ದೇಸಿ ನುಡಿಗಟ್ಟು - ಚಾಮರಾಜನಗರ ಪ್ರಾಂತ್ಯ | ಅಮೋಸ ಟೈಮ್ಗ ಉಲಿ ಕೆರ ಚೊರಿ ಓಡಾಡಿದಂತ

Tiger 2

ಅನ್ಗನ್ಗುಡ್ಡ, ಕೆಬ್ಬ ಒಲ, ಕುನ್ಮರಯನ್ ಅಟ್ಟಿ ಒಲ, ಮೇಸ್ಟ್ರಟ್ಟಿ ತ್ವಾಟ, ವಟಗ್ ಸುಬ್ಬಮ್ಮನ್ ಒಲದ್ ಮ್ಯಾಲ, ಅಂಗಿಯೇ ಮುಕಳಿ ಕೆರ ಮ್ಯಾಲ್ಚೋರ್ಕಣಿ, ದಡಕೋಗಿ ಅಂಗಿಯೇ ಬಳಸ್ಗಂಡ್ ಅದು, ದೇವ್ರ್ ಕೆರ ಚೊರ ಸುತ್ತಮುತ್ತ ಓಡಾಡ್ತ ಇರ್ಬೋದು ಅಂತರ. ಯಾವ್ದೂ ಗ್ಯಾರಂಟಿಯಾಗಿ ಗೊತ್ತಿಲ್ಲ. ಕೆಂಪಣ್ಣ ಮಾತ್ರ ನಾನೋಡಿನ ಅಂತನ; ನಿಜವೋ, ಸುಳ್ಳೋ ದೇವ್ರೆಗೆ ಗೊತ್ತುಕಪ

ನಾನು ಯಾರ್ಯಾರ್ನಾ ಕರ್ದಿನಿ ಬನ್ನಿಡೋ, ಅದೆಂಗಿದ್ದು ಆ ಉಲಿ ನೋಡವೂ ಅಂತ… ಬಡ್ಡೆತವು ಎಲ್ಲವೂ ಎದ್ರಕತವಾ ಕಣಾ…

ದಡದ್ ಚೊರಿ ಉಲಿ ಕಾಟ ಇಪರೀತ ಆಗದ. ಇದಕಾಗಿ ಎದ್ರ್ಕಂಡು ಯಾರೂ ಈ ಸರಿ ಆ ತಟ್ಲಿ ಕಳ್ಳಕಾಯ್ ಆಕ ಗೋಜ್ಲಿಗೆ ಓಗಿಲ್ಲ. ಕಳ್ಳಕಾಯ್ ಆಕದ್ರ, ರಾತ್ರನಾಗ ಅಂದಿ ಕಾವಲ್ಗೋಗ್ಬೇಕು. ಎಚ್ಚು ಕಮ್ಮಿ ಆದ್ರ ಯಾರಪ್ಪ ಅದ್ನ ಅನ್ಬೋಸೋರು? ಈಚ್ಗ ಸಣ್ಣೋಣಿ ಗಣಿಯೇ ಉಲಿ ಓಗದ ಅಂತಿದ್ರು. ಈ ಗೋಜ್ಲೆ ಬೇಡ ಅಂತ ಒಚ್ಚೊರಿಯಿಂದ ದಡದ್ ತಟ್ಲಿ ಎಲ್ರುವೀ ಸುರಿಕಾಂತಿ, ಅತ್ತಿ ಒಡದ್ಬುಟ್ಟರಾ. ಅದಾದ್ರ ಯಾವ್ ಗೋಜ್ಲು ಇಲ್ಲ, ಕಾವಲ್ಗೂ ವಾಗ್ಬೇಕಾಗಿಲ್ಲ ಅಂತ.

