ದಕ್ಷಿಣ ಕನ್ನಡ | ಪ್ರವೀಣ್‌ ನೆಟ್ಟಾರು, ಮಸೂದ್ ಮನೆಗೆ ಭೇಟಿ ನೀಡಿದ ಬಿ ಕೆ ಹರಿಪ್ರಸಾದ್‌ ನೇತೃತ್ವದ ಕಾಂಗ್ರೆಸ್ ನಿಯೋಗ

  • ‘ಘಟನೆ ನಡೆದ ದಿನ ಎಲ್ಲಿ ಹೋಗಿದ್ರಿ’ ಎಂದು ಕಾಂಗ್ರೆಸ್‌ ನಾಯಕರಿಗೆ ಪ್ರಶ್ನೆ
  • ‘ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವೇ ಸರಣಿ ಕೊಲೆಗೆ ಕಾರಣ’

ಇತ್ತೀಚೆಗೆ ಹತ್ಯೆಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಕಳಂಜದ ಮಸೂದ್ ಮನೆಗೆ ಬಿ ಕೆ ಹರಿಪ್ರಸಾದ್‌ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿತು.

ಪ್ರವೀಣ್ ಮನೆಗೆ ಹತ್ಯೆಯಾದ ಒಂದು ವಾರದ ಬಳಿಕ ಸಾಂತ್ವನ ಹೇಳಲು ಬಂದ ನಾಯಕರಿಗೆ ‘ಘಟನೆ ನಡೆದ ದಿನ ಎಲ್ಲಿ ಹೋಗಿದ್ರಿ’ ಎಂದು  ಪ್ರವೀಣ್‌ ಕುಟುಂಬದವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ವಿರುದ್ದ ಧಿಕ್ಕಾರ ಹಾಕಿದ್ದಾರೆ.

Eedina App

“ನೀವು ಈಗ ಯಾಕೆ ಬಂದಿದ್ದೀರಿ. ಇಷ್ಟು ದಿನ ಬಾರದ ನೀವು ಚಂದ ನೋಡಲು ಬಂದಿದ್ದಿರಾ. ಹಿಂದುತ್ವದ ವಿರೋಧಿಗಳು ನೀವು. ನಾಳೆ ಕೊಲೆಗಡುಕರಿಗೆ ಜಾಮೀನು ನೀಡುವುದೂ ನೀವೇ” ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?: ಮಂಗಳೂರು: ಫೇಸ್ಬುಕ್, ವಾಟ್ಸಾಪ್‌ನಲ್ಲಿ ಪ್ರಚೋದನೆ - 5 ಪ್ರಕರಣ ದಾಖಲಿಸಿದ ಪೊಲೀಸರು

AV Eye Hospital ad

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ “ ಜಿಲ್ಲೆಯ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವೇ ಸರಣಿ ಕೊಲೆಯಾಗಲು ಕಾರಣ. ಕಾಂಗ್ರೆಸ್‌ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದವರು, ಇಂದು ತಮ್ಮದೇ ಪಕ್ಷವಿರುವಾಗ ಒಂದು ವಾರವಾದರೂ ಆರೋಪಿಗಳನ್ನು ಬಂಧಿಸಿಲ್ಲ. ಇವರ ಪಕ್ಷದ ಬೆಂಬಲಿಗರಿಗೆ ರಕ್ಷಣೆ ಕೊಡಲು ಆಗದ ಸರ್ಕಾರಕ್ಕೆ ಬೇರೆಯವರ ರಕ್ಷಣೆ ಮಾಡಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.

“ಬಿಜೆಪಿ ಆಡಳಿತ ಬಂದ ಮೇಲೆ ರಾಜ್ಯದಲ್ಲಿ ಯಾರು ಸುರಕ್ಷಿತವಾಗಿಲ್ಲ. ತೇಜಸ್ವಿ ಸೂರ್ಯ ಅವರ ಬಾಲಿಶ ಹೇಳಿಕೆಯಿಂದಲೇ ಇವರ ಹಣೆಬರಹ ತಿಳಿಯುತ್ತದೆ. ಇವರ ಕೃತ್ಯಕ್ಕೆ ಬಡ ಮಕ್ಕಳು ಬಲಿಯಾಗುತ್ತಿದ್ದಾರೆ. ಗೃಹ ಸಚಿವರಿಂದ ಹಿಡಿದು ಎಲ್ಲರೂ ಪ್ರಚೋದಕಾರಿಯಾಗಿ ಮಾತನಾಡುತ್ತಿದ್ದಾರೆ" ಎಂದು ಬಿ ಕೆ ಹರಿಪ್ರಸಾದ್‌ ಆಕ್ರೋಶ ಹೊರಹಾಕಿದರು.

ಮಸೂದ್ ಮನೆಗೂ ಭೇಟಿ 

ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ
ಮಸೂದ್ ಮನೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮತ್ತು ಮಾಜಿ ಸಚಿವರಾದ ಬಿ. ರಮಾನಾಥ ರೈ ಹಾಗೂ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app