ದೇಸಿ ನುಡಿಗಟ್ಟು - ಮಂಡ್ಯ ಸೀಮೆ | ನಮ್ ಮಂಡಿದ್ ಐಕ್ಳುನ್ನ, 'ಯಾಕ್ಲ ಇಂಗ್ಲೀಷ್‍ನಲ್ ಫೇಲಾದೆ?' ಅಂತ ಕೇಳಂಗಿಲ್ಲ ಬುಡಿ!

ಸಂತೇಲೀ, ಅಂಗ್ಡಿಲೀ, ರಸ್ತೇಲೀ, ಬಸ್‍ಸ್ಯಾಂಡ್‍ನಲ್ಲಿ, ದೇವ್ರುಗುಡಿಲೀ, ಸ್ಕೂಲ್‍ನಲ್ಲಿ, ಆಸ್ಪೆಟ್ಲಲ್ಲಿ... - ಯಿಂಗೆ ಮಂಡಿದ್ ಯಾವ್ ಮೂಲೆಗೋದ್ರು ನಿಮ್ಗೆ ಕನ್ನಡ ಕೇಳುಸ್ತೈತೆ. ಮಂಡಿದ್ ಜನದ್ ಮನ್ಸೂ ಕನ್ನಡ, ಬದ್ಕೂ ಕನ್ನಡ. ಕನ್ನಡ ಬುಟ್ಟು ಬ್ಯಾರೆ ಭಾಷೀ ಮಾತಾಡ್ರೋ ಅಂತ ಯೆಂಗೇ ಹೇಳುದ್ರೂವೆ, ಅವು ತಿರುಗ್ಸಿ ಬಯ್ಯಾಕ್ ಬಳ್ಸಾದೂ ಒಂದೇ ಭಾಷೆ - ನಮ್ ಕನ್ನಡ

ಮೊನ್‍ ಮೊನ್ನೇ ಟ್ರೇನ್ ಹತ್ಕಂಡು ಮೈಸೂರಿಗೆ ಹೋಯ್ತೈದೆ. ಅಲೊಬ್ಬ ಹುಡ್ಗ ಎದ್ರೂಗೆ ಕೂತಿದ್ದ ಹುಡ್ಗಿ ನೋಡ್ಕೊಂಡು, "ಹಾಯ್... ಹಲೋ... ಹೌ ಆರ್ ಹ್ಯೂ?" ಅನ್ಕೊಂಡು ಮಾತ್ ಸುರು ಮಾಡ್ದ. ಅವನ್ನ ನೋಡುದ್ರೆ ಅವ್ನುಗೆ ಚಂದಾಗೆ ಕ್ನನಡ ಬರುತ್ತೆ ಅಂತ ಗೋತ್ತಾಯ್ತಿತ್ತು. ಆದ್ರೂ ಅವ ಅಂದದ್ ಚಂದದ್ ಕನ್ನಡ ಬುಟ್ಟು, ಬರ್ದೆ ಇರೋ ಇಂಗ್ಲೀಷು ಮಾತಾಡ್ತಿದ್ದ. ಟ್ರೇನ್ ಇಳಿಯೋವರ್ಗೂ ಅವನ್ ಟುಸ್ಸುಪುಸ್ಸು ಮಾತ್ ಕೇಳಿ ನಂಗತೂ ತಲೆ ಚಿಟ್ಟಿಯಿಡಿತೈತ್ತು.

Eedina App

ಅಂಗೆ ಒಂದು ದಿನ ಅಕ್ಟೋಬರ್ ತಿಂಗ್ಳು ಬಟ್ಟೆ ತಗಳುವ ಅಂತ ದೊಡ್ ಸಿಟಿಯಾ ದೊಡ್ ಅಂಗ್ಡೀಗೆ ಅಕ್ಕನೂ ನಾವೂ ಹೋಗಿದ್ದೊ. ಅಲ್ಲಿ ಅಂಗ್ಡಿ ಒಳಗೆ ಹೋಯ್ತಾಯಿದ್ದಂಗೆ ಅವಯ್ಯ ವಾಚ್‍ಮ್ಯಾನ್, "ವೆಲ್‍ಕಮ್ ವೆಲ್‍ಕಮ್... ಪ್ಲೀಸ್ ಕಮ್ ಇನ್‍ಸೈಡ್..." ಅಂದ. ಕೆಳುಕೆ ಬೇಜಾರೈತು... ಅದೇ ಕನ್ನಡದಲ್ಲಿ "ಬನ್ನಿ..." ಅ೦ದಿದ್ರ, ಎಷ್ಟ್ ಖುಸಿ ಐತೈತೋ ಕೇಳುಕೆ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕಲಬುರಗಿ ಸೀಮೆ | ಸೋಸಿ ಬಂದಳಂದರ ಫ್ರೀ ಕೆಲಸದವಳು ಸಿಕ್ಕಳಂತ ಅನ್ಕೋಬ್ಯಾಡ್ದರೀ ಅಕ್ಕೋರೇ...

