ದೇಸಿ ನುಡಿಗಟ್ಟು - ಮಾಲೂರು ಪ್ರಾಂತ್ಯ | ಗಾಂಧೀ ತಾತುನು ಕಟ್ಟೆ ಪುರಾಣಮು

Gandhi 1

ಮೂಣು ವರ್ಶೂ ಆಯ್ತು ಈ ಕಟ್ಟೆ ಎದ್ದು ನಿಲ್ಲೋಕೆ. ಸರ್ಕಾರನಿಂಚಿ ಒರು ಪೈಸೆ ಕೂಡ ವಾಂಗಾದೆ ಇದ ಕಟ್ಟಿ ಮುಗಿಸಿದ್ದರು. ಶ್ರಮದಾನದ ಮೇಲೆ ಇದ ಕಟ್ಟರೂಕು ರೊಂಡೂ ಪಲ್ಲಿಂಗಾರ್ರೂಕೂ ಪ್ರೋಸ್ತಾಹು ಕುತ್ತು ಪುರುಮಾಯಿಂಚಿಂದಿ ಮಾಸ್ತಿ ಗುಳ್ಳೆಪ್ನು ಅಲ್ಲವಾ... ಆದ್ದರಿಂದ ಆತನ್ನೆ ಕೇಳಿದ್ರು ಜನಗಳು - "ಸೊಣ್ಣಾಣ್ಣ ಗುಳ್ಳೆಪ್ಪ, ಇದುಕು ಏನು ಹೆಸರು ಇಡಮ?"

ಕೋಡೂರು ತಾವ ಒಂದು ಪಾತ ಕಾಲದ ಕಟ್ಟೆ ಅಯ್ತೆ. ಅದಕ್ಕೆ 'ಗಾಂಧೀ ತಾತುನ ಕಟ್ಟೆ' ಅಂತ ಹೆಸರು. ಈ ಹೆಸರು ಹೆಂಗೆ ಬಂತು ಅಂದರ, ಕೋಡೂರುಕ ಪಕ್ಕದೂರು ಲಕ್ಕೂರೂಕ ಮಧ್ಯ ಒಳ್ಳೆ ಮೋಪಾದ ಶರುವು ಅದೆ. ಅದು ಸಾಮಾನ್ಯ ಈ ಸೀಮೇನಾಗೆ ಅಪರೂಪಮಾನ ಏರಿ. ಯಾವ ಕಾಲ್ದಾಗೂ ಈ ಕೆರೆ ಒಣಗುನಿರಲಿಲ್ಲ. ವರ್ಷಾ ಕಾಲ್ದಾಗಂತೂ ತೂಬುಗಳು ಕಿತ್ತುಗೋಬೇಕು; ಹಂಗೆ ಸುರ್ದು ಹೋಗೋದು. ಕೆರೆತಾವ ಶೆನ್ಲು ಇರುವ ಜನಗಳು ಬಾರೀ ತಂಪಾಗಿ ಇರೋರು.

ಈ ಶರುವು ಈ ಕಡೆ ಊರುಕ; ಹಂಗೆ ಆ ಕಡೆ ಊರುಕ ರೆಂಡು ಊರೂಕೂ ಮಂಚಿ ನೀಲ್ಲು ಒದಗಿಸೋದು. ಎರಡೂ ಗ್ರಾಮದ ಸಿರಿಕಿಗಳು ಬಿಂದಿಗೆ ಹಿಡ್ಕಂಡು ವಯ್ಯಾರ ಮಾಡ್ಕಂಡು, ಆಯಾಯ ಏರಿ ಅಂಚುಕಾ ಬಂದು ಹೋಗೋರು. ಎದಿವಿರುವ ಹುಡುಗ್ರು ಇರಲಿ, ಉಕ್ ಫಾರಿನ್‌ಗಳು ಸೈತ ಆ ಸಿರಿಕಿಗಳನ್ನ ನೋಡೋಕೆ ಬೆಮೆ ಪಡೋರು.

