ದೇಸಿ ನುಡಿಗಟ್ಟು - ಮಧುಗಿರಿ ಸೀಮೆ | ದನಕರ ಹಿಡ್ಕೊಂಡು ಹೊಲ್ದಕಡಿ ಹೋದ್ರೆ ಊರೇ ಗ್ಯಪ್ತಿಗೆ ಬರ್ತಾಯಿರಲಿಲ್ಲ

ದನ ಹಿಡ್ಕೊಂಡು ಮೇಸ್ಕೆ ಹೊಲ್ದಡಿಕೆ ಹೋದರೆ ದೊಡ್ ಜಮೀನ್ದಾರ ರಂಗಪ್ಪ ಮತ್ ಗೊಲ್ರಹಟ್ಟಿ ರಾಜಣ್ಣ ಅವರ ಹೊಲವೇ ಗತಿ. ಮಳ್ ಬಂದ್ ಮಣ್ಕಾಲ್ ಉದ್ದ ಇಳೆ ಬೀಳೋ ತ್ಯಾವದಾಗೆ ದನ ಮೇಸೋದು ಒಂದ್ ದೊಡ್ ತಲ್ನೋವು. ಯಾಕಪ್ಪ ಅಂದ್ರೆ, ಹೊಲ್ದೊರು, "ತ್ಯಾವದಾಗೆ ತುಳ್ದಾಡಿಸ್ಕೊಂಡು ಎಲ್ಲಾ ಹುಲ್ ಎಲ್ಲಾ ವಗಡ್ ಎದ್ಳಿಸ್ಬೇಡಿ," ಅಂತ ಬೈಯ್ಯೋರ್

ನನ್ನೂರು ಒಂದ್ ಸಣ್ಣ ಹಳ್ಳಿ. ಈ ಊರ್ನಾಗೆ ಇರೋ ಬರಾ ಜನ್ರೆಲ್ಲ ಕೂಲಿನಾಲಿ ಮಾಡ್ಕೊಂಡು ತಿನ್ನೋರೆ ಸ್ಯಾನಿ. ಯಾರೋ ಪುಣ್ವಂತರು ಅವರ ಅಪ್ಪನೋ ತಾತ್ನೋ ಸಂಪಾರ್ಸಿರೋ ಭೂಮಿನ್ಗೆ ಮಳ್ಗಾಲದಾಗೆ ಏನೋ ಒಂದ್ ಬೆಳೆ ಇಕ್ಕೊಂಡು ಜೀವನ ಕಳೆಯೋರಿಲ್ಲಿ. ಇನ್ ಮಿಕ್ದವರು ಕಂಡೋರು ಹೊಲ್ದಾಗೆ ಬಡ್ಕೊಂಡು ತಿನೋದೇ ಅವರ ಜೀವನ ಉದ್ಕ ಬದುಕು. ಈ ಊರ್ನಾಗೆ ರಂಗಪ್ಪ ಅಂತ ಒಬ್ ದೊಡ್ಡ ಜಮೀನ್ದಾರ ಅವ್ನೆ. ಈ ಯಪ್ಪಾ ವ್ಯವಸಾಯ ಬಿಟ್ರೆ ಬೇರೆ ಏನೂ ಕೆಲ್ಸಕೆ ತಲೆಯಾಕ್ದ ಪೂರ ಬೇಸಾಯಗಾರ. ಆಯಪ್ಪ ಇಡೀ ಹೊಲವೆಲ್ಲ ಗೆಯ್ದು ಹಸನು ಮಾಡಿ ಮಳೆ ಬರೋ ಹೊತ್ತಿಗೆ ಕಾಳು-ಕಡಿ, ಬೀಜ ರೆಡಿ ಮಾಡ್ಕೊಂಡು, ಬೀಜ ಬಿತ್ತಿ ಬೆಳೆ ಬೆಳೆಯೋ ದೊಡ್ ಬೇಸಾಯಗಾರ. ಈಗೀಗ ಕೈಲಾಗ್ದ ಕಾರಣದಿಂದ ಟ್ಯಾಗೂಟ್ರು ಇಕ್ಕಿ ಗೆಯ್ದು ವ್ಯಾವಸಯ ಮಾಡಿ ಹೆಸ್ರನ ಅಂಗೆ ಉಳಿಸಕೊಂಡ ಮಾರಯ ಇಯಪ್ಪ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಬೀದರ್ ಸೀಮೆ | ಅದೇಸ್ ಮಂದಿ ಇಂಥ ಕನ್ಸು ಕಾಣ್ಕೋತಾನೇ ಜಿಂದಗಿ ತೆಗ್ದಾರೋ ಏನೋ!

