ದೇಸಿ ನುಡಿಗಟ್ಟು - ಮಾಲೂರು ಸೀಮೆ | ತಂಗಿ ಅಮ್ಮಾಯುನುಕ ಕೊಡದೆ ಉಳಿಸಿಕೊಂಡ ನಾಲ್ಹಾಣ

ಗಂಡನು ಸತ್ಮೇಲೆ ಜಯಮ್ಮನುಕ ಜೀವನದ ಮ್ಯಾಲೆ ಬೆಮೆ ಹೋಯಿತು. ಸೊಸೆ ಅಣ್ಣನ ಮಗಿ ಆದ್ರೂ ಸೊಸೆ ತಾನೇ? ಕಿಂದ್ಲೀಟು ಮುಂದ್ಲೀಟು ಸುರು ಆಗಿ ಜಯಮ್ಮನು ಮಗಳು ತಾವಕ್ಕ ಹೋಗಿ ಇದ್ದಳು. ಅಲ್ಲಿಯೂ ತಲಕಿಂದ್ಲು ಕೆಲಸ ಆಗಿ ಮತ್ತೆ ಮಗನತಾಕ ಬಂದಳು. ಕೊನೇಕ, ಆರು ಮಾಸ ಮಗನ ತಾವ, ಇನ್ನಾರು ಮಾಸ ಮಗಳ ತಾವ ಇರೋ ಹಂಗೆ ಮಾತಾಯಿತು

ಪೇಪರ್ನಾಗ ಹಳೇ ನಾಣ್ಯಗಳ ಸಂಗ್ರಹದ ಹವ್ಯಾಸ ಇರುವ ಮನಿಶಿ ಬಗ್ಗೆ ಸಮಾಚಾರ ಒಂದು ಓದಿ ಮೂರ್ತಿಕ ಏನೋ ಒಂದು ಚುಚ್ಚಿದ ಹಾಗೆ ಅನಿಸಿತು. ಅದಕ್ಕೆ ಕಾರಣ - ತನ್ನ ತಾವ ಒಂದು ಪಾತ ಪೈಸಾ ಬಂದ ಇರುವುದು ಎಂದು ಅವುನುಕ ಬಲಮ ಅನಿಸಿತು. ಅದು ಅವನ ಅವ್ವ ಕೊಟ್ಟ ನಾಲ್ಕಾಣೆ ಬಂದ. ಅದರ ಪುಟ್ಟು ಏನು ಅಂದರ...

Eedina App

ಜಯಮ್ಮನುಕ ಯಜಮಾನುನು ಸತ್ತ ಮ್ಯಾಲೆ ಜೀವನ ಹೆಂಗೆ ಅಂತ ಚಿಂತೆ ಅಮರಿಕೊಂಡಿತು. ಗಂಡನು ಇದ್ದ ಕಾಲದಾಗ ಜಯಮ್ಮನುನ ಅವನು ನೆಲದ ಮ್ಯಾಲೆ ಬಿಡದೆ ನೋಡಿಕೊಂಡಿದ್ದನು. ಪುರದಾಗ ಇದು ಸಾನೆ ಜನಗುಳುಕ ತಮಾಶೆ ಸಂಗ್ತಿ ಆಗಿತ್ತು. ಅಂಗೆ ನೋಡಿದ್ರೆ ಜಯಮ್ಮುನ ಗಂಡನು ನಲ್ಲ ಕಮಾಯಿ ಇರುವ ಮನಿಷಿ ಏನೂ ಆಗಿರಲಿಲ್ಲ. ರಾಗಿ ನೆಲ್ಲು ಇರುವ ಭೂಮಿ ಇತ್ತು. ಹಸಕರ ಇತ್ತು. ಎಷ್ಟೇ ಕುಡಿದ್ರೂ ಹೆಂಡ್ರು ಜಯಮ್ಮುನ ಕಂಡ್ರೆ ಬೆಲೆ ಪ್ರೀತಿ ಇರೋದು.