ಅಸ್ಟೊತ್ ಇಸ್ಟೊತ್ಲಿ ಓಡಾಡ್ತಿವಿ, ಅಟ್ಟಿಯೋರ್ ಬ್ಯಾರೆ ಕಳಕಾಯ್ ಸಾವಾಸ್ವೇ ಬ್ಯಾಡಕಪ್ಪ ಅಂತರ. ಗೋವಿಂದಣ, ಬ್ಯಂದಣ್ಣ ಅವರಿಯೇ ಈ ಸತಿ ಕೈ ಬುಟ್ಬುಟ್ಟರಾಕುಡೆ. ಪ್ರತಿ ಅಮೋಸ ಟೈಮ್ಗ ಉಲಿ ಕೆರ ಚೊರಿ ಓಡಾಡಿದಂತ. ದಣ್ಮಾರವ್ವ ಗುಡಿ ಚೊರು ಓಡಾಡದ ಅಂತರಾ. ಈಚ್ಗ ಮೂಡ್ ತಟ್ಲಿ ಗ್ವಾಪಾಲಿ ಅಸು ತಿಂದಾಕಿತು. ಅದು ಅದೆಂಗೆಂಗೆ ತಪಸ್ಗಂಡು ಬಂದಿತು. ಆ ಮ್ಯಾಲಾ ಡಾಗುಟ್ರಗ್ ತೋರ್ಸಿ, ಅದ್ ರಡಿ ಮಾಡಿಕಿಯಾ ಮೂರ್ ತಿಂಗ್ ಬೇಕಾಯ್ತು.

ಅಮೋಸ-ಪೋರ್ಣಮಿಗ ಉಲಿ ಅಚೊರೆಲ್ಲಾ ಸುತ್ತುತ್ತಾ ಅಂತರ. ಅನ್ಗನ್ಗುಡ್ಡ, ಕೆಬ್ಬ ಒಲ, ಕುನ್ಮರಯನ್ ಅಟ್ಟಿ ಒಲ, ಮೇಸ್ಟ್ರಟ್ಟಿ ತ್ವಾಟ, ವಟಗ್ ಸುಬ್ಬಮ್ಮನ್ ಒಲದ್ ಮ್ಯಾಲ, ಅಂಗಿಯೇ ಮುಕಳಿ ಕೆರ ಮ್ಯಾಲ್ಚೋರ್ಕಣಿ, ದಡಕೋಗಿ ಅಂಗಿಯೇ ಬಳಸ್ಗಂಡ್ ಅದು, ದೇವ್ರ್ ಕೆರ ಚೊರ ಸುತ್ತಮುತ್ತ ಓಡಾಡ್ತ ಇರ್ಬೋದು ಅಂತರ. ಯಾವ್ದೂ ಗ್ಯಾರಂಟಿಯಾಗಿ ಗೊತ್ತಿಲ್ಲ. ಅಸಗರ್ ಕೆಂಪಣ್ಣ ಮಾತ್ರ ನಾನೋಡಿನ ಅಂತನ; ನಿಜವೋ, ಸುಳ್ಳೋ ದೇವ್ರೆಗೆ ಗೊತ್ತುಕಪ.

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಆನೇಕಲ್ ಪ್ರಾಂತ್ಯ | ತ್ವಾಟ ಮಾಡೋರ ತಾಕಲಾಟಗಳು

ಸಣ್ಣೋಣಿಲಿ ಪುರ್ಮಾರವ ಗುಡಿಗಂಟು ಬಂದಿತ್ತು. ಅಲ್ಗಂಟುವಿ ಉಲಿ ಯಜ್ಜ ನೋಡಿವಿ ನಾವು. ಕಣ್ಣಾರ ಮಾತ್ರ ಕಂಡಿಲ್ಲ. ಸುಮ್ನೆ ಇಲ್ದೆರದ್ನೆಲ್ಲಾ ಏಳಬಾರ್ದು. ಸಣ್ಣೋಣಿಲಿ ಉಣಸ ಮರ ಅದಲ್ಲಾ, ಕೊತ್ತಿಸಿವಿ ಒಲ ಅಲ್ಲೆಲ್ಲಾ ಓಡಾಡದ, ಏರಿ ಕೀಳು ಓಡಾಡದ ಅಂತರಕಪ್ಪ ಅದ್ಯಾನಕತ್ಯಾ.

