ದೇಸಿ ನುಡಿಗಟ್ಟು - ಮಧುಗಿರಿ ಸೀಮೆ | ಹಿರೀಕರೊಬ್ರ ಸ್ವಗತ - ಊರ್ ಮಾರಮ್ಮಗೆ ಕೋಳಿ ಹುಂಜ ಕೊಯ್ಕೊಬತೀನಮ್ಮ ಗಂಗಮ್ಮ

"ಈ ಮುಂಗಾರಿ ಬ್ಯಾಸಗೆ ಏನ್ ಪಸಲು ಇಕ್ಕಿದರೂ ಒಳ್ಳೆ ಆದೀಕ ಮಾಡ್ಬೋದು ಅಂತ ಬೆಳೆ ಮಳೆ ಆಗೈತೆ ಈ ವರ್ಸ. ಒಂದ್ ಐದಾರು ಎಕ್ರಿಗೆ ರಾಗಿ, ಇನ್ನೊಂದ್ ಮಗ್ಗಲಿಗೆ ಗದ್ದೆ ಹೊಡೆದು ಮನ್ಗೆ ರವಷ್ಟೂ ಇಟ್ಕೊಂಟ್, ಇನ್ ಎಲ್ಲಾ ಮಂಡಿಗೆ ಹಾಕಿ ಬಂದ್ ದುಡ್ನಾಗೆ ಸಾಲದ ಹೊರೆ ರವಷ್ಟು ತಗ್ಗಿಸೋನ ಬರ್ರಪ್ಪ. ಮನೆ ಖಾಲಿ ಮಾಡಕೊಂಡ್ ಹಬ್ದೋಟ್ತಿಗೆ ಊರು ತಲುಪಿ..."

"ಈ ವರ್ಸುವೇನೋ ದ್ಯಾವರು ಕೃಪೆಯಿಂದ ಮಳ್ ದ್ಯಾವ್ರು ಸ್ಯಾನಿ ಜೋರ್ಗಾ ಸೂರಿತೈತೆ. ಕೆರೆ, ಕಟ್ಟೆ, ಕುಂಟೆ, ಕೋಡಿ ಬಿದ್ ಇರೋ ಬರೋ ಹಳ್ಳಗಳೂ ಹರ್ಕೊಂಡು ಹೊಲ್ದಾಕೆ ನೀರ್ ನುಗ್ಗಿ, ಹೊಲ್ವೆಲ್ಲ ಕೆರೆ ಮಾಡಿಬಿಟ್ಟಿದೆ. ಇದರ ಜೊತೆಗೆ ಒಂದೇ ವರ್ಸದಾಗೆ ಎರಡು ಸತಿ ಜಯಮಂಗಲಿ ಮೈ ತುಂಬ್ ಹರ್ದುಳು. ಸಾಲ ಸೂಲ ಮಾಡಿ ಬೋರ್ ಹಾಕಿಸ್ದವೂ ತಾಯಿ ಅವಾಗ ಕೈ ಕೊಟ್ಟು ಬೋರ್ ಪೆಲ್ ಆಗಿಬ್ಟಿತ್ತು. ಈ ಪಾಟಿ ಮಳ್ ದ್ಯಾವ್ರುರಿಂದ ಫೇಲ್ಗಿದ್ದ ಎಲ್ ಬೋರ್ನಲೂ ಗಂಗಮ್ಮ ತಾಯಿ ಉಕ್ಕಿ ಹರಿತಿದಾಳೆ; ಮೂರ್ ಇಂಚ್ ನೀರ್ ಹೊಡೆತವೇ. ಇನ್ನೂ ಮೂರ್ನಾಲ್ಕು ವರ್ಸ ಬ್ಯಾಸ್ಯಾಕೆ ಏನ್ ನೀರಿನ ತಾಪತ್ರಯವೇ ಇಲ್ಲ. ದೊಡ್ಡ ನಮಸ್ಕಾರ ಇಂತ ಪುಣ್ಯದ್ ಕೆಲ್ಸ ಮಾಡದಮ್ಮ ಗಂಗಮ್ಮ..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಸೀಮೆ | ಕಣ್ಣದಂಗೆ ಮನ್ಕಂಡ್ ನಕ್ಷತ್ರ ಲೆಕ್ಕ ಮಾಡದ್ ನೆನಪ್

