ದೇಸಿ ನುಡಿಗಟ್ಟು - ಕೊರಟಗೆರೆ ಸೀಮೆ | 'ಅಗಳೇ ಅಮಯ, ಮರುತ್ಬಿಟ್ಟಿದ್ದೆ... ಬೆಳ್ಳುದ್ದದೋವು ನಾಕು ಪುಳ್ಳೆ ಮುರ್ಕಂಡ್ ಬಾ...'

ಮನೆಗೆ ಬಂದಮೇಲೆ ನಮ್ಮಜ್ಜಿನ, "ಎಲ್ಲಾ ಸರಿ... 'ನಂ ಕೈಲಾಗಲ್ಲ, ನೀನೇ ಮಾಡ್ಕಂಡು ಉಂಡು ಮುಂದ್ಲು ಮನೆಗೋಗು' ಅಂತ ಯಾರ್ಗೆ ಹೇಳದು?" ಕೇಳ್ದೆ. "ಹರಿಯೋ ನೀರಿಗೋ, ಬಾವಿಗೋ ಹಾಕಿರೆ ಗಂಗಮ್ಮಂಗೆ. ಮೂರ್ದಾರಿ ಕೂಜಿರತವಾದ್ರೆ ಭೂಂತಾಯ್ಗೆ. ತಿಪ್ಪೆಗಾಕಿರೆ ತಿಪ್ಪೆಲಕ್ಮಿಗೆ; ಅಲ್ಲಿನ್ ದ್ಯಾವ್ರು ಅಡ್ಗೆ ಮಾಡ್ಕಂಡು, ಉಂಡು ಮಗಿಗೆ ಆಸಿರ್ವಾದ ಮಾಡ್ತವೆ," ಅಂತು

ಮೊನ್ನೆ ಸ್ವಾಮಾರ ಬೈನ್ಕಡೆನಾಗೆ ನಮ್ಮಜ್ಜಿ ಅಡ್ಕೆಲೆ ಕುಟ್ತ ಕುಟ್ನಿನ ಲಟಲಟ ಅನ್ನುಸ್ತಿತ್ತು. ಆಸೆಕಡೆ, "ದೊಡಕ್ಕಜ್ಜಿ... ದೊಡಕ್ಕಜ್ಜಿ..." ಅಂತ ಯಾರೋ ಕೂಗಿರು.

Eedina App

ನಮ್ಮವ್ವ, "ಅದ್ಯಾರು? ಒಳಿಕ್ ಬರ್ರಿ, ನಮ್ಮಜ್ಜಿ ಐತೆ," ಅಮ್ತು.

ನೋಡಿರೆ, ಆ ಕಡೆ ಕೇರಿ ಶಿಲ್ಪ.

AV Eye Hospital ad

"ಯಾಕಲಾ ಅಮಯ ಇಂಗ್ ಬಂದೆ?" ಅಂದಿದ್ಕೆ, "ಯಾಕೋ ಕಣಜ್ಜಿ, ನಮ್ ಪಾಪ ಬೆಳಗ್ಗೆ ಇಂದ ಕೈ ಬಿಡ್ತಿಲ್ಲ, ರಚ್ ಮಾಡ್ತನೆ," ಅಂತು.

"ಸ್ಯಾನೇ ನೀರು ಕುಡಿತನ? ತುಟಿ ಒಣ್ಗವ?" ಅಮ್ತ ನಮ್ಮಜ್ಜಿ ಕೇಳಿದ್ಕೆ, "ಊಕಣಜ್ಜಿ... ನೆನ್ನೆ ಸಂಜೆನಾಗೆ ಆಡ್ಕಣವಾಗ ಬಿದ್ದಿದ್ದ... ಅವಾಗ್ಲಿಂದ ಅಂಗವ್ನೆ," ಅಂತೇಳ್ತು.

"ಅಂಗಾರೆ ಬಿದ್ಬೀಳಾಗೇತೆ. ಇವತ್ತು ಸ್ವಾಮಾರ, ನಾಳಿಕೆ ಮಂಗ್ಳಾರ... ಬೈನ್ಕಡಿಕೆ ತಗ್ಯನ," ಅಂತೇಳಿ ಕಳಸ್ತು. ಚಿಕ್ಕೋರಿದ್ದಾಗ ನಾನುನು ಬಿದ್ಬೀಳು ತಗಸ್ಕಂಡಿದ್ರೂ ಮತ್ತೆ ನೋಡೋ ಆಸೆ ಆಯ್ತು. ಮಂಗಳವಾರ ಸಾಯಂಕಾಲ ಶಿಲ್ಪ ಬಂದು, "ಬಾರಜ್ಜಿ ತಗಿವಂತೆ..." ಅಂತ ಕರಿತು. ನಮ್ಮಜ್ಜಿ ಹಿಂದೆ ನಾನುನು ಹೊರಟಾಗ, ಬಾಲ್ಯದಲ್ಲಿ ಅಜ್ಜಿ ಸೆರಗು ಇಡ್ಕಂಡು ಹೋಗಿದ್ದು ನೆನಪಾಯ್ತು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೆ ಆರ್ ಪೇಟೆ ಸೀಮೆ | ತಿಂಗ್ಳು ಪೂರ್ತಿ ಬಾಡೇ ತಿಂದಂಗೆ ಅಬ್ಬ ಮಾಡ್ಬೇಕು ಅಂದ್ರೆ ಆಯ್ತದಾ?