ಇದಕಾಗಿ ಎಲ್ರೂ ಎದ್ರಕಂಡು ಕಳ್ಳ ಆಕದು ಬೇಡ, ಅದ್ ಕಾಯದು ಬ್ಯಾಡ ಅನ್ಬುಟ್ಟು ಸಾಲಾಗ್ ಸುರಿಕಾಂತಿ, ಅತ್ತಿ ಒಡ್ದರ. ಅತ್ತಿ ಸುರಿಕಾಂತಿ ಒಡೆಯಕೂ ಇನ್ನೊಂದ ಕಾರ್ಣದ. ಓದ್ ವರ್ಷ ಸುರಿಕಾಂತಿ ಕುಂಟಾಲ್ಗ ಏಳೂವರ್ ಸಾವ್ರ ಇತ್ತು. ಅತ್ತಿ ಕುಂಟಾಲ್ಗ ಅತ್ ಸಾವ್ರ ತಕಾ. ಕಳ್ಳಕಾಯ್ ಕೇಳೋರೆ ಇಲ್ಲ. ಸಾಲೊಡಿ, ಕಳ ಕೀಳು, ಕಳ್ಳಕಾಯ್ ಬುಡ್ಸ... ಒತ್ಗ್ ವಸಿ ಗೋಳ. ಆಳ್ ಸಿಕ್ಕಲ್ಲ, ಮಳ ಸ್ಟಾಟಾಯ್ತು ಅಂದ್ರ ಪಚೀತಿ ಆಗೋಯ್ತ. ಇದ್ರ್ ಸಾವಾಸ್ವೇ ಬ್ಯಾಡ ಕಪ್ಪಯ್ ಅನ್ನಅಸ್ಟು ಉಚ್ಚಿಡಿಸಬುಡ್ತ. ಆದ್ರೂ ಬಂಡಾಟ ಯಾನ್ ಮಾಡದು ಏಳು?

ಪಾರೆಸ್ಟ್ನವ್ರಗೂ ಗೊತ್ತಂತ ಉಲಿ ಓಡಾಡ್ತ ಅಂತ. ಆದ್ರೂ ಅವರು ಯಾನು ಮಾಡಿಲ್ಲಪ್ಪ. ಆ ಬಡ್ಡೇತವು, ಯಾರಾದ್ರೂ ಉಲಿ ತಿನಕಂಡ್ ಮ್ಯಾಲ ಬೋನ್ ಎತ್ಗಂಡ ಬತ್ತವ ಅನಸ್ತದ ಕಯ್ಯೋ ಕರ್ಮ. ಐದಾರ್ ತಿಂಗ್ಳಿಂದ ಈ ಉಲಿ ಕತ ಕೇಳಿ-ಕೇಳಿ ತಲ ಚಿಟ್ಟಿಡ್ದೋಗದ ಕಮರಾಯ. ಅಲ್ಲಿತ್ತಂತ, ಇಲ್ಲಿತ್ತಂತ, ಅಲ್ಲೋಗಿದ್ದಂತ, ಇಲ್ಲ ಬಂದಿತ್ತಂತ... ಅಯ್ಯಪ್ಪಾ ಸಾಕಪ್ಪೋ ಸಾಕು.

ಬಂಡಿಪುರರ್ದಲಿ ಉಲಿ ಉಡ್ತ್ ಬಿದ್ದೋಗವಾ. ಕಾಡ್ಲು ಯಾನು ಸಿಕ್ತಿಲ್ಲ ಅನ್ಸ್ತದಾ. ಅದಕ ಅವು ದಿಕ್ಕೆಟ್ಟು ಊರ್ನ್ ದಿಕ್ ಬತ್ ಕೂತವಾ. ಏಡೊರ್ಸದಿಂದ ಬಂಡೀಪುರದಲಿ ಒಬ್ನ ಉಲಿ ತಿನಕಂಡಿತ್ತಲ್ಲ. ಅವನ ಗುರ್ತು ಪಟ್ಟಿ ಸಿಕ್ಕಿತಿಲ್ಲಾ. ರಕ್ತ ಕುಡಕಂಡ್, ಬೇಕಾದಸ್ಟ್ ತಿನ್ಕಂಡು ಎಸ್ದ್ಬುಟ್ಟೋಗಿತ್ತು. ಕೊನಗ್ ಅಂವ ಆಕಂಡಿದ್ ಬಟ್ಟ ಮ್ಯಾಲ ಗುರ್ತಿಡ್ದು ತಂದು, ಮೂಳಪಾಳ ಜೋಡಿ ದಪನ್ ಮಾಡಿತಿಲ್ವಾ. ಇದ್ಯಾಕ ಮರ್ತೋಗಿದ್ದುಡ ನಿಂಗಾ?

