ದೇಸಿ ನುಡಿಗಟ್ಟು - ಕುಮಟಾ ಸೀಮೆ | ಅಳ್ವಿ ಪ್ರದೇಸ ಅಂದ್ರೆ ವಜ್ರದ ಗಣಿಗಿಂತ್ಲೂ ಹೆಚ್ಚು ನಮ್ಗೆ

1720ರಿಂದ, ಅಂದ್ರೆ, ಸುಮಾರು ಮುನ್ನೂರ ವರ್ಸದ ಹಿಂದೇ ನಮ್ಮೂರಲ್ಲಿ ಉಪ್ಪ ತಯಾರ್ಸುದ ಸುರು ಆಗಿತ್ತು. ಅಘನಾಶಿನಿ ನದಿ ಮತ್ತೆ ಅರಬ್ಬಿ ಸಮುದ್ರದ ಉಪ್ಪನೀರಲ್ಲೇ ಹೆಚ್ಚು ಉಪ್ಪನಂಶ ಇರ್ತದೆ ಹೇಳಿ, ಅದನ್ನ ಗಜನಿ ಭೂಮಿಲಿ ಹಾಯ್ಸಿ, ಕಟ್ಟೆ ಕಟ್ಟಿ, ನೀರ ನಿಲ್ಸಿ ಪೂರ ಬತ್ತುತಂಕನೂ ಇಡತ್ರು. ನೀರೆಲ್ಲ ಒಣ್ಗಿದ್ಮೇಲೆ ಉಪ್ಪಷ್ಟೇ ಉಳಿತದೆ. ಗುಡ್ಸಿ ರಾಶಿ ಮಾಡಿ ಚೀಲಕ್ಕೆ ತುಂಬಿ ಇಡುದು

"ಉಪ್ಪ ಬೇಕೇನ್ರಾ ಉಪ್ಪ... ಉಪ್ಪ ಬೇಕೇನ್ರಾ ಉಪ್ಪ..." - ನಾವ ಸಣ್ಣವ್ರಿದ್ದಾಗ ಸಾಣಿಕಟ್ಟಿ ಹಳ್ಳುಪ್ಪು ಮಾರುಕೆ ಹೆಂಗಸ್ರು ದೊಡ್ಡ-ದೊಡ್ಡ ಚೀಲ್ದಲ್ಲೆ, ಬೆತ್ತದ ಮುಟ್ಟಿಲೇ ಹೊತ್ಕ ಬತ್ತಿದ್ರು. ಸಿದ್ದಿ ಬೇಕರ ಸಿದ್ದಿ ಲೆಕ್ದಲ್ಲೆ, ಕೊಳಗ ಬೇಕರ ಕೊಳಗ ಲೆಕ್ದಲ್ಲಿ ಅಳ್ದು ಕೊಟ್ರೆ, ವರ್ಸಕ್ಕೊ ತಿಂಗ್ಳಿಗೋ ಆಗೊಟ್ಟ ಉಪ್ಪ ತಕಂಡಿ ಬರ್ಣಿಲಿ ಹಾಕಿಟ್ಕಂಬುದಾಗಿತ್ತು.

Eedina App

ಇಂತಾ ನಮ್ಮ ಸಾಣಿಕಟ್ಟಿ ಉಪ್ಪು ಎಲ್ರ ಮನಿ ಮಡ್ಕಿ ಆಸಿಗೆ, ಬಂಡಿ ದ್ವಾಸಿಗೆ ಹೇಳ್ಕಂಬೊಟ್ಟ ರುಚಿ ಕೊಡ್ತಿತ್ತು. ಈಗ ಅದು ಬಣ್ಣಬಣ್ಣದ ಕೊಟ್ಟೆಲಿ ಪ್ಯಾಕ್ ಆಕಂಡೇ ಬತ್ತದೆ - ಗೋಕರ್ಣ ಉಪ್ಪು ಹೇಳೇ ಫೇಮಸ್ಸಾಗಿಬಿಟ್ಟದೆ.