"ಏ ಗಂಗಮ್ಮ ತಾಯಿ ನಾವ್ ನಿನ್ನ ಪಡಿಯೋಕಾಗಿ ಎರಡ್ಮೂರು ಲಕ್ಷ ದುಡ್ ಖರ್ಚು ಮಾಡ್ಕೊಂಡ್ವಿ. ಆದರೆ, ಅವತ್ ನೀನು ನಮ್ ಕಷ್ಟಕ್ಕೆ ಆಗಲಿಲ್ಲಮ್ಮ. ಈಗ ನಾವ್ ಕೇಳ್ದೆ ಇದ್ರೂ ನಿಮ್ ಪಾಲಿಗೆ ಬಂದ್ ಇದ್ಯಮ್ಮ ಆ ಜಯಮಂಗಲಮ್ಮ ಕೂಡ ನನ್ ಜೀವನಾದಗೆ ಸಣ್ಣೋನಿದ್ದಾಗ ಕಂಡಿದ್ದೇ ಕಾಣೋ ಆಟ; ಮತ್ ಮೊಮ್ಮಕ್ಳನ ನೋಡೋ ಕಾಲಕ್ಕೆ ತಾಯಿ ಮತ್ತೆ ಹರಿದು ನಮ್ಗೆ ಅನುಕೂಲ ಮಾಡಿಕೊಟ್ಟ ನಿನಗೆ ನಿನ್ ಹೆಸರಾಗೆ ಊರ್ ಮಾರಮ್ಮಗೆ ಒಂದ್ ಕೋಳಿ ಹುಂಜ ಕೊಯ್ಕೊಬತೀನಮ್ಮ ಗಂಗಮ್ಮ..."

Image
ಜಯಮಂಗಲಿ ನದಿ

(ಊರಾಗೆ ಕೂಲಿ ನಾಲಿ ಆದೀಕ ಏನ್ ಇಲ್ಲಂತ ಬೆಂಗ್ಳೂರಿಗೆ ಹೋಗಿರೋ ಮಕ್ಳನ ಪೋನ್...) "ಬರ್ರೋ ಬಡ್ಡಿ ಮಕ್ಳ... ನೀವ್ ಬೆಂಗ್ಳೂರ್ ಸೇರ್‌ಬಿಟ್ ಹೊಲ ಮನೆಯಂತ ಕಿವ್ಯಾಕೆ ಹಾಕ್ಳೋದೆ ಹೆಂಡ್ತಿ-ಮಕ್ಳನ ನೋಡ್ಕೊಂಡು ಪ್ಯಾಟೆ ಬದುಕ್ ಬಾಳಿದ್ರೆ, ಮಳೆ ಬೆಳೆ ಆಗಿಲ್ಲಂತ ಅದ್ಯಾವಗೋ ಬ್ಯಾಂಕ್ನಾಂತ ತಂದ ಸಾಲ ಈಗ ವಸೂಲಿ ಮಾಡಕೆ ದಿವಸ ಪೋನ್ಮಾಡ್ತರೆ. ಕಟ್ದೆ ಇದ್ರೆ ಹೊಲ ಮನಿ ಹಾರಾಜ್ ಇಕ್ತೀವಿಯಂತ ಬೆದರ್ಸುತಾರೆ. ಬರ್ರೋ ಅಪ್ಪಯ ನಿಮ್ಗೆ ಕಾಲ್ಗೆ ಬಿಳ್ತೀನಿ. ನೀವ್ ದುಡ್ದು ತಿರ್ಸತಿರಾ ಅಂದ್ರೆ ಬರೀ ಸೋಕಿನಾಗಿ ಸರ್ದೋರಿ. ಅವ್ನು ನೋಡ್ರೆ ಅಂಗೆ ನೀನ್ ನೋಡ್ರೆ ಇಂಗ್! ಎಂಗ್ರೋ ನಾವ್ ಉದ್ದಾರವಾಗ್ದೋದು? ಕಡೆಗ್ಳೋರಿಗೆ ಸಾಲಕ ಬಂದ್ರೆ ಮರ್ಯಾದೆನ್ಯಾನರೋ? ನೀವ್ ಅಲ್ ದುಡಿಯೋದ್ ಬೇಡ ಕೊಡದು ಬೇಡ ಮೊಟ್ಮೊದ್ಲು ಊರಿಗೆ ಬರಪ್ಪ..."

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಸೀಮೆ | ಎರಿಸೀಮಿ ಮಂದಿಯ ಗೋಧಿ ಕೂಳಿನ ಕತಿ

"ಈ ಮುಂಗಾರಿ ಬ್ಯಾಸಗೆ ಏನ್ ಪಸಲು ಇಕ್ಕಿದರೂ ಒಳ್ಳೆ ಆದೀಕ ಮಾಡ್ಬೋದು ಅಂತ ಬೆಳೆ ಮಳೆ ಆಗೈತೆ ಈ ವರ್ಸ. ಒಂದ್ ಐದಾರು ಎಕ್ರಿಗೆ ರಾಗಿ, ಇನ್ನೊಂದ್ ಮಗ್ಗಲಿಗೆ ಗದ್ದೆ ಹೊಡೆದು ಮನ್ಗೆ ರವಷ್ಟೂ ಇಟ್ಕೊಂಟ್, ಇನ್ ಎಲ್ಲಾ ಮಂಡಿಗೆ ಹಾಕಿ ಬಂದ್ ದುಡ್ನಾಗೆ ಇರೋ ಸಾಲದ ಹೊರೆ ರವಷ್ಟು ತಗ್ಗಿಸೋನ ಬರ್ರಪ್ಪ. ಮನೆ ಖಾಲಿ ಮಾಡಕೊಂಡ್ ಹಬ್ದೋಟ್ತಿಗೆ ಊರು ತಲುಪಿ."

ನಿಮಗೆ ಏನು ಅನ್ನಿಸ್ತು?
4 ವೋಟ್
Image
av 930X180