ದೇಸಿ ನುಡಿಗಟ್ಟು - ದಕ್ಷಿಣ ಕನ್ನಡ ಸೀಮೆ ಹವ್ಯಕ | ಇಂದಿಂಗೂ ಊರು ಹೇಳ್ರೆ ಅಜ್ಜನ ಮನೆ‌ ನೆನಪೇ ಅಪ್ಪದು

ಮಾಂಬಳ, ಸಾಂತಣಿ, ನೀರುಳ್ಳಿ ಬಜೆ, ಗೋಳಿಬಜೆ, ಸುಟ್ಟವು... ಹೀಂಗೆ ತಿಂಬಲೆ ಎಷ್ಟೂ ಬಗೆ ಮಾಡುಗು ಅಜ್ಜಿ. ಅಜ್ಜನ ಮನೆಗೆ‌ ಬಂದಿಪ್ಪಗ ಪುಳ್ಳಿಯಕ್ಕ ಗೌಜಿ ಮಾಡೆಕ್ಕು ಹೇಳುದು ಅಜ್ಜಿಯ ತತ್ವ. ಎನ್ನ ಅಜ್ಜನ ಆನು ನೋಡಿದ್ದೇ ಇಲ್ಲೆ. ಯಕ್ಷಗಾನ ಕಲೆಯ ಕೃಷಿ ಒಟ್ಟಿಂಗೆ ಅಡಕೆ ಕೃಷಿಯೂ ಮಾಡಿ, ಪ್ರತಿಭೆಗಳ ಗುರುತಿಸಿ ಪೋಷಿಸಿದ ಅಜ್ಜಂಗೆ ಹೇಳಿಮಾಡಿಸಿದ ಜೋಡಿ ಎನ್ನ ಅಜ್ಜಿಯೇ

"ಮಗಳೋ... ಕೇಳ್ತಾ? ಉದಿಯಪ್ಪಂದ ಹನಿಕಡೆಯದ್ದೆ ಮಳೆ ಬತ್ತಾ ಇದ್ದು. ಕಸ್ತಲೆ ಕಟ್ಟಿದ್ದು... ಹಲೋ... ಮಗಳು... ಕೇಳ್ತಾ...?" ಹೇಳಿ ಅಮ್ಮ ಫೋನಿಲ್ಲಿ ಬೆಂಗಳೂರಿಲಿ ಇಪ್ಪ ಎನ್ನೊಟ್ಟಿಂಗೆ ಮಾತಾಡಿಯೊಂಡಿಪ್ಪಗ, ಈಚೆ ಹೊಡೆಯಿಂದ, "ಹಲೋ..." ಹೇಳಿಯಪ್ಪಗಳೇ ಫೋನು ಕಟ್ ಆತು.

ಬೇಸಗೆಲಿ ಮಾಡಿದ ಹಪ್ಪಳ, ಸೆಂಡಗೆ ಉಳುದ್ದ ಹೇಳಿ ಕೇಳೆಕ್ಕೂಳಿ ಇತ್ತಿದ್ದೆ... ಇರಲಿ. ಆನು ಬೆಳೆದ್ದು ಮೈಸೂರಿಲಿ‌ ಆದರೂ ನಮ್ಮ ಊರಿನ ಮಳೆ ಎನಗೆ ಹೊಸತಲ್ಲ. ರಜೆಲಿ ಅಜ್ಜನ ಮನೆಲಿ ಅಜ್ಜಿ ಮಾಂಬಳ, ಸಾಂತಣಿ, ಹಪ್ಪಳ ಮಾಡುಗು. ಅದರ ನೋಡ್ಲೆ, ಕೈ ಸೇರ್ಲೆ ನವಗೆ ಭಾರೀ ಖುಷಿ.