ಶಿಲ್ಪ, "ಏನೇನು ಇಕ್ಕಬೇಕು?" ಅಂದಾಗ, "ಸ್ಯಾರೆ ಅಸಿಟ್ಟು, ಸ್ಯಾರೆ ಅಕ್ಕಿ, ಸ್ಯಾರೆ ಬ್ಯಾಳೆಕಾಳು, ಸ್ಯಾರೆ ಸಾರಿನಪುಡಿ, ಒಂದು ಒಣಮೆಣ್ಸಿನಕಾಯಿ, ಒಂದು ಉಳ್ಳಿಗೆಡ್ಡೆ, ಒಂದು ಬೆಳ್ಳುಳ್ಳಿ, ಚಿಟ್ಕೆ ಉಪ್ಪು,  ಒಂದೀಟು ಅರುಷ್ಣ, ಒಂದೀಟು ಕುಂಕ್ಮ, ಒಂದು ಊದ್ಗಡ್ಡಿ ತಗಂಡು ಬಾ. ಅಂಗೇನೆ ಒಂದು ಚೊಂಬಗೆ ಹೊಸ್ನೀರು ತುಂಬ್ಕಂಡು ಬಾ," ಅಂತು.

ಆ ಮಗ ಅವುನ್ನೆಲ್ಲಾ ತಂತು. "ಅಗಳೇ ಅಮಯ, ಮರುತ್ಬಿಟ್ಟಿದ್ದೆ... ಒಂದ್ನಾಕು ಬೆಳ್ಳುದ್ದದೋವು ಪುಳ್ಳೆ ಮುರ್ಕಂಡ್ ಬಾ. ಅಂಗೇನೆ ಒಂದೀಟಗ್ಲ ಬೀಳೇ ಬಟ್ಚ ಅರ್ಕಂಡು ಬಾ. ಜತ್ಗೆ ಬೆಂಕಡ್ಡಿ ತಗಂಡು ಬಾ," ಅಂತು. ಸ್ವಲ್ಪ ಹೊತ್ತಿಗೆ ಅವುನ್ನೆಲ್ಲ ತಂದು ಕೊಡ್ತು.

ಮಗನ ಹೊಸ್ಲು ಮೇಲೆ ಕೂರ್ಸಿ ಇನ್ನೇನ್ ಬಿದ್ಬೀಳು ತಗಿಬೇಕು ಅನ್ನವಾಗ, "ತೂತ್ತರಿಕೆ... ನಂಗಾಲೆ ಅರ್ಳೋ ಮರ್ಳೋ ನೋಡಮ್ಮ. ಒಂದು ಇಳೆದೆಲೆ, ಒಂದಡ್ಕೆ, ಒಂದ್ ರೂಪಾಯಿ ಕಾಸು ತತ್ತಾರಮ್ಮ," ಅಂತು. ಆ ಹೆಣ್ಮಗ ಎದ್ನೋ ಬಿದ್ನೋ ಅನ್ನಂಗೆ ಒಳಿಕೆ ಓಡೋಗಿ, ಅವುನ್ನೂ ತಂತು.

ಅಕ್ಕಿ, ಅಸಿಟ್ಟು, ಬ್ಯಾಳೆ, ಸಾರಿನಪುಡಿನ ಬೆರ್ಸಿ ಮೊರ್ಕಡೆ ನೀವುಳ್ಸಿ, ಆಮೇಲೆ ಮಗಿಗೆ ಮೂರು ಸತಿ ನೀವುಳುಸ್ತು. ಈರುಳ್ಳಿ, ಬೆಳ್ಳುಳ್ಳು, ಮೆಣ್ಸಿನಕಾಯಿ ಮತ್ತೊಂದು ಸಾರಿ. ನಂತರ ಪುಳ್ಳೆನು ನೀರಿನ ಚೊಂಬುನು ನೀವುಳ್ಸಿ, ಬಿಳೇಬಟ್ಟೆಗೆ ಎಲೆ, ಅಡ್ಕೆ, ಕಾಸು ಇಟ್ಟು, ಅದರ ಮೇಲೆ ಇದನ್ನೆಲ್ಲ ಹಾಕಿ ಗಂಟು ಕಟ್ತು. ಗಂಟಿಗೆ ಊದ್ಗಡ್ಡಿ ಬೆಳಗಿ, ಅದನ್ನು ನೀವುಳ್ಸಿ, ಮಗಿನ ತಲೆ ಮ್ಯಾಕೆ ಇಕ್ಕಿ, "ಹೋಗಮ್ಮ... ಚೊಂಬುನು ಊದ್ಗಡ್ಡಿನು ಕೈಯಾಗಿಡ್ಕ; ಮಗಿನ ತಲೆಮ್ಯಾಲೆ ಗಂಟು ಅಂಗೇ ಇರ್ಲಿ. ಕರ್ಕೊಂಡೋಗಿ ಉಪ್ನೀರ ಬಾವಿಗೋಗಿ ಹಾಕು," ಅಂತು.