ಈ ಊರ್‌ನಾಗೆ ಮನ್ಗೊಂದು ಜತಿ ಹಸಿನ ಪಡ್ಡಿಗಳೋ ಓರಿಕರಗಳೋ ಕಾಯಂ ಆಗಿ ಇರ್ತಿದ್ವೂ. ಇವೂ ಇಲ್ವಂದ್ರೂ ಕುರಿ, ಮ್ಯಾಕೇನಾದ್ರೂ ಇರ್ತಿದ್ವೂ. ವತ್ಯಾರೆಯಾದ್ರೆ ಸಾಕ್, ಆಟೋತ್ತಿಗೆ ದಿಡಗು ಬಡ್ಗನಾ ಎದ್ ಕೊಟ್ಟಗೆ ಇದ್ ಜೀವಾಧಿಗಳನ ಆಚೆ ಬಿಟ್ ಕಸ ಬಿಸಾಕಿ, ಒಂದು ಗುಕ್ಕು ಕಾಫೀ ನೀರ್ ಕುಡಿದು, ಕುಡ್ಗೊಲೋ ಗುರ್ಜಗೆನೋ ಹಿಡದ್, ಯಾರ್ ಹೊಲದಾಗೆ ಸ್ಯಾನಿ ಹುಲ್ಲು ಜಬ್ಬಲು ಗಟ್ಟಿ ಇರುತ್ತೋ ಆ ಹೊಲ್ದ ಕಡೆ ಹೋಗಿ, ರಾತ್ರಿಕೆ ದನಕರಿಗಳಿಗೆ ಒಂದೆರಡು ಹೊರೆ ಹುಲ್ ಕಿತ್ತು, ಒಂದ್ ತಬ್ ಮನೆಗೆ ಸಾರ್ಗೆ ಕಳ್ಳೆಗಾಯಿ, ಹಲಸಂದೆ ಗುಜ್ಕೋ ಬಂದು, ಹುಲ್ಮದ್ಯಾಕೆ ಕಾಣ್ದೆ ಇಕ್ಕಿ ಹೊರೆ ಕಟ್ಟಾಕೆ ಉಗ್ಗಣೆ ಬಳಿನೋ ಹೊಂಗೆ ಮರದ ಬಳ್ಳಿ ಕಿತ್ಕೊಂಡು ಸೀಳಿ ಹೊರೆ ಕಟ್ಟೋಕೆ ಹೋದಾಗ, ಪಟ್ ಅಂತ ಬಳ್ಳಿ ತುಂಡಾಗಿ ರೋಸಿ, ಇನೊಂದು ಕಿತ್ಕೊಂಡು ಆ ಬಳ್ಳಿಗೆ ಗಂಟಾಕಿ ಹೊರೆ ಹೊತ್ಕೊಂಡು ಮನೆ ತಲುಪೋ ಹೊತ್ತಿಗೆ ಇಟ್ನೊತ್ತು.