ಸಾಣಿಕಟ್ಟಾ ಉಪ್ಪನಾಗರ ನಿನ್ನೆ ಇವತ್ತಿಂದಲ್ಲ. 1720ರಿಂದ, ಅಂದ್ರೆ, ಸುಮಾರು ಮುನ್ನೂರ ವರ್ಸದ ಹಿಂದೇ ನಮ್ಮೂರಲ್ಲಿ ಉಪ್ಪ ತಯಾರ್ಸುದ ಸುರು ಆಗಿತ್ತು. ಅಘನಾಶಿನಿ ನದಿ ಮತ್ತೆ ಅರಬ್ಬಿ ಸಮುದ್ರದ ಉಪ್ಪನೀರಲ್ಲೇ ಹೆಚ್ಚು ಉಪ್ಪನಂಶ ಇರ್ತದೆ ಹೇಳಿ, ಅದನ್ನ ಗಜನಿ ಭೂಮಿಲಿ ಹಾಯ್ಸಿ, ಕಟ್ಟೆ ಕಟ್ಟಿ, ನೀರ ನಿಲ್ಸಿ ಪೂರ ಬತ್ತುತಂಕನೂ ಇಡತ್ರು. ನೀರೆಲ್ಲ ಒಣ್ಗಿದ್ಮೇಲೆ ಉಪ್ಪಷ್ಟೇ ಉಳಿತದೆ. ಅದೆಲ್ಲ ಗುಡ್ಸಿ ರಾಶಿ ಮಾಡಿ ಚೀಲಕ್ಕೆ ತುಂಬಿ ಇಡುದು.

AV Eye Hospital ad

ಅದ್ರಲ್ಲೂ ಮೂರ ನಮನಿ ಇರ್ತದೆ. ಮೊದ್ಲಿಂದು ಚೊಕ್ಕ ಇದ್ರೆ, ಮೂರ್ನೆ ಹಂತದ ಉಪ್ಪು ಸ್ವಲ್ಪ ಅರಲು ಸೇರ್ಕಂಡಿ ಇರ್ತದೆ. ಸಾದಾ ಸೂರ್ಯನ ಬಿಸ್ಲಲ್ಲಿ ಒಣಗ್ಸಿ ಮಾಡೋ ಈ ಉಪ್ಪಂದ್ರೆ ಎಲ್ಲಾ ಕಡೆನೂ ಬಾಳ ಬೇಡ್ಕೆ. ಕೆಂಪುಪ್ಪು, ಹಳ್ಳುಪ್ಪು, ಸಾಣಿಕಟ್ಟಿ ಉಪ್ಪು ಹೇಳೇ ಕರಿಯೋ ಈ ಉಪ್ಪು ಜೀವಕ್ಕೂ ರಾಶೀ ಚಲೋನೇಯ. ಇದನ್ನ ಬಿಟ್ಟು ನಾವ್ಯಾರೂ ಬೇರೆ ಉಪ್ಪ ಬಳ್ಸುದೇ ಇಲ್ಲ. ಮೊದ್ಲೆಲ್ಲ ಎಲ್ರ ಮನಿಲೂ ಗೋಣಿಚೀಲಗಟ್ಲೆ ರಾಶಿ-ರಾಶೀ ಇರ್ತಿದ್ದ ಈ ಉಪ್ಪು ಈಗ ಪ್ಯಾಕೇಟ ಲೆಕ್ಕಕ್ಕೆ ಬಂದದೆ ಅಟ್ಟೆಯಾ; ಆದ್ರೆ ಉಪ್ಪ ಮಾಡು ನಮನಿಲಿ‌ ಮಾತ್ರ ಹನಿನೂ ಬದ್ಲಾಗ್ಲೆಲ್ಲ.

ಮೊದ್ಲೆಲ್ಲ ಮೂಗು ಚುಚ್ಕ ಬಂದಗೆ ಮೂಗಿಗೆ ಗುಂಜು. ಆದ್ರೆ ಈ ಉಪ್ಪನ ಹಳ್ಳಲಿರೋ ಮಣ್ಣಿನ ಚೂರು ಗುಂಜಿನ ಮೇಲಿಟ್ಕಂಡ್ರೆ ಮಾರ್ನೆ ದಿನನೇ ಇಳ್ದೋತಿತ್ತು. ಮಕ್ಳಿಗೆ, ನಮ್ಮಲ್ಲಿ ಬಾಣಂತಿರಿಗೆ ದಿಟ್ಟಿ ತೆಗೂಕೂ ಈ ಹಳ್ಳುಪ್ಪು ಬೇಕೇಯಾ. ಮೀನು ಒಣ್ಸುಕೆ, ಸಾರಿಗೆ, ಗಂಜಿಗೆ ಈ ಉಪ್ಪನ ಹಳ್ಳು ಲೆಕ್ಕಕೆ ಸಿಕ್ದಂಗೇ ಆ ಬಿಳಿ ಉಪ್ಪು ಪರೋಟಾಗುದಿಲ್ಲ ನಮ್ಗೆ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕೊರಟಗೆರೆ ಸೀಮೆ | 'ಅಗಳೇ ಅಮಯ, ಮರುತ್ಬಿಟ್ಟಿದ್ದೆ... ಬೆಳ್ಳುದ್ದದೋವು ನಾಕು ಪುಳ್ಳೆ ಮುರ್ಕಂಡ್ ಬಾ...'