ಮೈಸೂರಿಲಿ ಶಾಲೆಗೆ ಹೋಗಿಯೊಂಡಿಪ್ಪಗ ಬೇಸಗೆ ರಜೆ‌ ಏವಗ ಬಪ್ಪದು, ಕೆಂಪು‌ ಬಸ್ಸಿಲಿ‌ ಊರಿಂಗೆ ಏವಗ ಹೋಪದು ಹೇಳುವ ಲೆಕ್ಕಾಚಾರಲಿಯೇ ವರಗದ್ದೆ ದಿನ ಎಣಿಸುದು. ರಜೆಲಿ ಮನೆಲಿ (ಅಪ್ಪನ ಮನೆ) ಎಷ್ಟು ದಿನ, ಅಜ್ಜನ ಮನೆಲಿ ಎಷ್ಟು ದಿನ ಹೇಳಿ ಮನಸ್ಸಿಲಿಯೇ ಗ್ರೇಶಿಗೊಂಬದು. ಅಪ್ಪನ ಮನೆಲಿ ಆಟ ಆಡ್ಲೆ ಅಪ್ಪಚ್ಚಿ‌ ಮಕ್ಕ ಇದ್ದವು. ಅಜ್ಜನ ಮನೆಲಿ ಮಾವನ ಮಕ್ಕ, ಕತೆ ಹೇಳುಲೆ ದೊಡ್ಡಮ್ಮನ ಮಕ್ಕ ಅಕ್ಕಂದಿರು ಇವೆಲ್ಲ ಇಕ್ಕು. ಅಜ್ಜನ ಮನೆಲಿ ಮದಲಿಂದಲೂ ಜನಂಗ ಹೆಚ್ಚು. ಅಜ್ಜಂಗೆ ಒಟ್ಟು 11 ಜೆನ‌ ಮಕ್ಕ. ಅಜ್ಜನ‌ ಮನೆ ಅಜ್ಜಿ ಎನಗೆ ರೆಜ ಹತ್ತರೆ. ಎಲ್ಲೊರಿಂಗೂ ಸಾಧಾರಣಲಿ ಅಜ್ಜನ ಮನೆ ಹತ್ತರೆ ಇರ್ತು. ಸಣ್ಣ ಇಪ್ಪಗ ಸೋದರ ಮಾವಂದಿರು ಕೊಂಡಾಟ ಹೆಚ್ಚು ಮಾಡಿಯೊಂಡಿರ್ತವನ್ನೆ!

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಬಾವಿಕಟ್ಟಿ ಮ್ಯಾಲ ಪಟಗದ ಅಜ್ಜ, ಬಾವಿ ಒಳಗ ಮೈ ಮ್ಯಾಲ ದೆವ್ವ ಬರ್ತಿದ್ದ ಸೊಸಿ

ಅಪ್ಪನ ಮನೆಲಿ ಹವ್ಯಕ ಭಾಷೆ ಬೇರೆ ನಮೂನೆ ಮಾತಾಡುಗು.‌ ಸಣ್ಣ ಇಪ್ಪಗ, "ಇವು ಯಾವ ಭಾಷೆ ಮಾತಾಡುದಪ್ಪ! ಇವು ಹವ್ಯಕರು ಅಲ್ಲಾ ಕಾಣ್ತು ಬಹುಶಃ..." ಹೇಳಿ ಸುಮಾರು ಸರ್ತಿ ಗ್ರೇಶಿದ್ದೆ ಆತ? ಅಬ್ಬೆ‌ (ಅಮ್ಮನ ಅಬ್ಬೆ ಹೇಳ್ತು) ಹತ್ರೆ ಕೇಳುವಗ, ಪಂಜ ಸೀಮೆಲಿ ಹೀಂಗೆ ಮಾತಾಡ್ತವು. ಕನ್ನಡಲ್ಲಿ ಹೇಂಗೆ ಪ್ರಾದೇಶಿಕವಾಗಿ ಬೇರೆ‌-ಬೇರೆ ವೈವಿಧ್ಯಂಗ ಇದ್ದೋ ಹಾಂಗೆಯೇ ಹವ್ಯಕ ಭಾಷೆಲಿಯುದೇ ಬೇರೆ ನಮೂನೆಗೋ ಇದ್ದು ಹೇಳಿತ್ತು ಅಬ್ಬೆ. ಹೋವುಕ್ಕದೆ (ಹೋಪಲಿದ್ದು), ಬರುಕ್ಕದೆ (ಬಪ್ಪಲ್ಲಿದ್ದು) ಹೇಳಿ ಅಪ್ಪ ಅಪ್ಪಂಚಿಯೊಟ್ಟಿಂಗೆಲ್ಲ ಮಾತಾಡುಗು. ಎಬೇ! ಆರಪ್ಪ ಈ ಭಾಷೆ ಕಂಡುಹಿಡ್ದು! ಎಷ್ಟೆಲ್ಲ ನೆಂಪು ಮಡಿಕ್ಕೊಂಡು ಮಾತಾಡೆಕ್ಕಪ್ಪ. ಎಲ್ಲೊರಿಂಗು ಒಂದೇ ಭಾಷೆ‌ ಇಪ್ಪಲಕ್ಕಲ್ದಾ...? ಹೀಂಗಿಪ್ಪ ಯೋಚನೆಗೋ ಅಂಬಗ ಬಕ್ಕು! ಇದನ್ನೆ‌ ಅಜ್ಜಿ ಹತ್ರೆ ಒಂದರಿ ಕೇಳಿತಿದ್ದೆ.