ಇವುರುಕ ಎರಡು ಪುಳ್ಳೆಕುಟ್ಟಿ ಇದ್ದುವು. ಅಂಬರೀಶನು ಗಂಡು ಪುಳ್ಳೆ ಆದರೆ, ರೇಖಾಳು ಹೆಣ್ಣು ಕೂಸು. ಇವ್ರು ಪುರದಾಗ ಇದ್ದ ಪಳ್ಳಿಕೂಟದಲ್ಲಿ ನಾಲು ಕ್ಲಾಸು ಓದಿ ಭೇಷ್ ಅನಿಸಿಕೊಂಡರು.

AV Eye Hospital ad
ಕಲಾಕೃತಿ ಕೃಪೆ: ಅಚ್ಯುತನ್ ಕಡಲೂರು

ಎದಿವಿದ ಕಾಲಕ್ಕ ರೇಖಾಳುನ ಪಕ್ಕದ ಬರಗೂರು ಮುನಿಯಪ್ಪನುಕ ಧಾರೆ ಮಾಡಿಕೊಟ್ಟರು. ಇತ್ತ ಗಂಡು ಉಡುಗ್ಗೆ ಅಣ್ಣನ ಮಗಳು ಸರಿತಾಲನು ಮನೆ ತುಂಬಿಸಿಕೋಬೇಕು ಅಂತ ಜಯಮ್ಮುನ ಮನೋ ಇಂಗಿತ ಆಗಿತ್ತು. ಗಂಡನು ಕಯಕ್ ಪಿಯಕ್ ಅನ್ನದೆ ಅವಳ ಮಾತಿಗೆ ತಲೆ ಸರ್ಸರ್ನೆ ಹೂಪಿದ.

ಹುಲಿಮಂಗಳದಾಗ ಇದ್ದ ಅಣ್ಣ ಆದಿಕೇಶುವುಲು ಬಡೋರ ಮನೆಗೆ ತನ್ನ ಪುಳ್ಳೆನಾ ಕೊಡನಾರೆ ಅಂದೂಡ. ಜಯಮ್ಮುನುಕ ಶಾಲುನಲ್ಲಿ ಸೆರಪು ಮಡಗಿ ಯಾಮಾರಿಸಿ ಹೊಡೆದ ಅಪಮಾನ ಆಯಿತು. "ಆಗಲಿ, ಅವರ್ಪ್ಪನ ತರದ ಹೈಕ್ಕಾಸ್ ಪುಳ್ಳೆನ ನನ ಮಗನಿಗೆ ತತ್ತೀನಿ," ಅಂತ ಚಾಲೆಂಜ್ ಮಾಡಿ ಪುರಕ್ಕೆ ವಾಪಸ್ ಬಂದಳು.

ಆದಿಕೇಶುವುಲುಕ ತರ್ವಾತ ಬೇಸರ ಆಗಿ, ತಂಗಿಗೆ ಸಮಾಧಾನ ಮಾಡಲು ಸರಿತಾಳನ್ನ ರೊಂಡು ರೋಜಲು ಅತ್ತೆ ಮನೆಗೆ ಹೋಗಿ ಬಾ ಅಂದ. ಹಂಗೆ ಬಂದವಳನ್ನು ಅಂಬರಿಷನು ಕದ್ದು ಬಸುರಿ ಮಾಡೋದಾ! ಜಯಮ್ಮುನು ಅವಳನ್ನು ಮನೆತುಂಬಿಸಿಕೊಂಡಲಾದರೂ ವರದಕ್ಷಿಣೆ ಕೊಡದೆ ಬಿಲ್ಕುಲ್ ಒಪ್ಪಿರಲಿಲ್ಲ! ಗಂಡು ಹುಡುಗ್ಗೆ ಎಲ್ಲೆಲ್ಲೋ ಮಂಚಿ ಮಂಚಿ ಸಮಂಧಾಗಳು ಬರ್ತಾ ಇದ್ದುವು. ಈ ತಾಟಕಿ ನನ ಮಗನ್ನ ಪುಟ್ಟಿಗೆ ಕೆಡವಿಬಿಟ್ಲು ಅಂತ ರೋದಿಸಿ ಜನರಿಂದ, "ಔನು! ಔನು! ಅಟ್ಲೆ ಆಯಿಂಡಾಲಿ!" ಅನಿಸಿಬಿಟ್ಲು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಬೆಟ್ಟದ ಒರಗಿಂದ ಒಸರಿದ ಚೊಕ್ಕ ನೀರಲ್ಲಿ ಬಾವಿಗೆ ಬಿದ್ದ ಸೂಜಿನೂ ಕಾಣ್ತದೆ!