ತಾಯಿ ಮಗು ಹೊರುಟ್ರು. ಹಿಂದೆಲೆ, "ಅಲೆಲೆ... ತಡ್ಯಮ್ಮ... ಬಾವಿ ನಿಂ ಮನೆಯಿಂದ ಹೊತ್ಮುಣ್ಗ ಕಡಿಕೈತೆ. ಹೊತ್ತುಟ್ಟ ಕಡಿಕೋಗಬೇಕು. ಒಂದ್ ಕೆಲ್ಸ ಮಾಡು - ಮೂರ್ದಾರಿ ಕೂಡಿರತಕೆ ಹಾಕು. ಇಲ್ಲಾಂದ್ರೆ, ಮೂಡ್ಗಡೆ ಇರೋ ತಿಪ್ಪೆತವ ಗಂಟು ಬಿಚ್ಚಿ ಮ್ಯಾಲೆ ನೀರೊಯ್ದು... 'ನಂ ಕೈಲಿ ಆಗಲ್ಲಮ್ಮ, ನೀನೆ ಮಾಡ್ಕಂಡು ಉಂಡು ಮುಂದ್ಲು ಮನೆಗೋಗು' ಅಂತೇಳಿ, ತಿರುಗ್ ನೋಡ್ದಂಗೆ ಬಾ. ಮನಿಗೆ ಬಂದ್ಮೇಲೆ, ಮಗ-ನೀನು ಇಬ್ರುನೂ ಕೈ-ಕಾಲು, ಮುಖ ತೊಳ್ಕಂಡು ಒಳಿಕೋಗ್ರಿ," ಅಂತೇಳಿ ಕೊಡ್ತು.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಬೀದರ್ ಸೀಮೆ | ಅದೇಸ್ ಮಂದಿ ಇಂಥ ಕನ್ಸು ಕಾಣ್ಕೋತಾನೇ ಜಿಂದಗಿ ತೆಗ್ದಾರೋ ಏನೋ!

ನಾನು ಮನೆಗೆ ಬಂದಮೇಲೆ ನಮ್ಮಜ್ಜಿನ, "ಎಲ್ಲಾ ಸರಿನಮ್ಮ... 'ನಂ ಕೈಲಾಗಲ್ಲ, ನೀನೇ ಮಾಡ್ಕಂಡು ಉಂಡು ಮುಂದ್ಲು ಮನೆಗೋಗು' ಅಂತ ಯಾರ್ಗೆ ಹೇಳದು?" ಅಂತ ಕೇಳ್ದೆ.

"ಹರಿಯೋ ನೀರಿಗೋ, ಬಾವಿಗೋ ಹಾಕಿರೆ ಗಂಗಮ್ಮಂಗೆ. ಮೂರ್ದಾರಿ ಕೂಜಿರತವಾದ್ರೆ ಭೂಂತಾಯ್ಗೆ. ತಿಪ್ಪೆಗಾಕಿರೆ ತಿಪ್ಪೆಲಕ್ಮಿಗೆ. ಎಲ್ಲಿ ಹಾಕ್ತೀವೋ ಆ ದ್ಯಾವ್ರು ಅಡ್ಗೆ ಮಾಡ್ಕಂಡು, ಉಂಡು ಮಗಿಗೆ ಆಸಿರ್ವಾದ ಮಾಡ್ತವೆ," ಅಂತು.

ನಾನು, "ಅಲ್ಲಮ್ಮೋ... ಈ ಕಾಲ ಬಂದ್ರೂನು ಅವೆಲ್ಲ ನಿಜನೇನೇಳಮ್ಮೋ ನಿನ್ ಕತೆನಾ?" ಅಂದಾಗ, "ಹಿದ್ಲೋರು ಸುಂಸುಮ್ಕೆ ಮಾಡವ್ರ? ಬೇಕಾದ್ರೆ ನೋಡು ವತಾರಿಕೆ ಮಗ ಗೆಲ್ವಾಗ್ತತೆ," ಅಂತೇಳ್ತು.

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
2 ವೋಟ್
eedina app