AV Eye Hospital ad

ದೊಡ್‍ದೊಡ್ ಸಿಟಿಗಳ್ಗೆ ಹೋಗಿ ವಾಪಸ್ ಮಂಡ್ಯಕ್ಕೆ ಬಂದ್ರೆ ಸ್ವರ್ಗಕ್ಕೆ ಬಂದಾಗಾಗುತ್ತೆ ಅಂತಾರೇ ಕೆಲ್ಸುಕ್ಕೆ ಅಂತ ಸಿಟಿಗೊಳ್ಗೆ ಹೋಗೋ ಜನ - ಹಬ್ಬಗಳ್ಗೆ ವಾಪಸ್ ಬರುವಾಗ. ನಂಗೂ ಇಂಗೇ ಆಗಿತ್ತು, ಆ ದಿನ ಬೆಂಗ್ಳೂರ್ಗೆ ಫ್ರೆಂಡ್ ನೋಡೋಕೆ ಅಂತಾ ಹೋಗಿದ್ದಾಗ. ಅಲ್ಲಂತೂ ಯಾರೂ ಕನ್ನಡ ಮಾತಾಡೋರೇ ಸಿಗುದಿಲ್ಲ. ವಾಪಸ್ ಬೆಂಗ್ಳೂರಿಂದ ಮಂಡ್ಯಕ್ಕೆ ಬರೋಷ್ಟ್ರೋಳ್ಗೆ ನಾನ್ ಯಾವ್ದೋ ಬ್ಯಾರೆ ದೇಶ್ದಲ್ಲಿ ಇದ್ದಿನಿ ಅನ್ಸೂಬುಟ್ಟಿತ್ತು. ಯಾಕಂದ್ರೇ ಅಲ್ಲಿದ್ದ ಜನ್ರೂ ಬ್ಯಾರೆ-ಬ್ಯಾರೆ ಭಾಷೆನೇ ಮಾತಾಡ್ತಿದ್ರು. ಸದ್ಯ ಮಂಡ್ಯಕ್ಕೆ ಬಂದುದ್ದು ಸ್ವರ್ಗುಕ್ಕೆ ಬಂದಾಗೈತು. ಯಾಕಂದ್ರೇ ಟ್ರೈನ್ ಇಳ್ದು ನಡ್ಕೊಂಡು ಬರ್ತಾಯಿದಂಗೆ ಕನ್ನಡ ಮಾತಾಡೋರ್ ಸುತ್ತಮುತ್ತನೇ ಇದ್ರೂ.