ಅಜ್ಜನ ಮನೆ ಯಕ್ಷಗಾನ ಮನೆತನ ಆದ್ದರಿಂದ ಎನ್ನಲ್ಲೂ ಕಲೆಯ ಬಗ್ಗೆ ಭಾರೀ ಪ್ರೀತಿ. ಅದರದ್ದೇ ಒಂದು‌ ಉದಾಹರಣೆ ಅಜ್ಜಿ ಕೊಟ್ಟಿತ್ತಿದ್ದವು. "ಬಾಲ ಕೃಷ್ಣನ ಪಾತ್ರ ನಿನಗೆ ಅಥವಾ ಸುಮಾರು ಮಕ್ಕೊಗೆ ಇಷ್ಟ ಹೇಳಿ, ಎಲ್ಲಾ ಪಾತ್ರಂಗ ಬರೇ ಕೃಷ್ಣ ಆದರೆ ನೀನು ಅಂದ್ರಾಣ ಪ್ರಸಂಗ ನೋಡುವೆಯೋ ಪುಳ್ಳಿ? ನಿನಗೆ ಬೊಡಿಗು. ಅಪ್ಪೋ, ಅಲ್ಲದೋ? ಒಂದು ಪ್ರಸಂಗ ಹೇಳಿ ಅಪ್ಪಗ ಹೇಂಗೆ ಬೇರೆ-ಬೇರೆ ಪಾತ್ರಂಗ ಇದ್ದರೆ ಅದಕ್ಕೊಂದು ಬೆಲೆ ಇಪ್ಪದೋ, ಹಾಂಗೇ ಒಂದು ಊರು ಹೇಳ್ರೆ ವಿವಿಧ ಭಾಷೆಗೋ ಇರೆಕ್ಕು. ವೈವಿಧ್ಯತೆಯ ಒಳ ಏಕತೆ ಕಾಂಬ ದೇಶ ಅಲ್ಲದೋ ನಮ್ಮದು?" ಹೇಳಿ ಅಜ್ಜಿ ಕೇಳ್ವಾಗ ಅಪ್ಪು ಅನ್ನಿಸಿದ್ದು ಸುಳ್ಳಲ್ಲ. ಅಜ್ಜಿಗೆ ಏವ ಡಿಗ್ರಿಯೂ ಇಲ್ಲೆ..ಆದರೆ ಬುದ್ಧಿವಂತಿಕೆ‌ ಹೆಚ್ಚು‌ ಕಲ್ತವಕ್ಕೂ ಇರ, ಹಾಂಗಿತ್ತಿದ್ದವು ಎನ್ನಜ್ಜಿ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಸೀಮೆ | ಸಿಂತಮಾನು ತೋಪು ಮತ್ತು ಉಬೇದುಲ್ಲಾನ 'ಜೈ ಕರ್ನಾಟಕ'

