ದೇಸಿ ನುಡಿಗಟ್ಟು - ಕುಮಟಾ ಪ್ರಾಂತ್ಯ | ಎಲ್ಲಾ ಉಳಿಗೆಂಡಿ ಕಣ್ಣಲ್ಲಿ ನೀರ ತರ್ಸದ್ರೆ ನಮ್ ಉಳಿಗೆಂಡಿ ಬಾಯ್ಲಿ ನೀರು ತರಸ್ತದೆ

ಅಳ್ವಿಕೋಡಿ ಉಳಿಗೆಂಡಿ ಬಾಳ ಇಷ್ಟಪಡೋರು ಕ್ವಿಂಟಲ್ ಗಟ್ಲೆ ತಕಂಡೋಗಿ ಇಟ್ಕಂತ್ರು. ದುಡ್ ಕೊಟ್ಟಿ ತಕಂಡ್ರಷ್ಟೇ ಅಲ್ಲ, ಕಾದಿಡುದೂ ಅಷ್ಟೇ ಕಷ್ಟ. ಇಡೀ ಪೊತ್ತೆನ ಸಮಾ ಒಣಗ್ಸಿ ಕಾದಿಟ್ರೆ ಮಾತ್ರ ವರ್ಸಗಟ್ಲಿ ಎಂತದ್ದೂ ಆಗುದಿಲ್ಲ. ಸರಿ ಮಾಡಿ ಇಡ್ಲಿಲ್ಲಂದ್ರೆ ಮಳೆಗಾಲಕೆ ಕೊಳ್ದು ಉದ್ರೇ ಹೋತದೆ... ಒಣಗ್ಸಿದ್ದಾದ್ರೆ ಊಟಕ್ಕೆ ಕೂತಾಗೆಲ್ಲ ಆರಾಮ ಒಂದೊಂದೇ ಕಿತ್ಕಬಂದಿ ತಿನ್ಬೌದು...

"ನಂಗೊಂದತ್ತ ಕಟ್ಟು ಪೊತ್ತಿ ಉಳಿಗೆಂಡಿ ತಂದಿಡೆ," ತಮ್ಮ ಮೊನ್ನಗೆ ಮೂರು ಸಲ ಕಾಲ್ ಮಾಡಿದ್ದಾ... ನಂಗೂ ಒಂದ ಹದನೈದ ಕೇಜಿ ಬೇಕಾಗಿತ್ತ, ಯಾವಾಗೂ ತಂದ್ಕೊಡ್ತಿದ್ದ ಹರಿಗೌಡ ನಾಪತ್ತೆ... ಯಾರ ಸಿಗ್ಲಿಲ್ಲಲಂದ್ರೂ ನಮ್ಮ ಉಳ್ಳಿಗೆಂಡಿ ಮಾತ್ರ ಸಿಗ್ಲೇ ಬೇಕು ನಮ್ಗೆ...

Eedina App

ಬೇಸಿಗೆ ರಜೆ ಬಂತಂದ್ರ ಸಾಕು ಕುಮಟಾ ತಾಲೂಕಿನ ಅಳ್ವೆಕೋಡಿ ಉಳಿಗೆಂಡಿಗೆ ವಿಪರೀತ ಬೇಡಿಕಿ... ಅದ ಬೇಕಂದ್ರ ಸಿಗುದು ಒಂತರಾ ಸ್ಟಾಕ್ ಇರುತನ ಮಾತ್ರ. ಆಮೇಲ ಹೋದ್ರೆ ಒಂದು ಉಳಿಗೆಂಡಿ ಬೇಕಂದ್ರೂ ಒಬ್ರ ಕೈಲೂ‌ ಸಿಗುದಿಲ್ಲ.. ಹಂಗಾಗಿ ಆಸೆ‌ ಇರೋರೆಲ್ಲ ಹತ್ರದವ್ರ ಕೈಲಿ ಮೊದ್ಲೇ ಹೇಳಿಡುದು.

ಆದ್ರೆ ಈ ವರ್ಷ ಬ್ಯಾಗ ಮಳಿ ಬಂತಲಾ ಎಲ್ಲಾ ಕಡೆನೂ ರಾಶಿ ತುಟ್ಟಿಯಷ್ಟೇ ಅಲ್ಲ... ಈಗ ಕೇಳುಕ ಹೋದ್ರೆ "ಒಂದು ಪೊತ್ತಿನೂ ಇಲ್ಲ ಪಾ ಮುಂದಿನ ಸಲ ನೋಡ್ವ ಅಗಾ?," ಅಂದೇ ಹೇಳುದು, ಆದ್ರೂ ಬಿಡುಕಂತೂ ಆಗುದಲಾ... ಅದ್ಕೆ ಹೆಂಗೋ ಮಾಡಿ ಒಂದಿಪ್ಪತ್ತೈದು ಕೇಜಿ ತಂದಾಯ್ತ..