ಕಾಲವು ಚಲಿಸಿ ಗಂಡನು ಸತ್ತ ಮೇಲೆ ಜಯಮ್ಮನುಕ ಜೀವನದ ಮ್ಯಾಲೆ ಬೆಮೆ ಹೋಯಿತು. ಸೊಸೆ ಅಣ್ಣನ ಮಗಿ ಆದ್ರೂ ಸೊಸೆ ತಾನೇ? ಕಿಂದ್ಲೀಟು ಮುಂದ್ಲೀಟು ಸುರು ಆಗಿ ಜಯಮ್ಮನು ಮಗಳು ತಾವಕ್ಕ ಹೋಗಿ ಇದ್ದಳು. ಸ್ವಲ್ಪ ದಿನಕ್ಕ ಅಲ್ಲಿಯೂ ತಲಕಿಂದ್ಲು ಕೆಲಸ ಆಗಿ ಮತ್ತೆ ಮಗನತಾಕ ಬಂದಳು. ಕೊನೇಕ ಒಂದು ತೀರ್ಮಾನ ಆಯ್ತು; ಜಯಮ್ಮುನು ಆರು ಮಾಸ ಮಗನ ತಾವ, ಇನ್ನಾರು ಮಾಸ ಮಗಳ ತಾವ ಇರೋ ಹಂಗೆ ಮಾತಾಯಿತು.

ಹಿಂಗೆ ದಿನಗಳ ಗಡಪ್ತಾ-ಗಡಪ್ತಾ ಒಂದ್ಕಿತ ಮಗಳ ಮನೆ ಬಿಟ್ಟು ಅಕಾಲದಾಗ ಮಗನ ಮನೆಗೆ ಜಯಮ್ಮನು ಬಂದಳು. ಸೊಸೆ ಗಂಡನ ಮೊಕಕ್ಕೆ ತಿವಿದಲು. "ಅಮ್ಮುನುಕ ಏನೂ ಅನ್ನಬೇಡ," ಅಂತ ಅವನು ರಮಿಸಲು ನೋಡಿದ. ಇವಳು ಸುತರಾಂ ಒಪ್ಪಲಿಲ್ಲ ."ವದ್ದು ಅಂಟೆ ವದ್ದು ಅಂತೆ!" ಅಂತ ಹಟವ ತೊಟ್ಟಲು.

ಅದೆ ದಿನ ಆಡ ಮಗ ಒಂದು ಮದ್ವೆಗೆ ಅಂತ ಸಿನ್ನತಿರುಪ್ತಿಗೆ ಹೋದರು. "ಬರೋ ಟಯಾನಿಗೆ ನಿಮ್ಮ ಅಮ್ಮುನು ಇಲ್ಲಿ ಇರಕೂಡದು, ಹಂಗೆ ಹೇಳು," ಅಂತ ಹೆಂಡ್ರು ಗಂಡನುಕ ತಿಳಿವಳಿಕೆ ಕೊಟ್ಟಳು. ಮಗ ಯಾವ ಬಾಯಾಗ ಹಂಗೆ ಹೇಳ್ತಾನೆ!