ಇಂತ ಶೆರುವು ಎರಡೂ ಗ್ರಾಮಗಳಕ ಕನೆಕ್ಷನ್ ಇಲ್ಲದಂಗೆ ಮಾಡಿತ್ತು. ಕೋಡೂರು ಜನಗಳು ಬೆಂಗಳೂರುಕ ಜಲ್ದಿ ಹೋಗಬೇಕೆಂದರೆ ಆಯ್ತಾ ಇರಲಿಲ್ಲ; ಶರುವು ಅಡ್ಡು ಇರೋದು. ಕೊತ್ತಕೋಟೆ ಪೈನಾ ಅಂದರೆ, ಅದು ಸುತ್ತು ಪೊಡ್ರು ಯ್ಯಾಲೆ - ಕಸ್ಟು. ಆದ್ರೂ ವೆರೆ ವಯ್ಯಿಲ್ಲೆ. ಕೋಡೂರುಕು ಲಕ್ಕೂರೂಕು ಅಡ್ಡು ಇರುವ ಈ ಶೆರುವುಕ ಒರು ಕಟ್ಟೆ ಕಟ್ಟುವ ಯೋಸನೆ ರೊಂಡು ಪಲ್ಲೆಂಕಾರ್ರುಕೂ ವರ್ಕಿತ ಬಂತು. ಅದು ಬರ್ರುಕೂ ಕಾರಣು ಮಾಸ್ತಿ ಗುಳ್ಳೆಪ್ನು.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಚಿತ್ರದುರ್ಗ ಪ್ರಾಂತ್ಯ | ಇಂತ ಅಜ್ಜೀರು ರಷ್ಯಾದಲ್ಲೋ ಉಕ್ರೇನಲ್ಲೋ ಇದ್ದಿದ್ರೆ ಬರೀ ಪ್ರೀತಿ ಬೆಳೇನೆ ಬೆಳ್ದಿರೋರು

ಈ ಗುಳ್ಳೆಪ್ನು ಗಾಂಧೀ ಕಾಲದ ಮನಿಷಿ. ಪಲ್ಲೆಗಳನ್ನ ಶ್ರಮದಾನನಿಂಚೆ ಉದ್ಧಾರ ಮಾಡಬೋದು ಅಂತ ಕ್ಯಾಲಿದ್ನು. ರೊಂಡೂ ಪಲ್ಲೆಗಳ ಕುಲಸ್ತ್ರನ್ನು ಒಟ್ಟು ಮಾಡಿದ ಈ ಕಾಂಗ್ರೆಸ್ ಮನಿಷಿ, ಒಂದು ಮೋಪಾದ ಭಾಷಣವೆ ಶೇಷಾ.

ತರ್ವಾತ...

ರೊಂಡೂ ಪಲ್ಲಿಂಕಾರ್ರೂ ಯಜಮಾನ್ರು ಒರ್ ತೊಟ್ಟು ಸೇರಿ ಪೇಸಿಕತೆ ಮಾಡಿದ್ರು. ರೊಂಡು ಊರು ಕಲಿಸೆ ಅಟ್ಲು ಶೆರುವುಕಾ ಒರು ಕಟ್ಟೆ ಕಟ್ಟಬೇಕು ಅಂತಾ ತೀರ್ಮಾನು ಆಷಿ.

ನೆಕ್ಸ್ಟು ಎನ್ನಾ ಅನ್ನೇಕೆ...

ರೊಂಡೂ ಪಲ್ಲಿಂಕಾರ್ರೂ ವಕಟಿ ಆಗಿ ಕಟ್ಟೆ ಕಟ್ಟೋಕೆ ಇಂಟಿಇಂಟಿನಿಂಚಿ ವಕ ಮಗಾಡು, ವಕ ಆಡಿದಿ ಬರಬೇಕು ಅಂತ ಆಯ್ತು. ಅಪ್ಪಡೆ ಎಲ್ಲರೂ ಬಂದರು. ಪಳ್ಳಿಗ್ರು, ರೆಡ್ಡಿಗಳು, ಕುಡಿಯಾನ್ರು, ಗಾಣಿಗ್ರು, ವನ್ನಾರ್ರು, ಮಾದಿಗ್ಯಾಂಗ, ಪರೀರು... ಹೀಗೆ ಎಲ್ಲ ಜಾತಿಜನಗಳು ವಕಟೈಯಿ ಈ ಕಟ್ಟೆ ಕಟ್ಟುವ ಜಂಬ್ರಕ್ಕೆ ರೆಡಿಯಾದ್ರು.