AV Eye Hospital ad

ಈ ಉಳಿಗೆಂಡಿ ಯಾಪಾರನೇ ಹಂಗೇ... ಒಂದೆರಡ ಕೇಜಿ ಮಾತಲ್ಲ... ಏನಿದ್ರೂ ಅರ್ಧ ಕ್ವಿಂಟಲ್ ಸುದ್ದಿನೇಯ... ವರ್ಸಕ್ಕೊಂದೇ ಬೆಳಿ.. ಹಂಗಾಗಿ ಇಡೀ ವರ್ಸ ಮತ್ತೆ ಬೇಕಂದ್ರೆ ಸಿಗುದು ಅಲ್ಲ... ಮಳಿ ಬೀಳುಕ ಮೊದ್ಲೆ ಒಂದಷ್ಟು ಪೊತ್ತೆ ಎಲ್ಲರ ಮನೆಗೂ ಬರ್ಲೇಬೇಕು..

ಲೋಕದಲ್ಲಿರೂ ಎಲ್ಲಾ ಉಳಿಗೆಂಡಿ ಕಣ್ಣಲ್ಲಿ ನೀರ ತರ್ಸದ್ರೆ, ನಮ್ಮ ಅಳ್ವಿಕೋಡಿ‌ ಉಳಿಗೆಂಡಿ ಬಾಯ್ಲಿ ನೀರು ತರಸ್ತದೆ. ಹಂಗಾಗಿ ಇದ್ಕೆ ಇಡೀ ಕರ್ನಾಟಕದಲ್ಲಿ ಬಾಳ ಬೇಡಿಕಿ... ಕಾರನೂ ಇಲ್ಲ ಸ್ಟ್ರಾಂಗೂ ಇಲ್ಲಾ.. ಬರೀ ಸೀಂ ರಸ ತುಂಬಿರು ಈ ಉಳ್ಳಿಗೆಂಡಿ ಹಸಿದೇ ತಿಂದ್ರೆ ಒಂದ ಬಟ್ಲ ಹೆಚ್ಚೇ ತುತ್ತು ಬಾಯ್ಗೋತದೆ...

ಈ ಲೇಖನ ಓದಿದ್ದೀರಾ? ದೇಸಿ ನುಡಿಗಟ್ಟು - ಆನೇಕಲ್ ಪ್ರಾಂತ್ಯ | ತ್ವಾಟ ಮಾಡೋರ ತಾಕಲಾಟಗಳು

ಚೌಳಿಕಾಯಿ, ಬೆಂಡಿಕಾಯಿ, ಬದ್ನಿಕಾಯಿಗೆಲ್ಲ ಕೊಯ್ದು ಸ್ವಲ್ಪ ಬಾಡ್ಸಿ ಹಾಕದ್ರೂ ಒಳ್ಳೆಯ ರುಚಿ, ಪರಮಳ ಇದ್ರದ್ದು..!ಟೊಮೆಟೋ ಸೌತಿಕಾಯಿ ಸಂತಿಗೆ ಸಣ್ಣಕ್ಕೆ ಕೊಚ್ಚಿ ಕಾಯಿಸುಳಿ ಹಾಕಂಡಿ ತಿಂದ್ರೆ ಅಬಾಬಾಬಾ... ಕೈ ಬೆರಳೇ ಕಚ್ಕಂಬೆಕು ಅಷ್ಟು ಮಸ್ತ್ ಆತದೆ...

