ಬಾವಾ ಹೊಲಕ್ಕ," ಅಂತಾನೂ ಕರೀಲಿಲ್ಲ. 

ಅವರು ಮನಿಗ ಬಂದಾಗ ಸಂಜಿ ಆಗಿತ್ತು. ನನ್ನ ಜೊತೆಗಿದ್ದ ಆ ಸಣ್ಣ ಹುಡಗಿ ಪೂರಾ ದಿನಾ ಹೊಲದಾಗ ಎಲ್ಲರ ಸಮಾ ಕೆಲಸಾ ಮಾಡಿ ಬಂದಿತ್ತು. ಹೊಲದ ಹೊರಗ ನಿಂತು ಅದನ್ನ ಮಾಡಿಬಿಡತೀನಿ ಅನ್ನೋ ಮಾತು ಎಷ್ಟ ಆರಾಮಾಗಿ ಬರತದೋ, ಅದರ ಎರಡರಷ್ಟು ಕಷ್ಟ ಹೊಲದ ಕೆಲಸಾ ಮಾಡುದು. ರೈತರ್‍ಯಾರೂ ವಿಜ್ಞಾನಿಗಳಲ್ಲ. ಆದರ ಅವರ ಅನುಭವ ಅದಕ್ಕೂ ದೊಡ್ಡದು.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app