ಬಂಟ್ವಾಳ | ಕಾರಿನ ಚಕ್ರದಡಿ ಸಿಲುಕಿ ನಾಲ್ಕು ವರ್ಷದ ಬಾಲಕ ಸಾವು

bantwal
  • ಎಲ್‌ಕೆಜಿ ಓದುತ್ತಿದ್ದ ಮೃತ ಬಾಲಕ
  • ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಶಾಲೆಯಿಂದ ಮನೆಗೆ ಕಾರಿನಲ್ಲಿ ಬಂದ ಬಾಲಕ ಅದೇ ವಾಹನದ ಚಕ್ರದಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸುರಿಬೈಲು ಎಂಬಲ್ಲಿ ನಡೆದಿದೆ.

ನಾಲ್ಕು ವರ್ಷದ ಬಾಲಕ ಅದಿಲ್‌  ಮೃತಪಟ್ಟ ದುರ್ದೈವಿ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಶುಕ್ರವಾರ ಶಾಲೆಯಿಂದ ಇಕೋ ಕಾರಿನಲ್ಲಿ ಬಾಲಕ ಮನೆಗೆ ಬಂದಿದ್ದಾನೆ. ಕಾರಿನಲ್ಲಿದ್ದ ಬಾಲಕ ಮನೆಗೆ ತೆರಳಿದ್ದಾನೆ ಎಂದು ಭಾವಿಸಿ ಚಾಲಕ ಕಾರನ್ನು ಚಲಾಯಿಸಿದ್ದಾನೆ. ಬಾಲಕ ಕಾರಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾನೆ

ಈ ಸುದ್ದಿ ಓದಿದ್ದೀರಾ?: ಮೈಸೂರು | ಯುವತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಕಣ್ಣೆದುರೆ ಮಗನಿಗೆ ಆದ ಸ್ಥಿತಿ ಕಂಡು ಪೋಷಕರು ಗಾಬರಿಯಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180