ನಮ್ಮ ಉತ್ತರ ಕನ್ನಡ ಜಿಲ್ಲೆಲಷ್ಟೇ ಕಾಣೋ‌ ಇವು ಒಗ್ಗರಣೆಗೆ ಅಷ್ಟು ರುಚಿ ಕೊಡುದಿಲ್ಲ... ಇದ್ರ ದುಡ್ ಕೊಟ್ಟಿ ತಕಂಡ್ರಷ್ಟೇ ಅಲ್ಲ..‌ ಕಾದಿಡುದೂ ಅಷ್ಟೇ ಕಷ್ಟ... ಇಡೀ ಪೊತ್ತೆನ ಸಮಾ ಒಣಗ್ಸಿ ಸರಿ ಮಾಡಿ ಕಾದಿಟ್ರೆ ಮಾತ್ರ ವರ್ಸಗಟ್ಲಿ ಎಂತದ್ದೂ ಆಗುದಿಲ್ಲ. ಸರಿ ಮಾಡಿ ಇಡ್ಲಿಲ್ಲಂದ್ರೆ ಮಳೆಗಾಲಕೆ ಒಂದೊಂದಾಗಿ ಕೊಳ್ದು ಉದ್ರೇ ಹೋತದೆ.. ಒಣಗ್ಸಿದ್ದಾದ್ರೆ ಊಟಕ್ಕೆ ಕೂತಾಗೆಲ್ಲ ಆರಾಮ ಒಂದೊಂದೇ ಕಿತ್ಕಬಂದಿ ತಿನ್ಬೌದು...

kisan add
ಜಾಹೀರಾತು

ಈ ಅಳ್ವಿಕೋಡಿ ಉಳಿಗೆಂಡಿ ಬಾಳ ಇಷ್ಟಪಡೋರು ಕ್ವಿಂಟಲ್ ಗಟ್ಲೆ ತಕಂಡೋಗಿ ಇಟ್ಕಂತ್ರು... ಕುಮಟಾ ತಾಲೂಕು ಪೂರ ಎಪ್ರಿಲ್ ಮೇ ಈ ಎರಡು ತಿಂಗ್ಳು ಸೀಜನ್... ಕುಮಟಾದಿಂದ ಹೊನ್ನಾವರ ಹೋಗು ಹೈವೇ ಮೇಲೆ ಎರಡೂ ಬದಿಗೂ ಗುಲಾಬಿ ಮುತ್ತಿನ ಗೊಂಚಲು ತೂಗಾಕಿದಂಗೆ ಪೇರ್ಸಿಟ್ಟ ಇದನ್ನು ನೋಡದ್ರೆ ಸುಮ್ನೆ ಹೋಗುದು ಯಾರಂದ್ರೆ ಯಾರಿಂದೂ ಸಾದ್ಯ ಇಲ್ವೇನ...

ಮೊದಲೆಲ್ಲ ನಮ್ಮ ಅವ್ವಂದಿರು ಈ ಪೊತ್ತೆ ಉಳ್ಳಿಗೆಂಡಿ ಜಡಿ ಮಾಡಿ ಒಲೆಗುಂಡಿ ಮ್ಯಾಲ ತೂಗಾಕ್ರೆ ವರ್ಸಾನಗಟ್ಲಿ ಚೂರಂದ್ದೆ ಚೂರೂ ಕೆಡುದಿಲ್ಲಾಗಿತ್ತ... ಇದ್ರದ್ದು ಹಸಿ ಉಳಿಗೆಂಡಿ ತಿನ್ನುದ ಒಂದು ರುಚಿ ಆದ್ರೆ ಕೆಂಡದೊಲಿಲಿ ಇದನ್ನ ಹಾಕಿ ಸುಟ್ಕಂಡಿ ಸುಲಿದು ತಿನ್ನು ಮಜನೇ ಬೇರೆ...

 ನಾವು ಸಣ್ಣೋರಿದ್ದಾಗ ಬರೀ-ಬರೀ ತೂಗಾಕಿಟ್ಟ ಪೊತ್ತಿ ಉಳಾಗಡ್ಡಿ ಕಿತ್ಕ ಬರುದು, ಒಲಿಲಿ ಹಾಕುದು ಮಾಡುದಕೆ ಬೈಸ್ಕಂತಿದ್ದಿದ್ದು ಇವತ್ಗೂ ಈ ಉಳಿಗಡ್ಡಿಗಿಂತ ರುಚೀ ನೆನ್ಪು... ಯಾರ್ಗಾದ್ರೂ ತಿನ್ಬೇಕು ಅನ್ಸದ್ರೆ ಈಗೇ ಬಂದ್ಬಿಡಿ ಮತೆ... ಸೀಜನ್ ತಿರ್ತೇ ಬಂತು... ಒಂದ್ಸಲ ರುಚಿ ನೋಡದ್ರೆ ಮುಂದಿನ್ವರ್ಷ ತನ್ನಂತಾನೇ ಗಾಡಿ ಈ ಬದಿಗೆ‌ ಬತ್ತದೆ...

ನಿಮಗೆ ಏನು ಅನ್ನಿಸ್ತು?
4 ವೋಟ್
eedina app