ಕಟ್ಟೆ ಕಟ್ಟೋಕೆ ಬೇಕಾದ ಕಲ್ಲುಗಳು, ಬೋಟುಕಲ್ಲುಗಳು, ಸಿಮೆಂಟು, ಜಲ್ಲಿ, ಮರಲು, ಕಬ್ಬಿಣ... ಹೀಗೆ ಎಲ್ಲವೂ ವಟ್ಟಾದವು. ರೊಂಡೂ ಗ್ರಾಮತ್ತಾಕಾರ್ರೂ ಇದಕ್ಕೆ ಆಗೋ ಖರ್ಚು ಹಾಕಂಡ್ರು. ಕೆಲಸಗಳು ಮಸಲಿಕ್ಕೆ ಶುರು ಆಗೋದು, ಪೈದಾಂಚಾಯತನಕ ನಡೆಯೋದು.

Image
Gandhi 3

ಕಲ್ಲು ಹೊಡೆಯೋದು, ಬೋಟುಕಲ್ಲುಗಳನ್ನ ವಕತೊಟ್ಟು ಕೂಡಿದೊಡು. ಸಿಮೆಂಟು ಕೆಲಸ, ಮಣ್ಣು ಕಲೆಸೋದು ಇವೆಲ್ಲಾ ಮಗೊಳ್ಳ ಪನಿ; ಬಾಂಡ್ಲಿಗಳಲ್ಲಿ ಕಲೆಸಿದ ಮಣ್ಣು, ಸಿಮೆಂಟು ತಲ್ಕಾಯಿ ಮೇಲೆ ಹೊತ್ತುಕೊಂಡು ಕಟ್ಟೆತೊಟ್ಟು ಹೋಗೋದು ಪಂಜೇದಿಗ ಪಂಗ.

ಒರೋರು ಕಿತ್ತ ಪುಳ್ಳಿಕುಟ್ಟಿ ಕೂಡ ಈ ಕಟ್ಟೆ ಕಟ್ಟೋಕೆ ಬರೋರು. ಅವು ಸುಮ್ಮುಕ ನೋಡೋಕೆ ಬರೋವು. ಜನಗಳು, "ಏಯ್! ಎತ್ತ್ರಾ ರಾಯಿ," ಅಂತಾನೋ, "ಪುಡ್ರಾ ಶೆಣಿಕೆ," ಅಂತಾನೋ ಹೇಳಿ, ಅವೂ ಪಂಗ ಮಾಡೋ ಹಾಗೆ ಮಾಡೋರು.

