ದೇಸಿ ನುಡಿಗಟ್ಟು - ಕುಮಟಾ ಸೀಮೆ | ಬೆಟ್ಟದ ಒರಗಿಂದ ಒಸರಿದ ಚೊಕ್ಕ ನೀರಲ್ಲಿ ಬಾವಿಗೆ ಬಿದ್ದ ಸೂಜಿನೂ ಕಾಣ್ತದೆ!

ಪಕ್ಕಾ ನೀರಿನ ಬಾವಿ ನೋಡುದಿದ್ರೆ ನಮ್ಮೂರಿಗೆ ಬರ್ಬೇಕು ನೀವು. ಅಂಗಳದ ಹತ್ರನೇ ಮನೆಗೊಂದೊಂದು ಅಗಲ ಬಾವಿ, ಹತ್ತು ಫೂಟು ಹಗ್ಗದಲ್ಲಿ ಸೇದಿನೇ ತೆಗಿಯೊಷ್ಟು ಮ್ಯಾಲೇ ನೀರು. ಏಪ್ರಿಲ್-ಮೇ ತಿಂಗ್ಳಿನ ಬಿರುಬಿಸ್ಲಲ್ಲಿ ಹನಿ ನೀರಿಗೂ ತೊಂದ್ರಿ ಆಗುದಿಲ್ಲ. ಮಳಿಗಾಲ್ದಲ್ಲಂತೂ ಹಗ್ಗನೂ ಬ್ಯಾಡ; ಕೈಯಲ್ಲೇ ಮೊಗದು ತೆಗಿಯೊಷ್ಟು ಮ್ಯಾಲೇ ಬಂದಿರ್ತದೆ

ಈಗಂತೂ ಜಗತ್ನಲ್ಲಿ ಎಲ್ನೋಡಿದ್ರೂ ಕುಡಿಯು ನೀರಿಗೆ ಬಾಳ ಕಷ್ಟ. ಸಣ್ಣ ಬಾವಿ, ಹೊಂಡ, ಕೆರೆ ಕಾಲ ಎಲ್ಲ ಮುಗ್ದು, ಎಂಟನೂರ ಪೂಟು - ಸಾವಿರ ಪೂಟುಗಟ್ಟಲೇ ಬೋರ್ ತೆಗ್ದರೂ ತಳದಲ್ಲೂ ಹನಿ ನೀರು ಕಾಣದೇ ಮುಚ್ಚಾಕು ಕಾಲ ಇದು. ನೀರ ಬಂದ್ರೂವಾ ಅದ್ನೆಲ್ಲ ನೀರಿನ ಬಾವಿ ಅನ್ನುಕೆ ಆಗುದೇ ಇಲ್ಲ.

Eedina App

ಪಕ್ಕಾ ನೀರಿನ ಬಾವಿ ನೋಡುದಿದ್ರೆ ನಮ್ಮೂರಿಗೆ ಬರ್ಬೇಕು ನೀವು. ಅಂಗಳದ ಹತ್ರನೇ ಮನೆಗೊಂದೊಂದು ಅಗಲ ಬಾವಿ, ಹತ್ತು ಫೂಟು ಹಗ್ಗದಲ್ಲಿ ಸೇದಿನೇ ತೆಗಿಯೊಷ್ಟು ಮ್ಯಾಲೇ ನೀರು. ಏಪ್ರಿಲ್-ಮೇ ತಿಂಗ್ಳಿನ ಬಿರುಬಿಸ್ಲಲ್ಲಿ ಹನಿ ನೀರಿಗೂ ತೊಂದ್ರಿ ಆಗುದಿಲ್ಲ. ಮಳಿಗಾಲ್ದಲ್ಲಂತೂ ಹಗ್ಗನೂ ಬ್ಯಾಡ; ಕೈಯಲ್ಲೇ ಮೊಗದು ತೆಗಿಯೊಷ್ಟು ಮ್ಯಾಲೇ ಬಂದಿರ್ತದೆ. ನೀರು ನೋಡ್ಬೇಕು - ಬೆಟ್ಟದ ಒರಗಿಂದ ಒಸರಿದ ಚೊಕ್ಕ ನೀರಲ್ಲಿ ಬಾವಿಗೆ ಬಿದ್ದ ಸೂಜಿನೂ ಕಾಣ್ತದೆ!

ಬಾವಿ ಅಂದ್ಕೂಡ್ಲೆ ನೆನಪಾಯ್ತ... ನಾವೆಲ್ಲ ಸಣ್ಣೋರಿದ್ದಾಗ ನಲ್ಲಿ, ಪಂಪಸೆಟ್ಟು ಇಂತದ್ದೆಲ್ಲ ಏನೂ ಇಲ್ಲ. ಅದು ಸಾಯ್ಲಿ, ಬಾವಿಗೆ ಒಂದು ಗಡಗಡಿನೂ ಇರುದಿಲ್ಲಾಗಿತ್ತ. ತುಂಬಿದ ಬಾವಿಗೆ ಮೂರು ದಪ್ಪ ಮರದ ದಂಡಿಗೆ ಹಾಕಿಡ್ತಿದ್ರು; ಅದ್ರ ಮ್ಯಾಲ ನಿಂತ್ಕಂಡೇ ಕೊಡದ ಕುತ್ತಿಗೆಗೆ ಹಗ್ಗ ಸುತ್ತಿ ಬಿಡುದು, ತುಂಬಿದ ಕೊಡ ಎತ್ತಿ ಎಳಿಯುದು.