ಈ ಲೇಖನ ಓದಿದ್ದೀರಾ?: ದೇಸಿ ನುಡಿಗಟ್ಟು - ಗದಗ ಪ್ರಾಂತ್ಯ | ಈಗ ಹಳ್ಳ ಬರಿದಾಗೇತಿ, ಊರ್‌ನ್ಯಾಗ್ ಬಿಲ್ಡಿಂಗ್ ತುಂಬ್ಯಾವ!

ಬರ್ಗ ಚೊರಿ ಮಾರವ್ ದೇವಸ್ತಾನಕೊಯ್ತಿದ್ವಲ್ಲ, ಅಲ್ಲೂವಿ ನಾವು ಉಲಿ ನೋಡಿಲ್ಲ ಕಪ. ಅದ್ಯಾನ ಬಡ್ಡೈಯ್ದನಂದು ಈ ಸರಿ ನಮ್ಚೊರಿ ಜನನ ಎದರ್ಸಿಟ್ಬುಟ್ಟದ. ಎಲ್ರಗೂ ರಾತ್ರನಾಗ ಕೆರಚೊರ್ಕ್ ಓಗಕ್ಕ ಪುಕುಪುಕು ಅಂತದ. ಎಸ್ಟೊತ್ಲಿ, ಯಾನ್ ಕತೆಯ ತಡಪ್ಪಾ ಅಂತರ ಜನ. ಅರ್ದ್ರಾತ್ರಲಿ ಓಡಾಡ್ತಿದವ್ರೆಲ್ಲವೂ ಈಗ ಮದ್ಯಾನ್ಕೆ ಮನಗ್ ಸೇರ್ಕಳ ಒತ್ತಾಗದ. ಅಸ್ಟು ಬಯ ಅಂದ್ರ ಬಯ. ಮುಂಗಾರ್ ಮುಗದ್ರ್ ಇನ್ಯಾನು ಇಲ್ಲ. ಸುರಿಕಾಂತಿ ತಟ್ಟ ಮುರ್ಕಂಡು, ಉಳ್ಳಿ ಬಿತ್ತರ. ಉಳ್ಳಿ ಒಲನೇನ್ ಕಾಯಬೇಕಾಗಿಲ್ಲ. ಅದ್ಕಿಯಾ ತಲಕೆಡಸ್ಗಳದ್ನೇ ಬುಟ್ಬುಟಿಂವಿ ನಾವು.

ದೇವರು ಏನೇನ್ ಮಾಡಬೇಕು ಅನ್ಕಂಡಿದನೋ ಮಾಡ್ಲಿ. ಒಟ್ನಲಿ, ಜನ ಆಡ ಆಟ್ಕುವಿ, ಬಗವಂತ ಮಾಡ ಕತ್ಗುವಿ ಎಲ್ಲ ಸರಿಯಾಗದ. ನಾನು ಯಾರ್ಯಾರ್ನಾ ಕರ್ದಿನಿ - ಬನ್ನಿಡೋ ಅದೆಂಗಿದ್ದು ಆ ಉಲಿ ನೋಡವೂ ಅಂತ. ಆದ್ರ ಬಡ್ಡೆತವು ಎಲ್ಲವೂ ಎದ್ರಕತವಾ ಕಣಾ... ಅದೇ ಬೇಜಾರು.

ನಮ್ಮಣಲಿ ಇನ್ನು ನಾಕ್ಕಾಲ ಬದಕ್ಬೇಕು ಅಂತ ಬರ್ದಿರ್ದ, ಉಲಿ-ಸಿಮ್ಮ ಏನಂದ್ರೂ ಏನೂ ಮಾಡಕ್ಕಾಗಲ್ಲ. ಇವತ್ತೇ ಓಗ್ ಬೇಕು ಅಂತ ಬರ್ದಿದ್ರೂ ಏನೂ ಮಾಡಕ್ಕಾಗಲ್ಲ. ಎಲ್ಲ ಬಗವಂತನ ಆಟ. ಉಲಿಗ ಅಂದಿ ಎದ್ರಕತವಾ ಅಂತರ. ಅದ್ಕಿಯಾ ಈಗ ಅಸ್ಟ್ ಅಂದಿಯೂ ಕಾಣ್ಸಗತಾ ಇಲ್ಲ. ಮದ್ಲು ಬಡ್ಡೇವು ಉಡ್ತ್ ಬಿದ್ದೋಗಿದ್ದ. ಈಗ ಅಸ್ಟ ಕಾಣಸ್ಗತಾ ಇಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180