AV Eye Hospital ad

ಮನ್ತಾಕೆ ಬಂದ್ ತಡವೇ... "ಇಟ್ಟಾಗಿದೆ... ಮಖ ಸವರಿಕೊಂಡ್ ಉಂಡ್, ಗೊಕ್ಕನ ದನಕರ ಬಯಲ್ಗೆ ಬಿಡ್ರಿ. ಇದ್ ಯಾಕೋ ಇಟ್ ವತ್ತಿಗೆ ಗೂಡ್ರ ಮುಚ್ಕೊಂಡು ಇದೇ ವತ್ತಿನಬಾಲ್ಕೆ ಹೋಗ್ರಿ ದನಕರ ಮೈಯ್ಲಿ. ಮಳೆ ಬಂದ್ ತ್ಯಾವ ಅದ್ ಮೇಲೆ ಸರಿಯ್ಗೆ ನೀರು ಕುಡ್ಯಲ್ಲ ಮೇವ್ ತಿನ್ನಲ್ಲ," ಎಂದು ಹೇಳಿದ ಅಪ್ಪನ ಮಾತ ಕೇಳಿ, ಉಂಡಿದ ತಡವೇ ದನಕರ ಬಿಟ್ಟು ಬಯಲಿಗೆ ಹೊರಟು ಬಿಡುತ್ತಿದೆವೂ. ಬಯ್ಲಿಗೆ ಹೋದ ಮ್ಯಾಕೆ ಊರೇ ಗ್ಯಪ್ತಿಗೆ ಬರ್ತಾ ಇರಲಿಲ್ಲ. ಯಾಕ್ ಅಂದ್ರ, ಮಳ್‌ಗಾಲದಾಗೆ ಬಯಲು ಅಂತೂ ಊರಾಗೆ ಇರುತ್ತಿದ್ದೂ, ಊರ್ನವರು ಎಲ್ಲಾ ಹೊಲದಲಿ ಗಿಜಿಗುಟ್ಟುತ್ತಿದ್ರೂ. ಹೊಲ್ಕಡಿಕೆ ಹೋದ ಮ್ಯಾಲೆ ಅಂತ್ ಹೊಟ್ಟೆ ಹಸ್ವೇ ಕಾಣ್ತಾ ಇರ್ಲಿಲ್ಲ. ತಲಾಕ್ ಎಲ್ರೂ ಒಂದ್ ಒಂದ್ ತಂದ್ ಕಳ್ಳೆಗಿಡ ಕಿತ್ಕೊಬದ್, ಆ ಹಸ್ಗೆನಾಗೆ ರವಟು ಈ ಹಸಗೆನಾಗೆ ರವಟು ಆ ಹೊಲ್ಗಳ ಬಿಟ್ ರವಟು ದೂರ ಹೋಗಿ ಬೇಲಿ ಕಂಪೆ ಕಾರೇ ಕಂಪೆ ಗುಡ್ಡಾಕಿ ಯಾರನ ಬೀಡಿ ಸೇದೋ ತಾತ್ತಾಗೆ ಬೆಂಕಿಗಡ್ಡಿ ಇಸ್ಕೊಂಡು, ಕಳ್ಳೆಕಾಯಿ ಸುಟ್ ಸೆಲಮೆ ನೀರ್ ಕುಡ್ದು, ಬೈಗಾಗ್ಲು ಕಾಲ ಕಳೆದ್ವರಿಗೆ ಹೊಟ್ಟೆ ಹಸ್ವೆ ತಿಳಿತಿರಲಿಲ್ಲಪ್ಪ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ನಂಜನಗೂಡು ಸೀಮೆ | ನಾಲ್ಕಾಣಿ, ಎರಡು ಗರಿ ಬೇವುನ್ ಸೊಪ್ಪು ಮಾರಮ್ಮನ ತಲ ಮೇಲಿಟ್ಟು ಎಳ್ನೀರ್ ಸುರ್ದು...