ಕನ್ನಡ ಮಾತ್ ಕೇಳಿ ಒಂದ್ಕಡೆ ಖುಸಿ ಆದ್ರೆ, ಕನ್ನಡ್ ಹಬ್ಬ ಮಾಡ್ತಿವಿ ಅನ್ನೊದ್ ಇನ್ನೊಂದ್ ಖುಸಿ. ಅಂತೂ ಇಂತೂ ನವೆಂಬರ್‌ನಲ್ಲದವಿ. ಒಂದ್ನೇ ತಾರೀಕಂತೂ, ಬೆಳುಗ್ಗೆ ಎದ್ದು ನೋಡುದ್ರೆ ನಮ್ಮೂರ್ನ ಎಲ್ರೂ ಮನೆ ಮುಂದ್ಲೂ ಬಣ್‍ಬಣ್ಣದ್ ರಂಗೋಲಿ ಹಾಕಿದ್ರು. ವಸಿ ಮನೆಗಳ್ ಮ್ಯಾಲೆ ಹಳದಿ-ಕೆಂಪು ಬಣ್ಣದ್ ಬಾವುಟ ಹಾರಾಡ್ತೈತು. ಬಾವುಟದೊಳ್ಗೆ ಪುನೀತ್‍ ರಾಜ್‍ಕುಮಾರ್ ಚಿತ್ರ ಬೇರೆ! ನಮ್ ಬೀದಿ ಹುಡ್ಗ್ರು ಸೇರ್ಕಂಡು, ಬೀದಿಗೆಲ್ಲ ಲೈಟ್ ಬಿಟ್ಟಿದ್ರು. ಜೊತೀಗೆ ಕನ್ನಡ ಹಾಡೇ ಹಾಡು. ಆ ದಿನ ಅಂತೂ ಬಲೇ ಖುಸಿ ಅನಿಸ್ತಿತ್ತು. ಹುಡ್ಗ್ರುರೆಲ್ಲ ಸೇರ್ಕಂಡು ಬೀದಿ ಕೊನೆ ನೀರ್ ಟ್ಯಾಂಕ್ ಹತ್ರ ಕನ್ನಡ ಮಾತೆ ಪೋಟೋ ಮಡ್ಗಿ ಪೂಜೆ ಮಾಡಿ, ಎಲ್ರೂಗೂ ಬೊಂದಿ ಕೊಟ್ರು ನೋಡಿ... ಎಲ್ಲೆಲ್ಲೂ ಕನ್ನಡ ಎಲ್ರ ಬಾಯ್ನಲ್ಲೂ ಕನ್ನಡ. ಖುಸಿನೋ ಖುಸಿ ಆ ದಿನ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಗದಗ ಸೀಮೆ | ತಂಡಿ ಹೊಡ್ತಕ್ಕ ರಾಗ ಕಳ್ಕೊಂಡ ಪ್ರಾಥ್ನಾ ಗೀತೆ ನಡಗಿ-ನಡಗಿ ಸುಸ್ತಾಗಿತ್ತು!

ಮತ್ತೊಂದು ಇಚಾರ ಹೇಳುದಾದ್ರೇ, ನಮ್ ಮಂಡ್ಯದ್ ಐಕ್ಳುನ್ನ, "ಯಾಕ್ಲ ಇಂಗ್ಲೀಷ್‍ನಲ್ ಫೇಲಾದೆ?" ಅಂತ ಕೇಳುದ್ರೆ ಅವು ಹಿಂಗೆಳ್ತಾವೆ ಕಣ, "ಲೋ ಅದೇನ್ ನಮ್ ಭಾಷೆನಾ? ಬ್ರಿಟಿಸ್ರೂ ಬಿಟ್ಯೊಗಿರೋದು. ಅದ್ರಲ್ಲಿ ಫೆಲಾದ್ರೆ ಏನಾಯ್ತು? ಕನ್ನಡ ಪಾಸಾಗಿವ್ನಿ ಹೋಗೋಲೋ..." ಮಂಡ್ಯದ್ ಯಾವ್ ಮೂಲೆಗೋದ್ರು ಕನ್ನಡ ಮಾತಾಡೋರ್ ಸಿಗ್ತಾರೆ. ಸಂತೇಲೀ, ಅಂಗ್ಡಿಲೀ, ರಸ್ತೇಲೀ, ಬಸ್‍ಸ್ಯಾಂಡ್‍ನಲ್ಲಿ, ದೇವ್ರುಗುಡಿಲೀ, ಸ್ಕೂಲ್‍ನಲ್ಲಿ, ಆಸ್ಪೆಟ್ಲಲ್ಲಿ, ಕೊನೆಗೆ ಸ್ಮಸಾನದಲ್ಲೂ ಚಂದಾಗೆ ಕನ್ನಡ ಮಾತಾಡೋರ್ ಸಿಗ್ತಾರೆ ಕಣ!

ಮಂಡಿದ್ ಜನದ್ ಮನ್ಸೂ ಕನ್ನಡ, ಭಾಷೆ ಕನ್ನಡ, ಉಸಿರ್ ಕನ್ನಡ, ಬದುಕ್ ಕನ್ನಡ. ಕನ್ನಡ ಬುಟ್ಟು ಬ್ಯಾರೆ ಭಾಷೀ ಮಾತಾಡ್ರೋ ಅಂತ ಮಂಡದ್ ಐಕ್ಳುಗೆ ಯೆಂಗೇ ಹೇಳುದ್ರೂವೆ, ಅವು ಮಾತಾಡೋದ್ ಒಂದೇ ಕನ್ನಡ ಭಾಷೀನೇ - ಮನಸ್ನಿಂದ.

ಮುಖ್ಯ ಚಿತ್ರ ಕೃಪೆ: ಫೇಸ್‌ಬುಕ್
ನಿಮಗೆ ಏನು ಅನ್ನಿಸ್ತು?
2 ವೋಟ್
eedina app