ಜನಗಳು ಒಟ್ಟಗ ಈ ಪಂಗ ಮಾಡ್ತಾ ಇದ್ರೂ ಕಳಿ-ಸೋರು ಮಾತ್ರ ಅವರವರ ವೂಟ್ಲೇ ಆಗಬೇಕು. ಒರು ವೇಳೆ, ಕಳಿ-ಸೋರು ಕಟ್ಟಿತಾಕು ಕಟ್ಟಿಕೊಂಡು ಬಂದರೆ, ಅವರು ಆಗಂಗಾ ಜಾತಿ ಕೂಡೆ ತಿನ್ನಬೇಕು. ಯ್ಯಾಲೆಮಟ್ಟು ಒಟ್ಟಾ ಮಾಡೋರು. ವಡ್ಡ ಪನಿ ಏನಿದ್ರೂ ಪರೀರೂ ಮಾದಿಗ್ರೂದು. ಶೆನಿಕೆ ಗುದ್ದಲಿ ಕೆಲಸ ಪಳ್ಳಿಗುರ್ರುದು. ಕುಡಿಯಾನ್ರು ರೆಡ್ಡಿವಾಳ್ಳು ಪಂಗ ಹೇಗೆ ನಡೀತಾ ಇದೆ ಅಂತ ನೋಡೋರು. ವನ್ನಾರ್ರೂ ಈ ಕೆಲಸಗಳು ಮಾಡೋರಿಗೆ ಸಣ್ಣ-ಪುಟ್ಟ ಸಹಾಯ ಮಾಡೋರು. ಹೆಂಗಸ್ರು ಎಲೆ-ಅಡಿಕೆ ಹಾಕ್ಕಂಡು ನಾಲ್ಗೆನಾ ಆಗಾಗ ನೋಡೋರು. ಮಗ ಜಾತಿ ಬೀಡಿ ಸಿಗರೇಟು. ಪಂಗದ ಆಯಾಸ ಕೊರೆಯುತ್ತಿತ್ತು ಈ ಆಡ-ಮಗವಾಳ್ಳ ಜಲಸಾಗಳಿಂದ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಆನೇಕಲ್ ಪ್ರಾಂತ್ಯ | ನಮ್ ಮನೆಯಾಗಿನ ಮನ್ಷನ ತರ ಇದ್ದ 'ರಾಮು' ಕತೆ

ಮೂಣು ವರ್ಶೂ ಆಯ್ತು ಈ ಕಟ್ಟೆ ಎದ್ದು ನಿಲ್ಲೋಕೆ. ಸರ್ಕಾರನಿಂಚಿ ಒರು ಪೈಸೆ ಕೂಡ ವಾಂಗಾದೆ ಇದ ಕಟ್ಟಿ ಮುಗಿಸಿದ್ದರು. ಶ್ರಮದಾನದ ಮೇಲೆ ಇದ ಕಟ್ಟರೂಕು ರೊಂಡೂ ಪಲ್ಲಿಂಗಾರ್ರೂಕೂ ಪ್ರೋಸ್ತಾಹು ಕುತ್ತು ಪುರುಮಾಯಿಂಚಿಂದಿ ಮಾಸ್ತಿ ಗುಳ್ಳೆಪ್ನು ಅಲ್ಲವಾ... ಆದ್ದರಿಂದ ಆತನ್ನೆ ಕೇಳಿದ್ರು ಜನಗಳು - "ಸೊಣ್ಣಾಣ್ಣ ಗುಳ್ಳೆಪ್ಪ, ಇದುಕು ಏನು ಹೆಸರು ಇಡಮ ಅಂತ?"

ಗುಳ್ಳೆಪ್ನೂ ಎರಡು ಮಿನಿಟು ಯೊಸನೆ ಮಾಡಿ ಹೇಳಿದನು: "ಗಾಂಧೀ ತಾತುನ ಮಾತುನ ನಾನು ತಂದು ಇಲ್ಲಿ ಹಾಕಿದೆ. ನೀವು ಗ್ರಾಮದ ಜನಗಳು ಎಲ್ಲ ಕಲೆಸಿ ಈ ಪನಿ ಸಾಂಗ್ಯಮ ಮಾಡಿದ್ದೀರಾ! ಇದರಲ್ಲಿ ನನ್ನದೇನೂ ಇಲ್ಲ. ನಾವೆಲ್ಲಾ ಕಲೆಸಿ ಈ ಕಟ್ಟೆಗಾ 'ಗಾಂಧೀ ತಾತುನ ಕಟ್ಟೆ' ಅಂತ ಇಡುಮಾ."

ರೊಂಡೂ ಪಲ್ಲೇಳ್ಳೂ, "ಔನ್..! ಔನು..!” ಎಂದರು, ಕೂಟಮ. ಇದು ನೋಡಿ - ಗಾಂಧೀ ತಾತುನ ಕಟ್ಟೆ ಪುರಾಣಮು.

ಕಲಾಕೃತಿ ಕೃಪೆ: ರಾಮ್ ಸುತಾರ್
ನಿಮಗೆ ಏನು ಅನ್ನಿಸ್ತು?
4 ವೋಟ್
Image
av 930X180