ದನ ಹಿಡ್ಕೊಂಡು ಮೇಸ್ಕೆ ಹೊಲ್ದಡಿಕೆ ಹೋದರೆ ದೊಡ್ ಜಮೀನ್ದಾರ ರಂಗಪ್ಪ ಮತ್ ಗೊಲ್ರಹಟ್ಟಿ ರಾಜಣ್ಣ ಅವರ ಹೊಲವೇ ಗತಿ. ಮಳ್ ಬಂದ್ ಮಣ್ಕಾಲ್ ಉದ್ದ ಇಳೆ ಬೀಳೋ ತ್ಯಾವದಾಗೆ ದನ ಮೇಸೋದು ಒಂದ್ ದೊಡ್ ತಲ್ನೋವು. ಯಾಕಪ್ಪ ಅಂದ್ರೆ, ಹೊಲ್ದೊರು, "ತ್ಯಾವದಾಗೆ ತುಳ್ದಾಡಿಸ್ಕೊಂಡು ಎಲ್ಲಾ ಹುಲ್ ಎಲ್ಲಾ ವಗಡ್ ಎದ್ಳಿಸ್ಬೇಡಿ ಇಂಗೆ ಕಾವಳ ಮುಚ್ಕೊಂಡ್ರೆ ನಾವ್ ಎತ್ಹೊಗಬೇಕು ಯತನ್ನ ಗೆದ್ಲು ಕಟ್ಟೆಕಡಿಕೋ ಬಸ್ವನ್ಕಟ್ಟೆಕೋ ಗುಟ್ಟು ಗಿಟ್ಟೆಕೆ ಹೋಗಕ ಆಗ್ಲವ ಯಾವ್ಗಲು ಇಲ್ಲೆ ಸಾಯ್ತಿರ..." ಅಂತ ಬೈಸ್ಕೊಂಡ್, ಕಂಡು ಕಾಣ್ದಂಗೆ ಬೈಗಾಗ್ಲು ಕಥೆ ಕಳ್ದು, ಇಯಪ್ಪ ಯಾಕ್ಲಾ ಇಂಗ್ ಆಡ್ತಾನೆ ಏನ್ ದನಕರ ಮೇದ್ರೆ ಏನ್ ನಿಮ್ ಅಪ್ಪನ ಗಂಟು ಓಡ್ಹೊಗ್ತದ ಅಂತ ಒಳಗೆ ಬೈಯ್ಕೊಂಡು; ಇನ್ ಏನಾದ್ರೂ ಸ್ಯಾನಿ ಕೋಪ್ಬರಿಸಿದ್ರೆ ಆ ರಂಗಪ್ಪ ಹೊಲ್ದಕಡಿ ಬರ್ದಾಗ ಬದಿನ್ಪಕ್ಕೆ ಉಳ್ಳಿಕಾಳ್ ಅಕ್ಕಡಿ ಸಾಲ್ನೆಲ್ಲ ಬುಡನಾರ್ಶವಾಗೋ ಅಂಗೆ ದನಕರ ಬಿಟ್ ಮೇಸಿ, ಇವಾಗ್ ಅದೇನ್ ಮಾಡ್ಕೊಳ್ತಿಯೋ ಮಾಡ್ಕೋ ಹೋಗ್ ಅಂತ ಬೈಯ್ಕೊಂಡು, ಹೊತ್ ತೀರಾ ಮುಳ್ಗಿದ ಮೇಲೆ ಊರ್ಕಡೆ ದನಕರ ಹೊಡಕೊಂಡ್ ಹೋಗಿ ಕಟ್ಟಾಕಿ, ಏಳೆಂಟು ಗಟ್ಗೆ ಕೊಟ್ಟಿಗೆ ಜೀವಾಧಿಗಳ ಕಟ್ಟಿ ಆಗಿರೋ ಇಟ್ ಉಂಡ್ ಬೆಚ್ಚಗೆ ಮಲಗಿ, ಮತ್ ಅದೇ ವತ್ಯೋರೆ ವತ್ತಿನಬಾಲ್ಕೆ ಎದ್ ಏನಾದ್ರೂ ತಡವಾಗಿ ಎದ್ ಇದ್ರೆ, "ಯಾವ್ನೋ ಅವನು... ಒಟ್ನೊತ್ತುವರೆಗೂ ಮನ್ಕೊಂಡು ಅವ್ನೆ ಇನ್ ಬೆಳ್ಕರ್ದು ಇಲ್ವಂತ!" ಅಂತ ಗೆದ್ರಿ ಎಬ್ರಿಸಿ, ಈಗೆ ಎಲ್ಲಾ ಉಗ್ಸೊಂಡು ಕಾಪುರ ಮಾಡ್ಕೊಂಡು ಜೀವ ಜೀವನ ಸವ್ಸೊದೇ ನಮ್ಮ ಜೀವನ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app