ಮಾಂಬಳ, ಸಾಂತಣಿ, ನೀರುಳ್ಳಿ ಬಜೆ, ಗೋಳಿಬಜೆ, ಸುಟ್ಟವು... ಹೀಂಗೆ ತಿಂಬಲೆ ಎಷ್ಟೂ ಬಗೆ ಮಾಡುಗು ಅಜ್ಜಿ. ಅಜ್ಜನ ಮನೆಗೆ‌ ಬಂದಿಪ್ಪಗ ಪುಳ್ಳಿಯಕ್ಕ ಗೌಜಿ ಮಾಡೆಕ್ಕು ಹೇಳುದು ಅಜ್ಜಿಯ ತತ್ವ. ಎನ್ನ ಅಜ್ಜನ ಆನು ನೋಡಿದ್ದೇ ಇಲ್ಲೆ. ಯಕ್ಷಗಾನ ಕಲೆಯ ಕೃಷಿ ಒಟ್ಟಿಂಗೆ ಅಡಕೆ ಕೃಷಿಯೂ ಮಾಡಿ, ಹಲವಾರು ಪ್ರತಿಭೆಗಳ ಗುರುತಿಸಿ, ಪೋಷಿಸಿದ ಎನ್ನ‌ ಅಜ್ಜಂಗೆ ಹೇಳಿಮಾಡಿಸಿದ ಜೋಡಿ ಎನ್ನ ಅಜ್ಜಿಯೇ. ಎಲ್ಲಿಯೋ ಓದಿದ್ದು ನೆಂಪಾವ್ತು... "ಒಬ್ಬ ಸ್ಟಾರ್ ಆಗಿ ನಿಭಾಯಿಸುದರಿಂದಲೂ, ಆತನ (ಆಕೆಯ) ಪತ್ನಿ/ಪತಿ ಆಗಿ ನಿಭಾಯಿಸುವುದು ಕಷ್ಟ." ಎಂತಕೆ ಈ ಮಾತು ಹೇಳ್ತೆಳ್ರೆ, ಅಜ್ಜ ಸಾಮಾಜಿಕವಾಗಿ ಗುರುತಿಸಿಕೊಂಡಂತ ವ್ಯಕ್ತಿ. ಗೆಳೆಯರ ಬಳಗವುದೇ ಹೆಚ್ಚು. ಬಂದ ಜನಂಗೊಕ್ಕೆ ಸ್ವತಃ ಅಜ್ಜಿ ಅಡುಗೆ ಮಾಡಿ ಉಣಬಡಿಸಿದ್ದು ಗ್ರೇಶೀರೆ ಆಶ್ಚರ್ಯ ಆವ್ತು. ಬರೇ‌ ನೆಂಟ್ರ ಪೋಚಕನ ಮಾಂತ್ರ ಅಲ್ಲ. ಏಳು ಗೆಂಡು, ನಾಲ್ಕು ಕೂಸುಗಳ ಹೆತ್ತು, ಅವರನ್ನೂ‌ ಸಮಾಜಕ್ಕೆ ಉನ್ನತ ವ್ಯಕ್ತಿಗಳನ್ನಾಗಿ ಕೊಟ್ಟದ್ದರಲ್ಲಿ ಬಹುಪಾಲು ಅಜ್ಜಿಗೇ‌ ಸೇರೆಕ್ಕು. ಒಂದು ಹೆಮ್ಮಕ್ಕೊ ಸಂಸಾರ ಜೀವನ ಮಾಂತ್ರ ಅಲ್ಲ, ಸಾಮಾಜಿಕವಾಗಿಯುದೇ ಮುಂದೆ ಇಪ್ಪಲಕ್ಕೂ ಹೇಳುದಕ್ಕುದೆ ಎನ್ನ ಅಜ್ಜಿ ಆದರ್ಶಪ್ರಾಯ. ಪದ್ಯ ರಚನೆ ಕೂಡ ಮಾಡುಗು. ಅಜ್ಜಿಯ ಬಗ್ಗೆ ಎಷ್ಟು ಹೇಳಿರುದೆ ಕಡಮ್ಮೆಯೇ.

ಮೈಸೂರಿಂದ ಊರಿಂಗೆ ಅಪ್ಪ-ಅಮ್ಮ ಬಂದು ಹತ್ತೊಂಬತ್ತು ವರ್ಷ ಕಳೆದರೂ, ಇಂದಿಂಗೂ ಊರು ಹೇಳ್ರೆ ಅಜ್ಜನ ಮನೆ‌ ನೆನಪೇ ಅಪ್ಪದು. ಅದರಲ್ಲಿಯೂ ಅಜ್ಜಿಗೇ ಅಗ್ರಸ್ಥಾನ. ಅಂದಾಂಗೆ ಎನ್ನ ಅಜ್ಜಿ ಆರಪ್ಪ ಹೇಳಿ ನಿಂಗಳ ಮನಸ್ಸಿಲ್ಲಿ ಪ್ರಶ್ನೆ ಬಯಿಂದು ಹೇಳಿ ಆದರೆ ಈಗ ಅದಕ್ಕುತ್ತರ ಹೇಳ್ತೆ... ಪರಮೇಶ್ವರಿ ಅಮ್ಮ. ಮರಕ್ಕಿಣಿಲಿ ಹುಟ್ಟಿ ಕಿರಿಕ್ಕಾಡಿಂಗೆ ಮದುವೆ ಆಗಿ ಬಂದವು. ಅಜ್ಜಿಯ ಬಗ್ಗೆ ಎಷ್ಟು ಬರೆದರೂ ಮುಗಿಯ. ಅಜ್ಜಿಯ ಒಟ್ಟಿಂಗೆ ಹಲವಾರು ತಮಾಷೆಯ ಪ್ರಸಂಗ ಇದ್ದು. ಇನ್ನೊಂದರಿ ಹೇಳ್ತೆ... ಕಾಂಬ.

ನಿಮಗೆ ಏನು ಅನ್ನಿಸ್ತು?
1 ವೋಟ್