AV Eye Hospital ad

ಪಾತ್ರೆ ತೊಳುಕೆ, ವಸ್ತ್ರ ಸಳುಕೆ, ತೆಂಗಿನ ಮರಕ್ಕೆ ಹೊಯ್ಯುಕೆ, ದನಕ್ಕೆ ಕುಡಿಯುಕೆ ಎಲ್ಲ ಕೈಯಲ್ಲೇ ಸೇದುದಾಗಿತ್ತು. ಮನೆಲಿ ನಾಕ ಹೆಣ್ಮಕ್ಳಿದ್ರೂ ದಿನಕ್ಕೆ ಒಬ್ಬೊಬ್ರು ಐವತ್-ಅರವತ್ತ ಕೊಡನಾದ್ರೂ ಸೇದ್ಬೇಕಾತಿತ್ತು. ನೀರು ಸೆಯ್ಯೋ ಹೆಣ್ಮಕ್ಳೆಲ್ಲ ಸಂಜಿತಂಕನೂ, "ಯೇ ಅಟ್ಟೆಲ್ಲ ನೀರ ಹಾಳ್ಮಾಡ್ಬೆಡ್ರಾ..." ಅಂದ್ಕಂಡಿ, ಮನಿಲಿದ್ದೋರಿಗೆ ಇಡೀ ದಿನ ಬೈತೇ ಇರುದೇ ಆಗಿತ್ತು.

ಒಂದೊಂದ ಸಲ ಬಾವಿಗೆ ಕಾಲ ಜಾರಿ ಬೀಳುದು, ದಂಡಿಗಿ ಮುರ್ದ ಬೀಳುದು, ಬಾಳ ಏನಾರೂ ಜಗಳಾದಾಗ ಪಟ್ಟನೆ ಹಾರೂಕೂ ಮನಿ ಮುಂದೆ ಇರು ಬಾವಿನೇ ಸಿಗುದೂ ಸಮಸ್ಯೆ ಆಗುದಿರ್ತಿತ್ತು. ಒಬ್ಬೊಬ್ರು ಮಕ್ಕಳ ಓಡಾಡು ಜಾಗ ಹೇಳಿ, ಮತ್ತೆ ಕಸನೂ ಬೀಳ್ತದೆ ಹೇಳಿ ಬಲೆ ಹಾಕಿಡುದೂ ಇರ್ತಿತ್ತು.

ಇಂತ ಬಾವಿ ಒಳ್ಗೆ ಗಿಡನೂ ಬೆಳ್ದು ಕೋಮ, ಮೀನು, ಕಪ್ಪೆ, ಒಂದೊಂದ್ಸಲ ಹಾವೂ ಇರ್ತಿತ್ತು. ವರ್ಷಕ್ಕೊಂದ್ಸಲ ಬೇಸ್ಗೆಲಿ ಸ್ವಲ್ಪ ನೀರು ಕಮ್ಮಿ ಇದ್ದಾಗ ಬಾವಿ ನೀರು ಆರ್ಸಿ ಚೊಕ್ಕ ಮಾಡುದು. ಒಂದಿಬ್ರು ಕೊಡ ತಕಂಡಿ ಸೆದುದು, ಮತ್ತೊಂದಿಬ್ರು ಹೊರಗೆ ಚೆಲ್ಲುದು. ಒಂದೊಂದ್ಸಲ ಅದ್ರಲ್ಲಿದ್ದ ಕೋಮ ಸತ್ತೋದ್ರೂ ಹಿಂಗೇ ಕೈಲಿ ಸೇದಿಯೇ ನೀರು ಆರ್ಸುದಾಗಿತ್ತು. ಆಗೊಂದೆರಡ ದಿನ ಮಾತ್ರ ಬೇರೆ ಮನಿ ಬಾವಿಗೋಗಿ ನೀರು ತಕಬರುದಾಗಿತ್ತು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಂಜನಗೂಡು ಸೀಮೆ | ಮರ್ವಾದಿ ಅನ್ನದು ಅದೆಷ್ಟುದ್ದ ಅದ್ಯಾಪಾಟಿ ಇದ್ದದು?

ಈಗೆಲ್ಲ ಬಾವಿಗೆ ಪಂಪ್‌ಸೆಟ್ ಕುಳ್ಸರೆ. ಕುಡಿಯು ನೀರಷ್ಟೇ ಬಾವಿಂದ ಎತ್ತುದು. ಆದ್ರೂ ನಿನ್ನೆ ಎತ್ತಿಟ್ಟ ನೀರು ಇವತ್ತು ಬಳ್ಸು ಮಾತಿಲ್ಲ. ದಿನಾನೂ ಎಲ್ಲಾ ಖಾಲಿ ಮಾಡಿ ಹೊಸ ನೀರ ತುಂಬುದೇಯಾ. ಮನ್ಸಂಗೆ ಕುಡಿಯುಕೆ, ಬಳ್ಸುಕೆ ಬೇಕಾದಟ್ಟು ಚೊಕ್ಕ ನೀರು ಬೇಕು ಅಂದ್ರೆ ಈಗನ ಕಾಲ್ದಲ್ಲಿ ಪುಣ್ಯ ಮಾಡಿರ್ಬೇಕು. ಮನ್ಸನ ಮಿತಿಮೀರಿದ ಬಳಕೆ ಎಲ್ಲದ್ನೂ ಹಾಳ್ಮಾಡ್ತಿದೆ. ಜಗತ್ನಲ್ಲಿ ಎಲ್ರಿಗೂ ಅದು ಸಿಗ್ಲಿ ಹೇಳಿ ಹಾರೈಸುದೇಯಾ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app