ಕಲಾಕೃತಿ ಕೃಪೆ: ಅಫ್ಶಿನ್ ಸೆಪೆಹ್ರಿ

ಅವರು ಕೆ.ಕೆ ಟ್ರಾವೆಲ್ಸ್ತಿನಾಗ ತಿರುಪ್ತಿಕ ಹೋದ ಮ್ಯಾಕ ಇತ್ತ ಜಯಮ್ಮನು ಮೊಮ್ಮಗು ಮೂರ್ತಿನಾ ಕರೆದು ಕೈ ಮೇಲೆ ರೂಪಾಯಿ ಬಂದ ಇಟ್ಟು, "ನಾಲ್ಹಾಣಕ್ಕ ಆಕು, ನಾಲ್ಹಾಣಕ್ಕ ವಕ್ಕ ತೀಸ್ಕೊರಾ," ಅಂದಳು." "ಅವ್ವಾ, ನಾಕಿ ತಿನೇಕಿ?" ಅಂದಿತು ಮೊಮ್ಮಗು ಮೂರ್ತಿ.

ಜಯಮ್ಮುನುಕ ಇದು ಅತಿ ಅನಿಸಿತು. "ಮಕ್ಕಳುಕ ಎಂತ ವಾಣಿ ಕಲ್ಸಿದಾಳೆ!" ಅಂತ ಸೋಸೆನಾ ಒಂದು ರೌಂಡು ಬೈದಳು. ಆಮೇಲೆ, "ನಾಲ್ಹಾಣಕ್ಕ ಏನಾದ್ರೂ ತಿನಕ," ಅಂತ ಉದಾರ ತೋರಿದಳು.

ಮೂರ್ತಿ ಕುಣುಕ್ಕಂಡಿ-ಕುಣುಕ್ಕಂಡಿ ಆಕು ವಕ್ಕ ಹಿಡಿದು, ನಾಲ್ಹಾಣಕ್ಕ ಬೋಟಿ ತಿಂದುಕೊಂಡೆ ಬಂದ. ಜಯಮ್ಮನುಕ ಮೊಮ್ಮಗನ ತಲೆ ನೀವಬೇಕು ಅನಿಸಿ ಹಂಗೆ ಮಾಡಿದಳು. ಆಮ್ಯಾಲೆ ಮೂರ್ತಿ ಉಳಿದ ನಾಲ್ಹಾಣ ಕೊಟ್ಟದ ಅವನ ಕೈಗೆ ವಾಪಸ್ ಇಟ್ಟು, "ಇದಿ ಚೆಲ್ಲಿಕಿ ಇವ್ವಾಲಿ. ನುವ್ವೆ ತಿನರಾಕು!" ಅಂದಳು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಎರಿಸೀಮಿ ಮಂದಿಯ ಗೋಧಿ ಕೂಳಿನ ಕತಿ

ಹಂಗೆ ಆಕು ವಕ್ಕ ಬಾಯಿಗೆ ಹಾಕಿಕೊಂಡು ಸರ್ ಸರ್ರನೆ ತೋಟದ ಮನೆಗೆ ಹೋಗಿ ಮಿಶಿನ್ ಮನೆನಾಗ ಇದ್ದ ಔಷಧಿ ಕುಡಿದು ಪ್ರಾಣ ಬಿಟ್ಟಳು.

ಮಗಳು ರೇಖಾಳು ಏನೋ ಒಂದು ಮಾತು ಅಂದಳು ಅಂತ ಜಯಮ್ಮುನು ಹಿಂಗೆ ಪ್ರಾಣ ಬಿಡೋದು ಅಂದರೆ ಹೆಂಗಪ್ಪ ಅಂತ ಪುರದ ವಾಸಿಗಳು ಶಾನೆ ದಿನ ಮಾತಾಡೋರು.

ಅವ್ವ ಸತ್ತುದು ನೋಡಿ ಮೂರ್ತಿ ನಾಲ್ಹಾಣ ತಂಗಿಗೆ ಕೊಡ್ನೇ ಇಲ್ಲ. ಅದು ಹಂಗೆ ಅವನ ತಾವೇ ಉಳೀತು.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app