ಘಟ್ಟದಲ್ಲಿ ಇಳ್ದು ನಮ್ಮ ಅಘನಾಶಿನಿಲಿ ಮುಳ್ಗೆದ್ದೋರು ಇಲ್ಲಿಯ ಮೀನು, ಬಳಚು, ಏಡಿ, ಕಲಗ, ಭತ್ತ, ತೆಂಗು, ಅಡಿಕಿ ಎಲ್ಲಾದ್ರ ರುಚಿನೂ ಕಂಡವ್ರೇಯಾ. ಹೆಗ್ಡೆ, ತೊರ್ಕೆ, ಮಾದನಗೇರಿ, ಸಾಣಿಕಟ್ಟಿ ಅಳ್ವಿ ಪ್ರದೇಸ ಅಂದ್ರೆ ವಜ್ರದ ಗಣಿಗಿಂತ್ಲೂ ಹೆಚ್ಚು ನಮ್ಗೆ. ಅದ್ರಲ್ಲೂ, ಅವ್ವಂಗೆ ಮೀರಿದ ಉಪ್ಪಿನ ರುಚಿ ಮಾತ್ರೆ ಸಾಣಿಕಟ್ಟಿಲೇ ನೋಡ್ಬೆಕು. ಕುಮಟಾ ತಾಲೂಕು ಗೋಕರ್ಣಕ್ಕ ಹೋಗ್ವಗೆ ಮೂರ ಕಿಲೋಮೀಟರ್ ಹಿಂದ್ಗಡೇನೇ ಎಡಕ್ಕೆ ಸಿಕ್ಕುವ ಈ ಉಪ್ಪನಾಗರ ನೋಡೂಕೂ ಬಾಳ ಚಂದ. ಸಾಣಿಕಟ್ಟಿಲೇ ನಾಗರಬೈಲ ಉಪ್ಪಿನ ಸಹಕಾರ ಸಂಘ ಹೇಳಿ ಉಪ್ಪಿನ ಸೊಸೈಟಿ ಕಟ್ಕಂಡರೆ.

ಟಿಪ್ಪು ಸುಲ್ತಾನನ ಕಾಲ್ದಲ್ಲಿ ಇಲ್ಲಿನ ಉಪ್ಪು‌ ಮೈಸೂರಿಗೆ ರಾಶಿ-ರಾಶಿ ಹೋತಿತ್ತಂತೇ. ಕಡಿಗೆ ಬ್ರಿಟಿಷರ ಪಾಲಾಗಿ, ಹೋರಾಟದ ಕಾಲ್ದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೂ ಸಾಕ್ಷಿ ಆಗಿರೋ ನಮ್ಮ ಸಾಣಿಕಟ್ಟಿ ನಮ್ಮ ಹೆಮ್ಮೆ. ಹಂಗೇಯಾ ಗಾಳ ಹಾಕಂಡಿ ಶೆಟ್ಲಿ, ಮೀನು, ಏಡಿ ಹಿಡಿಯುಕೂ ಸೈ ಈ ಉಪ್ಪ ನಾಗರ. ಹಂಗಲ್ದೇ ನಮ್ಮ ಹೀರೀರು ಕುಶಾಲಿಗೆ ಈ ಪದ ಹೇಳ್ತಿದ್ದದ್ದು...

ಸಾಣಿಕಟ್ಟಿಯಾ ಸಣತಂಗಿ
ಮಗುವೆ ಸೆಟ್ಲಿ ತಂದಿಯೇನೇ?
ಗಾಳ ಹಾಕುವಾ ಮಾಬ್ಲ
ನಿನ ಗಂಡನಾಗ್ವನೇನೇ?

ನಿಮಗೆ ಏನು ಅನ್ನಿಸ್ತು?
6 ವೋಟ್
eedina app